ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಕಳೆದ ಐದಾರು ತಿಂಗಳಿನಿಂದ ಭಾರತೀಯ ಆಟೋ ಉದ್ಯಮವು ಸಾಕಷ್ಟು ನಷ್ಟ ಅನುಭವಿಸಿದ್ದು, ಮಾರಾಟವಾಗದೇ ಉಳಿದ ಸ್ಟಾಕ್ ಇದೀಗ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊರೆಯಾಗಿ ಪರಿಣಮಿಸಿದೆ. ಇದರಿಂದ ಬಹುತೇಕ ಸಂಸ್ಥೆಗಳು ಹೊಸ ವಾಹನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದು, ಸ್ಟಾಕ್ ಕರಗಿಸಲು ಹರಸಾಹಸಪಡುತ್ತಿವೆ.

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಹೌದು, ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಮತ್ತು ಹೊಸ ವಾಹನಗಳ ಖರೀದಿ ಮೇಲೆ ಜಾರಿ ಮಾಡಲಾದ ಕೆಲವು ಹೊಸ ನಿಯಮಗಳಿಂದಾಗಿ ಹೊಸ ವಾಹನಗಳ ಖರೀದಿ ಪ್ರಕಿಯೆಗೆ ಪ್ರತಿಕೂಲಕರ ವಾತಾವರಣ ನಿರ್ಮಾಣವಾಗಿದ್ದರಿಂದ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ನಿಗದಿತ ಮಟ್ಟದ ಗುರಿ ಮುಟ್ಟಲು ಸಾಧ್ಯವಾಗದೇ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಮಾರಾಟವಾಗದೇ ಉಳಿದಿರುವ ಸ್ಟಾಕ್ ಪ್ರಮಾಣವು ಹೊರೆಯಾಗಿ ಪರಿಣಮಿಸಿದೆ.

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ರೆನಾಲ್ಟ್, ಹ್ಯುಂಡೈ ಸೇರಿದಂತೆ ಬಹುತೇಕ ಸಂಸ್ಥೆಗಳಿಗೆ ಸ್ಟಾಕ್ ಪ್ರಮಾಣವು ಆರ್ಥಿಕವಾಗಿ ಹೊರೆಯಾಗಿದ್ದು, ಕೆಲವು ಸಂಸ್ಥೆಗಳು ಈಗಾಗಲೇ ತಾತ್ಕಾಲಿಕ ಅವಧಿಗೆ ಹೊಸ ವಾಹನಗಳ ಉತ್ಪಾದನೆಯನ್ನು ಬಂದ್ ಮಾಡಿವೆ.

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಮಾಹಿತಿಗಳ ಪ್ರಕಾರ, ಸುಮಾರು ರೂ.35 ಸಾವಿರ ಕೋಟಿ ಮೌಲ್ಯದ ಸ್ಟಾಕ್ ಪ್ರಮಾಣವು ಮಾರಾಟವಾಗದೆ ಆರ್ಥಿಕವಾಗಿ ಹೊರೆಯಾಗಿ ಪರಿಣಮಿಸಿದ್ದು, ಸ್ಟಾಕ್ ಪ್ರಮಾಣವನ್ನು ತೆರೆವುಗೊಳಿಸಲು ಭಾರೀ ಪ್ರಮಾಣದ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಸದ್ಯ ಮಾರುಕಟ್ಟೆಯಲ್ಲಿ ಲೋಕಸಭಾ ಚುನಾವಣೆ ನಂತರ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯಲ್ಲಿ ಚೇತರಿಕೆ ಕಂಡುಬಂದಿದ್ದು, ಸ್ಟಾಕ್ ಪ್ರಮಾಣವನ್ನು ಕರಗಿಸುವ ನಿಟ್ಟಿನಲ್ಲಿ ಬಹುತೇಕ ಕಾರು ಸಂಸ್ಥೆಗಳು ವಿವಿಧ ಮಾದರಿಯ ಆಫರ್ ನೀಡುವ ಮೂಲಕ ಮಾರಾಟದ ಸಂಖ್ಯೆಗಳನ್ನು ಹೆಚ್ಚಿಸುವತ್ತ ಗಮನಹರಿಸಿವೆ. ಹಾಗೆಯೇ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಸ್ಟಾಕ್ ಕ್ಲಿಯೆರೆನ್ಸ್ ಹರಸಾಹಸಪಡುತ್ತಿವೆ.

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಹೀಗಾಗಿಯೇ ಸದ್ಯಕ್ಕೆ ಹೊಸ ಕಾರು ಮತ್ತು ಬೈಕ್ ಉತ್ಪಾದನೆ ಮಾಡದಿರಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಜೂನ್ 23ರಿಂದ ಜೂನ್ 30ಕ ತನಕ, ಹೋಂಡಾ ಕಾರ್ಸ್ ಸಂಸ್ಥೆಯು ಜೂನ್ 5 ರಿಂದ ಜೂನ್ 10 ವರೆಗೆ, ಟಾಟಾ ಸಂಸ್ಥೆಯು ಮೇ 27ರಿಂದ ಜೂನ್ 3ರ ತನಕ, ರೆನಾಲ್ಟ್ ನಿಸ್ಸಾಸ್ ಸಂಸ್ಥೆಗಳು ಮೇ 26ರಿಂದ ಜೂನ್ 5ರ ತನಕ ಮತ್ತು ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯು ಜೂನ್ 4ರಿಂದ ಜೂನ್ 11ರ ತನಕ ಹೊಸ ವಾಹನಗಳ ಉತ್ಪಾದನೆ ಸ್ಥಗಿತ ಮಾಡಿವೆ.

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಆಟೋ ಉತ್ಪಾದನಾ ಸಂಸ್ಥೆಗಳ ಪ್ರಕಾರ, ಗರಿಷ್ಠ 3 ತಿಂಗಳ ಅವಧಿಯಲ್ಲಿ ಉತ್ಪಾದನೆ ಮಾಡಲಾಗುವ ಸ್ಟಾಕ್ ಮಾತ್ರವೇ ಆರೋಗ್ಯಕಾರಿಯಾಗಿದ್ದು, ತದನಂತರದ ಸ್ಟಾಕ್ ಪ್ರಮಾಣವು ಆರ್ಥಿಕವಾಗಿ ಹೊರೆ ಎಂದು ಪರಿಗಣಿಸಲಾಗುತ್ತದೆ.

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಇದರಿಂದ ಈಗಾಗಲೇ ನಾಲ್ಕೈದು ತಿಂಗಳಿನಿಂದ ಸರಿಯಾದ ಪ್ರಮಾಣದಲ್ಲಿ ಹೊಸ ವಾಹನಗಳು ಮಾರಾಟವಾಗದಿರುವುದು ಆಟೋ ಉತ್ಪಾದನಾ ಸಂಸ್ಥೆಗಳಿಗೆ ತಲೆ ನೋವಾಗಿ ಪರಿಣಮಿಸಿದ್ದು, ಆಟೋ ಮಾರುಕಟ್ಟೆಯೂ ಸಹಜ ಸ್ಥಿತಿಯತ್ತ ಮರಳಲು ಮುಂದಿನ 2 ತಿಂಗಳ ಕಾಲ ಸಮಯಾವಕಾಶ ಬೇಕು ಎನ್ನಲಾಗುತ್ತಿದೆ.

MOST READ: ಹೆಚ್ಚಿದ ಥರ್ಡ್ ಪಾರ್ಟಿ ಇನ್ಸುರೆನ್ಸ್ ದರ- ಹೊಸ ಬೈಕ್ ಖರೀದಿ ಇದೀಗ ಮತ್ತಷ್ಟು ದುಬಾರಿ..!

ಆರ್ಥಿಕವಾಗಿ ಹೊರೆಯಾದ ಸ್ಟಾಕ್- ಖರೀದಿಯಾಗದೇ ಉಳಿದ ರೂ.35 ಸಾವಿರ ಕೋಟಿ ಮೌಲ್ಯದ ಕಾರುಗಳು..!

ಇನ್ನು ಆಟೋ ಉತ್ಪಾದನಾ ಸಂಸ್ಥೆಗಳು ಕಳೆದ 6 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಹೊಸ ವಾಹನ ಮಾರಾಟ ಪ್ರಮಾಣದಲ್ಲಿ ಅತಿ ಹೆಚ್ಚು ಇಳಿಕೆ ಕಂಡುಬಂದಿದ್ದು, 2019ರ ಜನವರಿಯಿಂದ ಮೇ ಅವಧಿಯಲ್ಲಿ ಕಾರು ಮಾರಾಟ ಪ್ರಮಾಣದಲ್ಲಿ ಶೇ. 8.9 ರಷ್ಟು ಕುಸಿತ ಕಂಡಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.11.3 ರಷ್ಟು ಕುಸಿತ ಕಂಡಿದೆ.

Most Read Articles

Kannada
English summary
Maruti Suzuki And Tata Motors To Be Shut Down The Production. Read in Kannada.
Story first published: Monday, June 10, 2019, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X