ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಸಾರ್ವತ್ರಿಕ ಚುನಾವಣೆಗಳ ಕಾರಣದಿಂದಾಗಿ, ಭಾರತೀಯ ಆಟೋ ಮೋಬೈಲ್ ಉದ್ಯಮವು ಕಳೆದ ಕೆಲವು ತಿಂಗಳಿನಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದು, ಇದರ ಪರಿಣಾಮವು ಕಾರು ತಯಾರಕ ಕಂಪನಿಗಳ ಮಾರಾಟದ ಮೇಲಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಏಪ್ರಿಲ್ 2019ರಲ್ಲಿ ಹೋಂಡಾ ಕಂಪನಿಯನ್ನು ಹೊರತು ಪಡಿಸಿ ಬಹುತೇಕ ಕಂಪನಿಗಳು ಕಳೆದ ವರ್ಷಕ್ಕಿಂತ ಕಡಿಮೆ ಮಾರಾಟ ಪ್ರಮಾಣವನ್ನು ದಾಖಲಿಸಿದ್ದವು. ಈ ಆರ್ಥಿಕ ವರ್ಷದ ಎರಡನೇ ತಿಂಗಳಿನಲ್ಲಿಯೂ ಸಹ ದೇಶದ ಅತಿ ದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಕಂಪನಿಯ ಮಾರಾಟದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮಾರುತಿ ಸುಜುಕಿ ಕಂಪನಿಯ ಮಾರಾಟದಲ್ಲಿ 2019ರ ಮೇ ತಿಂಗಳಿನಲ್ಲಿ 25.1% ನಷ್ಟು ಕುಸಿತ ಉಂಟಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಭಾರತ- ಜಪಾನ್ ಮೂಲದ ಈ ತಯಾರಕ ಕಂಪನಿಯು ಕಳೆದ ವರ್ಷದ ಮೇ ತಿಂಗಳಿನಲ್ಲಿ 1,61,497 ವಾಹನಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷ 1,21,018 ವಾಹನಗಳನ್ನು ಮಾರಾಟ ಮಾಡಿದೆ. ಏಪ್ರಿಲ್ ಹಾಗೂ ಮೇ ತಿಂಗಳನ್ನು ಒಟ್ಟುಗೂಡಿಸಿದರೂ ಬೆಳವಣಿಗೆಯ ದರವು ಕುಸಿದಿರುವುದು ಕಂಡು ಬರುತ್ತದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಕಳೆದ ವರ್ಷದ ಏಪ್ರಿಲ್ - ಮೇ ತಿಂಗಳ ಅವಧಿಯಲ್ಲಿ 3,24,931 ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, ಈ ವರ್ಷದ ಇದೇ ಅವಧಿಯಲ್ಲಿ 2,52,403 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಾಂಪ್ಯಾಕ್ಟ್ ಕಾರುಗಳಾದ ಹೊಸ ವ್ಯಾಗನ್ ಆರ್, ಸೆಲೆರಿಯೋ, ಸ್ವಿಫ್ಟ್, ಡಿಜೈರ್, ಇಗ್ನಿಸ್ ಹಾಗೂ ಬಲೆನೋ ವಾಹನಗಳ ಮಾರಾಟ ಪ್ರಮಾಣವು ಸಹ 9% ನಷ್ಟು ಕುಸಿತ ಕಂಡಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಕಂಪನಿಯು ಹೊಸ ವ್ಯಾಗನ್ ಆರ್ ಕಾರಿನ ಮಾರಾಟವನ್ನು ಮಿನಿ ಸೆಗ್‍‍ಮೆಂಟಿನ ಬದಲಿಗೆ, ಕಾಂಪ್ಯಾಕ್ಟ್ ಸೆಗ್‍‍ಮೆಂಟಿನಲ್ಲಿ ತೋರಿಸುತ್ತಿದೆ. ಸಿಯಾಜ್ ಕಾರಿನ ಮಾರಾಟವು ಸಹ 10% ನಷ್ಟು ಕುಸಿದಿದೆ, 2018ರ ಮೇ ತಿಂಗಳಿನಲ್ಲಿ 4,024 ಕಾರುಗಳನ್ನು ಮಾರಾಟ ಮಾಡಲಾಗಿದ್ದರೆ, ಈ ವರ್ಷದ ಮೇ ತಿಂಗಳಿನಲ್ಲಿ 3,592 ವಾಹನಗಳನ್ನು ಮಾರಾಟ ಮಾಡಲಾಗಿದೆ. ಎಂಟ್ರಿ ಲೆವೆಲ್‍‍ನ ಆಲ್ಟೊ ಹಾಗೂ ಹಳೆ ಮಾದರಿಯ ವ್ಯಾಗನ್ ಆರ್‍‍ನ ಒಟ್ಟು 16,394 ಕಾರುಗಳು ಮಾರಾಟವಾಗಿ 56.7%ನಷ್ಟು ಭಾರೀ ಕುಸಿತ ಉಂಟಾಗಿದೆ.

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಮಿನಿ ಹಾಗೂ ಕಾಂಪ್ಯಾಕ್ಟ್ ಸೆಗ್‍‍ಮೆಂಟಿನ ವಾಹನಗಳು ಯಾವಾಗಲೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಈ ಸೆಗ್‍‍ಮೆಂಟಿನ ವಾಹನಗಳಲ್ಲೂ 24.8% ನಷ್ಟು ಭಾರಿ ಕುಸಿತ ಉಂಟಾಗಿದೆ. ಕಳೆದ ವರ್ಷ ಈ ಸೆಗ್‍‍ಮೆಂಟಿನಲ್ಲಿ 1,15,127 ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, ಈ ವರ್ಷ 86,527 ವಾಹನಗಳನ್ನು ಮಾರಾಟ ಮಾಡಲಾಗಿದೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

2019ರ ಏಪ್ರಿಲ್ ಹಾಗೂ ಮೇ ತಿಂಗಳುಗಳನ್ನು ಕಳೆದ ವರ್ಷದ ಏಪ್ರಿಲ್ -ಮೇ ತಿಂಗಳುಗಳಿಗೆ ಹೋಲಿಸಿದರೆ 22.3%ನಷ್ಟು ಪ್ರಮಾಣದ ಮಾರಾಟ ಕುಸಿತವಾಗಿದೆ. ಯುಟಿಲಿಟಿ ವಾಹನಗಳಾದ ಜಿಪ್ಸಿ, ಎರ್ಟಿಗಾ, ವಿಟಾರಾ ಬ್ರಿಝಾ ಹಾಗೂ ಎಸ್ ಕ್ರಾಸ್ ವಾಹನಗಳ ಮಾರಾಟದಲ್ಲೂ 25.3% ಕುಸಿತವಾಗಿದೆ.

MOST READ: ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ವಾಹನಗಳ ರಫ್ತಿನಲ್ಲೂ 2.4% ನಷ್ಟು ಕುಸಿತ ಉಂಟಾಗಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ 9,312 ವಾಹನಗಳನ್ನು ರಫ್ತು ಮಾಡಲಾಗಿದ್ದರೆ, ಈ ವರ್ಷ 9,089 ವಾಹನಗಳನ್ನು ರಫ್ತು ಮಾಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿನ ಪ್ಯಾಸೆಂಜರ್ ವಾಹನಗಳು ಮಾರಾಟ, ಎಲ್‍‍ಸಿ‍‍ವಿಗಳ ಮಾರಾಟ ಹಾಗೂ ರಫ್ತು ಮಾಡಲಾದ ಎಲ್ಲಾ ವಾಹನಗಳಲ್ಲಿ ಒಟ್ಟಾರೆಯಾಗಿ ಮಾರುತಿ ಸುಜುಕಿ ಕಂಪನಿಯು 22% ನಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಈ ಎಲ್ಲಾ ವಾಹನಗಳ ಒಟ್ಟಾರೆ ಸಂಖ್ಯೆಯು 1,72,512 ಆಗಿದ್ದರೆ ಈ ವರ್ಷ 1,34,641 ಆಗಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಸಾರ್ವತ್ರಿಕ ಚುನಾವಣೆಗಳಿದ್ದ ಕಾರಣಕ್ಕೆ ವಾಹನಗಳ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿತ್ತು. ಈಗ ಚುನಾವಣೆಗಳು ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಮಾರುಕಟ್ಟೆಯು ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಕಾದು ನೋಡೋಣ.

Most Read Articles

Kannada
English summary
maruti suzuki sales dropped in may - Read in kannada
Story first published: Saturday, June 1, 2019, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X