Just In
Don't Miss!
- News
ಸೈಕಲ್ನಲ್ಲಿ ಬೆಂಗಳೂರು ಪೊಲೀಸರ ಬೀಟ್
- Technology
ಟ್ರಾಯ್ನ ಹೊಸ MNP ನಿಯಮ ಜಾರಿ : 'ಸಿಮ್ ಪೋರ್ಟ್' ಈಗ ಅತೀ ಸುಲಭ!
- Lifestyle
ಮನೆಯ ಅಂದ ಹೆಚ್ಚಲು ಆಕರ್ಷಕವಾಗಿ ಬಲ್ಬ್ಗಳ್ನು ಹೀಗೆ ಸಿಂಗರಿಸಿ
- Finance
ಡಿ. 16ರಿಂದ ದಿನದ 24 ಗಂಟೆ, ವರ್ಷದ 365 ದಿನವೂ NEFT ವರ್ಗಾವಣೆ
- Education
ಪ್ರಧಾನಿ ಜೊತೆ ಪರೀಕ್ಷಾ ಪೇ ಚರ್ಚಾ-2020ರ ಮಾತುಕತೆಗೆ ಇಂದೇ ರಿಜಿಸ್ಟರ್ ಮಾಡಿ
- Movies
KPL ಫಿಕ್ಸಿಂಗ್ ಪ್ರಕರಣ: ನಟಿಯರಿಗೆ ಶಾಕ್ ನೀಡಿದ ಕಮಿಷನರ್ ಭಾಸ್ಕರ್ ರಾವ್
- Sports
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಎಡವಿದ್ದೆಲ್ಲಿ?: ಸೋಲಿಗೆ ಪ್ರಮುಖ ಕಾರಣಗಳು!
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಪೆಟ್ರೋಲ್ ಎಂಜಿನ್ನಲ್ಲಿ ಬಿಡುಗಡೆಯಾಗಲಿದೆ ವಿಟಾರಾ ಬ್ರಿಝಾ
ಮಾರುತಿ ಸುಜುಕಿ ಕಂಪನಿಯು ಪೆಟ್ರೋಲ್ ಮಾದರಿಯಲ್ಲಿ ವಿಟಾರಾ ಬ್ರಿಝಾ ಕಾಂಪ್ಯಾಕ್ಟ್ ಎಸ್ಯುವಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ವಿಟಾರಾ ಬ್ರಿಝಾ ಕಾಂಪ್ಯಾಕ್ಟ್ ಎಸ್ಯುವಿಯ ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಲು ಕಂಪನಿಯು ನಿರ್ಧರಿಸಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಕಾಂಪ್ಯಾಕ್ಟ್ ಎಸ್ಯುವಿ ಸೆಗ್ಮೆಂಟ್ನಲ್ಲಿ ಪಾರುಪತ್ಯ ಸಾಧಿಸುತಿತ್ತು. ಆದರೆ ಕಾಂಪ್ಯಾಕ್ಟ್ ಎಸ್ಯುವಿ ಸೆಗ್ಮೆಂಟ್ನ ವಿಭಾಗದಲ್ಲಿ ಹ್ಯುಂಡೈ ವೆನ್ಯೂ ಬಿಡುಗಡೆಯಾದಾಗ ವಿಟಾರಾ ಬ್ರಿಝಾಗೆ ಪ್ರಬಲ ಪೈಪೋಟಿಯನ್ನು ನೀಡಿತು. ಹ್ಯುಂಡೈ ವೆನ್ಯೂ ಬ್ಲೂ ಲಿಂಕ್ ತಂತ್ರಜ್ಞಾನದೊಂದಿಗೆ ಕನೆಕ್ಟಿವಿಟಿ ಎಸ್ಯುವಿಯು ವಿವಿಧ ಮಾದರಿಗಳ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಿಂದಾಗಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಹ್ಯುಂಡೈ ಯಶ್ವಸಿಯಾಗಿದೆ. ಆದರೆ ವಿಟಾರಾ ಬ್ರಿಝಾ ಕೇವಲ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಇದೇ ಕಾರಣದಿಂದ ಮಾರುತಿ ಸುಜುಕಿ ಪೆಟ್ರೋಲ್ ಮಾದರಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಪ್ರಸ್ತುತ ಡೀಸೆಲ್ ಎಂಜಿನ್ ಅನ್ನು ಬಿಟ್ಟು ಹೊಸ ಬಿಎಸ್-6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಹೊಸ ವಿಟಾರಾ ಬ್ರಿಝಾ ಎಸ್ಯುವಿಯಲ್ಲಿ ಮೆಕಾನಿಕಲ್ ಪೆಟ್ರೋಲ್ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಹೊಸ ಕಾಂಪಾಕ್ಟ್ ಎಸ್ಯುವಿಯು ಮುಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್ಗಳ ಜೊತೆಗೆ ಹೊಸ ಫಾಗ್ ಲ್ಯಾಂಪ್ ಅನ್ನು ಹೊಂದಿದೆ. ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ಗಳ ಜೊತೆಗೆ ಹೊಸ ಪ್ರಾಜೆಕ್ಟರ್ ಹೆಡ್ಲ್ಯಾಂಪ್ ಯುನಿಟ್ ಅನ್ನು ಹೊಂದಿದೆ.

ಹೊಸ ಎಸ್ಯುವಿಯ ಮುಂಭಾಗದಲ್ಲಿರುವ ಗ್ರಿಲ್ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಎಸ್ಯುವಿಯ ಹಿಂಭಾಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತು ಪಡಿಸಿದರೆ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ.ಹೊಸ ಎಸ್ಯುವಿಯ ಇಂಟಿರಿಯರ್ನಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಆ್ಯಪಲ್ ಕಾರ್ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ ಹೊಸ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ ಅಳವಡಿಸಲಾಗುವುದು.

ಮಾರುಕಟ್ಟೆಯಲ್ಲಿರುವ ಎಸ್ಯುವಿಯ ಇಂಟಿರಿಯರ್ನಲ್ಲಿರುವುದಕ್ಕಿಂತ ಹೆಚ್ಚಿನ ಪ್ರೀಮಿಯಂ ಅಂಶಗಳನ್ನು ಹೊಸ ಎಸ್ಯುವಿಯಲ್ಲಿ ನೀಡಲಾಗುವುದು. ಹೊಸ ಎಸ್ಯುವಿಯಲ್ಲಿ ಮಾಡಲಾಗುವ ಪ್ರಮುಖ ಬದಲಾವಣೆಯೆಂದರೆ ಹೊಸ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ.

2020ರ ವಿಟಾರಾ ಬ್ರಿಝಾ, ಮಾರುತಿ ಸುಜುಕಿ ಕಂಪನಿಯ 1.5 ಲೀಟರಿನ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಈ ಎಂಜಿನ್ ಅನ್ನು ಕಂಪನಿಯ ಇತರ ಮಾದರಿಗಳಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 103.5 ಬಿಹೆಚ್ಪಿ ಪವರ್ ಹಾಗೂ 138 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಪೆಟ್ರೋಲ್ ಎಂಜಿನ್ಗಳನ್ನು ಬಿಎಸ್ 6 ನಿಯಮಗಳಿಗೆ ತಕ್ಕಂತೆ ನವೀಕರಿಸಲಾಗುತ್ತದೆ. ಇದರ ಜೊತೆಗೆ ಕಂಪನಿಯು ಬಿಎಸ್6 ನಿಯಮಗಳು ಜಾರಿಗೆ ಬಂದ ನಂತರ ಡೀಸೆಲ್ ಎಂಜಿನ್ ವಾಹನಗಳಿಗೆ ಬೇಡಿಕೆ ಹೆಚ್ಚಿದರೆ ಬಿಎಸ್6 ಡೀಸೆಲ್ ಎಂಜಿನ್ಗಳ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಎಸ್ಯುವಿಯನ್ನು ಮೊದಲ ಬಾರಿಗೆ 2016ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಬಿಡುಗಡೆಯಾದ ಕೆಲವು ತಿಂಗಳುಗಳಲ್ಲಿಯೇ ಈ ಎಸ್ಯುವಿ ಜನಪ್ರಿಯವಾಗಿತ್ತು. ಎಸ್ಯುವಿ ಸೆಗ್ಮೆಂಟಿನಲ್ಲಿ ಹೆಚ್ಚು ಮಾರಾಟವಾಗುತ್ತಿದ್ದ ಫೋರ್ಡ್ ಇಕೋಸ್ಪೋರ್ಟ್ ಅನ್ನು ಹಿಂದಿಕ್ಕಿದ ಬ್ರಿಝಾ ನಂ 1 ಸ್ಥಾನಕ್ಕೇರಿತ್ತು.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಎಸ್ಯುವಿಯು ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ಪೆಟ್ರೋಲ್ ಮಾದರಿಯಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗಿದೆ. ವಿಟಾರಾ ಬ್ರಿಝಾ ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ.