Just In
- 1 hr ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 2 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 3 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 3 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Movies Puttakkana Makkalu:ಈ ಬಾರಿ ಸಹನಾ ಹೊಗಳಿದ ಅಭಿಮಾನಿಗಳು: ಪುಟ್ಟಕ್ಕನ ನಡವಳಿಕೆಗೆ ಫ್ಯಾನ್ಸ್ ಬೇಸರ
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ
ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಪ್ಯಾಸೆಂಜರ್ ಕಾರುಗಳಿಂದ ಜನಪ್ರಿಯತೆಯನ್ನು ಪಡೆಯುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಈ ವರ್ಷ ತಮ್ಮ ಉತ್ಪಾದನೆಯಲ್ಲಿ ಸಣ್ಣ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲಿದ್ದು, ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆ ಮಾಡಲಿರುವ ಆ ಸಣ್ಣ ಕಾರಿನ ಬಗ್ಗೆ ನಮಗೀಗಾಗಲೆ ತಿಳಿದಿದೆ.
ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷ ದೆಹಲಿಯಲ್ಲಿ ನಡೆದ 2018 ಆಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಫ್ಯುಚುರ್-ಎಸ್ ಅನ್ನು ಅನಾವರಣಗೊಳಿಸಲಾಗಿದ್ದು, ಇದೀಗ ಕಾರಿನ ಹೆಸರನ್ನು ಎಸ್-ಪ್ರೆಸ್ಸೊ ಎಂದು ನಾಮಕರಣ ಮಾಡಲಾಗಿದೆ. ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಾರಾಟವಾಗುತ್ತಿರುವ ರೆನಾಲ್ಟ್ ಕ್ವಿಡ್, ಟಾಟಾ ಟಿಯಾಗೊ ಮತ್ತು ಮಹೀಂದ್ರಾ ಸಂಸ್ಥೆಯ ಕೆಯುವಿ100 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ. ಇದೀಗ ಬಿಡುಗಡೆಗೂ ಮುನ್ನವೇ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಬಿಡುಗಡೆಯ ಅವಧಿ
ವರದಿಗಳ ಪ್ರಕಾರ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಮೊದಲ ಬಾರಿಗೆ ಆನಾವರಣಗೊಂಡ ಎಸ್-ಪ್ರೆಸ್ಸೊ ಎಂಬ ಸಣ್ಣ ಕಾರನ್ನು ಮಾರುತಿ ಸುಜುಕಿ ಸಂಸ್ಥೆಯು ಇದೇ ವರ್ಷದ ಹಬ್ಬದ ಋತುವಿನಲ್ಲಿ ಬಿಡುಗಡೆಗೊಳಿಸುವುದು ಬಹುತೇಕ ಖಚಿತವಾಗಿದೆ.
ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿಸಿ ಕೈಗೆಟುಕುವ ಬೆಲೆಯ ಕಾರು ಮಾದರಿಗಳನ್ನು ಪರಿಚಯಿಸುವುದರಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಸಂಸ್ಥೆಯು ದೇಶದಲ್ಲಿ ಮಾರಾಟವಾಗುತ್ತಿರುವ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮೊದಲ ಆರು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಶೇ.40 ರಷ್ಟು ಕಾರು ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಮತ್ತೊಂದು ಗೇಮ್ಚೆಂಜರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ಕಾರಿನ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ ಹ್ಯಾಚ್ಬ್ಯಾಕ್ ಕಾರುಗಳಿಂತಲೂ ವಿಭಿನ್ನ ಎನ್ನಿಸುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್ಯುವಿ ಕಾರುಗಳು 4 ಮೀಟರ್ಗಿಂತಲೂ ಕಡಿಮೆ ಉದ್ದಳತೆ ಹೊಂದಿರಲಿದ್ದು, ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸಲಿದೆ.
ಹೀಗಾಗಿ ವಿಟಾರಾ ಬ್ರೆಝಾ ಕಾರುಗಳಂತೆ ವಿಶೇಷ ಸೌಲಭ್ಯ ಹೊಂದಲಿರುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್ಯುವಿ ಕಾರುಗಳು ಗಾತ್ರದಲ್ಲಿ ಚಿಕ್ಕದಾದರೂ ಅತ್ಯುತ್ತಮ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಿರಲಿದ್ದು, ವ್ಯಯಕ್ತಿಕ ಬಳಕೆಗಾಗಿ ಈ ಕಾರು ಅತಿಹೆಚ್ಚು ಸೃಷ್ಠಿಸುವ ನೀರಿಕ್ಷೆಯಿದೆ.
ಎಂಜಿನ್ ವೈಶಿಷ್ಟ್ಯತೆ
ಮಾರುತಿ ಸುಜುಕಿ ಸಂಸ್ಥೆಯು ಹೊಸ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್ಯುವಿ ಕಾರು 1.2-ಲೀಟರ್(1,200ಸಿಸಿ) ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಬಿಡುಗಡೆಯ ನಂತರ ಕಾರಿನ ಬೇಡಿಕೆಯ ಆಧಾರ ಮೇಲೆ ಎಲೆಕ್ಟ್ರಿಕ್ ವರ್ಷನ್ಗಳು ಕೂಡಾ ಖರೀದಿಗೆ ಲಭ್ಯವಾಗಲಿವೆ.
ಈ ಮೂಲಕ ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯಲ್ಲೂ ಸಲೀಸಾಗಿ ಸಾಗಬಲ್ಲ ಗುಣಹೊಂದಿರುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್ಯುವಿ ಕಾರುಗಳು ಸ್ಪೋರ್ಟಿ ಕಾರು ಪ್ರಿಯರನ್ನು ಸೆಳೆಯಬಹುದಾದ ಅಲಾಯ್ ಚಕ್ರಗಳು, ಹೈ ಮೌಟೆಂಡ್ ಲೈಟ್ಸ್ ಒದಗಿಸಿರುವುದು ಕಾರಿನ ಅಂದವನ್ನು ಹೆಚ್ಚಿಸಿದೆ.
ಕಾರಿನ ಬೆಲೆಗಳು(ಅಂದಾಜು)
ಗಾತ್ರದಲ್ಲಿ 4 ಮೀಟರ್ಗಿಂತಲೂ ಚಿಕ್ಕದಿರುವ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್ಯುವಿ ಕಾರುಗಳ ಮೇಲೆ ಕೆಲವು ತೆರಿಗೆ ವಿನಾಯ್ತಿಗಳನ್ನು ದೊರೆಯಬಹುದಾಗಿದ್ದು, ಹೊಸ ಕಾರಿನ ಬೆಲೆಯು ಎಕ್ಸ್ಶೋರಂ ಪ್ರಕಾರ ರೂ. 4.50 ಲಕ್ಷದಿಂದ ರೂ. 5 ಲಕ್ಷದ ತನಕ ಬೆಲೆ ಹೊಂದಬಹುದು ಎನ್ನಲಾಗಿದೆ.
ಒಟ್ಟಿನಲ್ಲಿ ಸಣ್ಣ ಗಾತ್ರದ ಕಾರುಗಳಲ್ಲೇ ವಿಭಿನ್ನ ಎನ್ನಿಸಲಿರುವ ಮಾರುತಿ ಸುಜುಕಿ ಫ್ಯೂಚರ್ ಎಸ್ ಕಾನ್ಸೆಪ್ಟ್ ಸ್ಮಾಲ್ ಎಸ್ಯುವಿ ಕಾರುಗಳು ದೇಶದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಎಂಟ್ರಿ ಲೆವಲ್ ಕಾರು ಮಾರಾಟದಲ್ಲಿ ಈ ಕಾರು ಬಹುದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎನ್ನಬಹುದು.
Source: Teambhp