ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಮ್ಯಾಕ್ಸಸ್ ತನ್ನ ಡಿ90 ಎಸ್‍‍ಯು‍ವಿಯನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಸ್ಪಾಟ್ ಟೆಸ್ಟ್ ನಡೆಸುವ ಸ್ಪೈ ಚಿತ್ರಗಳು ಅಂತರ್ಜಾಲದಲ್ಲಿ ಬಹಿರಂಗವಾಗಿದೆ. ಟೊಯೊಟಾ ಫಾರ್ಚೂನರ್ ಎಸ್‍‍ಯು‍ವಿಗೆ ಪ್ರತಿಸ್ಪರ್ಧಿಯಾಗಿ ಈ ಎಸ್‍‍ಯು‍ವಿಯನ್ನು ಬಿಡುಗಡೆಗೊಳಿಸುತ್ತಿದೆ.

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಮ್ಯಾಕ್ಸಸ್ ಡಿ 90 ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಎಂಜಿ ಮೋಟಾರ್ ಬ್ಯಾಡ್ಜ್‌ನೊಂದಿಗೆ ಮ್ಯಾಕ್ಸಸ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿದೆ. ಎಸ್‌‍‍ಎಐಸಿ ಕಂಪನಿಯು ಎಂಜಿಯಂತಹ ಹಲವು ಬ್ರಾಂಡ್‌ಗಳನ್ನು ಹೊಂದಿದ್ದು, ಅದರಲ್ಲಿ ಇದು ಕೂಡ ಒಂದಾಗಿದೆ. ಈ ಎಸ್‍‍ಯುವಿಯು ಸಂಪೂರ್ಣವಾಗಿ ಚೀನಾ ಮೂಲದ ಬ್ರಾಂಡ್ ಆಗಿದೆ.

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಚೀನಾ ಮೂಲದ ಬ್ರಿಟಿಷ್ ವಾಹನ ತಯಾರಕ ಬ್ರ್ಯಾಂಡ್ ಆದ ಎಂಜಿ ಮೋಟಾರ್ಸ್ ಹೆಕ್ಟರ್ ಮಿಡ್ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಎಂಜಿ ಹೆಕ್ಟರ್ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಹೆಚ್ಚು ಮಾರಾಟವಾಗುತ್ತಿರುವುದು ಎಂಜಿ ಹೆಕ್ಟರ್ ಉತ್ಪಾದನೆಯನ್ನು ಹೆಚ್ಚಿಸಿದೆ.

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಮುಂದಿನ ದಿನಗಳಲ್ಲಿ ಹ್ಯುಂಡೈ ಕೋನಾ ಎಲೆಕ್ಟ್ರಿಕ್‍‍ಗೆ ಪೈಪೋಟಿಯನ್ನು ನೀಡಲು ಎಂಜಿ ಬ್ರ್ಯಾಂಡ್ ಇಝೆಡ್ ಇವಿ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಮ್ಯಾಕ್ಸಸ್ ಡಿ90 ಎಸ್‍‍ಯುವಿಯು ಎಂಜಿ ಬ್ರ್ಯಾಂಡ್‍‍ನಿಂದ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂರನೇ ಮಾದರಿಯಾಗಿದೆ.

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಮ್ಯಾಕ್ಸಸ್ ಡಿ90 ಎಸ್‍‍ಯುವಿಯಲ್ಲಿ ಮುಂಭಾಗದಲ್ಲಿ ನವೀಕರಿಸಿದ ಗ್ರಿಲ್ ಅನ್ನು ಹೊಂದಿದೆ. ಎಸ್‍ಯುವಿಯಲ್ಲಿ ಪ್ರಮುಖವಾಗಿ ಎಲ್‍‍ಇಡಿ ಹೆ‍‍ಡ್‍‍ಲ್ಯಾಂಪ್, ಸ್ಪೋರ್ಟಿ ಫಾಗ್ ಲ್ಯಾಂಪ್ ಕ್ಲಸ್ಟರ್, ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಮತ್ತು ಎಲ್ಇಡಿ ಟೇಲ್ ಲ್ಯಾಂಪ್ ಮತ್ತು ಕಾಂಪ್ಯಾಕ್ಟ್ ರೇರ್ ಪ್ರೊಫೈಲ್ ಅನ್ನು ಹೊಂದಿದೆ.

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಮ್ಯಾಕ್ಸಸ್ ಡಿ 90 ಎಸ್‍ಯು‍ವಿಯು ಮರುವಿನ್ಯಾಸಗೊಳಿಸಲಾದ ಆವೃತ್ತಿಯಾಗಿದೆ. ಮ್ಯಾಕ್ಸಸ್ ಡಿ90 ಹೊಸ ಎಸ್‍ಯುವಿಯು ಹಿಂದಿನ ಆವೃತ್ತಿಗೆ ಹೋಲುವಂತಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಹೊಸ ಎಸ್‍‍ಯುವಿಯು 5,005 ಎಂಎಂ, ಅಗಲ 1,932 ಎಂಎಂ, ಎತ್ತರ 1,875 ಎಂಎಂ ಮತ್ತು ವ್ಹೀಲ್‍‍ಬೇಸ್ 2,950 ಎಂಎಂ ಹೊಂದಿದೆ. ಮ್ಯಾಕ್ಸಸ್ ಡಿ90 ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ತುರಾಸ್ ಜಿ 4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯು‍ವಿಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಮ್ಯಾಕ್ಸಸ್ ಡಿ90 ಎಸ್‍‍ಯುವಿಯು 2.0 ಲೀಟರ್ ಟರ್ಬೊ ಪೆಟ್ರೋಲ್ ಅಥವಾ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 225 ಬಿ‍‍ಹೆಚ್‍‍ಪಿ ಪವರ್ ಮತ್ತು 360 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಎಂಜಿನ್ 177 ಬಿ‍ಹೆಚ್‍‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಟೊಯೊಟಾ ಫಾರ್ಚೂನರ್‍‍ಗೆ ಟಕ್ಕರ್ ನೀಡಲು ಬರಲಿದೆ ಮ್ಯಾಕ್ಸಸ್ ಡಿ90

ಈ ಎಸ್‍‍ಯುವಿಯು 12.3 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಪನೋರಮಿಕ್ ಸನರೂಫ್, 8 ಇಂಚಿನ ಡ್ರೈವರ್ ಇನ್ಫೋರ್ಮೇಷನ್ ಡಿಸ್‍ಪ್ಲೇ, 6 ಏರ್‍‍ಬ್ಯಾಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಮತ್ತು ಇತರ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

Source: TeamBHP

Most Read Articles

Kannada
English summary
Maxus D90 spied in India, will be MG’s Ford Endeavour rival - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X