ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಭಾರತದ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಮತ್ತೊಂದು ಹೊಸ ಕಾರು ಉತ್ಪಾದನಾ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕಾರು ಖರೀದಿಯ ಕಾಯುವಿಕೆಯ ಅವಧಿಯನ್ನು ತಗ್ಗಿಸಲು ಇದು ಸಾಕಷ್ಟು ಅನುಕೂಲಕರವಾಗಲಿದೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಮಾರುತಿ ಸುಜುಕಿ ಸಂಸ್ಥೆಯು ಸದ್ಯ ದೆಹಲಿ ಬಳಿಯ ಗುರುಗ್ರಾಮ್, ಮನೆಸಾರ್ ಮತ್ತು ಗುಜರಾತ್‌ನ ಹಂಸಲ್‌ಪುರ್‌ನಲ್ಲಿ ತಲಾ ಒಂದೊಂದು ಕಾರು ಉತ್ಪಾದನಾ ಘಟಕವನ್ನು ಹೊಂದಿದ್ದು, ಇದೀಗ ಹೊಸದಾಗಿ ಗುಜರಾತ್‌ಲ್ಲೇ ಮತ್ತೊಂದು ಕಾರು ಉತ್ಪಾದನಾ ಘಟಕವನ್ನು ಶುರು ಮಾಡಿದೆ. ಹೊಸ ಘಟಕದಲ್ಲಿ ಪ್ರತ್ಯೇಕವಾಗಿ ಸ್ವಿಫ್ಟ್ ಉತ್ಪಾದನೆಗಾಗಿಯೇ ವಿಶೇಷ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಲಾಗಿದ್ದು, ಗ್ರಾಹಕರ ಕಾಯುವಿಕೆಯ ಅವಧಿಯು ಗಣನೀಯವಾಗಿ ತಗ್ಗಲಿದೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಸ್ವಿಫ್ಟ್ ಖರೀದಿಗಾಗಿ ಗ್ರಾಹಕರು ಬುಕ್ಕಿಂಗ್ ಮಾಡಿದ ನಂತರ ಕನಿಷ್ಠ 6 ರಿಂದ 8 ವಾರಗಳ ಕಾಯಬೇಕಾದ ಅನಿವಾರ್ಯತೆಗಳಿದ್ದು, ಹೀಗಿರುವಾಗ ಶೇ.30 ರಷ್ಟು ಗ್ರಾಹಕರು ಅತಿ ಕಡಿಮೆ ಅವಧಿಯಲ್ಲಿ ದೊರೆಯಬಹುದಾದ ಪರ್ಯಾಯ ಕಾರು ಆಯ್ಕೆಯತ್ತ ಮುಖಮಾಡುವುದು ಸಾಮಾನ್ಯವಾಗಿದೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಇದೀಗ ಹೊಸ ಕಾರು ಉತ್ಪಾದನಾ ಘಟಕ ಶುರುವಾಗಿರುವುದರಿಂದ ಗ್ರಾಹಕರ ಬೇಡಿಕೆಯನ್ನು ಸರಿಯಾದ ಸಮಯಕ್ಕೆ ಪೂರೈಸಲು ಸಾಧ್ಯವಾಗಲಿದ್ದು, ತಿಂಗಳ ಮಾರಾಟ ಪ್ರಮಾಣದಲ್ಲಿ ಇದು ಮತ್ತಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

2018ರ ಫೆಬ್ರುವರಿಯಲ್ಲಿ ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆಯಾಗಿರುವ ಸ್ವಿಫ್ಟ್ ಮಾದರಿಯು ಪ್ರತಿ ತಿಂಗಳು ಸರಾಸರಿಯಾಗಿ 18 ಸಾವಿರ ಯುನಿಟ್‌ಗಳು ಮಾರಾಟಗೊಂಡಿದ್ದು, ಹೊಸ ಘಟಕದಲ್ಲಿ ಉತ್ಪಾದನೆ ಆರಂಭವಾದ ನಂತರ ಇದು 22 ಸಾವಿರದಿಂದ 24 ಸಾವಿರಕ್ಕ ಏರಿಕೆಯಾಗಲಿದೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಮಾಹಿತಿಗಳ ಪ್ರಕಾರ, ಗುಜರಾತ್‌ನ ಹಂಸಲ್‌ಪುರ್‌ನಲ್ಲಿರುವ ಹಳೆಯ ಘಟಕದ ಸನಿಹದಲ್ಲೇ ಹೊಸ ಘಟಕ ನಿರ್ಮಾಣ ಮಾಡಲಾಗಿದ್ದು, ಹೊಸ ಘಟಕದಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯಾದ ಸ್ವಿಫ್ಟ್ ಮತ್ತು ಕಂಪ್ಯಾಕ್ಟ್ ಎಸ್‌ಯುವಿಯಾದ ವಿಟಾರಾ ಬ್ರೆಝಾ ಕಾರುಗಳನ್ನು ಮಾತ್ರ ನಿರ್ಮಾಣವಾಗಲಿಯೆಂತೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಇದು ಸ್ವಿಫ್ಟ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಕೈಗೊಂಡ ಯೋಜನೆಯಾದ್ರೆ ಮತ್ತೊಂದು ಜನಪ್ರಿಯ ಮಾದರಿಯಾದ ಬಲೆನೊ ಕಾರುಗಳ ಬೇಡಿಕೆಯನ್ನು ಸಮರ್ಥವಾಗಿ ಪೂರೈಸರು ಮಾರುತಿ ಸುಜುಕಿ ಸಂಸ್ಥೆಯು ಟೊಯೊಟಾ ಜೊತೆಗೆ ಕೈಜೋಡಿಸಿದೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

2017ರ ಆರಂಭದಲ್ಲೇ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್ ಜಂಟಿಯಾಗಿ ಕಾರು ಉತ್ಪಾದಿಸುವ ಬಗ್ಗೆ ಮಾತುಕತೆ ನಡೆಸಿದ್ದವು. ಆದ್ರೆ ಕಾರಣಾಂತರಗಳಿಂದ ಹೊಸ ಯೋಜನೆ ಬಗ್ಗೆ ತಟಸ್ಥವಾಗಿದ್ದ ಎರಡು ಸಂಸ್ಥೆಗಳು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಒಪ್ಪಂದ ಮಾಡಿಕೊಂಡಿವೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಹೊಸ ಒಪ್ಪಂದದ ಪ್ರಕಾರ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಾಡುವುದಷ್ಟೇ ಅಲ್ಲದೇ ಈಗಿರುವ ಸಾಮಾನ್ಯ ಕಾರುಗಳ ಮಾರಾಟಕ್ಕೂ ಪರಸ್ಪರ ಸಹಾಯ ಮಾಡುವ ಮಹತ್ವದ ಕಾರ್ಯ ಯೋಜನೆಗೂ ಟೊಯೊಟಾ ಮತ್ತು ಸುಜುಕಿ ಸಂಸ್ಥೆಗಳು ಒಪ್ಪಿಗೆ ಸೂಚಿಸಿವೆ.

MOST READ: ಹಾಸನದ ಬಳಿ ಬರೋಬ್ಬರಿ 300ಕಿ.ಮೀ ಸ್ಪೀಡ್‌‌ನಲ್ಲಿ ಬೈಕ್ ರೈಡ್ ಮಾಡಿದ ಯುವಕ

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಹೀಗಾಗಿ ಸುಜುಕಿ ಡೀಲರ್ಸ್‌ಗಳಲ್ಲಿ ಟೊಯೊಟಾ ಉತ್ಪನ್ನಗಳನ್ನು ಮತ್ತು ಟೊಯೊಟಾ ಡೀಲರ್ಸ್‌ಗಳಲ್ಲಿ ಸುಜುಕಿ ಕಾರು ಉತ್ಪನ್ನಗಳನ್ನು ಖರೀದಿ ಮಾಡಬಹುದಾಗಿದ್ದು, ಇದು ಕಾರು ಮಾರಾಟದ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಇಂತದೊಂದು ಒಪ್ಪಂದ ಮಾಡಿಕೊಂಡಿವೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಇದರಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಲೆನೊ ಕಾರಿನ ಉತ್ಪಾದನಾ ಜವಾಬ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ತನ್ನ ವಶಕ್ಕೆ ತೆಗೆದುಕೊಳ್ಳಲಿರುವ ಟೊಯೊಯಾ ಸಂಸ್ಥೆಯು, ಬಲೆನೊ ಕಾರಿನ ಬ್ಯಾಡ್ಜ್ ಅನ್ನು ಸಹ ತನ್ನ ಹೆಸರಿನಲ್ಲೇ 2019ರ ಕೊನೆಯಲ್ಲಿ ಮಾರಾಟ ಆರಂಭ ಮಾಡಲಿದೆ.

MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಮತ್ತಷ್ಟು ವಿಸ್ತರಣೆಯಾಗಲಿದೆ ಬಿಡದಿ ಟೊಯೊಟಾ ಘಟಕ..!

ಮಾರುತಿ ಸುಜುಕಿ ಸಂಸ್ಥೆಯು ಸದ್ಯಕ್ಕೆ ಹರಿಯಾಣದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಎರಡು ಕಾರು ಉತ್ಪಾದನಾ ಘಟಕವನ್ನ ಹೊಂದಿದ್ದರೂ ಸಹ ದಕ್ಷಿಣ ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕ ಇಲ್ಲದಿರುವುದು ಸುಜುಕಿ ಸಂಸ್ಥೆಗೆ ಕಾರುಗಳ ಸರಬರಾಜು ಒಂದು ಸವಾಲಿನ ವಿಚಾರವೇ ಸರಿ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಹೀಗಿರುವಾಗ ಬೆಂಗಳೂರು ಬಳಿ ಇರುವ ಬಿಡದಿಯಲ್ಲಿ ನೆಲೆಗೊಂಡಿರುವ ಟೊಯೊಟಾ ಸಂಸ್ಥೆಯ ಕಾರು ಉತ್ಪಾದನಾ ಘಟಕದಿಂದ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳಾದ ವಿಟಾರಾ ಬ್ರೆಝಾ ಮತ್ತು ಬಲೆನೊ ಕಾರುಗಳನ್ನು ಇಲ್ಲಿಯೇ ಉತ್ಪಾದನೆ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿನ ಡೀಲರ್ಸ್‌ಗಳಿಗೆ ಸರಬರಾಜು ಮಾಡಲು ನಿರ್ಧರಿಸಿದೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

ಇದಕ್ಕೆ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದು, ಕಳೆದ ನವೆಂಬರ್‌ನಲ್ಲಿ ಬಿಡದಿಗೆ ಭೇಟಿ ನೀಡಿದ್ದ ಸುಜುಕಿ ಸಂಸ್ಥೆಯ ಹಿರಿಯ ಅಧಿಕಾರಿಗಳ ತಂಡವು ಕಾರು ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಅಗತ್ಯ ಸೌಲಭ್ಯಗಳನ್ನ ಪೂರೈಕೆ ಮಾಡುವುದಾಗಿ ಸಮ್ಮತಿ ಸೂಚಿಸಿದೆ.

ಮಾರುತಿ ಸುಜುಕಿ ಹೊಸ ಯೋಜನೆ ಶುರು- ತಗ್ಗಲಿದೆ ಸ್ವಿಫ್ಟ್ ಖರೀದಿಯ ಕಾಯುವಿಕೆ ಅವಧಿ..!

7 ಸಾವಿರ ಕೋಟಿ ಹೂಡಿಕೆ

ಅತಿಹೆಚ್ಚು ಮಾರಾಟವಾಗುತ್ತಿರುವ ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಉತ್ಪಾದನೆ ಮಾಡಲು ಸಾಕಷ್ಟು ಸ್ಥಳಾವಕಾಶ ಬೇಕಿದ್ದು, ಇದಕ್ಕಾಗಿ ಟೊಯೊಟಾ ಘಟಕವನ್ನು ವಿಸ್ತರಣೆ ಮಾಡಲು ಸುಜುಕಿ ಸಂಸ್ಥೆಯು 1 ಬಿಲಿಯನ್ ಯುಎಸ್‌ ಡಾಲರ್( ಸುಮಾರು 7 ಸಾವಿರ ಕೋಟಿ) ಹೂಡಿಕೆ ಮಾಡಲು ನಿರ್ಧರಿಸಿದೆ.

Most Read Articles

Kannada
English summary
Maruti Suzuki Waiting Periods Set To Drop: New Factory To Be Set Up In Gujarat. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X