ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಮಾರುತಿ ಸುಜುಕಿ ಎಕ್ಸ್ ಎಲ್6 ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ವಾಹನವಾಗಿದೆ. ನಾಳೆ ಬಿಡುಗಡೆಯಾಗಲಿರುವ ಈ ಕಾರಿನ ಬ್ರೋಷರ್ ಆನ್‍‍ಲೈನ್‍‍ನಲ್ಲಿ ಸೋರಿಕೆಯಾಗಿದೆ.

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಈಗಾಗಲೇ ಎಕ್ಸ್ ಎಲ್6 ಕಾರಿನ ಬಗೆಗಿನ ಬಹುತೇಕ ಮಾಹಿತಿಗಳು ಲಭ್ಯವಾಗಿದ್ದರೂ, ಸೋರಿಕೆಯಾಗಿರುವ ಬ್ರೋಷರ್‍ ಕಾರಿನ ಅಳತೆ, ಫೀಚರ್ಸ್ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡುತ್ತದೆ. ಎಕ್ಸ್ ಎಲ್6 4,445 ಎಂಎಂ ಉದ್ದ, 1,775 ಎಂಎಂ ಅಗಲ ಹಾಗೂ 1,700 ಎಂಎಂ ಎತ್ತರವನ್ನು ಹೊಂದಿದೆ. ಈ ಕಾರು ಎರ್ಟಿಗಾ ಕಾರಿಗೆ ಹೋಲಿಸಿದರೆ ಹೆಚ್ಚು ಉದ್ದವಾಗಿ, ಅಗಲವಾಗಿ, ಎತ್ತರವಾಗಿರಲಿದೆ. ಎರ್ಟಿಗಾ ಕಾರಿಗಿಂತ 50 ಎಂಎಂ ಹೆಚ್ಚು ಉದ್ದ, 40 ಎಂಎಂ ಹೆಚ್ಚು ಅಗಲ ಹಾಗೂ 10 ಎಂಎಂ ಹೆಚ್ಚು ಎತ್ತರವನ್ನು ಹೊಂದಿದೆ.

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ವ್ಹೀಲ್ ಬೇಸ್‍‍ನ ಗಾತ್ರವು ಎರ್ಟಿಗಾ ಕಾರಿನ ವ್ಹೀಲ್ ಬೇಸ್‍‍ನಷ್ಟೇ ಅಂದರೆ 2,740 ಎಂಎಂ ಇರಲಿದೆ. ಎಕ್ಸ್ ಎಲ್6, ಎರ್ಟಿಗಾ ಕಾರಿನಷ್ಟೇ 209 ಲೀಟರಿನ ಬೂಟ್ ಸ್ಪೇಸ್ ಹೊಂದಿರಲಿದೆ. ಎಕ್ಸ್ ಎಲ್6 ಕಾರಿನಲ್ಲಿ ಕೆ15ಬಿ 1.5 ಲೀಟರಿನ ನ್ಯಾಚುರಲಿ ಆಸ್ಪಿರೇಟೆಡ್ 4 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಈ ಎಂಜಿನ್ ಡ್ಯುಯಲ್ ಬ್ಯಾಟರಿ ಹೊಂದಿರುವ ಹೈಬ್ರಿಡ್ ಸಿಸ್ಟಂ ಸಂಯೋಜನೆಯೊಂದಿಗೆ ಕಾರ್ಯಚರಿಸಲಿದೆ. ಈ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 103.21 ಬಿ‍‍ಹೆಚ್‍‍ಪಿ ಹಾಗೂ 4,400 ಆರ್‍‍ಪಿ‍ಎಂನಲ್ಲಿ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ 4 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ಗಳಿರಲಿವೆ. ಎಕ್ಸ್ ಎಲ್6, ಎರ್ಟಿಗಾ ಕಾರಿನಂತೆ ಪ್ರತಿ ಲೀಟರ್ ಪೆಟ್ರೋಲಿಗೆ 19.01 ಕಿ.ಮೀ ಮೈಲೇಜ್ ನೀಡಲಿದೆ ಎಂದು ಬ್ರೋಷರ್‍‍ನಲ್ಲಿ ಹೇಳಲಾಗಿದೆ.

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಎಕ್ಸ್ ಎಲ್6 ಅನ್ನು, ಜೆಟಾ ಹಾಗೂ ಆಲ್ಫಾ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಜೆಟಾ ಮಾದರಿಯು ಎರ್ಟಿಗಾದ ಝಡ್ ಮಾದರಿಯಂತಿದ್ದರೆ, ಆಲ್ಫಾ ಮಾದರಿಯು ಎರ್ಟಿಗಾದ ಝಡ್ ಪ್ಲಸ್ ಮಾದರಿಯಂತಿರಲಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು, ಕ್ರೂಸ್ ಕಂಟ್ರೋಲ್, 7 ಇಂಚಿನ ಸ್ಮಾರ್ಟ್ ಪ್ಲೇ ಸ್ಟುಡಿಯೋ ಟಚ್‍‍‍ಸ್ಕ್ರೀನ್ ಇನ್‍‍ಫೋಟೆನ್‍‍ಮೆಂಟ್ ಸಿಸ್ಟಂ, ಎಲ್‍ಇ‍‍ಡಿ ಫಾಗ್ ಲ್ಯಾಂಪ್, ಹೆಡ್ ಲ್ಯಾಂಪ್, ಡಿ‍ಆರ್‍‍ಎಲ್, ರೂಫ್ ರೇಲ್ ಹಾಗೂ ಕಾಂಟ್ರಾಸ್ಟ್ ಒ‍ಆರ್‍‍ವಿ‍ಎಂಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಟಾಪ್ ಎಂಡ್‍‍ನ ಆಲ್ಫಾ ಮಾದರಿಯಲ್ಲಿ ಲೆದರ್ ಸೀಟ್, ಎಲೆಕ್ಟ್ರಿಕಲ್ ಆಗಿ ಫೋಲ್ಡ್ ಮಾಡಬಹುದಾದ ಒ‍ಆರ್‍‍ವಿ‍ಎಂ, ಕಪ್ಪು ಬಣ್ಣದ ಅಲಾಯ್ ವ್ಹೀಲ್, ಫಾಲೋ ಮಿ ಹೋಂ ಹೊಂದಿರುವ ಆಟೋ ಹೆಡ್ ಲ್ಯಾಂಪ್ ಹಾಗೂ ಲೀಡ್ ಮಿ ಟು ಹೋಂ ಸೇರಿದಂತೆ ಹಲವು ಫೀಚರ್‍‍ಗಳನ್ನು ಹೊಂದಿರಲಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಹೀಗಿರಲಿದೆ ನೋಡಿ ಮಾರುತಿ ಸುಜುಕಿ ಎಕ್ಸ್ ಎಲ್6 ಬ್ರೋಷರ್

ಮಾರುತಿ ಎಕ್ಸ್ ಎಲ್6 ಕಾರ್ ಅನ್ನು ಬ್ಲೂ, ಖಾಕಿ, ಕೆಂಪು, ಗ್ರೇ, ಸಿಲ್ವರ್ ಹಾಗೂ ಬಿಳಿ ಸೇರಿದಂತೆ ಆರು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.10ರಿಂದ 11 ಲಕ್ಷಗಳಿರುವ ಸಾಧ್ಯತೆಗಳಿವೆ.

Source: v3cars

Most Read Articles

Kannada
English summary
Maruti XL6 brochure leaked ahead of launch tomorrow - Read in kannada
Story first published: Tuesday, August 20, 2019, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X