ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಹೊಸ ಕಾರುಗಳ ಬಿಡುಗಡೆ ಮೇಲೆ ಹೆಚ್ಚಿನ ಗಮನಹರಿಸಿದ್ದು, ವರ್ಷದ ಆರಂಭದಲ್ಲಿ ಆದ ಕಾರು ಮಾರಾಟದಲ್ಲಿ ಕುಸಿತದ ಹಿನ್ನಡೆಯಿಂದ ಚೇತರಿಸಿಕೊಳ್ಳಲು ಹೊಸ ಉತ್ಪನ್ನಗಳ ಮೊರೆಹೋಗಿದೆ. ಇದರಲ್ಲಿ ಇದೀಗ ಬಿಡುಗಡೆಯಾಗುತ್ತಿರುವ ಎರ್ಟಿಗಾ ಹೊಸ ಮಾದರಿಯಾದ ಎರ್ಟಿಗಾ ಕ್ರಾಸ್ ಆವೃತ್ತಿಯು ವಿನೂತನ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ವಿವಿಧ ಕಾರಣಗಳಿಂದಾಗಿ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು 2019ರ ಆರಂಭದಿಂದ ಮೇ ಅವಧಿಯಲ್ಲಿ ಭಾರೀ ಪ್ರಮಾಣದ ಹೊಸ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿವೆ. ಸದ್ಯ ಆಟೋ ಉದ್ಯಮವು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಮಾರುತಿ ಸುಜುಕಿ ಸಂಸ್ಥೆಯು ಕೆಲವು ಹೊಸ ಕಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರಲ್ಲಿ ಎರ್ಟಿಗಾ ಕ್ರಾಸ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ಇದು ಸಾಮಾನ್ಯ ಎರ್ಟಿಗಾ ಮಾದರಿಗಿಂತ ಭಿನ್ನವಾಗಿರಲಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಮಾಹಿತಿಗಳ ಪ್ರಕಾರ ಹೊಸ ಎರ್ಟಿಗಾ ಕ್ರಾಸ್ ಮಾದರಿಯು ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿದ್ದು, ಪ್ರೀಮಿಯಂ ಫೀರ್ಚಸ್‌ಗಳಿಂದಾಗಿ ಹೊಸ ಕಾರು ನೆಕ್ಸಾ ಡೀಲರ್ಸ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗುತ್ತಿರುವ ಬಗ್ಗೆ ವರದಿಯಾಗಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಸಾಮಾನ್ಯ ಕಾರುಗಳನ್ನು ಕಾರುಗಳನ್ನು ಅರೆನಾ ಡೀಲರ್ಸ್‌ಗಳಲ್ಲಿ ಮಾರಾಟ ಮಾಡಿದ್ದಲ್ಲಿ, ಪ್ರೀಮಿಯಂ ಫೀಚರ್ಸ್ ಕಾರುಗಳನ್ನು ನೆಕ್ಸಾ ಡೀಲರ್ಸ್‌ಗಳಲ್ಲಿ ಮಾರಾಟ ಮಾಡುತ್ತದೆ. ಇದೀಗ ಬಿಡುಗಡೆಯಾಗಲಿರುವ ಎರ್ಟಿಗಾ ಕ್ರಾಸ್ ನೆಕ್ಸಾದಲ್ಲಿ ಮಾತ್ರ ಖರೀದಿ ಲಭ್ಯವಾಗಲಿದೆಯೆಂತೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಎರ್ಟಿಗಾ ಕ್ರಾಸ್ ಕಾರು ಸಾಮಾನ್ಯ ಮಾದರಿಯ ಎರ್ಟಿಗಾ ಕಾರಿಗಿಂತಲೂ ವಿಭಿನ್ನವಾಗಿದ್ದು, ವಿನೂತನವಾದ ಫ್ಲೇರ್ಡ್ ವ್ಹೀಲ್ ಆರ್ಚೆಸ್, ಹೊಸ ಕ್ರೋಮ್ ಗ್ರಿಲ್ ಅನ್ನು ನೀಡಲಾಗಿದೆ. ಹಾಗೆಯೇ ಆಕರ್ಷಕವಾದ ಹೆಡ್‍ಲೈಟ್‍ಗಳು ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದ್ದು, ಉತ್ತಮ ಡ್ರೈವ್ ಅನುಭವಕ್ಕಾಗಿ ಹೈ ಗ್ರೌಂಡ್ ಕ್ಲಿಯರೆನ್ಸ್, ರೂಫ್ ರೈಲ್ಸ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಮುಖ್ಯವಾಗಿ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರು 6 ಆಸನಗಳನ್ನು ಹೊಂದಿರಲಿದ್ದು, ಮಧ್ಯಭಾಗದಲ್ಲಿನ ಸೀಟ್‍‍ಗಳನ್ನು ಕ್ಯಾಪ್ಟನ್ ಸೀಟ್ ಮಾದರಿಗಳಲ್ಲಿ ನೀಡುವ ಸಾಧ್ಯತೆಗಳಿವೆ. ಎರ್ಟಿಗಾ ಬ್ಲಾಕ್ ಎಡಿಷನ್‍ನಂತೆಯೇ ಈ ಕಾರು ಕೂಡಾ ಒಳಭಾಗದಲ್ಲಿ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಪಡೆಯಲಿದ್ದು, ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಕ್ರಾಸ್ ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಸದ್ಯ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಎಂಪಿವಿ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದ್ದು, ಕಳೆದ ಅಗಸ್ಟ್‌ನಿಂದ ಇಲ್ಲಿಯ ತನಕ ಸುಮಾರು 50 ಸಾವಿರಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಎರಡನೇ ತಲೆಮಾರಿನ ಎರ್ಟಿಗಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.21 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಮಾರುತಿ ಸುಜುಕಿ ಹೊಸ ಎರ್ಟಿಗಾ ಕ್ರಾಸ್

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎರ್ಟಿಗಾ ಕ್ರಾಸ್ ವೆರಿಯೆಂಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 13 ವೆರಿಯೆಂಟ್‌ಗಳಿಂತ ತುಸು ಭಿನ್ನವಾಗಿರಲಿದೆ. ವಿಶೇಷವಾಗಿ ಇದು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಎರ್ಟಿಗಾ ಕ್ರಾಸ್ ಮಾದರಿಯನ್ನು ಅಭಿವೃದ್ಧಿಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Maruti Suzuki Ertiga Cross To Be Launched In August & Sold Via Nexa Outlets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X