ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮತ್ತು ಎಸ್-ಕ್ರಾಸ್ ಕಾರನ್ನು ಶೀಘ್ರದಲ್ಲೇ ಬಿಎಸ್-6 ಪ್ರೇರಿತ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ. ಈ ಎರಡು ಮಾದರಿಯ ಕಾರುಗಳು ಪೆಟ್ರೋಲ್ ರೂಪಾಂತರಗಳು ಮಾರಟಕ್ಕಾಗಿ ಮಾರುಕಟ್ಟೆಗೆ ಲಗ್ಗೆ ಇಡುವುದು ಖಚಿತವಾಗಿದೆ.

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಮಾರುತಿ ಸುಜುಕಿಯ ಸೆಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾತ್ಸವ ಅವರು, ಇಟಿಆಟೋ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಪೆಟ್ರೋಲ್ ಚಾಲಿತ ವಿಟಾರಾ ಬ್ರೇಝಾ ಮತ್ತು ಎಸ್-ಕ್ರಾಸ್ ರೂಪಾಂತರಗಳನ್ನು ಬಿಡುಗಡೆ ಮಾಡುವುದನ್ನು ಸ್ಪಷ್ಟಪಡಿಸಿದ್ದಾರೆ. ಮಾರುತಿ ಸುಜುಕಿಯ ವಿಟಾರಾ ಬ್ರೇಝಾ ಮತ್ತು ಎಸ್-ಕ್ರಾಸ್ ಪೆಟ್ರೋಲ್ ರೂಪಾಂತರವನ್ನು ಈ ವರ್ಷಾಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಎರಡೂ ರೂಪಾಂತರಗಳಲ್ಲಿಯೂ ಮಾರುತಿ ಸುಜುಕಿಯ ಅಭಿವೃದ್ದಿ ಹೊಂದಿದ್ದ 1.5 ಲೀಟರ್ ಕೆ15-ಸೀರೀಸ್ ಪೆಟ್ರೋಲ್ ಹೈಬ್ರಿಡ್ ಎಂಜಿನ್‍ಅನ್ನು ಹೊಂದಿದೆ. ಸಿಯಾಜ್, ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಮಾದರಿಗಳಲ್ಲಿ ಇದೆ ಎಂಜಿನ್ ಅನ್ನು ಈಗಗಾಲೇ ಅಳವಡಿಸಲಾಗಿದೆ.

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಎಂಜಿನ್ 104 ಬಿಎ‍ಚ್‍ಪಿ ಪವರ್ ಮತ್ತು 138 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸ್ಟಾಂಡರ್ಡ್ 5-ಸ್ಫೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ. ಅದರೊಂದಿಗೆ -ಸ್ಪೀಡ್ ಟಾರ್ಕ್ ಕನ್ವರ್ಟರ್ ಅಟೋಮ್ಯಾಟಿಕ್ ಆಯ್ಕೆಯನ್ನು ನೀಡಲಾಗಿದೆ.

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಪ್ರಸ್ತುತ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮತ್ತು ಎಸ್-ಕ್ರಾಸ್ ಮಾದರಿಗಳನ್ನು ಕೇವಲ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡಲಾಗಿತ್ತು. ಅದರಲ್ಲಿ 1.3 ಲೀಟರ್ ಯುನಿಟ್‍‍ನಲ್ಲಿ 82‍ಬಿಎಚ್‍‍ಪಿ ಪವರ್ ಮತ್ತು 200 ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಎಂಜಿನ್‍‍ಗೆ ಸಹಕಾರಿಯಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಅಲ್ಲದೇ ವಿಟಾರಾ ಬ್ರೇಝಾ ಮತ್ತು ಎಸ್-ಕ್ರಾಸ್ ಎರಡರಲ್ಲೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಬಿಎಸ್-6 ಮಾಲಿನ್ಯ ಜಾರಿಗೆ ಬಂದ ನಂತರ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳ್ಳಲಿದೆ ಎಂದು ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಮಾರುತಿ ಸುಜುಕಿ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ಪರಿಚಹಿಸಿದೆ. ಈ ಎಂಜಿನ್ ಪ್ರಸ್ತುತ ಸಿಯಾಜ್ ಮತ್ತು ಎರ್ಟಿಗಾ ಮಾದರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೊಸ 1.5 ಲೀಟರ್ ಡೀಸೆಲ್ ಯುನಿಟ್ ಬಿಎಸ್-6 ಪ್ರೇರಿತ ಎಂಜಿನ್ ಅನ್ನು ಹೊಂದಿದ್ದು, ಡೀಸೆಲ್ ಎಂಜಿನ್‍‍ಗೆ ಬೇಡಿಕೆ ಇರುವುದರಿಂದ ಮಾರುತಿ ಸುಜುಕಿ ಮುಂದೆ ಬರುವ ಡೀಸೆಲ್ ಎಂಜಿನ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಅಪ್‍‍ಡೇಟ್ ಮಾಡಬಹುದೆಂಬ ನಿರೀಕ್ಷೆ ಇದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಯಲ್ಲಿ ಪ್ರಸ್ತುತ 7 ಬಿಎಸ್-6 ಪ್ರೇರಿತ ಎಂಜಿನ್ ಹೊಂದಿರುವ ಪೆಟ್ರೋಲ್ ಕಾರುಗಳನ್ನುಗಳನ್ನು ಹೊಂದಿರುವ ಏಕೈಕ ಉತ್ಪಾದಕರಾಗಿದ್ದಾರೆ. ಮಾರುತಿ ಸುಜುಕಿಯ ಆಲ್ಟೊ, ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಬಾಲೆನೊ, ಎರ್ಟಿಗಾ ಮತ್ತು ಎಕ್ಸ್‌ಎಲ್ 6 ಕಾರುಗಳು ಬಿಎಸ್-6 ಪ್ರೇರಿತ ಎಂಜಿನ್ ಹೊಂದಿದೆ. ಕಂಪನಿಯ ಒಟ್ಟು ಮಾರಾಟದಲ್ಲಿ ಬಿಎಸ್-6 ಪ್ರೇರಿತ ಎಂಜಿನ್ ಹೊಂದಿರುವ ಕಾರುಗಳು ಶೇ. 70 ಕ್ಕಿಂತ ಹೆಚ್ಚು ಮಾರಾಟವಾಗುತ್ತಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಮಾರುತಿ ಸುಜುಕಿಯ ಇಂಡಿಯಾ ಲಿಮಿಟೆಡ್‍‍ನ ವ್ಯವಸ್ಥಾಪಕ ನಿರ್ದೆಶಕ ಮತ್ತು ಸಿಇಒ, ಕೆನಿ‍ಚಿ ಆಯುಕಾವಾ ಮಾತನಾಡಿ, ಜವಾಬ್ದಾರಿಯುತ ಮತ್ತು ಪರಿಸರ ಪ್ರಜ್ಞೆಯ ಬ್ರ್ಯಾಂಡ್ ಆಗಿ, ಮಾರುತಿ ಸುಜುಕಿ ಏಪ್ರಿಲ್ 2020ರ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವ ಮೊದಲು ಬಿಎಸ್-6 ಪ್ರೇರಿತ ಎಂಜಿನ್ ಹೊಂದಿರುವ ಕಾರುಗಳನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ 7 ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯನಕ್ಕೆ ತಕ್ಕಂತೆ ಅಪ್‍‍ಡೇಟ್ ಮಾಡಲಾಗಿದೆ. ನಿಗದಿತ ಸಮಯದ ಮೊದಲು ಮಾರುತಿ ಸುಜುಕಿ ಶ್ರೇಣಿಯ ಎಲ್ಲಾ ಪೆಟ್ರೋಲ್ ಕಾರುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಅಪ್‍‍ಡೇಟ್ ಮಾಡಲು ನಾವು ಬದ್ದರಾಗಿದ್ದೇವೆ ಎಂದು ಹೇಳಿದ್ದಾರೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹೈಬ್ರಿಡ್ ಎಂಜಿನ್ ಹೊಂದಲಿವೆ ವಿಟಾರಾ ಬ್ರಿಝಾ ಹಾಗೂ ಎಸ್-ಕ್ರಾಸ್

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪೆಟ್ರೋಲ್ ರೂಪಾಂತರವು ದೇಶಿಯ ಮಾರುಕಟ್ಟೆಯಲ್ಲಿ ಬಹುನಿರೀಕ್ಷಿತ ಮಾದರಿಯಾಗಿದೆ. ವಿಟಾರಾ ಬ್ರಿಝಾ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ. ವಿಟಾರಾ ಬ್ರಿಝಾಬಿಎಸ್-6 ಪೆಟ್ರೋಲ್ ಪ್ರೇರಿತ ಎಂಜಿನ್ ಹೊಂದಿರುವ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದಾಗ ಮಾರಾಟವಾಗುವ ಸಂಖ್ಖೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ.

Most Read Articles

Kannada
English summary
Maruti Suzuki Vitara Brezza & S-Cross To Receive Petrol-Hybrid Engines: Launch Timeline Confirmed - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X