ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಭಾರತದ ನಂ 1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಕಾರುಗಳು ಯಾವಾಗಲೂ ಜನಪ್ರಿಯತೆಯನ್ನು ಹೊಂದಿರುತ್ತವೆ. ಇದರ ಜೊತೆಗೆ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಲೇ ಇರುತ್ತವೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಕಳೆದ ಕೆಲವು ತಿಂಗಳುಗಳಿಂದ ದೇಶಿಯ ಆಟೋಮೊಬೈಲ್ ಮಾರುಕಟ್ಟೆಯು ಎದುರಿಸುತ್ತಿರುವ ನಿಧಾನಗತಿಯ ಬೆಳವಣಿಗೆಯ ಬಿಸಿಯು ಮಾರುತಿ ಸುಜುಕಿ ಕಂಪನಿಗೂ ತಟ್ಟಿತ್ತು. ಇದರಿಂದಾಗಿ ಈ ಕಂಪನಿಯ ಕಾರುಗಳ ಮಾರಾಟದಲ್ಲಿ ಕುಸಿತ ಉಂಟಾಗಿತ್ತು.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಆದರೆ ಹಬ್ಬದ ಸಂದರ್ಭದಲ್ಲಿ ಎಲ್ಲಾ ಕಂಪನಿಯ ಕಾರುಗಳಂತೆ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟದಲ್ಲೂ ಚೇತರಿಕೆ ಕಂಡು ಬಂದಿದೆ. ಬೇರೆ ತಿಂಗಳುಗಳಿಗೆ ಹೋಲಿಸಿದರೆ, 2019ರ ಅಕ್ಟೋಬರ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟವು ಏರಿಕೆಯಾಗಿದೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಪ್ರತಿ ವರ್ಷದ ಮಾರಾಟಕ್ಕೆ ಹೋಲಿಸಿದರೆ, ಎರ್ಟಿಗಾ ಕಾರಿನ ಮಾರಾಟದಲ್ಲಿ 418.8%ನಷ್ಟು ಏರಿಕೆಯಾಗಿದ್ದರೆ, ಸೆಲೆರಿಯೊ, ವಿಟಾರಾ ಬ್ರಿಝಾ ಕಾರುಗಳನ್ನು ಹೊರತು ಪಡಿಸಿ ಬೇರೆ ಕಾರುಗಳ ಮಾರಾಟದಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಮಾರುತಿ ಸುಜುಕಿ ಕಂಪನಿಯ ಯಾವ ಕಾರುಗಳ ಮಾರಾಟದಲ್ಲಿ ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಆಲ್ಟೋ 800 ಹಾಗೂ ಕೆ10

ಮಾರುತಿ ಸುಜುಕಿಯ ಈ ಆಲ್ಟೊ ಟ್ವಿನ್‍ ಕಾರುಗಳು ಕಳೆದ ತಿಂಗಳು 17,903 ಯುನಿಟ್‍‍ಗಳಷ್ಟು ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣವು 18.7%ನಷ್ಟು ಜಾಸ್ತಿಯಾಗಿದೆ. ಸೆಪ್ಟೆಂಬರ್‍‍ನಲ್ಲಿ 15,079 ಯುನಿಟ್‍‍ಗಳು ಮಾರಾಟವಾಗಿದ್ದವು. ಆದರೆ ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ 19.3%ನಷ್ಟು ಕುಸಿತವಾಗಿದೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಬಲೆನೊ

ಹಾಟ್ ಸೆಲ್ಲಿಂಗ್ ಆಗಿರುವ ಬಿ 2 ಸೆಗ್‍‍ಮೆಂಟ್‍‍ನ ಮಾರುತಿ ಬಲೆನೊ ಹ್ಯಾಚ್‌ಬ್ಯಾಕ್‍‍ನ 16,237 ಯುನಿ‍‍ಟ್‍‍ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 42.2% ನಷ್ಟು ಏರಿಕೆಯಾಗಿದ್ದರೆ, ವರ್ಷದ ಮಾರಾಟದ ಪ್ರಕಾರ 13%ನಷ್ಟು ಕುಸಿತ ಉಂಟಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬಲೆನೊದ 11,420 ಯುನಿಟ್‍‍ಗಳು ಮಾರಾಟವಾಗಿದ್ದವು.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಸೆಲೆರಿಯೊ

ಸೆಲೆರಿಯೊದ 3,669 ಯುನಿಟ್‍‍ಗಳು ಮಾರಾಟವಾಗಿವೆ. ಇದು ಸೆಪ್ಟೆಂಬರ್ ತಿಂಗಳಿಗಿಂತ 11.4% ಹಾಗೂ ಕಳೆದ ವರ್ಷಕ್ಕಿಂತ 60.4% ಕಡಿಮೆಯಾಗಿದೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಸಿಯಾಜ್

ಸಿ 2 ಸೆಗ್‍‍ಮೆಂಟಿನಲ್ಲಿರುವ ಸಿಯಾಜ್ ಸೆಡಾನ್ ಕಾರಿನ 2,371 ಯುನಿಟ್‍‍ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ 1,715 ಯುನಿಟ್‍‍ಗಳು ಮಾರಾಟವಾಗಿದ್ದವು. ತಿಂಗಳ ಮಾರಾಟದಲ್ಲಿ 38.3% ನಷ್ಟು ಏರಿಕೆಯಾಗಿದ್ದರೆ, ವರ್ಷದ ಮಾರಾಟದ ಪ್ರಕಾರ 39.1%ನಷ್ಟು ಕುಸಿತ ಉಂಟಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಡಿಜೈರ್

ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಸೆಡಾನ್ ಕಾರ್ ಆದ, ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಡಿಜೈರ್ ಕಾರಿನ 19,569 ಯುನಿಟ್‍‍ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ 15,662 ಯುನಿಟ್‌ಗಳು ಮಾರಾಟವಾಗಿದ್ದವು. ತಿಂಗಳ ಮಾರಾಟದಲ್ಲಿ 24.9% ಹಾಗೂ ವರ್ಷದ ಮಾರಾಟದಲ್ಲಿ 12.4%ನಷ್ಟು ಏರಿಕೆಯಾಗಿದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಇಕೊ

ಮಾರುತಿ ಸುಜುಕಿ ಕಂಪನಿಯು ಮಾರಾಟ ಮಾಡುವ ಏಕೈಕ ಪ್ರಯಾಣಿಕ ಸಾಗಣೆ ಕಾರ್ ಆದ ಇಕೊವಿನ 10,011 ಯುನಿಟ್‍‍ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ 9,949 ಯುನಿಟ್‍‍ಗಳು ಮಾರಾಟವಾಗಿದ್ದವು. ಹಿಂದಿನ ತಿಂಗಳಿಗೆ ಹೋಲಿಸಿದರೆ 49.1%ನಷ್ಟು ಏರಿಕೆಯಾಗಿದೆ.

ಮಾದರಿ ಅಕ್ಟೋಬರ್ 2019 ಸೆಪ್ಟೆಂಬರ್ 2019
ಮಾರುತಿ ಡಿಜೈರ್ 19,569 15,662
ಮಾರುತಿ ಸ್ವಿಫ್ಟ್ 19,401 12,934
ಮಾರುತಿ ಆಲ್ಟೋ 17,903 15,079
ಮಾರುತಿ ಬಲೆನೊ 16,237 11,420
ಮಾರುತಿ ವ್ಯಾಗನ್ ಆರ್ 14,359 11,757
ಮಾರುತಿ ಎಸ್ ಪ್ರೆಸ್ಸೊ 10,634 5,006
ಮಾರುತಿ ವಿಟಾರಾ ಬ್ರಿಝಾ 10,227 10,362
ಮಾರುತಿ ಇಕೊ 10,011 9,949
ಮಾರುತಿ ಎರ್ಟಿಗಾ 7,197 6,284
ಮಾರುತಿ ಎಕ್ಸ್ ಎಲ್6 4,328 3,840
ಮಾರುತಿ ಸೆಲೆರಿಯೊ 3,669 4,140
ಮಾರುತಿ ಸಿಯಾಜ್ 2,371 1,715
ಮಾರುತಿ ಇಗ್ನಿಸ್ 1,859 6,284
ಮಾರುತಿ ಎಸ್ ಕ್ರಾಸ್ 1,356 1,040
ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಎರ್ಟಿಗಾ

ಎರ್ಟಿಗಾ ಅಕ್ಟೋಬರ್‌ನಲ್ಲಿ 7,197 ಯುನಿಟ್‌ಗಳ ಮಾರಾಟದೊಂದಿಗೆ ಕಳೆದ ವರ್ಷದ ಅಕ್ಟೋಬರ್ ತಿಂಗಳಿಗಿಂತ 418.9%ನಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್‌ ತಿಂಗಳಿಗೆ ಹೋಲಿಸಿದರೆ 14.5%ನಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 6,284 ಯುನಿಟ್‌ಗಳು ಮಾರಾಟವಾಗಿದ್ದವು.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಇಗ್ನಿಸ್

ಮಾರುತಿ ಸುಜುಕಿಯ ಬಿ 1 ಸೆಗ್‍‍ಮೆಂಟ್‍‍ನಲ್ಲಿರುವ ಕ್ರಾಸ್ ಹ್ಯಾಚ್ ಬ್ಯಾಕ್ ಆದ ಇಗ್ನಿಸ್‍‍ನ 1,859 ಯುನಿಟ್‍‍‍ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ 1,266 ಯುನಿಟ್‍‍ಗಳು ಮಾರಾಟವಾಗಿದ್ದವು. ಒಟ್ಟಾರೆಯಾಗಿ ಸೆಪ್ಟೆಂಬರ್ ತಿಂಗಳಿಗಿಂತ 46.8%ನಷ್ಟು ಏರಿಕೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ 17.5%ನಷ್ಟು ಕುಸಿತ ಉಂಟಾಗಿದೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಎಸ್-ಕ್ರಾಸ್

ಅಕ್ಟೋಬರ್‍‍ನಲ್ಲಿ 1,356 ಯುನಿಟ್‌ಗಳ ಮಾರಾಟದೊಂದಿಗೆ, ಎಸ್-ಕ್ರಾಸ್ ಸೆಪ್ಟೆಂಬರ್‌ ತಿಂಗಳಿಗಿಂತ 30.4%ನಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 1,040 ಯುನಿಟ್‌ಗಳು ಮಾರಾಟವಾಗಿದ್ದವು. ತಿಂಗಳ ಮಾರಾಟದಲ್ಲಿ ಹೆಚ್ಚಿನ ಏರಿಕೆಯಾಗಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 59.1%ನಷ್ಟು ಭಾರಿ ಪ್ರಮಾಣದ ಕುಸಿತ ಉಂಟಾಗಿದೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರು ಅಕ್ಟೋಬರ್‌ ತಿಂಗಳಿನಲ್ಲಿ 10,634 ಯುನಿಟ್‌ಗಳಷ್ಟು ಮಾರಾಟವಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 5,006 ಯುನಿಟ್‌ಗಳು ಮಾರಾಟವಾಗಿದ್ದವು. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಿನಲ್ಲಿ 112.4%ನಷ್ಟು ಏರಿಕೆಯಾಗಿದೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಸ್ವಿಫ್ಟ್

ಬಿ 1 ಸೆಗ್‍‍ಮೆಂಟಿನಲ್ಲಿರುವ ಸ್ವಿಫ್ಟ್ ಕಾರಿನ 19,401 ಯುನಿಟ್‌ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಈ ಮೂಲಕ ಪ್ರತಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ 50.0% ಹಾಗೂ ವರ್ಷದ ಮಾರಾಟಕ್ಕೆ ಹೋಲಿಸಿದರೆ, 12.7%ನಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಸ್ವಿಫ್ಟ್ ಕಾರಿನ 12,944 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ವ್ಯಾಗನ್ ಆರ್

ಟಾಲ್‌ಬಾಯ್ ಕಾರ್ ಎಂದು ಕರೆಯಲಾಗುವ ವ್ಯಾಗನ್ ಆರ್‍‍ನ 14,359 ಯುನಿಟ್‌ಗಳು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟವಾಗಿವೆ. ಸೆಪ್ಟೆಂಬರ್‌ ತಿಂಗಳಿನಲ್ಲಿ 11,757 ಯುನಿಟ್‌ಗಳು ಮಾರಾಟವಾಗಿದ್ದವು. ತಿಂಗಳ ಮಾರಾಟಕ್ಕೆ ಹೋಲಿಸಿದರೆ 22.1% ಹಾಗೂ ವರ್ಷದ ಮಾರಾಟಕ್ಕೆ ಹೋಲಿಸಿದರೆ 34.8%ನಷ್ಟು ಏರಿಕೆಯಾಗಿದೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ವಿಟಾರಾ ಬ್ರಿಝಾ

ಸಬ್ ಮೀಟರ್ ಎಸ್‌ಯುವಿ ಸೆಗ್‍‍ಮೆಂಟಿನಲ್ಲಿ ಜನಪ್ರಿಯವಾಗಿರುವ ವಿಟಾರಾ ಬ್ರಿಝಾದ 10,227 ಯುನಿಟ್‌ಗಳನ್ನು ಅಕ್ಟೋಬರ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ 10,362 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 1.3%ನಷ್ಟು ಕುಸಿತ ಉಂಟಾಗಿದೆ. ಪ್ರತಿ ವರ್ಷದ ಮಾರಾಟಕ್ಕೆ ಹೋಲಿಸಿದರೆ ವಿಟಾರಾ ಬ್ರಿಝಾದ ಮಾರಾಟದಲ್ಲಿ 35.4%ನಷ್ಟು ಕುಸಿತ ಉಂಟಾಗಿದೆ.

ಅಕ್ಟೋಬರ್ ಅವಧಿಯ ಮಾರುತಿ ಸುಜುಕಿ ಮಾರಾಟ ವರದಿ ಬಿಡುಗಡೆ

ಮಾರುತಿ ಎಕ್ಸ್‌ಎಲ್ 6

ಎರ್ಟಿಗಾ ಕಾರಿನ ಆಧಾರದ ಮೇಲೆ ತಯಾರಾಗಿರುವ ಕ್ರಾಸ್ ಎಂಪಿವಿ ಎಕ್ಸ್‌ಎಲ್ 6 ಆಗಸ್ಟ್‌ ತಿಂಗಳಿನಲ್ಲಿ ಬಿಡುಗಡೆಯಾದಾಗಿನಿಂದಲೂ ಉತ್ತಮವಾಗಿ ಮಾರಾಟವಾಗುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ಎಕ್ಸ್‌ಎಲ್ 6ನ 4,328 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ 3,840 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ ತಿಂಗಳ ಮಾರಾಟದಲ್ಲಿ 12.7%ನಷ್ಟು ಏರಿಕೆಯಾಗಿದೆ.

Most Read Articles

Kannada
English summary
Maruti suzuki model wise sales October report - Read in Kannada
Story first published: Monday, November 11, 2019, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X