ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ಮಾರುತಿ ಸುಜುಕಿ 1.0 ಲೀಟರ್ ಪೆಟ್ರೋಲ್ ಬಿಎಸ್-6 ಎಂಜಿನ್ ವ್ಯಾಗನ್‍ಆರ್ ಹ್ಯಾಚ್‍‍ಬ್ಯಾಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. 1.0 ಲೀಟರಿನ ಬಿಎಸ್-6 ಎಂಜಿನ್ ಹೊಂದಿರುವ ಈ ಹೊಸ ಮಾರುತಿ ವ್ಯಾಗನ್‍ಆರ್ ಕಾರಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.4.42 ಲಕ್ಷಗಳಾಗಿದೆ. ಹಳೆಯ ಬಿಎಸ್-4 ವ್ಯಾಗನ್‍ಆರ್ ಮಾದರಿಗೆ ಹೋಲಿಸಿದರೆ ಸುಮಾರು ರೂ.8,000ಗಳಷ್ಟು ಹೆಚ್ಚು ಬೆಲೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ವ್ಯಾಗನ್‍ಆರ್ 1.0 ಲೀಟರ್ ಎಂಜಿನ್ ಎಲ್ಲಾ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ವಿಎಕ್ಸ್‌ಐ ಪ್ಲಸ್, ಎಲ್‌ಎಕ್ಸ್‌ಐ, ಎಲ್‌ಎಕ್ಸ್‌ಐ(ಒ), ವಿಎಕ್ಸ್‌ಐ(ಒ) ಎಜಿಎಸ್ ಟಾಪ್ ಮಾದರಿಯ ಕಾರು‍ಗಳಾಗಿವೆ. ಬಿಎಸ್-6 ಎಂಜಿನ್‍ ಮಾದರಿಯ ಬೇಸ್ ಎಲ್‌ಎಕ್ಸ್‌ಐ ಮಾದರಿಯ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.4.42 ಲಕ್ಷಗಳಾದರೆ, ವಿಎಕ್ಸ್‌ಐ (ಒ) ಎಜಿಎಸ್‌ ಮಾದರಿಯ ಬೆಲೆಯು ರೂ.5.41 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ಮಾರುತಿ ವ್ಯಾಗನ್ಆರ್ ಬಿಎಸ್-6 ಪೆಟ್ರೋಲ್ ಎಂಜಿನ್ ಕಾರು ಹಿಂದಿನ ಮಾದರಿಯ ಕಾರಿನ ರೀತಿಯ ಕ್ಷಮತೆಯನ್ನು ಹೊಂದಿದೆ. ಎಂಜಿನ್ ಕ್ಷಮತೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ. ಮಾರುತಿ ವ್ಯಾಗನ್ಆರ್ 998 ಸಿಸಿ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 67 ಬಿ‍ಹೆಚ್‍‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟೀಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಎಸ್-ಪ್ರೆಸ್ಸೊ ಹ್ಯಾಚ್‍‍ಬ್ಯಾಕ್‍ ಸಹ ಇದೇ ಪ್ರಮಾಣದ ಕ್ಷಮತೆಯನ್ನು ಹೊಂದಿದೆ. 1.0 ಲೀಟರ್ ಎಂಜಿನ್ ಹೊರತಾಗಿ ಮಾರುತಿ ವ್ಯಾಗನ್‍ಆರ್ 1.2 ಲೀಟರ್ ದೊಡ್ಡ ಪೆಟ್ರೂಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು ಈಗಾಗಲೇ ಬಿಎಸ್-6 ಮಾಲಿನ್ಯ ಅನುಸಾರವಾಗಿ ನವೀಕರಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ದೊಡ್ಡದಾದ 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 82 ಬಿ‍‍ಹೆಚ್‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ, ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಆಯ್ಕೆಯಾಗಿ ನೀಡಲಾಗುತ್ತದೆ.

ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ಬಿಎಸ್-6 ವ್ಯಾಗನ್‍ಆರ್ ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಂತ ಜನಪ್ರಿಯ ಹ್ಯಾಚ್‍‍ಬ್ಯಾಕ್‍ಗಳಲ್ಲಿ ಒಂದಾಗಿದೆ. ಈ ಕಾರನ್ನು ಕೆಲವು ತಿಂಗಳ ಹಿಂದೆ ಭಾರತದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಪ್ರಸ್ತುತ ವ್ಯಾಗನ್ಆರ್ ಮೂರನೇ ತಲೆಮಾರಿನ ಸಾಲಿನಲ್ಲಿ ಸೇರಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ವ್ಯಾಗನ್‍ಆರ್ ಪ್ರತಿ ತಿಂಗಳು ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸ್ಥಿರವಾಗಿ ಸ್ಥಾನವನ್ನು ಪಡೆಯುತ್ತದೆ. 2019ರ ಅಕ್ಟೋಬರ್ ತಿಂಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ 14,359 ಯು‍ನಿ‍ಟ್‍ಗಳ ಮಾರಾಟವಾಗಿದೆ. ಕಳೆದ ತಿಂಗಳು ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಬಿಎಸ್-6 ಎಂಜಿನ್‍‍ನ ಮಾರುತಿ ಸುಜುಕಿ ವ್ಯಾಗನ್‍ಆರ್

ದೇಶಿಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಮಾದರಿಗಳಲ್ಲಿ ವ್ಯಾಗನ್‍ಆರ್ ಒಂದಾಗಿದೆ. ಟಾಲ್‍‍ಬಾಯ್ ವಿನ್ಯಾಸ ಹೊಂದಿರುವ ವ್ಯಾಗನ್ಆರ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಸ್ಯಾಂಟ್ರೊ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Maruti WagonR 1.0-Litre BS6 Engine Launched In India: Prices Start At Rs 4.42 Lakh - Read in Kannada
Story first published: Wednesday, November 20, 2019, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X