ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಕಳೆದ ವರ್ಷದಲ್ಲಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಬಹುತೇಕ ವಾಹನಗಳು ಕಳಪೆ ಮಟ್ಟದ ಅಂಕವನ್ನು ಪಡೆದ ಕಾರಣ ಕೇಂದ್ರ ಸರ್ಕಾರವು ಹೊಸ ಸುರಕ್ಷಾ ವೈಶಿಷ್ಟ್ಯತೆಗಳನ್ನು ಕಡ್ಡಾಯವಾಗಿ ಅಳವಡಿಸಲು ಆದೇಶಿಸಲಾಯಿತು. ಈ ನಿಟ್ಟಿನಲ್ಲಿ ವಾಹನ ತಯಾರಕ ಸಂಸ್ಥೆಗಳು ಕೇಂದ್ರ ಸರ್ಕಾರದ ಆದೇಶದಂತೆ ತಮ್ಮಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯತೆಗಳನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಮಾರುತಿ ಸುಜುಕಿ ಸಂಸ್ಥೆಯ ಓಮ್ನಿ ಮಾರಾಟವು ಸ್ಥಗಿತಗೊಂಡ ನಂತರ ಸಂಸ್ಥೆಯು ಇಕೊ ಕಾರಿಗೆ ಎಬಿಎಸ್, ಡ್ರೈವರ್ ಏರ್‍‍ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಅಳವಡಿಸಿ, ಈ ಕಾರಿ ಓಮ್ನಿ ಕಾರಿನ ಉತ್ತರಾಧಿಕಾರಿಯನ್ನಾಗಿ ಮಾಡಲು ತೀರ್ಮಾನಿಸಿತು. ಇವೆಲ್ಲಾ ಉಪಕರಣಗಳನ್ನು ನೀಡಿದ ನಂತರ ಈ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಕಾಣುತ್ತಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಜೂನ್ 2019ರಲ್ಲಿ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ಕ್ರೆಟಾ ಹಾಗು ವೆನ್ಯೂ ಎಸ್‍ಯುವಿ ಕಾರುಗಳಿಗೆ ಪೈಪೋಟಿ ನೀಡಿ ಜೂನ್ 2019ರ ಟಾಪ್ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಇಕೊ ಕಾರು ಏಳನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೆ 2018ರ ಜೂನ್‍ನಲ್ಲಿ 5612 ಯೂನಿಟ್ ಮಾರಾಟಗೊಂಡ ಇಕೊ ಕಾರು ಈ ವರ್ಷದ ಜೂನ್ ತಿಂಗಳಿನಲ್ಲಿ 9,265 ಯೂನಿಟ್ ಮಾರಾಟಗೊಂಡಿದೆ ಅಂದರೆ ಕಳೆದ ವರ್ಷಕ್ಕಿಂತಲೂ ಈ ವರ್ಷ ಶೇಕಡ 65ರಷ್ಟು ಅಧಿಕವಾಗಿ ಮಾರಾಟಗೊಂಡಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಇಕೊ ಎಂಪಿವಿ ಕಾರುಗಳಿಗೆ ಹೊಸದಾಗಿ ಅಪ್ಡೇಟ್ ನೀಡಿ ಬಿಡುಗಡೆ ಮಾಡಲಾಗಿದ್ದು, ಹೊಸ ಸೇಫ್ಟಿ ಫೀಚರ್ಸ್ ಪಡೆದ ಮಾರುತಿ ಸುಜುಕಿ ಇಕೊ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 3.55 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಹೊಸ ಬದಲಾವಣೆಯ ಬಗ್ಗೆ ಮಾರುತಿ ಸಂಸ್ಥೆಯು ಸಹ ತಮ್ಮ ವೆಬ್‍ಸೈಟ್‍ನಲ್ಲಿ ಅಪ್ಡೇಟ್ ಮಾಡಿದ್ದಾರೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಹೊಸ ಸುರಕ್ಷಾ ಸಾಧನಗಳು

ಈ ಬಾರಿ ಮಾರುತಿ ಸುಜುಕಿ ಇಕೊ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್-ಸೈಡ್ ಏರ್‍‍ಬ್ಯಾಗ್ಸ್, ರಿವರ್ಸ್ ಪಾರ್ಕಿಂಗ್ ಸೆಸ್ನಾರ್ಸ್, ಫ್ರಂಟ್ ಪ್ಯಾಸ್ಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಅಲರ್ಟ್ ಅಲಾರ್ಮ್ ಎಂಬ ವಿವಿಧ ಸೇಫ್ಟಿ ಫೀಚರ್ಸ್ ಅನ್ನು ನೀಡಲಾಗಿದೆ. ಇವುಗಳ ಜೊತೆಗೆ 'ಟೂರ್ ವಿ' ಟ್ರಿಮ್ ವೇರಿಯಂಟ್‍‍ನಲ್ಲಿ ಸ್ಪೀಡ್ ಲಿಮಿಟರ್ ಹಾಗು, ಹೈ ಸ್ಪ್ದ್ ಅಲರ್ಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇಷ್ಟೆ ಅಲ್ಲದೇ ಹೊಸ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ಆಲ್ಟೋ ಹ್ಯಾಚ್‍ಬ್ಯಾಕ್‍ನಿಂದ ಪಡೆದ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದೆ, ಇದು ಅಪಘಾತದ ವೇಳೆ ತಕ್ಷಣವೇ ಡ್ರೈವರ್ ಏರ್‍‍ಬ್ಯಾಗ್ ತೆರೆದುಕೊಳ್ಳುವಲ್ಲಿ ಸಹಾಯಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

8 ವರ್ಷದಲ್ಲಿ 5 ಲಕ್ಷ ಇಕೊ ಮಾರಾಟ

ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದ ಕಾರಣ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಬಾರಿಗೆ 2010ರಲ್ಲಿ ತಮ್ಮ ಇಕೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಬಿಡುಗಡೆಗೊಂಡ 9 ವರ್ಷಗಳಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚಿನ ಇಕೊ ವಾಹನಗಳು ಮಾರಾಟಗೊಂಡು ಹೊಸ ದಾಖಲೆಯನ್ನು ಬರೆದಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಹೌದು, ಮಾರುಕಟ್ಟೆಯಲ್ಲಿ ಹಲವಾರು ಎಂಪಿವಿ ಕಾರುಗಳು ಬಿಡುಗಡೆಗೊಳ್ಳುತ್ತಿದ್ದರೂ ಗ್ರಾಹಕರು ಇನ್ನು 8 ವರ್ಷಗಳ ಹಿಂದೆ ಬಿಡುಗಡೆಗೊಂಡ ಇಕೊ ಎಂಪಿವಿ ಕಾರಿನ ಕಡೆಗೆ ಒಲವನ್ನು ತೋರುತ್ತಿದ್ದಾರೆ. ಏಕೆಂದರೆ ಸುಮಾರು 5 ಮತ್ತು 7 ಮಂದಿ ಕೂರಬಹುದಾದ ಈ ಕಾರು ಕುಟುಂಬದೊಂದಿಗೆ ಹೊರಸಂಚಾರಕ್ಕೆ ಹೋಗಲು ಬಹು ಸೌಕರ್ಯವಂತವಾಗಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಮಾರುತಿ ಸುಜುಕಿ ಸಂಸ್ಥೆಯು ಇಕೊ ಎಂಪಿವಿ ಕಾರನ್ನು ಕೇವಲ ಸ್ವಂತ ಬಳಕೆಗೆ ಮಾತ್ರವಲ್ಲದೇ ವ್ಯವಹಾರಿಕ ಕಾರ್ಯಗಳಿಗೆ ಕೂಡಾ ಬಳಸಬಹುದಾದ ಹಾಗೆ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಹೆಚ್ಚಿನ ವಸ್ತುಗಳನ್ನು ಸರಬರಾಜು ಮಾಡಬಹುದಾಗಿದೆ.

ಈಗಲೂ ಕೂಡ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಈ ಕಾರು ಪ್ರತೀ ತಿಂಗಳು ಸುಮಾರು 7 ಸಾವಿರ ಕಾರುಗಳ ಬುಕ್ಕಿಂಗ್ ಪಡೆದುಕೊಳ್ಳುತ್ತಿದ್ದು, ಉತ್ತಮ ಲೆಗ್‍ರೂಂ ಮತ್ತು ಪ್ಯಾಸೆಂಜರ್‍‍‍ಗಳಿಗಾಗಿ ಆರಾಮದಾಯಕವಾದ ಹೆಡ್‍‍ರೂಂ ಅನ್ನು ಒದಗಿಸಲಾಗಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಎಂಜಿನ್ ಸಾಮರ್ಥ್ಯ

ಜನಪ್ರಿಯ ಮಾರುತಿ ಸುಜುಕಿ ಇಕೊ ಎಂಪಿವಿ ಕಾರು 1196ಸಿಸಿ 4 ಸಿಲೆಂಡರ್ ಮಲ್ಟಿ-ಪಾಯಿಂಟ್ ಇಂಜೆಕ್ಷನ್, ಪೆಟ್ರೋಲ್ ಎಂಜಿನ್ ಸಹಾಯದಿಂದ 69ಬಿಹೆಚ್‍ಪಿ ಮತ್ತು 101ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಓಮ್ನಿ ಎಫೆಕ್ಟ್ - ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಕೊ ಕಾರಿಗೆ ಹೆಚ್ಚುತ್ತಿರುವ ಬೇಡಿಕೆ

ಮಾರುತಿ ಸುಜುಕಿ ಎಂಪಿವಿ ಕಾರು ಐದು ಹಾಗು ಏಳು ಆಸಗಳುಳ್ಳ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಜೊತೆಗೆ ಅಧಿಕವಾಗಿ ಸರಕುಗಳನ್ನು ಸಾಗಿಸಲು ಮತ್ತು ಹೊರಸಂಚಾಕ್ಕೆ ಹೋಗುವ ಸಮಯದಲ್ಲಿ ಅಧಿಕವಾಗಿ ಬೇಕಾದ ಸಾಮಗ್ರಿಗಳನ್ನು ತುಂಬಿಕೊಳ್ಳಲು 540ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ನೀಡಲಾಗಿದೆ.

ಮರುತಿ ಸುಜುಕಿ ಇಕೊ ಎಂಪಿವಿ ಕಾರು 3675ಎಂಎಂ ಉದ್ದ, 1475ಎಂಎಂ ಅಗಲ, 1800ಎಂಎಂ ಎತ್ತರ, 2350ಎಂಎಂ ವ್ಹೀಲ್‍‍ಬೇಸ್, 160ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 40 ಲೀಟರ್‍‍ನಷ್ಟು ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಪಡೆದುಕೊಂಡಿದೆ.

Most Read Articles

Kannada
English summary
Omni Effect: Maruti Suzuki Eeco Getting Huge Demand. Read In Kannada
Story first published: Saturday, July 13, 2019, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more