ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಭಾರತದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಕಾರುಗಳ ಮಾರಾಟದಲ್ಲಿ ಹಲವು ವರ್ಷಗಳಿಂದ ಪಾರುಪತ್ಯ ಸಾಧಿಸುತ್ತಿದೆ. ಇದೀಗ ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 2 ಕೋಟಿ ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಸಾಧನೆಯನ್ನು ಮಾಡಿದ ಭಾರತದ ಏಕೈಕ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಮಾರುತಿ ಸುಜುಕಿ ಪಾತ್ರವಾಗಿದೆ. ಮಾರುತಿ ಸುಜುಕಿ ಕಂಪನಿಯು 1983ರ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಪ್ರಾರಂಭವಾಗಿದೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕೇವಲ 37 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಇಂಡೋ-ಜಪಾನೀಸ್ ತಯಾರಕರು ಒಂದು ಕೋಟಿ ಪ್ರಯಾಣಿಕರ ವಾಹನಗಳ ಮಾರಾಟವನ್ನು ಮಾಡಲು ಸುಮಾರು ಮೂರು ದಶಕಗಳನ್ನು ತೆಗೆದುಕೊಂಡರು ಆದರೆ ಮುಂದಿನ 8 ವರ್ಷದಲ್ಲಿ ಒಂದು ಕೋಟಿ ಕಾರು ಮಾರಾಟವನ್ನು ಮಾಡಿದೆ.

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಭಾರತದಲ್ಲಿ ಮೊಟ್ಟ ಮೊದಲು ಮಾರುತಿ 800 ಕಾರ್ ಅನ್ನು ಬಿಡುಗಡೆಗೊಳಿಸಿದ್ದರು. ಈ ಕಾರು ಭಾರತದಲ್ಲಿ ಹೊಸ ಸಂಚಲನವನ್ನೇ ಮೂಡಿಸಿತು. ಈ ಕಾರು 1983ರ ಡಿಸೆಂಬರ್ 14ರಂದು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಕಾರು ಇಂದು ಇತಿಹಾಸದ ಪುಟಗಳು ಸೇರಿದ್ದರು, ಅಂದಿನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ ಕಾರು ಆಗಿದೆ. ಮಾರುತಿ ಸುಜುಕಿ ಕಂಪನಿಯ ನಂತರದ ಕಾರುಗಳ ಮಾರಾಟಕ್ಕೆ ಇದು ಒಂದು ಅಡಿಪಾಯವಾಗಿತ್ತು.

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕೆನಿಚಿ ಅಯುಕಾವಾ ಅವರು ಮಾತನಾಡಿ, ಕಂಪನಿಯ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಗ್ರಾಹಕರಿಗೆ ಧನ್ಯವಾದ ಅರ್ಪಿಸಿದರು.

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಕಂಪನಿಯು ಮಾಲಿನ್ಯವನ್ನು ಕಡಿಮೆಗೊಳಿಸಲು ಮಾರುತಿ ಸುಜುಕಿ ಇತ್ತೀಚಿನ ವರ್ಷಗಳಲ್ಲಿ ಸಿಎನ್‍ಜಿ ವಾಹನಗಳು ಮತ್ತು ಸ್ಮಾರ್ಟ್ ಹೈಬ್ರಿಡ್ ವಾಹನಗಳನ್ನು ಪರಿಚಯಿಸಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜಕಿ ಕಂಪನಿಯು ಶೀಘ್ರದಲ್ಲೇ ವ್ಯಾಗನ್ಆರ್‍‍‍ನ 50 ಎಲೆಕ್ಟ್ರಿಕ್ ವಾಹನಗಳನ್ನು ಸ್ಪಾಟ್ ಟೆಸ್ಟ್ ನಡೆಸಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಇನ್ನೂ ಸೋಲಾರ್ ಬಳಕೆಯನ್ನು ಹೆಚ್ಚಿಸಲು, 5 ಮೆಗಾವ್ಯಾಟ್ ಸೋಲಾರ್ ಪವರ್ ಸ್ಥಾವರವು ಈ ಎಫ್‍ವೈಗೆ ನಿಯೋಜಿಸಿದೆ ಮತ್ತು ಹರಿಯಾಣದ ಮಾನೇಸರ್ ಸ್ಥಾವರದಲ್ಲಿ ಇನ್ನೂ 20 ಮೆಗಾವ್ಯಾಟ್ ಸೋಲಾರ್ ಸ್ಥಾವರವನ್ನು ಎರಡು ವರ್ಷಗಳ ಅವಧಿಯಲ್ಲಿ ಕಾರ್ಯರಂಭ ಮಾಡಲಾಗುವುದು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಕಾರು ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ ಮಾರುತಿ ಸುಜುಕಿ

ಹಲವು ವರ್ಷಗಳಿಂದ ಭಾರತದಲ್ಲಿ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಮೇಲುಗೈ ಸಾಧಿಸುತ್ತ ಬಂದಿದೆ. ಮಾರುತಿ ಸುಜುಕಿ ಮಧ್ಯಮ ವರ್ಗದ ಜನರ ಮೆಚ್ಚಿನ ಬ್ರ್ಯಾಂಡ್ ಆಗಿದೆ. ಮಾರುತಿ ಸುಜುಕಿ ಕಂಪನಿಯು ಉತ್ತಮ ಸರ್ವಿಸ್ ಮತ್ತು ಕೈಗೆಟುಕುವ ದರದಲ್ಲಿ ಮಾರಾಟ ಮಾಡುವುದರಿಂದ ಹೆಚ್ಚು ಜನಪ್ರಿಯತೆಗಳಿಸಿದೆ.

Most Read Articles

Kannada
English summary
Maruti Suzuki Delivers Record Breaking 20 Million Cars In 37 Years: Only India Carmaker To Achieve - Read in Kannada
Story first published: Saturday, November 30, 2019, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X