10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಗುಜರಾತ್‍‍ನಲ್ಲಿರುವ ಮುಂದ್ರಾ ಬಂದರಿನಿಂದ ಹತ್ತು ಲಕ್ಷ ಕಾರುಗಳನ್ನು ರಫ್ತು ಮಾಡಿರುವುದಾಗಿ ತಿಳಿಸಿದೆ. ಮುಂದ್ರಾ ಬಂದರಿನಿಂದ ಹತ್ತು ಲಕ್ಷದ ಕಾರ್ ಆಗಿ ಆಕ್ಸ್ ಫರ್ಡ್ ಬ್ಲೂ ಬಣ್ಣದ ಮಾರುತಿ ಸುಜುಕಿ ಡಿಜೈರ್ ಕಾರ್ ಅನ್ನು ಚಿಲಿ ದೇಶಕ್ಕೆ ರಫ್ತು ಮಾಡಲಾಗಿದೆ.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಭಾರತದ ನಂ.1 ಕಾರು ತಯಾರಕ ಕಂಪನಿ ಎಂಬುದರಲ್ಲಿ ಎಂಬುದೇ ಸಂಶಯವಿಲ್ಲ. ಇದರ ಜೊತೆಗೆ ಪ್ರಪಂಚದ ಅತಿ ದೊಡ್ಡ ಕಾರು ತಯಾರಕ ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಸಹ ಹೊಂದಿದೆ. ಮಾರುತಿ ಸುಜುಕಿ ಕಂಪನಿಯು, ಕಾರುಗಳನ್ನು ರಫ್ತು ಮಾಡುವುದನ್ನು 1987ರಲ್ಲಿ ಆರಂಭಿಸಿತು.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಆ ವರ್ಷ ಕಂಪನಿಯ 500 ಕಾರುಗಳನ್ನು ಹಂಗೇರಿಗೆ ರಫ್ತು ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಕಂಪನಿಯು ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಕಳೆದ ವರ್ಷ ಮಾರುತಿ ಸುಜುಕಿ ಕಂಪನಿಯು ದಕ್ಷಿಣ ಅಮೇರಿಕಾ, ಏಷ್ಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳಲ್ಲಿರುವ 100ಕ್ಕೂ ಹೆಚ್ಚು ದೇಶಗಳಿಗೆ ತನ್ನ ಕಾರುಗಳನ್ನು ರಫ್ತು ಮಾಡಿತ್ತು.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಈ ಎಲ್ಲಾ ಕಾರುಗಳನ್ನು ಸಮುದ್ರದ ಮೂಲಕ ಕ್ಯಾರಿಯರ್ ಶಿಪ್‍‍‍ಗಳಲ್ಲಿ ಸಾಗಿಸಲಾಗಿತ್ತು. ಈ ಕಾರಣಕ್ಕಾಗಿ ಗುಜರಾತ್‍‍ನ ಮುಂದ್ರಾ ಬಂದರು ಮಾರುತಿ ಸುಜುಕಿ ಕಂಪನಿಯ ವಹಿವಾಟಿನಲ್ಲಿ ಪ್ರಮುಖ ಪಾತ್ರವಹಿಸಿದೆ.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಅದಾನಿ ಪೋರ್ಟ್ಸ್ ಹಾಗೂ ಎಸ್‍ಇ‍‍ಝಡ್‍‍ಗಳು ನೋಡಿಕೊಳ್ಳುವ ಮುಂದ್ರಾ ಬಂದರು ಭಾರತದಲ್ಲಿರುವ ಅತಿ ದೊಡ್ಡ ಖಾಸಗಿ ಬಂದರಾಗಿದೆ. ಖಾಸಗಿಯವರ ಒಡೆತನದಲ್ಲಿರುವ ಬಂದರಿನಲ್ಲಿ ಕಾರ್ಗೊ ವಹಿವಾಟುಗಳು ಸುಲಭವಾಗಿ ನಡೆಯುತ್ತವೆ.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

2013-14ರಲ್ಲಿ ಮುಂದ್ರಾ ಬಂದರು, ಒಂದು ವರ್ಷದಲ್ಲಿ 10 ಕೋಟಿ ಟನ್ ಕಾರ್ಗೊ ವಹಿವಾಟನ್ನು ನಡೆಸಿದ ಭಾರತದ ಮೊದಲ ಬಂದರು ಎಂಬ ಹೆಗ್ಗಳಿಕೆಯನ್ನು ಪಡೆಯಿತು. ಮಾರುತಿ ಸುಜುಕಿ ಮುಂದ್ರಾ ಬಂದರನ್ನು ಅತಿ ಹೆಚ್ಚು ಬಳಸುವ ಕಂಪನಿಯಾಗಿದೆ.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಕಾರುಗಳ ತಪಾಸಣೆಗಾಗಿ ಪ್ರಿ ಡೆಲಿವರಿ ಇನ್ಸ್ ಪೆಕ್ಷನ್ ಯುನಿಟ್ ಹಾಗೂ ಸ್ಟಾಕ್ ಯಾರ್ಡ್ ಗಳನ್ನು ಅಂತರ್‍‍ರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಹಾಗೂ ಶಿಪ್ ಡಾಕ್‍‍ಗಳಿಂದ ಕೆಲವೇ ದೂರಗಳ ಅಂತರದಲ್ಲಿ ಸ್ಥಾಪಿಸಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಮುಂದ್ರಾ ಬಂದರನ್ನು ಮಧ್ಯ ಏಷ್ಯಾ, ಲ್ಯಾಟಿನ್ ಅಮೇರಿಕಾ ಹಾಗೂ ಯುರೋಪ್ ದೇಶಗಳಿಗೆ ಸಾಗಲು ಮುಖ್ಯ ದ್ವಾರವನ್ನಾಗಿ ಬಳಸುತ್ತದೆ. ಕಾರು ಕ್ಯಾರಿಯಲ್ ಶಿಪ್‍‍ಗಳು ಬಂದರಿಗೆ ಬಂದು ಮಾರುತಿ ಸುಜುಕಿ ಕಾರುಗಳನ್ನು ತುಂಬಿಸಿಕೊಂಡು, ನಂತರ ಮಧ್ಯ ಏಷ್ಯಾ ಮಾರುಕಟ್ಟೆ ಹಾಗೂ ಯುರೋಪಿಯನ್ ಮಾರುಕಟ್ಟೆಗೆ ಸುಯೆಜ್ ಕಾಲುವೆ ಮೂಲಕ ಸಾಗುತ್ತವೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮುಂದ್ರಾ ಬಂದರು ಇರುವ ಪ್ರದೇಶವು ಮಾರುತಿ ಸುಜುಕಿ ಕಂಪನಿಗೆ ತನ್ನ ಉತ್ಪಾದನಾ ಘಟಕದಿಂದ ಕಾರುಗಳನ್ನು ಬಂದರಿಗೆ ತಲುಪಿಸಲು ಅನುಕೂಲವಾಗಿದೆ. ಗುಜರಾತ್‍‍ನಲ್ಲಿರುವ ನವಿಯಾನಿ ಉತ್ಪಾದನಾ ಘಟಕದಿಂದ ಮುಂದ್ರಾ ಬಂದರು 330 ಕಿ.ಮೀ ದೂರದಲ್ಲಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಗುರುಗ್ರಾಮ ಹಾಗೂ ಮನೇಸಾರ್ ಘಟಕಗಳು ಮುಂದ್ರಾ ಬಂದರಿನಿಂದ 1,000 ಕಿ.ಮೀ ದೂರದಲ್ಲಿವೆ. ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳನ್ನು ಮುಂಬೈ ಬಂದರಿನಿಂದ ಸಹ ರಫ್ತು ಮಾಡುತ್ತದೆ. ಆದರೆ ಈ ಬಂದರು ಉತ್ಪಾದನಾ ಘಟಕಗಳಿಂದ ದೂರವಿರುವ ಕಾರಣಕ್ಕೆ ದುಬಾರಿ ವೆಚ್ಚವಾಗಲಿದೆ.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ 14 ಮಾದರಿಯ ಕಾರುಗಳನ್ನು ಮುಂದ್ರಾ ಬಂದರಿನಿಂದ ರಫ್ತು ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿಯು ಮಾದರಿಗಳನ್ನು ಹೆಚ್ಚಿಸಿದಂತೆಲ್ಲಾ, ರಫ್ತು ಮಾಡುವ ಕಾರುಗಳ ಸಂಖ್ಯೆಯು ಸಹ ಹೆಚ್ಚಲಿದೆ.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‍‍ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ‍ಇ‍ಒ ಕೆನಿಚಿ ಅಯುಕಾವಾರವರು ಮಾತನಾಡಿ, ಮುಂದ್ರಾ ಬಂದರಿನಿಂದ ಕಾರ್ಯಾಚರಣೆಯನ್ನು ಆರಂಭಿಸಿದ ಹತ್ತು ವರ್ಷದ ಒಳಗೆ ಹತ್ತು ಲಕ್ಷ ಕಾರುಗಳನ್ನು ರಫ್ತು ಮಾಡಿದ ಮೈಲಿಗಲ್ಲನ್ನು ಸಾಧಿಸಿದ್ದೇವೆ. ಮಾರುತಿ ಸುಜುಕಿ ಕಂಪನಿಯಲ್ಲಿ ನಾವು ಬದಲಾಗುತ್ತಿರುವ ಮಾರುಕಟ್ಟೆ ಸನ್ನಿವೇಶಕ್ಕೆ ತಕ್ಕಂತೆ ನಮ್ಮ ರಫ್ತು ಕಾರ್ಯ ತಂತ್ರವನ್ನು ಬದಲಿಸುತ್ತೇವೆ.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯ ರಫ್ತು ವಹಿವಾಟು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ತಕ್ಕಂತೆ ಇದೆ. ಮಾರುತಿ ಸುಜುಕಿ ಕಂಪನಿಯು ಈ ಮೂಲಕ ಅಂತರ್‍‍ರಾಷ್ಟ್ರೀಯ ಗುಣಮಟ್ಟ, ಸುರಕ್ಷೆ, ವಿನ್ಯಾಸ ಹಾಗೂ ಟೆಕ್ನಾಲಜಿಗೆ ತಕ್ಕಂತಹ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.

10 ವರ್ಷದಲ್ಲಿ 10 ಲಕ್ಷ ಕಾರುಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಆಟೋಮೊಬೈಲ್ ಉದ್ಯಮವು ನಿಧಾನಗತಿಯ ಪ್ರಗತಿಯನ್ನು ಕಾಣುತ್ತಿರುವ ಈ ಸಂದರ್ಭದಲ್ಲಿ ಮಾರುತಿ ಸುಜುಕಿ ಕಂಪನಿಯ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟವು ಗಣನೀಯವಾಗಿ ಕುಸಿದಿದೆ. ಹತ್ತು ಲಕ್ಷ ಕಾರುಗಳನ್ನು ರಫ್ತು ಮಾಡಿರುವ ಈ ಸಾಧನೆಯು ಕುಸಿಯುತ್ತಿರುವ ಆಟೋಮೊಬೈಲ್ ಉದ್ಯಮಕ್ಕೆ ಚೇತರಿಕೆ ನೀಡಲಿದೆ. ಒಂದೇ ಬಂದರಿನ ಮೂಲಕ ಹತ್ತು ಲಕ್ಷ ಕಾರುಗಳನ್ನು ರಫ್ತು ಮಾಡಿರುವುದು ಮಾರುತಿ ಸುಜುಕಿ ಕಂಪನಿಯ ರಫ್ತು ವಿಧಾನವನ್ನು ಹಾಗೂ ಮುಂದ್ರಾ ಬಂದರಿನ ಸಾಮರ್ಥ್ಯವನ್ನು ತೋರಿಸುತ್ತದೆ.

Most Read Articles

Kannada
English summary
Maruti Suzuki Exports 10 Lakh Cars From Mundra Port Within Just 10 Years - Read in kannada
Story first published: Friday, September 20, 2019, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X