ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಹಲವಾರು ವಾಹನ ತಯಾರಕ ಸಂಸ್ಥೆಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲಿದ್ದು, ಮಾರುತಿ ಸುಜುಕಿ ಸಂಸ್ಥೆಯು ಕೂಡಾ ಇನ್ನು ಕೆಲವೇ ದಿನಗಳಲ್ಲಿ ತಮ್ಮ ವ್ಯಾಗನ್ ಆರ್ ಹ್ಯಾಚ್‍‍ಬ್ಯಾಕ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದೀಗ ಈ ಕಾರಿನ ಬಗೆಯ ಮತ್ತೊಂದು ವಿಚಾರ ಬಹಿರಂಗಗೊಂಡಿದ್ದು, ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ.

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಸಿಎನ್‍ಬಿಸಿಟಿವಿ10 ನೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ಮಾರುತಿ ಸುಜುಕಿ ಸಂಸ್ಥೆಯ ಚೇರ್‍‍ಮ್ಯಾನ್ ಆರ್.ಸಿ.ಭಾರ್ಗವ್‍‍ರವರು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರು ಮೊದಲಿಗೆ ಕೇವಲ ಟ್ಯಾಕ್ಸಿ ಆಪರೇಟರ್‍‍ಗಳಾದ ಓಲಾ ಮತ್ತು ಯೂಬರ್‍ ಮತ್ತು ಇನ್ನಿತರೆ ಸರ್ಕಾರಿ ಏಜೆನ್ಸಿಗಳಿಗೆ ಮಾತ್ರ ಬಳಸಲು ಅನುವು ಮಾಡಿಕೊಡುತ್ತೆವೆ ಎಂದು ಹೇಳಿಕೊಂಡಿದ್ದಾರೆ.

ಈ ಇಂಟರ್‍‍ವ್ಯೂನಲ್ಲಿ ಭಾರ್ಗವ್‍‍ರವರು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರಿನ ಬೆಲೆಲೆಯು ಸಧ್ಯ ಕೊಂಚ ದುಬಾರಿಯೆ ಇರಲಿದೆ. ಏಕೆಂದರೆ ಎಕ್ಸ್ ಶೋರುಂ ಪ್ರಕಾರ ಬೆಲೆಯು ಕಡಿಮೆ ಇದ್ದರೂ ಸಹ ವಿವಿಧ ರಾಜ್ಯಗಳ ಸರ್ಕಾರವು ವಾಹನದ ಮೇಲಿನ ರೋಡ್ ಟ್ಯಾಕ್ಸ್ ಅನ್ನು ಶೇಕಡ 1 ರಿಂದ 5ರ ವರೆಗು ಏರಿಸಲಿದೆ. ಆದುದರಿಂದ ಸ್ವಂತ ಬಳಕೆಗೆ ಈ ಕಾರನ್ನು ಖರೀದಿ ಮಾಡಲು ಕೊಂಚ ದುಬಾರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಕೇವಲ ರೋಡ್ ಟ್ಯಾಕ್ಸ್ ಮಾತ್ರವಲ್ಲದೆಯೆ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಲಾಗುವ ಲೀಥಿಯಂ ಐಯಾನ್ ಬ್ಯಾಟರಿಗಳು ಸಹ ದುಬಾರಿಯಾಗಿದ್ದು, ಈ ಕಾರುಗಳು ಪ್ರಸ್ತುತ ಕೈಗೆಟುಕುವಿಕೆಯ ದೃಷ್ಟಿಯಿಂದ ಅಪಾಯಗಳನ್ನು ತೆಗೆದುಕೊಳ್ಳುವ ಜನರಿಗೆ ಮಾತ್ರ ಇದು ದೊರೆಯುತ್ತದೆ ಎಂದು ಹೇಳಲಾಗುತ್ತಿದೆ.

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಇವೆಲ್ಲವುಗಳ ಜೊತೆಗೆ ರಾಷ್ಟ್ರದಲ್ಲಿ ಇನ್ನೂ ಸರಿಯಾದ ಚಾರ್ಜಿಂಗ್ ಸ್ಟೇಷನ್‍‍ಗಳ ವ್ಯವಸ್ಥೆ ಇಲ್ಲವಾದಲ್ಲಿ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಹೀಂದೇಟು ಹಾಕುತ್ತಿದ್ದಾರೆ. ಇದರ ಬಗ್ಗೆ ಚಿಂತಿಸುತ್ತಿರುವ ಕೇಂದ್ರ ಸರ್ಕಾರವು ಆದಷ್ಟು ಬೇಗ ದೇಶದೆಲ್ಲೆಡೆ ಎಲೆಕ್ಟಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಇನ್ಸ್ಟಾಲ್ ಮಾಡುತ್ತೇವೆ ಎಂದು ಸಹ ಹೇಳಿಕೊಂಡಿದೆ.

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಕಾರಿನ ವೆಚ್ಚದ ಸುಮಾರು 50-60 ಪ್ರತಿಶತದಷ್ಟು ಬ್ಯಾಟರಿಯ ಖರ್ಚೆ ಆಗಿರುತ್ತದೆ. ಆದ್ದರಿಂದ, ಇವಿ ಬೆಲೆ ಗಮನಾರ್ಹವಾಗಿ ಹೆಚ್ಚಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯ ಮೇಲೆ ನಾವು ಬೆಲೆಯನ್ನು ನಿಗದಿ ಮಾಡುತ್ತೇವೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆ ಮಾಡಲಿರುವ ಎಲೆಕ್ಟ್ರಿಕ್ ಮಾದರಿಯ ವ್ಯಾಗನ್‍ ಆರ್ ಅಕರುಗಳು ಎಕ್ಸ್ ಶೋರುಂ ಪ್ರಕಾರ ರೂ. 10 ಲಕ್ಷದ ಬೆಲೆಯನ್ನು ಪಡೆಯಲಿದ್ದು, ಒಂದು ಬಾರಿಯ ಸಂಪೂರ್ಣ ಚಾರ್ಜ್‍‍ಗೆ ಸುಮಾರು 200 ಕಿಲೋಮೀಟರ್‍‍ನ ರೇಂಜ್ ಅನ್ನು ನೀಡಬಲ್ಲದು. ಹೀಗಾಗಿ ಇಷ್ಟು ದುಬಾರಿ ಬೆಲೆಯಲ್ಲಿ ಸ್ವಂತ ಬಳಕೆಗೆ ವಾಹನ ಖರೀದಿ ಮಾಡುವ ಗ್ರಾಹಕರು ಕದಿಮೆ ಇರುವ ಕಾರಣ ಮೊದಲಿಗೆ ಟ್ಯಾಕ್ಸಿ ಆಪರೇಟರ್‍‍ಗಳಿಗೆ ಈ ಕಾರುಗಳನ್ನು ನೀಡಲಾಗುವುದು.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಮಾರುತಿ ಸುಜುಕಿ ಸಂಸ್ಥೆಯೇ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಕುರಿತಾದ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರಿನಲ್ಲಿ ಕೇವಲ 1 ಗಂಟೆಯ ಒಳಗಾಗಿ ಶೇ.80 ರಷ್ಟು ಚಾರ್ಜ್ ಮಾಡಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಬಳಕೆ ಮಾಡಿರುವುದಾಗಿ ಮಾಹಿತಿ ನೀಡಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಕೆಲವು ಸುದ್ದಿ ಮೂಲಗಳ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆಯು ಇ-ವರ್ಷನ್ ವ್ಯಾಗನ್ ಆರ್ ಕಾರು ಮಾದರಿಯನ್ನು ಟೊಯೊಟಾ ಜೊತೆ ಕೈ ಜೋಡಿಸಿ ಉತ್ಪಾದನೆ ಮಾಡುತ್ತಿದೆ ಎನ್ನಲಾಗಿದ್ದು, ಈ ಕಾರಿನ ಬೆಲೆಯು ಇತರೆ ಎಲೆಕ್ಟ್ರಿಕ್ ಕಾರುಗಳಿಂತಲೂ ಸ್ಪರ್ಧಾತ್ಮಕವಾಗಿ ಇರಲಿವೆ ಎನ್ನಲಾಗಿದೆ.

MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ - ಸ್ವಂತ ಬಳಕೆಗೆ ಸಿಗುತ್ತಾ ಇಲ್ವಾ.?

ಮಾರುತಿ ಸುಜುಕಿ ಸಂಸ್ಥೆಯು ಸಧ್ಯ ತಮ್ಮ ವಾಹನಗಳಲ್ಲಿನ ಡೀಸೆಲ್ ಎಂಜಿನ್ ಬಳಕೆಯನ್ನು ಸ್ಥಗಿತಗೊಳಿಸುತ್ತಿದ್ದು, ಪೆಟ್ರೋಲ್ ಮತ್ತು ಸಿಎನ್‍ಜಿ ಎಂಜಿನ್‍‍ಗಳ ಬಳಕೆಯನ್ನು ಹೆಚ್ಚಾಗಿ ಬಳಸುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಈಗಾಗಲೇ ತಮ್ಮ ಜನಪ್ರಿಯ ಕಾರುಗಳಾದ, ವ್ಯಾಗನ್ ಆರ್, ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ಎರ್ಟಿಗಾ, ಆಲ್ಟೋ ಮತ್ತು ಬಲೆನೊ ಕಾರುಗಳಲ್ಲಿ ಬಿಎಸ್-6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿ ಬಿಡುಗಡೆ ಮಾಡಲಾಗಿದೆ.

Most Read Articles

Kannada
English summary
Maruti Suzuki WagonR Electric Launch Next Year Available For Cab Fleet Operators Only. Read In Kannada
Story first published: Wednesday, August 14, 2019, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X