ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‍‍ಯು‍‍ವಿಯಾದ ವಿಟಾರ ಬ್ರಿಝಾ ವಾಹನದ ಸ್ಪೋರ್ಟ್ ಎಡಿಷನ್‍ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮಾರುತಿ ಬ್ರಿಝಾದ ಸ್ಪೋರ್ಟ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.98 ಲಕ್ಷಗಳಾಗಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಮಾರುತಿ ವಿಟಾರ ಬ್ರಿಝಾ ವಾಹನವನ್ನು ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗಿನಿಂದ ಈ ವಾಹನವು, ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಎಸ್‍‍ಯು‍‍ವಿಯಾಗಿದೆ. ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದಾಗಿನಿಂದ ಮಾರುತಿ ಸುಜುಕಿ ಕಂಪನಿಯು ಈ ವಾಹನದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರಲಿಲ್ಲ. ಆದರೆ ಈ ಸೆಗ್‍‍‍ಮೆಂಟಿನಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಹ್ಯುಂಡೈನ ವೆನ್ಯೂ ಹಾಗೂ ಮಹೀಂದ್ರಾದ ಎಕ್ಸ್ ಯುವಿ300 ವಾಹನಗಳ ಬಿಡುಗಡೆಯ ನಂತರ ಮಾರುತಿ ಸುಜುಕಿ ಕಂಪನಿಯು, ವಿಟಾರ ಬ್ರಿಝಾ ವಾಹನದಲ್ಲಿ ಬದಲಾವಣೆ ಮಾಡಿದೆ. ಮಾರುತಿ ಸುಜುಕಿ ಕಂಪನಿಯು ಈ ಸ್ಪೋರ್ಟ್ಸ್ ಎಡಿಷನ್‍ ವಾಹನದ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಮಾಡಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಈ ವಾಹನದಲ್ಲಿ ಆಕ್ಸೆಸರಿ ಪ್ಯಾಕೇಜ್ ಇದ್ದು, ಗ್ರಾಹಕರಿಗೆ ಬೇಕಾದ ಆಯ್ಕೆಯಲ್ಲಿ, ಬೇಕಾದ ಮಾದರಿಯಲ್ಲಿ ದೊರೆಯಲಿದೆ. ಈ ಆಕ್ಸೆಸರಿಸ್ ಪ್ಯಾಕೇಜ್‍‍ನಲ್ಲಿ ಬಾಡಿ ಗ್ರಾಫಿಕ್ಸ್, ಸೈಡ್ ಬಾಡಿ ಕ್ಲಾಡಿಂಗ್, ಡೋರ್ ಸಿಲ್ ಗಾರ್ಡ್, ವ್ಹೀಲ್ ಆರ್ಕ್ ಕಿಟ್, ಹೊಸ ಸೀಟ್ ಕವರ್‍‍ಗಳು ಹಾಗೂ ಲೆದರ್ ಸ್ಟೀಯರಿಂಗ್ ಕವರ್‍‍ಗಳಿವೆ.

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ವಿನ್ಯಾಸದ ಹೊರತಾಗಿ, ಬ್ರಿಝಾ ಸ್ಪೋರ್ಟ್ ಎಡಿಷನ್‍‍ನ ಮೆಕಾನಿಕಲ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ವಿಟಾರ ಬ್ರಿಝಾ ಸ್ಪೋರ್ಟ್ ಎಡಿಷನ್ ವಾಹನದಲ್ಲಿ 1.3 ಲೀಟರ್ ಡೀಸೆಲ್ ಎಂಜಿನ್ ಇದ್ದು, ಈ ಎಂಜಿನ್ 89 ಬಿಹೆಚ್‍‍ಪಿ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುಯಲ್ ಅಥವಾ ಎ‍ಎಂ‍‍ಟಿ ಗೇರ್‍‍ಬಾಕ್ಸ್ ಇರಲಿದೆ. ಮಾರುತಿ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಹೊಸ ಆವೃತ್ತಿಯ ವಿಟಾರ ಬ್ರಿಝಾ ವಾಹನವನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಹೊಸ ವಿಟಾರ ಬ್ರಿಝಾ ವಾಹನವನ್ನು ಬಿ‍ಎಸ್6 ನಿಯಮಗಳು ಜಾರಿಗೆ ಬರುವ ಏಪ್ರಿಲ್ 2020ರ ಒಳಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಈ ಕಾಂಪ್ಯಾಕ್ಟ್ ಎಸ್‍‍ಯು‍‍ವಿ ವಾಹನದಲ್ಲಿ ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳುವ ಎಂಜಿನ್‍ ಅನ್ನು ಅಳವಡಿಸಲಾಗಿದೆ. ಮಾರುತಿ ಕಂಪನಿಯು ಹೊಸ ವಿಟಾರ ಬ್ರಿಝಾದಲ್ಲಿ ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳುವ 1.2 ಲೀಟರಿನ ಕೆ12 ಪೆಟ್ರೋಲ್ ಎಂಜಿನ್ ಅಳವಡಿಸಲಿದೆ. ಮಾರುತಿ ಕಂಪನಿಯು ಇತ್ತೀಚಿಗಷ್ಟೆ ಡೀಸೆಲ್ ವಾಹನಗಳ ಉತ್ಪಾದನೆಯನ್ನು ನಿಲ್ಲಿಸುವುದಾಗಿ ಘೋಷಿಸಿತ್ತು.

MOST READ: ಹೊಸ ಸೂಪರ್ಬ್ ಅನಾವರಣಗೊಳಿಸಿದ ಸ್ಕೋಡಾ

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಆದರೆ ವಿಟಾರ ಬ್ರಿಝಾ ವಾಹನದಲ್ಲಿ ಮುಂಬರುವ ದಿನಗಳಲ್ಲಿ ಮಾರುತಿ ಕಂಪನಿಯು ಸ್ವಂತವಾಗಿ ಅಭಿವೃದ್ಧಿಪಡಿಸಲಿರುವ 1.5 ಲೀಟರಿನ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗುವುದು. ಈ ಎಂಜಿನ್ ಅನ್ನು ಮೊದಲ ಬಾರಿಗೆ ಸಿಯಾಜ್ ವಾಹನದಲ್ಲಿ ಅಳವಡಿಸಲಾಗಿತ್ತು, ಈಗ ಎರ್ಟಿಗಾ ವಾಹನದಲ್ಲಿಯೂ ಸಹ ಅಳವಡಿಸಲಾಗಿದೆ.

ಬಿಡುಗಡೆಯಾದ ಮಾರುತಿ ಸುಜುಕಿ ಬ್ರಿಝಾ ಸ್ಪೋರ್ಟ್ ಎಡಿಷನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿಯ ವಿಟಾರ ಬ್ರಿಝಾದ ಸ್ಪೋರ್ಟ್ ಎಡಿಷನ್‍‍ನ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳನ್ನು ಹೆಚ್ಚು ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಮಾಡಲಾಗಿದೆ. ಈ ವಾಹನವು ಮಹೀಂದ್ರಾ ಎಕ್ಸ್ ಯುವಿ 300, ಹ್ಯುಂಡೈನ ವೆನ್ಯೂ ಹಾಗೂ ಫೋರ್ಡ್‍‍ನ ಇಕೋಸ್ಪೋರ್ಟ್ ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Maruti Suzuki Vitara Brezza Sport Edition Launched In India — Priced At Rs 7.98 Lakh - Read in kannada
Story first published: Saturday, May 25, 2019, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X