ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿಯಿಂದ ಹೊಸ ಅಸ್ತ್ರ

ಮಾರುತಿ ಸುಜುಕಿ ಬ್ರೆಝಾ ಈ ಕಾರು ಕಳೆದ ಮೂರು ವರ್ಷಗಳಿಂದ ಬೆಸ್ಟ್ ಸೆಲ್ಲಿಂಗ್ ಎಸ್‍ಯುವಿ ಎಂಬ ಖ್ಯಾತಿಯನ್ನು ಪಡೆಯುತ್ತಿದೆ. ಮೊದಲಿಗೆ 2016ರಲ್ಲಿ ಬಿಡುಗಡೆಗೊಂಡ ಈ ಕಾರು ಎಸ್‍ಯುವಿ ಕಾರುಗಳ ಮಾರಟದ ಪಟ್ಟಿಯಲ್ಲಿ ಪ್ರತೀ ತಿಂಗಳೂ ಮೊದಲನೆಯ ಸ್ಥಾನವನ್ನು ಪಡೆಯುತ್ತಲೇ ಬಂದಿದೆ. ಈ ಮೂರು ವರ್ಷದಲ್ಲಿ ಹಲವಾರು ಎಸ್‍ಯುವಿ ಕಾರುಗಳು ಬಿಡಗಡೆಗೊಂಡರೂ ಸಹ ಬ್ರೆಝಾ ಹಿಂದಿಕ್ಕಲು ಸಾಧ್ಯವಾಗಿಲ್ಲ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಆದರೆ ಇತ್ತೀಚೆಗೆ ಬಿಡುಗಡೆಗೊಂಡ ಹ್ಯುಂಡೈ ವೆನ್ಯೂ ಕಾರು ಬಹು ಬೇಗ ಗ್ರಾಹಕರಿಂದ ಜನಪ್ರಿಯತೆಯನ್ನು ಪಡೆಯುತ್ತಾ ಮಾರುತಿ ಸುಜುಕಿ ಬ್ರೇಝಾ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಬ್ರೆಝಾ ಬಿಡುಗಡೆಗೊಂಡಾಗಿನಿಂದಲೂ ತಿಂಗಳಿಗೆ ಸುಮಾರು 15,000 ಯೂನಿಟ್ ಮಾರಾಟವಾಗುತ್ತಿತ್ತು. ಹಾಗೆಯೇ 4,500 ಯೂನಿಟ್ ಟಾಟಾ ನೆಕ್ಸಾನ್, 3000 ಫೋರ್ಡ್ ಇಕೋಸ್ಪೋರ್ಟ್ ಹಾಗು ನಂತರ ಬಿಡುಗಡೆಗೊಂಡ ಮಹೀಂದ್ರಾ ಎಕ್ಸ್‌ಯುವಿ300 ಕೂಡಾ 5,000 ಯೂನಿಟ್ ಮಾರಾಟಗೊಳ್ಳುತ್ತಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಅಗ್ಗದ ಮತ್ತು ಆಕರ್ಷಕ ಬೆಲೆಯನ್ನು ಹೊತ್ತು ಬಿಡುಗಡೆಗೊಂಡ ಹ್ಯುಂಡೈ ವೆನ್ಯೂ ಕಾರಿನ ನಂತರ ಮಾರ್ಚ್ 2019ರಲ್ಲಿ 14,000 ಯೂನಿಟ್ ಮಾರಾಟಗೊಂಡ ಬ್ರೆಝಾ ಕಾರು ಜೂನ್ 2019ರಲ್ಲಿ 9000 ಯೂನಿಟ್ ಮಾರಾಟವಾಗುವ ಸ್ಥಾನಕ್ಕೆ ಬಂದು ನಿಂತಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಹೊಸ ಅಸ್ತ್ರವನ್ನು ಪ್ರಯೋಗ ಮಾಡಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಮಾರುತಿ ಸುಜುಕಿ ಸಂಸ್ಥೆಯು ಪೆಟ್ರೋಲ್ ಮಾದರಿಯ ಬ್ರೆಝಾ ಕಾರುಗಳನ್ನು ಬಿಡಗಡೆ ಮಾಡುವ ಮುನ್ನ ಇರುವ ಸ್ಟಾಕ್‍‍ಗಳನ್ನು ಖರೀದಿ ಮಾಡುವ ಪ್ರತಿಯೊಬ್ಬ ಗ್ರಾಹಕರಿಗೆ ಸುಮಾರು 5 ವರ್ಷದ ಉಚಿತ ವಾರಂಟಿಯನ್ನು ಮತ್ತು ಸುಮಾರು ರೂ. 30 ಸಾವಿರ ತನಕ ಡಿಸ್ಕೌಂಟ್ ನೀಡಲು ನಿರ್ಧರಿಸಿದೆ. ಈ ಕುರಿತಾದ ಜಾಹಿರಾತುಗಳನ್ನು ಸಹ ದಿನಪತ್ರಿಕೆಗಳಲ್ಲಿ ನೀಡಲಾಗುತ್ತಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮವನ್ನು ಪಾಲನೆ ಮಾಡಲು ಸಾಧ್ಯವಿರದ ಡೀಸೆಲ್ ಎಂಜಿನ್‌ಗಳಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದು, ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ. ಇದರಿಂದ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಈಗಿನಿಂದಲೇ ಕಡಿತಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಹಂತವಾಗಿ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಭಾರೀ ಬದಲಾವಣೆ ತರುತ್ತಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಪೆಟ್ರೊಲ್ ಎಂಜಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಪೆಟ್ರೋಲ್ ಎಂಜಿನ್ ಅನ್ನು ಮೊದಲ ಬಾರಿಗೆ ಸಿಯಾಜ್ ಸೆಡಾನ್‍ನಲ್ಲಿ ಅಳವಡಿಸಲಾಗಿತ್ತು.ಇದೀಗ ಇದೇ ಎಂಜಿನ್ ಅನ್ನು ವಿಟಾರಾ ಬ್ರಿಝಾ ಸೇರಿದಂತೆ ಇತರೆ ಕೆಲವು ಕಾರು ಮಾದರಿಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಹೊಚ್ಚ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿ ಹೊಂದಿದ್ದು, ಉತ್ತಮ ಮೈಲೇಜ್‌ನೊಂದಿಗೆ 105-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಹಾಗೆಯೇ ಪೆಟ್ರೋಲ್ ಎಂಜಿನ್ ಜೊತೆಯಲ್ಲಿ ವಿಟಾರಾ ಬ್ರೆಝಾದಲ್ಲಿ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಹೊಂದಿರಲಿದ್ದು, ಸ್ಟಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರಲಿದೆ. ಭವಿಷ್ಯದ ಯೋಜನೆಗಳಿಗಾಗಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಫೋರ್ ಸ್ಪೀಡ್ ಟಾರ್ಕ್ ಕನ್ವರ್ಟರ್‍‍ಗಳನ್ನು ನೀಡಲಾಗಿದ್ದು, ಇದೇ ಮಾದರಿಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಈಗಾಗಲೇ ಸಿಯಾಜ್ ಸೆಡಾನ್ ನಲ್ಲಿ ಅಳವಡಿಸಲಾಗಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಬರಲಿರುವ ಪೆಟ್ರೋಲ್ ಎಂಜಿನ್ ಬ್ರೆಝಾ ಹೊರತಾಗಿ ಹೊಸ ಕಾರಿನಲ್ಲಿ ಇನ್ನು ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದ್ದು, ಕ್ರಾಸ್ ಬ್ಯಾಡ್ಜ್ ಯೋಜನೆಯಲ್ಲಿ ಟೊಯೊಟಾ ಸಂಸ್ಥೆಯು ಸಹ ಇದೇ ಕಾರನ್ನು ಕೆಲವು ಬದಲಾವಣೆಗಳೊಂದಿಗೆ ಪೆಟ್ರೋಲ್ ಮತ್ತು ಸ್ಮಾರ್ಟ್ ಹೈಬ್ರಿಡ್ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆ ಮಾಡಲಿದೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಹಾಗೆಯೆ ಬಿಡುಗಡೆಯಾಗಲಿರುವ ಪೆಟ್ರೋಲ್ ಆಧಾರಿತ ಮಾರುತಿ ಸುಜುಕಿ ಬ್ರೆಝಾ ಫೇಸ್‍ಲಿಫ್ಟ್ ಕಾರುಗಳು ಈ ಬಾರಿ ಕೇವಲ ಎಂಜಿನ್‍ನಲ್ಲಿ ಮಾತ್ರವಲ್ಲದೆಯೆ ಕೆಲ ಎಕ್ಸ್ಟ್ರಾ ಉಪಕರಣಗಳನ್ನು ಸಹ ಪಡೆದುಕೊಳ್ಳಲಿದ್ದು, ವರದಿ ಪ್ರಕಾರ ಹೊಸ ಮಾರುತಿ ಸುಜುಕಿ ಬ್ರೆಝಾ ಕಾರು ಈ ಬಾರಿ ಒಟ್ಟು 4 ಏರ್‍‍‍ಬ್ಯಾಗ್‍ಗಳು ಮತ್ತು ಸನ್‍ರೂಫ್ ಅನ್ನು ಪಡೆಯಲಿದೆ. ಅಂದರೆ ಈಗಾಗಲೇ ಡ್ಯುಯಲ್ ಏರ್‍‍‍ಬ್ಯಾಗ್ ಆಯ್ಕೆಯಲ್ಲಿ ಲಭ್ಯವಿರುವ ಈ ಕಾರು ನಂತರ ಸೈಡ್ ಏರ್‍‍ಬ್ಯಾಗ್‍ಗಳನ್ನು ಸಹ ಪಡೆಯಲಿದೆಯಂತೆ.

ಬ್ರೆಝಾ ಕಾರಿನ ಮಾರಾಟವನ್ನು ಹೆಚ್ಚಿಸಲು ಮಾರುತಿ ಸುಜುಕಿ ಇಂದ ಹೊಸ ಅಸ್ತ್ರ

ಎರಡು ಏರ್‍‍ಬ್ಯಾಗ್‍ಗಳು ಅಂದರೆ ಡ್ರೈವರ್‍‍ಗೆ ಮತ್ತು ಕೋ ಪ್ಯಾಸೆಂಜರ್‍‍ಗೆ ಏರ್‍‍ಬ್ಯಾಗ್ ಅನ್ನು ನೀಡಲಿದೆಯೆ ಅಥವಾ ಒಟ್ಟಾರೆಯಾಗಿ ಸಂಸ್ಥೆಯು ತಮ್ಮ ಮುಂದಿನ ಬ್ರೆಝಾ ಕಾರಿಗೆ ಒಟ್ಟಾರೆಯಾಗಿ 6 ಏರ್‍‍ಬ್ಯಾಗ್‍ಗಳನ್ನು ನೀಡಲಿದೆಯೆ ಎಂದು ಇನ್ನು ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಒಟ್ಟಿನಲ್ಲಿ 6 ಏರ್‍‍ಬ್ಯಾಗ್ ಅನ್ನು ನೀಡಿದ್ದೆ ಆದಲಿ ಈ ಕಾರಿನ ಬೆಲೆಯು ಕೊಂಚ ಅಧಿಕವಾಗಿರಬಹುದಾಗಿದೆ ಮತ್ತು ಮೇಲೆ ಹೇಳಿರುವ ಹಾಗೆ ಸನ್ ರೂಫ್ ಅನ್ನು ಸಹ ನೀಡಲಾಗುತ್ತಿದೆ.

Most Read Articles

Kannada
English summary
Maruti Suzuki Brezza Warranty Update Rival Hyundai Venue. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X