ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಜನಪ್ರಿಯ ಮಾರುತಿ ಸುಜುಕಿ ಕಂಪನಿಯ ವ್ಯಾಗನ್‍ಆರ್ ಹ್ಯಾಚ್‍‍ಬ್ಯಾಕ್‍ನ ಪ್ರೀಮಿಯಂ ಆವೃತ್ತಿಯನ್ನು ಇತ್ತೀಚಿಗೆ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಮಾರುತಿ ಎಕ್ಸ್‌ಎಲ್ 5 ಎಂದು ಕರೆಯಲ್ಪಡುವ ಹೊಸ ಪ್ರೀಮಿಯಂ ವ್ಯಾಗನ್‍ಆರ್ ಮುಂದಿನ ವರ್ಷದ ಆರಂಭದಲ್ಲಿ ನಡೆಯುವ 2020ರ ಆಟೋ ಎಕ್ಸ್ ಪೋ ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಮಾರುತಿ ಎಕ್ಸ್‌ಎಲ್ 5 ಅನ್ನು ಭಾರತದಲ್ಲಿ ಅನೇಕ ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಬಹುನಿರೀಕ್ಷಿತ ಎಕ್ಸ್‌ಎಲ್ 5 ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಅನ್ನು ಇದೀಗ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ಮಾಡಲಾಗಿದೆ. ಮಾರುತಿ ವ್ಯಾಗನ್‍ಆರ್ ಎಕ್ಸ್‌ಎಲ್ 5 ಸ್ಪಾಟ್ ಟೆಸ್ಟ್ ನಡೆಸುವಾಗ ಗಾಡಿವಾಡಿ ಚಿತ್ರಕರಿಸಿದ ಚಿತ್ರಗಳಿಂದ ಮುಂಬರುವ ಹ್ಯಾಚ್‍‍ಬ್ಯಾಕ್‍ನ ಕೆಲವು ಹೊಸ ವಿಷಯಗಳು ಬಹಿರಂಗಪಡಿಸುತ್ತದೆ.

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಹೊಸ ಸ್ಪಾಟ್ ಟೆಸ್ಟ್ ಚಿತ್ರಗಳಲ್ಲಿ ಹ್ಯಾಚ್‍ಬ್ಯಾಕ್‍ನ ಮುಂಭಾಗದ ಡ್ಯುಯಲ್-ಹೆಡ್‍‍ಲ್ಯಾಂಪ್ ಸ್ಫಷ್ಟವಾಗಿ ಕಾಣುತ್ತಿದೆ. ಕಾರಿನ ಮೇಲಿನ ಡಿ‍ಆರ್‍ಎಲ್‍‍ಗಳು ಮತ್ತು ಮುಖ್ಯ ಯುನಿ‍‍ಟ್‍‍ಗಳನ್ನು ಬಂಪರ್‍ ಕೆಳಭಾಗದಲ್ಲಿ ಅಳವಡಿಸಲಾಗಿದೆ. ಹೊಸ ಎಕ್ಸ್‌ಎಲ್ 5 ಹೊಸ ಫ್ರಂಟ್ ಗ್ರಿಲ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ, ಇದು ಸ್ಟ್ಯಾಂಡರ್ಡ್ ವ್ಯಾಗನ್‍ಆರ್ ಗಿಂತ ಭಿನ್ನವಾಗಿದೆ. ಕಾರನ್ನು ಮರೆಮಾಚಿ ಸ್ಪಾಟ್ ಟೆಸ್ಟ್ ನಡೆಸಿದರು ಸ್ಪೈ ಚಿತ್ರದಲ್ಲಿ ಏರ್ ಡ್ಯಾಮ್ ಕಾಣಸಿಗುತ್ತದೆ ಮತ್ತು ಫಾಗ್ ಲ್ಯಾಂಪ್ ಅನ್ನು ಎರಡು ತುದಿಯಲ್ಲಿ ಇರಿಸಲಾಗಿದೆ.

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಹೊಸ ವ್ಯಾಗನ್‍ಆರ್ ಹಿಂಭಾಗ ಸ್ಟ್ಯಾಂಡರ್ಡ್ ವ್ಯಾಗನ್‍ಆರ್‍‍‍ಗೆ ಹೋಲುತ್ತದೆ. ಹಿಂಭಾಗದಲ್ಲಿ ಸಣ್ಣ ಬದಲಾವಣೆಗಳೊಂದಿಗೆ ಎಕ್ಸ್‌ಎಲ್ 5 ಟೈಲ್‍‍ಲೈ‍ಟ್ ವಿನ್ಯಾಸವನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ.

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಹೊಸ ಮಾರುತಿ ಎಕ್ಸ್‌ಎಲ್ 5 ಇಂಟಿರಿಯರ್‍‍ನ ಬದಲಾವಣೆ ಕುರಿತು ಯಾವುದೇ ಮಾಹಿತಿ ಇಲ್ಲ. ಹೊಸ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ವ್ಯಾಗನ್‍ಆರ್ ಕೂಡ ಹಿಂದಿನ ವ್ಯಾಗನ್‍ಆರ್‍‍ನಲ್ಲಿರುವ ಅದೇ ಕ್ಯಾಬಿನ್ ಅನ್ನು ಮುಂದುವರಿಸುವ ಸಾಧ್ಯತೆಗಳಿವೆ. ಹೊಸ ಎಕ್ಸ್‌ಎಲ್ 5 ಹ್ಯಾಚ್‍‍ಬ್ಯಾಕ್‍ ಹೆಚ್ಚಿನ ಬದಲಾವಣೆಗಳನ್ನು ಹೊಂದಿಲ್ಲ.

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಎಂಜಿನ್ ವಿಷಯದಲ್ಲಿ ಹೊಸ ಮಾರುತಿ ಎಕ್ಸ್‌ಎಲ್ 5 ಬಿಎಸ್-6 ಪ್ರೇರಿತ 1.2 ಲೀಟರ್ ಕೆ 12ಬಿ ಪೆಟ್ರೋಲ್ ಎಂಜಿನ್ 82 ಬಿಎಚ್‍ಪಿ ಪವರ್ ಮತ್ತು 114 ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಎ‍‍ಜಿಎಸ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆ ಕೂಡ ಹೊಂದಿರಲಿವೆ.

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಮಾರುತಿ ಎಕ್ಸ್‌ಎಲ್ 5 ಹ್ಯಾಚ್‍‍ಬ್ಯಾಕ್ ಅನ್ನು ಬ್ರ್ಯಾಂಡ್‍‍ನ ಪ್ರೀಮಿಯಂ ನೆಕ್ಸಾ ಡೀಲರ್‍‍ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು. ಈ ಕಾರನ್ನು ನೆಕ್ಸಾ ಪ್ರೀಮಿಯಂ ವಿಭಾಗದ ಎಂಟ್ರಿ ಲೆವೆಲ್ ಮಟ್ಟದ ಮಾದರಿಯಾಗಿ ಮಾರಾಟ ಮಾಡಲಾಗುವುದು, ಇದೇ ರೀತಿಯಲ್ಲಿ ಇಗ್ನಿಸ್, ಎಸ್-ಕ್ರಾಸ್ ಮತ್ತು ಎಕ್ಸ್‌ಎಲ್ 6 ಮಾದರಿಗಳನ್ನು ಸಹ ಮಾರಾಟ ಮಾಡುತ್ತೀವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಮಾರುತಿ ಸುಜುಕಿ ಸ್ಟೇಬಲ್‍‍ನ ಪ್ರಸಿದ್ದ ಬ್ರ್ಯಾಂಡ್‍‍ಗಳಲ್ಲಿ ವ್ಯಾಗನ್ಆರ್ ಒಂದು. ಈ ಕಾರು 1999 ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಟಾಲ್‍‍ಬಾಯ್ ಹ್ಯಾಚ್‍‍ಬ್ಯಾಕ್ ವಿಭಾಗದಲ್ಲಿ ಬಿಡುಗಡೆಗೊಳಿಸಿದರು. ಮಾರುತಿ ಸುಜುಕಿ ವ್ಯಾಗನ್‍ಆರ್ ಕೈಗೆಟುಕುವ ದರ, ವಿಶಾಲವಾದ ಸ್ಪೆಸ್, ನಿರ್ವಹಣೆ ಸುಲಭವಾಗಿ ಈ ಎಲ್ಲಾ ಕಾರಣದಿಂದ ಇದನ್ನು ಅದ್ಭುತವಾದ ಕುಟಂಬ ಕಾರನ್ನಾಗಿ ಮಾಡಿತು. ಈ ಕಾರು ಇಂದಿಗೂ ಸಣ್ಣ ಕುಟಂಬಗಳ ಆದ್ಯತೆ ನೀಡುವ ಕಾರುಗಳಲ್ಲಿ ಒಂದಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಮತೊಮ್ಮೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ವ್ಯಾಗನ್‍ಆರ್ ಎಕ್ಸ್‌ಎಲ್ 5

ಮಾರುತಿ ಸುಜುಕಿ ಎಕ್ಸ್‌ಎಲ್ 5 ಅನ್ನು ವ್ಯಾಗನ್‍ಆರ್ ಪ್ರೀಮಿಯಂ ಆವೃತ್ತಿಯಾಗಿ ಬ್ರ್ಯಾಂಡ್‍‍ನ ನೆಕ್ಸಾ ಮಾರಾಟಗಾರರ ಮೂಲಕ ಮಾರಾಟ ಮಾಡಲಾಗುವುದು. ಹೊಸ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಒಂದೇ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಎಕ್ಸ್‌ಎಲ್ 5 ವ್ಯಾಗನ್‍ಆರ್ ಕಾರಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.5 ಲಕ್ಷ ದರ ಹೊಂದಿದೆ. ಮುಂದಿನ ವರ್ಷ ನಡೆಯಲ್ಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Maruti XL5 (Premium WagonR) Spied Testing Yet Again: Fresh Details Revealed Ahead Of Launch - Read in Kannada
Story first published: Tuesday, October 15, 2019, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X