ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಸರಣಿಯಲ್ಲಿರುವ ಬಿ‍ಎಸ್ 4 ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಮಂಗಳವಾರ ತಿಳಿಸಿದೆ. ಇದರ ಜೊತೆಗೆ ಇನ್ನು ಕೆಲವೇ ವಾರಗಳಲ್ಲಿ ಬಿ‍ಎಸ್ 4 ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವುದಾಗಿಯೂ ತಿಳಿಸಿದೆ.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಕಂಪನಿಯು ನಿನ್ನೆಯಷ್ಟೆ ತನ್ನ ಬಿ‍ಎಸ್ 6 ಎಂಜಿನ್ ಹೊಂದಿರುವ ಜಿ‍ಎಲ್‍‍ಸಿ ಎಸ್‍‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 52.56 ಲಕ್ಷಗಳಾಗಿದೆ.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಈ ಬಗ್ಗೆ ಮಾತನಾಡಿರುವ ಮರ್ಸಿಡಿಸ್ ಬೆಂಝ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ‍ಇ‍ಒ ಮಾರ್ಟಿನ್ ಶ್ವೆಂಕ್‍‍‍ರವರು, ಹಲವು ದಿನಗಳ ಹಿಂದೆಯೇ ನಾವು ಬಿ‍ಎಸ್ 4 ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದೇವೆ.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಇನ್ನು ಕೆಲವು ಬಿ‍ಎಸ್ 4 ಕಾರುಗಳು ಡೀಲರ್‍‍ಗಳ ಬಳಿಯಿದ್ದು, ಅವುಗಳನ್ನು ಮುಂದಿನ ಕೆಲವು ದಿನಗಳಲ್ಲಿ ಮಾರಾಟ ಮಾಡಲಾಗುವುದು. ಬಿ‍ಎಸ್ 6 ನಿಯಮಗಳ ಗಡುವಿನ ಒಳಗೆ ಬಿ‍ಎಸ್ 4 ಕಾರುಗಳನ್ನು ಮಾರಾಟ ಮಾಡಲಾಗುವುದು ಎಂದು ಹೇಳಿದರು.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಹೊಸ ಬಿಎಸ್ 6 ಮಾಲಿನ್ಯ ನಿಯಮಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ. ಇದಾದ ನಂತರ ಯಾವುದೇ ವಾಹನ ತಯಾರಕ ಕಂಪನಿಗಳು ಬಿ‍ಎಸ್ 4 ವಾಹನಗಳನ್ನು ತಯಾರಿಸುವಂತಿಲ್ಲ. ಯಾವುದೇ ಡೀಲರ್‍‍ಗಳು ಬಿ‍ಎಸ್ 4 ಎಂಜಿನ್ ಹೊಂದಿರುವ ವಾಹನಗಳನ್ನು ಮಾರಾಟ ಮಾಡುವಂತಿಲ್ಲ.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಕಂಪನಿಯು ಕಳೆದ ವರ್ಷವೇ ತನ್ನ ಎಸ್ ಕ್ಲಾಸ್ ಸೆಡಾನ್ ಕಾರ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿತ್ತು. ಮರ್ಸಿಡಿಸ್ ಕಂಪನಿಯು ಬಿ‍ಎಸ್ 4ನಿಂದ ಬಿ‍ಎಸ್ 6ಗೆ ಬದಲಾಗುವುದಕ್ಕೆ ತಯಾರಿರುವುದಾಗಿ ತಿಳಿಸಿದೆ.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಶ್ವೆಂಕ್‍‍ರವರ ಪ್ರಕಾರ, ಮರ್ಸಿಡಿಸ್ ಬೆಂಝ್ ಬಳಸುವ ಹೊಸ ಟೆಕ್ನಾಲಜಿಯಿಂದಾಗಿ ಮರ್ಸಿಡಿಸ್ ಸರಣಿಯಲ್ಲಿರುವ ಬಿ‍ಎಸ್ 6 ಡೀಸೆಲ್ ಎಂಜಿನ್‍‍ಗಳು ಬಿ‍ಎಸ್ 4 ಡೀಸೆಲ್ ಅನ್ನು ಬಳಸಬಹುದಾಗಿದೆ. ಮಾರುಕಟ್ಟೆ ಸ್ಥಿತಿಯ ಬಗ್ಗೆ ಮಾತನಾಡಿದ ಶ್ವೆಂಕ್‍‍ರವರು, 2019ರ ಜುಲೈ ನಂತರ ಗ್ರಾಹಕರ ಖರೀದಿ ಮನಸ್ಥಿತಿಯಲ್ಲಿ ಬದಲಾವಣೆಗಳಾಗಿವೆ ಎಂದು ಹೇಳಿದರು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಚುನಾವಣೆಗಳು, ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ಹಾಗೂ ಬಿಎಸ್ 4ನಿಂದ ಬಿಎಸ್ 6ಗೆ ಬದಲಾಗುವುದು ಮುಂತಾದ ಕಾರಣಗಳಿಗಾಗಿ ಮಾರಾಟವು ಕುಸಿತವಾಗಿತ್ತು. ಸರ್ಕಾರವು ಕೈಗೊಂಡ ಕ್ರಮಗಳಿಂದಾಗಿ, ಮಾರಾಟವು ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

2018ಕ್ಕೆ ಹೋಲಿಸಿದರೆ 2019ರಲ್ಲಿ ಮರ್ಸಿಡಿಸ್ ಕಂಪನಿಯ ಮಾರಾಟವು ಕುಸಿದಿದೆ. 2018ರಲ್ಲಿ 15,538 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿತ್ತು. ಉಳಿದಿರುವ ಕೆಲವು ವಾರಗಳಲ್ಲಿ ನಾವು ಹೆಚ್ಚು ಪ್ರಮಾಣದ ಕಾರುಗಳನ್ನು ಮಾರಾಟ ಮಾಡಲು ಆಗುವುದಿಲ್ಲ ಎಂದು ಹೇಳಿದರು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಹೊಸ ಜಿಎಲ್‌ಸಿ ಎಸ್‍ಯುವಿಯ ಬಗ್ಗೆ ಮಾತನಾಡಿದ ಶ್ವೆಂಕ್‍‍ರವರು, ಹೊಸ ಜಿಎಲ್‌ಸಿಯ ಬಿಡುಗಡೆಯು ದೇಶಿಯ ಮಾರುಕಟ್ಟೆಗೆ ನಮ್ಮ ಕಂಪನಿಯು ಬಿಡುಗಡೆ ಮಾಡಲಿರುವ ಕಾರುಗಳ ಬಗ್ಗೆ ತಿಳಿಸುತ್ತದೆ ಎಂದು ಹೇಳಿದರು.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಜಿಎಲ್‍‍ಸಿ ಮರ್ಸಿಡಿಸ್ ಬೆಂಜ್ ಭಾರತದ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿಗಳಲ್ಲಿ ಒಂದಾಗಿದೆ. ಬಿಡುಗಡೆಯಾದಾಗಿನಿಂದ 7,000 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹೊಸ ತಲೆಮಾರಿನ ಜಿಎಲ್‌ಸಿಯಲ್ಲಿ ಎಂಬಕ್ಸ್ ಅನ್ನು ಅಳವಡಿಸಲಾಗಿದೆ ಎಂದು ಶ್ವೆಂಕ್‍‍ರವರು ಹೇಳಿದರು.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಈ ಎಸ್‍‍ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಎಂಜಿನ್ ಹೊಂದಿರುವ ಜಿಎಲ್‌ಸಿ 200 ಎಸ್‍‍ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.52.75 ಲಕ್ಷಗಳಾದರೆ, ಡೀಸೆಲ್ ಎಂಜಿನ್ ಹೊಂದಿರುವ ಜಿಎಲ್‌ಸಿ 220 ಡಿ ಎಸ್‍‍ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 57.75 ಲಕ್ಷಗಳಾಗಿದೆ.

ಬಿ‍ಎಸ್ 4 ಕಾರುಗಳನ್ನು ಸ್ಥಗಿತಗೊಳಿಸಲಿದೆ ಮರ್ಸಿಡಿಸ್ ಬೆಂಝ್

ಭಾರತದಲ್ಲಿಯೇ ತಯಾರಿಸಲಾಗಿರುವ ಸರಣಿಯ ಎಸ್‍‍ಯುವಿಗಳಲ್ಲಿಯೇ ಹೆಚ್ಚಿನ ಟೆಕ್ನಾಲಜಿಯನ್ನು ಜಿಎಲ್‌ಸಿ ಎಸ್‍‍ಯುವಿಯಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ ಈ ಎಸ್‍‍ಯುವಿಯಲ್ಲಿ ಆಕ್ಟಿವ್ ಬ್ರೇಕಿಂಗ್ ಅಸಿಸ್ಟ್ ಅಳವಡಿಸಲಾಗಿದೆ.

Most Read Articles

Kannada
English summary
Mercedes Benz bs4 models to be discontinued in few weeks time - Read in Kannada
Story first published: Wednesday, December 4, 2019, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X