ಸುಜುಕಿ ಸೋಲಿಯೊ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ತಲೆಮಾರಿನ ವ್ಯಾಗನ್ ಆರ್ ಹ್ಯಾಚ್‍‍ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ ವ್ಯಾಗನ್ ಆರ್ ಕಾರಿನ 7 ಸೀಟರ್ ಆವೃತ್ತಿಯನ್ನು ಇಡುಗಡೆಗೊಳಿಸುವ ಯೋಜನೆಯಲ್ಲಿದೆ. ಎಲ್ಲವೂ ಅಂದುಕೊಂಡತೆ ಆದಲ್ಲಿ ಮುಂದಿನ ತಿಂಗಳು 7 ಸೀಟರ್ ವ್ಯಾಗನ್ ಆರ್ ಕಾರು ಮಾರುಕಟ್ಟೆಯಲ್ಲಿ ಕಾಲಿಡುತಿದ್ದು, ಈ ಕಾರು ಸುಜುಕಿ ಸಂಸ್ಥೆಯ ಸೋಲಿಯೊ ಕಾರಿನ ವಿನ್ಯಾಸವನ್ನು ಆಧರಿಸಲಿದೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ 7 ಆಸನವುಳ್ಳ ಎಂಪಿವಿ ಕಾರುಗಳಿಗೆ ಉತ್ತಮ ಬೇಡಿಕೆಯಿದ್ದು, ಈ ಹಿನ್ನೆಲೆ ಯುರೋಪ್ ರಾಷ್ಟ್ರಗಳಲ್ಲಿ ಜನಪ್ರಿಯತೆ ಸಾಧಿಸಿರುವ ಸೊಲಿಯೊ ಕಾರು ಮಾದರಿಯಲ್ಲೇ 7 ಸೀಟರ್ ವ್ಯಾಗನ್ ಆರ್ ಆವೃತ್ತಿಯನ್ನು ಸಹ ಭಾರತದಲ್ಲಿ ಬಿಡುಗಡೆಗೊಳಿಸುವ ಉದ್ಧೇಶದಿಂದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಕಾರ್&ಬೈಕ್ ವರದಿಗಳ ಪ್ರಕಾರ ಬಿಡುಗಡೆಗೊಳ್ಳಲಿರುವ 7 ಆಸನಗಳುಳ್ಳ ವ್ಯಾಗನ್ ಆರ್ ಕಾರು ದೇಶದಲಿರುವ ಎಲ್ಲಾ ನೆಕ್ಸಾ ಶೋರುಂಗಳಲಿ ದೊರೆಯಬಹುದಾಗಿದ್ದು, ಕಾರಿನ ಬಿಡುಗಡೆ ಮತ್ತು ಮಾರಾಟದ ಕುರಿತಾದ ಮಾಹಿತ ಬಗ್ಗೆ ಮಾರುತಿ ಸುಜುಕಿ ಸಂಸ್ಥೆಯು ಸ್ಪಷ್ಟನೆ ನೀಡಬೇಕಾಗಿದೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಈ ಹಿನ್ನೆಲೆ ದೆಹಲಿ ಸೇರಿದಂತೆ ಗುರುಗ್ರಾಮ್ ಹೊರ ವಲಯದಲ್ಲಿ ವ್ಯಾಗನ್ ಆರ್ 7 ಸೀಟರ್ ಕಾರುಗಳ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಹೊಸ ಕಾರುಗಳನ್ನು ವಿನೂತನ ಹಾರ್ಟ್‌ಟೆಕ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಈಗಾಗಲೇ ಮಾರುತಿ ಸುಜುಕಿ ನಿರ್ಮಾಣದ ಸ್ವಿಫ್ಟ್, ಡಿಜೈರ್, ಎಸ್ ಕ್ರಾಸ್ ಕಾರುಗಳು ಕೂಡಾ ಹಾರ್ಟ್‌ಟೆಕ್ ತಂತ್ರಜ್ಞಾನ ಅಡಯಲ್ಲೇ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆ ವ್ಯಾಗನರ್ 7 ಸೀಟರ್ ಕಾರುಗಳು ಸಹ ಉತ್ತಮ ಬಾಡಿ ಕಿಟ್ ಪಡೆದುಕೊಂಡಿರಲಿವೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಸ್ಪಾಟ್ ಟೆಸ್ಟಿಂಗ್ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ ಸುಜುಕಿ ನಿರ್ಮಾಣದ ವ್ಯಾಗನರ್ ಹೊಸ ಕಾರುಗಳು 5 ಪ್ಲಸ್ 2 ಆಸನ ಸೌಲಭ್ಯ ಹೊಂದಿದ್ದು, ಎರ್ಟಿಗಾ ಕಾರಿಗಿಂತ ಕಡಿಮೆ ಮತ್ತು ಇಕೋ ವಾಹನಗಿಂತ ಹೆಚ್ಚಿನ ಮಟ್ಟದ ಕಾರು ಮಾದರಿಯಾಗಿ ಜನಪ್ರಿಯತೆ ಹೊಂದಲಿದೆಯೆಂತೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಒಂದು ವೇಳೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ 7 ಸೀಟರ್ ವ್ಯಾಗನರ್ ಮಾದರಿಗಳು ನಿಗದಿತ ಅವಧಿ ಒಳಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದೇ ಆದಲ್ಲಿ ಎಂಪಿವಿ ಕಾರುಗಳ ವಿಭಾಗದಲ್ಲಿ ಹೊಸ ಸಂಚಲಯ ಸೃಷ್ಠಿಸಲಿದ್ದು, ವಾಣಿಜ್ಯ ಬಳಕೆಗಾಗಿ ಕೂಡಾ ಉತ್ತಮ ಕಾರು ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಎಂಜಿನ್ ಸಾಮರ್ಥ್ಯ

7 ಸೀಟರ್ ವ್ಯಾಗನರ್ ಕಾರುಗಳು 1.2-ಲೀಟರ್ ಸಾಮರ್ಥ್ಯದ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 90-ಬಿಎಚ್‌ಪಿ 118-ಎನ್ಎಂ ಉತ್ಪಾದಿಸಬಲ್ಲ ಅತ್ಯುತ್ತಮ ಮಾದರಿಯಾಗಿರಲಿದೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಕಾರಿನ ಬೆಲೆಗಳು (ಅಂದಾಜು)

ವಿನೂತನ ವಿನ್ಯಾಸಗಳನ್ನು ಹೊಂದಿರುವ 7 ಸೀಟರ್ ವ್ಯಾನಗರ್ ಕಾರುಗಳ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ.7 ಲಕ್ಷದಿಂದ 9 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಸುಜುಕಿ ಸೋಲಿಯೋ ಕಾರಿನ ವಿನ್ಯಾಸವನ್ನು ಆಧರಿಸಲಿದೆ 7 ಸೀಟರ್ ಮಾರುತಿ ಸುಜುಕಿ ವ್ಯಾಗನ್ ಆರ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತದಲ್ಲಿ ಹಲವು ಮಾದರಿಯ ಕಾರುಗಳನ್ನು ಪರಿಚಯಿಸಿ ಜನಪ್ರಿಯಗೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು, 7 ಸೀಟರ್ ವ್ಯಾಗನ್ ಆರ್ ಬಿಡುಗಡೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಯಾಕೇಂದ್ರೆ ಸಾಲಿಯೋ ಕಾರುಗಳ ಜನಪ್ರಿಯತೆ ಭಾರತದಲ್ಲೂ ವರ್ಕೌಟ್ ಆಗಲಿದೆ ಎನ್ನುವುದು ಮಾರುತಿ ಸುಜುಕಿ ಲೆಕ್ಕಾಚಾರ.

Most Read Articles

Kannada
English summary
Maruti Suzuki WagonR 7 Seater Could Inspired By Suzuki Solio. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X