ನ್ಯೂಯಾರ್ಕ್‍ನಲ್ಲಿ ಅನಾವರಣಗೊಂಡ ಮರ್ಸಿಡಿಸ್ ಎಎಂಜಿ ಜಿಎಲ್‍ಸಿ 63

ಜರ್ಮನಿ ಮೂಲದ ಲಗ್ಷುರಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ 2019ರ ನ್ಯೂಯಾರ್ಕ್ ಆಟೋ ಶೋನಲ್ಲಿ ಎಎಂಜಿ ಜಿಎಲ್‍ಸಿ 63 ಮತ್ತು ಜಿಎಲ್‍ಸಿ 63 ಕಾರುಗಳನ್ನು ಅನಾವರಣಗೊಳಿಸಿದೆ. 2019ರ ಅವೃತ್ತಿಯ ಮರ್ಸಿಡಿಸ್ ಕಾರು ಎಎಂಜಿ ಜಿಎಲ್‍ಸಿ 63 - ಜಿಎಲ್‍ಸಿ 63 ಮತ್ತು ಜಿಎಲ್‍ಸಿ 63 ಎಸ್ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದ್ದು ಲ್ಯಾಪ್ ನಲ್ಲಿ ಎಸ್‍ಯುವಿ ಯ 7.49.369 ಮಿನಟ್ ರೆಕಾರ್ಡ್ ಹೊಂದಿದೆ.

ನ್ಯೂಯಾರ್ಕ್‍ನಲ್ಲಿ ಅನಾವರಣಗೊಂಡ ಮರ್ಸಿಡಿಸ್ ಎಎಂಜಿ ಜಿಎಲ್‍ಸಿ 63

ಮರ್ಸಿಡಿಸ್ ಜಿಎಲ್‍ಸಿ 63 ಮತ್ತು ಜಿಎಲ್‍ಸಿ 63 ಕೂಪ್‍ಗಳು ಎರಡು ಹಂತಗಳಲ್ಲಿ ಟ್ಯೂನ್ ಮಾಡಲಾಗುವ ಎಎಂಜಿ 4.0 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್ ಹೊಂದಿವೆ. ಜಿಎಲ್‍ಸಿ 63 ಮಾದರಿಯಲ್ಲಿ ಬೈ ಟರ್ಬೊ ಎಂಜಿನ್ 5,500 - 6,250 ಆರ್.ಪಿ. ಎಂ ಉತ್ಪಾದನೆ ಮಾಡುವ 469 ಬಿಹೆಚ್‍ಪಿ ಮತ್ತು 1,750 - 4,500 ಆರ್‍‍ಪಿಎಂ ಉತ್ಪಾದನೆ ಮಾಡುವ 650 ಎನ್ಎಂ ಟಾರ್ಕ್ ಇದ್ದು, ಇದು ಜಿಎಲ್‍ಸಿ 63ಯನ್ನು 4.0 ಸೆಕೆಂಡುಗಳಲ್ಲಿ 0-100 ಕಿ.ಮೀ ಗಂಟೆಗೆ ಮತ್ತು ಎಲೆಕ್ಟ್ರಾನಿಕ್ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 250 ಕಿ.ಮೀ ನಿಗದಿಪಡಿಸಿದೆ. ಜಿಎಲ್‍ಸಿ 63 ಎಸ್ ನಲ್ಲಿರುವ ಪವರ್ ( ರೆಗ್ಯುಲರ್ ಎಸ್‍ಯುವಿ ಮತ್ತು ಕೂಪ್ ) 503 ಬಿಹೆಚ್‍ಪಿ ಮತ್ತು 700 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರ ಪರ್ಫಾರ್ಮೆನ್ಸ್ ( 34 ಬಿಹೆಚ್‍ಪಿ ಮತ್ತು 50 ಎನ್ಎಂ ಟಾರ್ಕ್) ಅಂದರೆ ಮರ್ಸಿಡಿಸ್ ಎಎಂಜಿ ಜಿಎಲ್‍ಸಿ 63 ಎಸ್ 0 - 100 ಕಿ.ಮೀ ವೇಗವನ್ನು 3.8 ಸೆಕೆಂಡ್ ಗಳಲ್ಲಿ ಕ್ರಮಿಸುತ್ತದೆ. ಮತ್ತು ಟಾಪ್ ಸ್ಪೀಡ್ ಪ್ರತಿ ಗಂಟೆಗೆ 280 ಕಿ.ಮೀ.

ನ್ಯೂಯಾರ್ಕ್‍ನಲ್ಲಿ ಅನಾವರಣಗೊಂಡ ಮರ್ಸಿಡಿಸ್ ಎಎಂಜಿ ಜಿಎಲ್‍ಸಿ 63

ಎಲ್ಲಾ ಜಿಎಲ್‍ಸಿ 63 ಮತ್ತು 63ಎಸ್ ಎಸ್‍ಯುವಿ ಗಳು ಮತ್ತು ಎಸ್‍ಯುವಿ ಕೂಪ್ ಗಳು 9 ಸ್ಪೀಡಿನ ಆಟೊಮ್ಯಾಟಿಕ್ ಟಾರ್ಕ್ ಕನ್ವರ್‍‍‍‍‍‍ಟರ್ ಗೇರ್ ಬಾಕ್ಸ್ ಗಳ ಮೂಲಕ ಎಎಂಜಿ 4 ಮ್ಯಾಟಿಕ್ ಪರ್ಫಾರ್ಮೆನ್ಸ್ ಮತ್ತು ಎಲ್ಲಾ ಡ್ರೈವ್ ಸಿಸ್ಟಮ್ ಗಳ ಟಾರ್ಕ್ ಡಿಸ್ಟ್ರಿಬ್ಯೂಟ್ ಮಾಡುತ್ತವೆ.

ನ್ಯೂಯಾರ್ಕ್‍ನಲ್ಲಿ ಅನಾವರಣಗೊಂಡ ಮರ್ಸಿಡಿಸ್ ಎಎಂಜಿ ಜಿಎಲ್‍ಸಿ 63

ರೆಗ್ಯುಲರ್ ಕಂಫರ್ಟ್ ನ ಜೊತೆಗೆ , ಸ್ಪೋರ್ಟ್, ಸ್ಪೋರ್ಟ್ ಪ್ಲಸ್, ಇಂಡುವಿಡ್ಯುಯಲ್ ಮತ್ತು ರೇಸ್ (ಎಸ್ ಮೋಡ್ ಮಾತ್ರ) ಡ್ರೈವಿಂಗ್ ಮೋಡ್ ಗಳಿದ್ದು ಹೊಸ ಜಿಎಲ್‍ಸಿ 63 ಫ್ಯಾಮಿಲಿಯು ಹೊಸ ಸ್ಲಿಪರಿ ಡ್ರೈವಿಂಗ್ ಮೋಡ್ ನಲ್ಲಿ ಐಸಿ ಮತ್ತು ವೆಟ್ ಕಂಡಿಷನ್ ಗಳಲ್ಲಿ ಥ್ರಾಟಲ್ ರೆಸ್ಪಾನ್ಸ್ ಅನ್ನು ನಿರ್ಭಂಧಿಸುತ್ತದೆ.

MOST READ: ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?

ನ್ಯೂಯಾರ್ಕ್‍ನಲ್ಲಿ ಅನಾವರಣಗೊಂಡ ಮರ್ಸಿಡಿಸ್ ಎಎಂಜಿ ಜಿಎಲ್‍ಸಿ 63

2019ರ ಮರ್ಸಿಡಿಸ್ ಎಎಂಜಿ ಯಲ್ಲಿ ಇರುವ ಮತ್ತೊಂದು ಬದಲಾವಣೆ ಎಂದರೆ ಕಾಸ್ಮೆಟಿಕ್ ಅಪ್ಡೇಟ್ ಗಳದ್ದು. ಬೇರೆ ಸ್ಟಾಂಡರ್ಡ್ ಜಿಎಲ್‍ಸಿ ಗಳಿಗೆ ಹೋಲಿಸಿದರೆ ಎಎಂಜಿ ಎಸ್‍ಯುವಿ ಎಲ್ಇಡಿ ಹೆಡ್ ಲ್ಯಾಂಪ್ಸ್, ಹೆಚ್ಚು ತೀಕ್ಷ್ಣ ವಾಗಿರುವ ಫ್ರಂಟ್ ಮತ್ತು ರೇರ್ ಬಂಪರ್, ಲಾರ್ಜ್ ಸೈಡ್ ಸ್ಕರ್ಟ್ ಮತ್ತು ವೈಡರ್ ರೇರ್ ಡಿಫ್ಯುಸರ್ ಗಳನ್ನು ಹೊಂದಿವೆ. ಹೊಸ ಜಿಎಲ್‍ಸಿ 63 ಲೈನ್ ಅಪ್ ನಲ್ಲಿ ಹೊಸ ಟ್ವಿನ್ 90 ಎಂಎಂ ನ ಎರಡೂ ಬದಿಯಲ್ಲಿ ಟ್ರೇಪ್ ಜೌಡೈಲ್ ಎಕ್ಸ್ ಹಾಸ್ಟ್ ಗಳಿವೆ. ಒಳ ಭಾಗದಲ್ಲಿ ಹಲವು ಬದಲಾವಣೆಗಳಿದ್ದು, ಹೊಸ ಎಂ ಬಕ್ಸ್ ಇನ್ಪೊಟೈನ್ಮೆಂಟ್ ಡಿಸ್ ಪ್ಲೇ ವಾಯ್ಸ್ ಅಸಿಸ್ಟೆಂಟ್ ಇದ್ದು, ಹಲವು ಎಎಂಜಿ ಮೆನುಗಳು ನೀಡುವಂತೆ ಡ್ರೈವರ್ ಬಗ್ಗೆ ಇನ್ಫರ್ಮೇಶನ್ ಮತ್ತು ಜಿ ಫೊರ್ಸ್ ಗಳನ್ನು ನೀಡಲಾಗಿದೆ. ಎಎಂಜಿ ಸ್ಪೊರ್ಟ್ಸ್ ಸ್ಟಿಯರಿಂಗ್ ವ್ಹೀಲ್ ಮತ್ತು ಫ್ರಂಟ್ ನಲ್ಲಿರುವ ಹೆವಿ ಬೊಲ್ ಸ್ಟರ್ಡ್ ಸ್ಪೋರ್ಟ್ ಸೀಟ್ ಗಳನ್ನು ನೀಡಲಾಗಿದೆ.

ಮಾಲೀಕರು ಎನರ್ಜೈಸಿಂಗ್ ಪ್ಯಾಕೆಜ್ ಪಡೆಯಬಹುದು. ಇನ್ನು ಲೈಟಿಂಗ್ ಮತ್ತು ಮ್ಯೂಸಿಕ್ ಮೂಡ್ ನಲ್ಲಿ ಡ್ರೈವರ್ ಆರೋಗ್ಯಕ್ಕೆ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಜಿಎಲ್‍ಸಿ 63ಎಸ್ ನ ಮಾಲೀಕರು ಎಎಂಜಿ ಡ್ರೈವರ್ ಪ್ಯಾಕೆಜನ್ನು ಸಹ ಪಡೆಯಬಹುದಾಗಿದೆ.

Most Read Articles

Kannada
English summary
2019 Mercedes-AMG GLC 63 Revealed In New York — Meet The New SUV King Of The Green Hell - Read in Kannada.
Story first published: Thursday, April 18, 2019, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X