ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಿದ್ದ ಎಸ್-ಪ್ರೆಸ್ಸೊ ಕಾರು ಸದ್ಯ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಸಣ್ಣ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಿರುವುದಲ್ಲದೆ ಬಿಡುಗಡೆಯಾದ ಮೊದಲ ತಿಂಗಳಲ್ಲಿನಲ್ಲೇ ಟಾಪ್ ಸಣ್ಣ ಕಾರು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಸೆಪ್ಟೆಂಬರ್ ಅವಧಿಯಲ್ಲಿ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಕಾರು ಒಟ್ಟು 5,006 ಯುನಿಟ್‌ಗಳು ಮಾರಾಟವಾಗಿದ್ದು, ಸಣ್ಣ ಕಾರುಗಳ ಮಾರಾಟ ಪಟ್ಟಿಯಲ್ಲಿ ಆಲ್ಟೋ ಮತ್ತು ವ್ಯಾಗನ್ಆರ್ ನಂತರ ಮೂರನೇ ಸ್ಥಾನದಲ್ಲಿದೆ. ಜೊತೆಗೆ ಹ್ಯುಂಡೈ ಸ್ಯಾಂಟ್ರೋ ಹಾಗೂ ಟಾಟಾ ಟಿಯಾಗೋ ಕಾರಿಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದೀಪಾವಳಿ ಸಂಭ್ರಮಾಚರಣೆ ವೇಳೆಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಆದರೂ ಕೂಡಾ ರೆನಾಲ್ಟ್ ನಿರ್ಮಾಣದ ಕ್ವಿಡ್ ಫೇಸ್‌ಲಿಫ್ಟ್ ಕೂಡಾ ಅಕ್ಟೋಬರ್ ಅವಧಿಯ ಎಸ್-ಪ್ರೆಸ್ಸೊ ಕಾರು ಮಾರಾಟಕ್ಕೆ ಟಕ್ಕರ್ ನೀಡುವ ಸಾಧ್ಯತೆಗಳಿದ್ದು, ಬೆಲೆ ವಿಚಾರವಾಗಿ ಎರಡು ಕಾರುಗಳ ಮಧ್ಯೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆಗಳಿವೆ.

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಒಟ್ಟಿನಲ್ಲಿ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಮಾರುತಿ ಸುಜುಕಿ ಸಂಸ್ಥೆಗೆ ಎಸ್-ಪ್ರೆಸ್ಸೊ ಮಾರಾಟವು ಬಲತುಂಬಿದ್ದು, ಅವಧಿಗೂ ಮುನ್ನವೇ ಬಿಎಸ್-6 ಕಾರುಗಳನ್ನು ಬಿಡುಗಡೆ ಮಾಡಿರುವುದು ಗ್ರಾಹಕರನ್ನು ಸೆಳೆಯುತ್ತಿದೆ.

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಇನ್ನು ಎಸ್-ಪ್ರೆಸ್ಸೊ ಕಾರು ಸದ್ಯ ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಆರಂಭಿಕ ವೆರಿಯೆಂಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.3.69 ಲಕ್ಷ ಖರೀದಿಗೆ ಲಭ್ಯವಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ ಬೆಲೆಯನ್ನು ರೂ. 4.91 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಆಲ್ಟೊ ಕೆ10 ಮತ್ತು ವ್ಯಾಗನ್ಆರ್ ಕಾರು ಮಾದರಿಯ ಮಧ್ಯದ ಆವೃತ್ತಿಯಾಗಿ ಎಸ್-ಪ್ರೆಸ್ಸೊ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಹೊಂದಿದೆ. ಬಿಎಸ್-6 ನಿಯಮದಂತೆ ಎಸ್ ಪ್ರೆಸ್ಸೊ ಕಾರಿನ ಎಂಜಿನ್ ಅನ್ನು ಅಭಿವೃದ್ದಿಗೊಳಿಸಲಾಗಿದ್ದು, ಆರಂಭಿಕ ಆವೃತ್ತಿಗಳಲ್ಲಿ ಮ್ಯಾನುವಲ್ ಮತ್ತು ಹೈ ಎಂಡ್ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಎಂಜಿನ್ ಸಾಮಾರ್ಥ್ಯ ಮತ್ತು ಮೈಲೇಜ್

ಎಸ್-ಪ್ರೆಸ್ಸೊ ಕಾರು 998 ಸಿಸಿ ತ್ರಿ-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ‌68-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಉತ್ತಮ ಇಂಧನ ಕಾರ್ಯಕ್ಷಮತೆ ಪಡೆದಿದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆ ಲಭ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 21.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತೆ.

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಹಾಗೆಯೇ ಹೊಸ ಕಾರು ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಆಯತಾಕಾರದ ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

MOST READ: ಮೈಲೇಜ್ ರೇಂಜ್ ವಿಸ್ತರಿತ ಟಾಟಾ ಹೊಸ ಟಿಗೋರ್ ಎಲೆಕ್ಟ್ರಿಕ್ ಬಿಡುಗಡೆ

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಇದರೊಂದಿಗೆ ಎಸ್-ಪ್ರೆಸ್ಸೊ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಿಸಲಾಗಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಚೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಾರುತಿ ನಿರ್ಮಾಣದ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯಿಡ್ ಆಟೋ, ಆರೇಂಜ್ ಕಲರ್ ಆಕ್ಸೆಂಟ್ ಸೌಲಭ್ಯವಿದೆ.

MOST READ: ದಸರಾ ಸಂಭ್ರಮಕ್ಕೆ ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಮಾರುತಿ ಸುಜುಕಿ

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಎಸಿ ವೆಂಟ್ಸ್, ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರಿಯರ್ ವ್ಯೂ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್, ಯುಎಸ್‌ಬಿ ಕನೆಕ್ಟ್ ಸಹ ಹೊಂದಿದ್ದು, ಕೇಂದ್ರ ಸರ್ಕಾರದ ಕ್ರ್ಯಾಶ್ ಟೆಸ್ಟ್ ನಿಯಮಗಳಿಗೆ ಅನುಗುಣವಾಗಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಬಾಲಿವುಡ್ ತಾರೆಯರ ಬಳಿಯಿರುವ ಹೊಸ ಕಾರುಗಳಿವು

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಹೊಸ ಕಾರಿನಲ್ಲಿ ಕೀ ಲೆಸ್ ಎಂಟ್ರಿ,ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದ್ದು, ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಹಿಂಬದಿಯ ಸವಾರರಿಗೂ ಅನುಕೂಲಕರ ಆಸನ ವ್ಯವಸ್ಥೆಯನ್ನು ಜೋಡಿಸಲಾಗಿದೆ.

ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಟಾಪ್ 10 ಕಾರು ಮಾರಾಟದಲ್ಲಿ ಸ್ಥಾನ ಪಡೆದ ಎಸ್-ಪ್ರೆಸ್ಸೊ

ಹೊಸ ಕಾರು ಕ್ವಿಡ್ ಮಾದರಿಯಲ್ಲೇ ಉದ್ದಳತೆ ಹೊಂದಿದ್ದು, 3,565-ಎಂಎಂ ಉದ್ದ, 1,520-ಎಂಎಂ ಅಗಲ, 1,564-ಎಂಎಂ ಎತ್ತರ, 2,380-ಎಂಎಂ ವೀಲ್ಹ್‌ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 165/70 ಆರ್14 ಟೈರ್ ಹೊಂದಿರಲಿದೆ.

Most Read Articles

Kannada
English summary
Maruti Suzuki S-Presso Sales Registers 5,006 Units. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X