ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಮತ್ತು ಅದರ ಮಾತೃ ಕಂಪನಿಯಾದ ಸುಜುಕಿ ಮೋಟಾರ್ ಕಾರ್ಪ್ ಜೊತೆಯಾಗಿ ಸೇರಿ ಶೇರ್ಡ್ ಮೊಬಿಲಿಟಿ ಉದ್ಯಮವನ್ನು ಪ್ರವೇಶಿಸಿ ಅಭಿವೃದ್ಧಿ ಪಡಿಸಲು ಚಿಂತಿಸಿದ್ದು, ಶೇರ್ಡ್ ಮೊಬಿಲಿಟಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ಯೋಜನೆ ರೂಪಿಸಿವೆ.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಲೈವ್ ಮಿಂಟ್ ಸುದ್ದಿಸಂಸ್ಥೆಯ ಪ್ರಕಾರ, ಎರಡೂ ಕಂಪನಿಗಳು ಈ ಸ್ಟಾರ್ಟ್ ಅಪ್ ಉದ್ಯಮದಲ್ಲಿ ಜೊತೆಯಾಗಿ ತೊಡಗಿಸಿಕೊಳ್ಳಲು ಬಯಸಿವೆ. ಈ ಸಂಸ್ಥೆಗಳು ಶೇರ್ ಮೊಬಿಲಿಟಿ ಉದ್ಯಮಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಿದ್ದು, ಇವು ಚಾಲಕರ ಲಾಜಿಸ್ಟಿಕಲ್ ಕಮರ್ಷಿಯಲ್ ಸೆಗ್ ಮೆಂಟ್ ಗಳನ್ನು ಒಳಗೊಂಡಿರುತ್ತವೆ. ಮಾರುತಿ ಸುಜುಕಿ ಕಂಪನಿಯು ಕ್ಯಾಬ್ ಬಳಕೆದಾರರರು ಬಳಸುತ್ತಿರುವ ವಾಹನ ಮಾದರಿಗಳ ಅಭಿವೃದ್ಧಿಗೆಂದು, ಕಂಪನಿಯ ಕಸ್ಟಮರ್ ರಿಲೇಷನ್ ಶಿಪ್ ಮ್ಯಾನೆಜರ್ ರಾಚಪುಡಿ ಶ್ರೀಹರಿ ರವರ ಅಧ್ಯಕ್ಷತೆಯಲ್ಲಿ ಮೊಬಿಲಿಟಿ ಟೆಕ್ನಾಲಜಿ ಘಟಕವನ್ನು ತೆರೆದಿದೆ.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿಯ ಯೋಜನೆ ಮತ್ತು ಕಾರ್ಯಚರಣೆಗಳಿಗೆ ಅನುಕೂಲವಾಗಲೆಂದು ಸುಜುಕಿ ಕಂಪನಿಯು ಬೆಂಗಳೂರಿನಲ್ಲಿ ಕಚೇರಿಯನ್ನು ತೆರೆದಿದೆ. ಈ ಕಚೇರಿಯು ಮೊಬಿಲಿಟಿ ಕ್ಷೇತ್ರದಲ್ಲಿರುವ ವಿವಿಧ ಸ್ಟಾರ್ಟ್ ಅಪ್ ಕಂಪನಿಗಳೊಂದಿಗೆ ವ್ಯವಹರಿಸಲಿದೆ.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಸುಜುಕಿ ಕಂಪನಿಯು ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿರುವ ಕಚೇರಿಯ ಅರ್ಧದಷ್ಟು ಭಾಗವನ್ನು ಬೆಂಗಳೂರು ಘಟಕಕ್ಕೆ ಸ್ಥಳಾಂತರಿಸಿದೆ. ಶೇರ್ಡ್ ಮೊಬಿಲಿಟಿ ಮಾರುಕಟ್ಟೆಯು ಏರುಗತಿಯಲ್ಲಿರುವ ಕಾರಣ ಬಹುತೇಕ ಆಟೋಮೊಬೈಲ್ ತಯಾರಕರು ತಮ್ಮ ಕ್ಷೇತ್ರವನ್ನು ವಿಸ್ತರಿಸುತ್ತಿದ್ದಾರೆ.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಆಟೋಮೊಬೈಲ್ ಕಂಪನಿಗಳ ಪ್ರಕಾರ ಶೇರ್ಡ್ ಮೊಬಿಲಿಟಿ ಮಾರುಕಟ್ಟೆಯ ಪರಿಣಾಮವು ಮುಂದೆ ವೈಯಕ್ತಿಕ ವಾಹನಗಳ ಖರೀದಿದಾರರ ಮೇಲಾಗಲಿದೆ. ಇದರ ಪರಿಣಾಮವು ಚಿಕ್ಕ ರಸ್ತೆಗಳನ್ನು ಹೊಂದಿರುವ, ಕಾರುಗಳ ಬೆಲೆ ಅಧಿಕವಾಗಿರುವ ಮತ್ತು ಪಾರ್ಕಿಂಗ್ ಗೆ ಜಾಗ ಇಲ್ಲದಿರುವ ನಗರಗಳ ಮೇಲಾಗಲಿದೆ. ಆಟೋಮೊಬೈಲ್ ಕಂಪನಿಗಳು, ಭಾರತದಲ್ಲಿ ಕ್ಯಾಬ್ ಸಂಸ್ಥೆಗಳಾದ ಓಲಾ ಮತ್ತು ಉಬರ್ ಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿವೆ. ಅಲ್ಲದೇ ಶೇರ್ಡ್ ಮೊಬಿಲಿಟಿಗೆ ಅನುಕೂಲವಾಗುವಂತಹ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿವೆ.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರ್ಸ್ ಇತ್ತೀಚಿಗೆ ಭಾರತದ ಅತಿ ದೊಡ್ಡ ಕ್ಯಾಬ್ ಸಂಸ್ಥೆಯಾದ ಓಲಾದಲ್ಲಿ $300 ಮಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆಯಲ್ಲಿ ಹ್ಯುಂಡೈ ಮೋಟಾರ್ಸ್ ಮತ್ತು ಓಲಾದ ಜೊತೆಯಲ್ಲಿ ಹ್ಯುಂಡೈ ಮೋಟಾರ್ಸ್ ಮತ್ತು ಕಿಯಾ ಮೋಟಾರ್ ಕಾರ್ಪ್ ಗಳೂ ಸೇರಿವೆ. ಇವುಗಳು ಜೊತೆಯಾಗಿ ಸೇರಿ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ನಲ್ಲಿ ಹೂಡಿಕೆ ಮಾಡಿ ಎಲೆಕ್ಟ್ರಿಕ್ ವಾಹನಗಳನ್ನು ಮತ್ತು ಚಾರ್ಜಿಂಗ್ ಸ್ಟೇಷನ್ ಗಳನ್ನು ಅಭಿವೃದ್ಧಿಪಡಿಸಲಿವೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಹ್ಯುಂಡೈ ಕಂಪನಿಯು ರೇವಾ ಕಂಪನಿಯಲ್ಲಿ ರೂ. 100 ಕೋಟಿ ಹೂಡಿಕೆ ಮಾಡಿದೆ.

MUST READ: ಸೂಪರ್ ಕ್ಯಾರಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದ ಮಾರುತಿ

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿಯ ಉದ್ದೇಶವು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವುದಾಗಿದೆ. ಪ್ರಸ್ತುತ ವಿಚಾರಗಳ ಬಗ್ಗೆ ತಿಳಿದಿರುವರೊಬ್ಬರು ಮಾತನಾಡಿ ಮಾರುತಿಯು ಬೇರೆ ಆಟೋ ಮೊಬೈಲ್ ಕಂಪನಿಗಳಂತೆ, ಗ್ರಾಹಕರಿಗೆ ನೀಡುವ ಮೊಬಿಲಿಟಿ ಸೇವೆಯ ಮಹತ್ವವನ್ನು ಅರಿತಿದೆ. ಭಾರತದಲ್ಲಿ ಈ ಸೇವೆಯು ಇನ್ನೂ ಬೆಳವಣೆಗೆಯ ಹಂತದಲ್ಲಿದ್ದು, ನಾವು ಭವಿಷ್ಯಕ್ಕಾಗಿ ತಯಾರಾಗಿರಬೇಕಿದೆ. ಬೇರೆ ಕಂಪನಿಗಳೂ ಇದನ್ನೇ ಮಾಡುತ್ತಿದ್ದು, ಹ್ಯುಂಡೈ ಓಲಾದಲ್ಲಿ ಮಾಡಿರುವ ಹೂಡಿಕೆಯು ಅದರ ಸೂಚಕವಾಗಿದೆ ಎಂದು ತಿಳಿಸಿದರು.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ದಕ್ಷಿಣ ಏಷ್ಯಾದ ವೆಹಿಕಲ್ ಫೋರ್ ಕಾಸ್ಟ್ ನ ಸಹ ನಿರ್ದೇಶಕರಾದ ಪುನೀತ್ ಗುಪ್ತಾ ರವರುಮಾತನಾಡಿ, ಶೇರ್ಡ್ ಮೊಬಿಲಿಟಿ ಸೆಗ್ ಮೆಂಟ್ ನಲ್ಲಿ ಮಾರುತಿ ಕಂಪನಿಯು ಇಡುತ್ತಿರುವ ಹೆಜ್ಜೆಯು, ಕಂಪನಿಯು ಬದಲಾದ ಮಾರುಕಟ್ಟೆ ಪರಿಸ್ಥಿತಿಗಳಿಗೆ ತಕ್ಕಂತೆ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. 15 ವರ್ಷಗಳ ಹಿಂದೆ, ಮಾರುತಿ ಸುಜುಕಿಯು ಹೊಸ ವ್ಯವಹಾರಗಳಾದ ಯೂಸ್ಡ್ ಕಾರುಗಳ ಮಾರಾಟ, ಇನ್ಸೂರೆನ್ಸ್ ಮತ್ತು ಆಕ್ಸೆಸರೀಸ್ ಗಳ ವ್ಯವಹಾರವನ್ನು ಶುರು ಮಾಡಿತ್ತು. ಈ ಎಲ್ಲಾ ವ್ಯವಹಾರಗಳಿಂದ ಮಾರುತಿ ಕಂಪನಿಯು, ಕಳೆದ ದಶಕದಲ್ಲಿ ಮಾರುಕಟ್ಟೆಯಲ್ಲಿನ 50% ಕ್ಕೂ ಅಧಿಕ ಶೇರುಗಳನ್ನು ಹೊಂದಿ ಮಾರುಕಟ್ಟೆಯಲ್ಲಿ ಅಗ್ರಗಣ್ಯನಾಗಿ ಮೆರೆದಿದೆ. ಈಗ ಮಾರುತಿ ಸುಜುಕಿ ಕಂಪನಿಯು ಮೊಬಿಲಿಟಿ, ಎಲೆಕ್ಟ್ರಿಕ್ ವೆಹಿಕಲ್ ಗಳ ವ್ಯವಹಾರದಲ್ಲಿ ತೊಡಗಿಕೊಂಡಿರುವುದು ಮುಂಬರುವ ದಿನಗಳಲ್ಲಿ ಮಾರುಕಟ್ಟೆಯ ಚಿತ್ರಣವನ್ನೇ ಬದಲಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಶೇರ್ಡ್ ಮೊಬಿಲಿಟಿಯಲ್ಲಿನ ನಿಧಾನಗತಿಯ ಏರಿಕೆ ಹಾಗೂ ಮುನ್ಸೂಚನೆಗಳು ಭವಿಷ್ಯದಲ್ಲಿ ಜನರು ಶೇರ್ಡ್ ಮೊಬಿಲಿಟಿಯತ್ತ ಆಕರ್ಷಿಕರಾಗುವುದನ್ನು ತೋರಿಸುತ್ತದೆ. ಕಂಪನಿಗಳ ಪ್ರಕಾರ, ಇದು ವಿಶ್ವದಲ್ಲಿನ ವಾಹನ ಮಾರಾಟದ ಮೇಲೆ ಪರಿಣಾಮ ಬೀರಲಿದೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇದರ ಪರಿಣಾಮವು ಇನ್ನು 15 ವರ್ಷಗಳಲ್ಲಿ ತಿಳಿಯಲಿದೆ. 2030ರ ವೇಳೆಗೆ ಶೇರ್ಡ್ ಮೊಬಿಲಿಟಿ ಉದ್ಯಮದ ಕಾರಣವಾಗಿ ವಿಶ್ವದಲ್ಲಿನ ಮಾರಾಟ ಪ್ರಮಾಣವು 1/3 ರಷ್ಟು ಕುಸಿಯಲಿದೆ.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಬಹುತೇಕ ಕಂಪನಿಗಳು ಸ್ಟಾರ್ಟ್ ಅಪ್ ಗಳತ್ತ ನೋಡುತ್ತಿದ್ದು, ಅದರಲ್ಲಿಯೂ ಅಪಾಯಗಳಿದ್ದು, ಲಾಭದತ್ತ ಸಾಗಬೇಕಾದರೆ ಸರಿಯಾದ ಸ್ಟಾರ್ಟ್ ಅಪ್ ಗಳ ಮೇಲೆ ಹೂಡಿಕೆ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಪ್ರತ್ಯೇಕ ಘಟಕವೂ ಬೇಕಾಗುತ್ತದೆ. ಆದ ಕಾರಣ ಬೆಂಗಳೂರಿನ ಘಟಕದಲ್ಲಿ ಜನರನ್ನು ನಿಯೋಜಿಸುವ ಸುಜುಕಿಯ ಕ್ರಮವು ಉತ್ತಮವಾಗಿದೆ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದರು.

ಶೇರ್ಡ್ ಮೊಬಿಲಿಟಿಯಲ್ಲಿ ಹೂಡಿಕೆ ಮಾಡಲಿದೆ ಮಾರುತಿ ಸುಜುಕಿ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಹೆಚ್ಚು ಜನರು ಶೇರ್ಡ್ ಮೊಬಿಲಿಟಿಯನ್ನು ಮತ್ತು ಕ್ಯಾಬ್ ಸೇವೆಗಳನ್ನು ಬಳಸಿದಂತೆಲ್ಲಾ ವೈಯಕ್ತಿಕ ವಾಹನಗಳ ಮಾರಾಟದಲ್ಲಿ ಕುಸಿತ ಕಾಣಲಿದೆ. ಎಷ್ಟು ಪ್ರಮಾಣದಲ್ಲಿ ಕುಸಿತ ಕಾಣಲಿದೆ ಎಂಬುದರ ಬಗ್ಗೆ ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಮಾರುತಿ ಕಂಪನಿಯ ದೂರದೃಷ್ಟಿಯನ್ನು ಮೆಚ್ಚಲೇಬೇಕಿದೆ.

Most Read Articles

Kannada
English summary
Maruti Suzuki Scale Operations For Shared Mobility — Developing Tech And Cars For Cab Aggregators - Read in Kannada
Story first published: Monday, April 29, 2019, 19:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X