ಆಡಿ ಕ್ಯೂ3 ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ

ಶಾಂಘೈ 2019 ರ ಮೋಟಾರ್ ಶೋನಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ ಕಾರಿನ ಹೊಸ ಮಾದರಿಯನ್ನು ಅನಾವರಣಗೊಳಿಸಿದ್ದು, ಜಾಗತಿಕ ಮಾರುಕಟ್ಟೆಗೆ ಮುಂದಿನ ಕೆಲವೇ ದಿನಗಳಲ್ಲಿ ಲಗ್ಗೆಯಿಡುವ ಸುಳಿವು ನೀಡಿದೆ.

ಆಡಿ ಕ್ಯೂ3 ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ

ಆಡಿ ಕ್ಯೂ3 ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ

ಮರ್ಸಿಡಿಸ್ ಬೆಂಝ್ ಜಿಎಲ್‍ಬಿ ಕಾರು ಮುಂಬರುವ ಜಿಎಲ್ಎ ಫೇಸ್‍ಲಿಫ್ಟ್ ಮತ್ತು ಇತ್ತೀಚಿಗೆ ಬಿಡುಗಡೆಗೊಂಡ ಜಿಎಲ್‍ಸಿ ಎಸ್‍ಯುವಿ ಗಳ ನಡುವೆ ಇರಲಿದೆ. ಇದು ಮರ್ಸಿಡಿಸ್ ಬೆಂಝಿನ ಬ್ರಾಂಡ್ ಎಂಎಫ್ಎ ಅರ್ಕಿಟೆಕ್ಚರ್ ನಲ್ಲಿ ಬರುತ್ತಿರುವ ಎಂಟನೇ ಮಾದರಿಯಾಗಿದೆ. ಎ ಕ್ಲಾಸ್ ಹ್ಯಾಚ್‍ಬ್ಯಾಕ್ ಮತ್ತು ಸೆಡಾನ್, ಬಿ-ಕ್ಲಾಸ್, ಸಿಎಲ್ಎ , ಸಿಎಲ್ಎ ಶೂಟಿಂಗ್ ಬ್ರೇಕ್ , ಜಿಎಲ್ಎ ಮತ್ತು ಚೈನಾ ಸ್ಪೆಸಿಫಿಕ್ ಎ ಕ್ಲಾಸ್ ಲಾಂಗ್ ವ್ಹೀಲ್ ಬೇಸ್ ಸೆಡಾನ್ ಇದೇ ಪ್ಲಾಟ್ ಫಾರ್ಮ್ ನಲ್ಲಿರುವ ಇತರ ಮಾದರಿಯ ಕಾರುಗಳಾಗಿವೆ.

ಮರ್ಸಿಡೆಸ್ ಬೆಂಝ್ ಜಿಎಲ್‍ಬಿ 4,634 ಎಂಎಂ ಉದ್ದವಿದ್ದು, 1,890 ಎಂಎಂ ಅಗಲ ಮತ್ತು 1,900 ಎಂಎಂ ಎತ್ತರ ಹೊಂದಿದೆ. ಜಿಎಲ್‍ಬಿ ಕಾನ್ಸೆಪ್ಟ್ ನ ವ್ಹೀಲ್ ಬೇಸ್ 2,829 ಎಂಎಂ ಇದ್ದು, ಜಿಎಲ್ಎ ಕಾರಿಗಿಂತ 130 ಎಂಎಂ ಹೆಚ್ಚು ಉದ್ದವನ್ನು ಹೊಂದಿದೆ.

ಆಡಿ ಕ್ಯೂ3 ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ

ಎಲ್ಲಾ ಆಯಾಮಗಳಿಂದ ನೋಡಿದರೆ ಜಿಎಲ್‍ಬಿ ಕಾನ್ಸೆಪ್ಟ್ ಬಾಕ್ಸಿ ಡಿಸೈನ್ ಹೊಂದಿದ್ದು, ಮೂರು ಸಾಲುಗಳ ಸೀಟುಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಇನ್ನೂ ಡಿಸೈನ್ ನ ಬಗ್ಗೆ ಹೇಳುವುದಾದರೆ, ಜಿಎಲ್‍ಬಿ ಕಾನ್ಸೆಪ್ಟ್ ಮರ್ಸಿಡೆಸ್ ಬೆಂಝಿನ ಇತ್ತೀಚಿನ ಸ್ಟೈಲಿಂಗ್ ಫಿಲಾಸಫಿಯನ್ನು ಹೊಂದಿದೆ. ಲಾರ್ಜ್ ರೇಡಿಯೆಟರ್ ಗ್ರಿಲ್ ಅಪ್‍ಫ್ರಂಟ್, ಸ್ಕ್ವೇರ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ರೇರ್ ಫ್ಯಾಸ್ಕಿಯಾ, ಎಲ್ಇ ಡಿ ಟೇಲ್ ಲೈಟ್ಸ್ ಮತ್ತು ಲಾರ್ಜ್ ಪ್ಲೆರ್ ವ್ಹೀಲ್ ಆರ್ಕ್ ಗಳನ್ನು ಹೊಂದಿದೆ. ಜಿಎಲ್‍ಬಿ ಕಾನ್ಸೆಪ್ಟ್ ಪ್ರೊಡಕ್ಷನ್ ರೆಡಿ ಬಾಡಿ ಪ್ಯಾನೆಲ್ ಗಳ ಜೊತೆ ಬರುವುದಾಗಿ ಮರ್ಸಿಡೆಸ್ ಬೆಂಝ್ ಹೇಳಿದ್ದರೂ ಅದು ವಿಭಿನ್ನ ವ್ಹೀಲ್, ಟ್ರ್ಯಾಕ್ ಮತ್ತು ರಿಮ್ ಡಿಸೈನ್‍ಗಳನ್ನು ಒಳಗೊಂಡಿದೆ.

ಆಡಿ ಕ್ಯೂ3 ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ

ಮರ್ಸಿಡಿಸ್ ಬೆಂಝ್ ಜಿಎಲ್‍ಬಿ ಕಾನ್ಸೆಪ್ಟ್ ಕಾರು ಎ ಕ್ಲಾಸ್ ಫ್ಯಾಮಿಲಿಯಲ್ಲಿರುವ ಹಲವು ವಿನ್ಯಾಸಗಳನ್ನುಒಳಗೊಂಡಿದೆ. ಇವುಗಳಲ್ಲಿ ಇಂಟಿರಿಯರ್‍‍ನಲ್ಲಿರುವ ಡ್ಯುಯೆಲ್ ಡಿಸ್ ಪ್ಲೇ ಹೊಂದಿರುವ ಸ್ಟಿಯರಿಂಗ್ ವ್ಹೀಲ್, ಏಯರ್ ಕಾಂವೆಂಟ್ಸ್ ಮತ್ತು ಸೆಂಟರ್ ಕಾಂಸೋಲ್‍ಗಳನ್ನು ಇತ್ತೀಚಿನ ಎ ಕ್ಲಾಸ್ ಜನರೇಶನ್‍ನಿಂದ ಪಡೆಯಲಾಗಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‍ಬಿ ಕಾನ್ಸೆಪ್ಟ್ ಸ್ಟಾಂಡರ್ಡ್ 5 ಸೀಟಿನ ಮಾದರಿಯಲ್ಲಿ ಲಭ್ಯವಿದೆ. ಇದರ ಜೊತೆಗೆ, 3 ಹೆಚ್ಚುವರಿ ಸಾಲು ಹೊಂದಿರುವ 7 ಸೀಟಿನ ಮಾದರಿಯು ಸಹ ಲಭ್ಯವಿದ್ದು ಎರಡನೇ ಸಾಲನ್ನು 40:20:40 ಅನುಪಾತದಲ್ಲಿ ಫೊಲ್ಡ್ ಮಾಡಬಹುದಾಗಿದೆ. ಮಧ್ಯದ ಸಾಲನ್ನು 140 ಎಂಎಂ ನಷ್ಟು ಮುಂದೆ ತಳ್ಳಬಹುದಾಗಿದ್ದು, ಮೂರನೇ ಸಾಲಿನಲ್ಲಿ ಕೂರುವವರಿಗೆ ಹೆಚ್ಚುವರಿ ಜಾಗ ಸಿಗಲಿದೆ.

MOST READ: ಜಗತ್ತಿನ ಅತಿ ದುಬಾರಿ ಕಾರ್ ಕೀ ಬೆಲೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

ಆಡಿ ಕ್ಯೂ3 ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ

ಮರ್ಸಿಡಿಸ್ ಬೆಂಝ್ ಜಿಎಲ್‍ಬಿ 221 ಬಿಹೆಚ್‍ಪಿ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯವಿರುವ 2.0 ಲೀಟರ್ ನಾಲ್ಕು ಸಿಲಿಂಡರಿನ ಟರ್ಬೊ ಚಾರ್ಜ್ ಪೆಟ್ರೊಲ್ ಎಂಜಿನ್ ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿಎಲ್‍ಬಿಯ ಡೀಸೆಲ್ ಅವೃತ್ತಿಯು ಸಹ ದೊರೆಯಲಿದ್ದು, ಇದರ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿವೆ. ಮರ್ಸಿಡಿಸ್ ಬೆಂಝ್ ಜಿಎಲ್‍ಬಿ ಮುಂಬರುವ ದಿನಗಳಲ್ಲಿ ಎಎಂಜಿ ಅವೃತ್ತಿಯನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಶಾಂಘೈ ನಲ್ಲಿ ಅನಾವರಣಗೊಂಡ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ ಕಾನ್ಸೆಪ್ಟ್ ಕಾರಿನ ಉತ್ಪಾದನೆಯು ಈ ವರ್ಷದಲ್ಲಿ ಶುರುವಾಗುವ ಸಾಧ್ಯತೆ ಇದೆ. ಉತ್ಪಾದನೆಯಾಗಲಿರುವ ಮರ್ಸಿಡಿಸ್ ಬೆಂಝ್ ಜಿಎಲ್‍ಬಿ ಕಾನ್ಸೆಪ್ಟ್ ಕಾರನ್ನು 2019ರ ಫ್ರಾಂಕ್‍ಫರ್ಟ್ ಆಟೊ ಶೋ ನಲ್ಲಿಅನಾವರಣಗೊಳಿಸಲಾಗುವುದು. ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಮರ್ಸಿಡಿಸ್ ಬೆಂಝ್ ಆಡಿ ಕ್ಯೂ3, ಬಿಎಂಡಬ್ಲ್ಯು ಎಕ್ಸ್1 ಮತ್ತು ವೊಲ್ವೊ ಎಕ್ಸ್ ಸಿ40 ಕಾರುಗಳಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆ ಇದೆ.

Most Read Articles

Kannada
English summary
Mercedes-Benz GLB Concept Unveiled — To Rival The Audi Q3 - Read in Kannada.
Story first published: Tuesday, April 16, 2019, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X