ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಹೊಸ ಜಿ‍ಎಲ್‍‍ಬಿ ಕಾರ್ ಅನ್ನು ಅನಾವರಣಗೊಳಿಸಿದೆ. ಹೊಸ ಕಾರು ಐದು ಹಾಗೂ ಏಳು ಸೀಟಿನ ಎರಡು ಮಾದರಿಗಳಲ್ಲಿ ಮಾರಾಟವಾಗಲಿದೆ. ಗಾತ್ರದಲ್ಲಿ ಚಿಕ್ಕದಾಗಿರುವ ಜಿ‍ಎಲ್‍ಎ ಕಾರಿಗಿಂತ, ಈ ಕಾರು ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಉತ್ಪಾದನಾ ಹಂತದಲ್ಲಿರುವ ಈ ಕಾರ್ ಅನ್ನು ಎಕ್ಸ್247 ಎಂಬ ಕೋಡ್ ಹೆಸರಿನಿಂದ ಕರೆಯಲಾಗುವುದು. ಈ ಕಾರು ಏಪ್ರಿಲ್‍‍ನಲ್ಲಿ ಶಾಂಘೈ ಮೋಟಾರ್ ಶೋ ನಲ್ಲಿ ಅನಾವರಣಗೊಳಿಸಲಾಗಿದ್ದ ಕಾನ್ಸೆಪ್ಟ್ ಜಿ‍ಎಲ್‍‍ಬಿ ಕಾರಿನಂತೆಯೇ ಇದೆ. ಈ ಕಾರು, ಜಿ ಕ್ಲಾಸ್‍‍ನಲ್ಲಿದಂತಹ ಸ್ಕ್ವೇರ್, ಆಂಗ್ಯುಲರ್ ಸ್ಟೈಲ್ ಗಳ ಜೊತೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಒವರ್ ಹ್ಯಾಂಗ್, ಮಲ್ಟಿಬೀಮ್ ಎಲ್‍ಇ‍‍ಡಿಗಳ ಜೊತೆಗೆ ಹೊಸ ಹೆಡ್‍‍ಲೈಟ್ ವಿನ್ಯಾಸಗಳನ್ನು ಒಳಗೊಂಡಿದೆ.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಮರ್ಸಿಡಿಸ್‍‍ನ ಎಂ‍ಎಫ್‍ಎ 2 ಪ್ಲಾಟ್‍‍ಫಾರಂ ಮೇಲೆ ಆಧಾರಿತವಾಗಿರುವ ಜಿ‍ಎಲ್‍‍ಬಿ ಕಾರಿನ ಮುಂಭಾಗದಲ್ಲಿ ಮ್ಯಾಕ್‍‍ಫರ್ಸನ್ ಹಾಗೂ ಹಿಂಭಾಗದಲ್ಲಿ ಮಲ್ಟಿ ಲಿಂಕ್ ಸಸ್ಪೆಂಷನ್‍‍ಗಳಿದ್ದು, ಇವುಗಳ ಜೊತೆಗೆ ಅಡಾಪ್ಟಿವ್ ಡ್ಯಾಂಪಿಂಗ್‍‍ಗಳನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಹೊಸ ಜಿ‍ಎಲ್‍‍ಬಿ ಕಾರು 4,634 ಎಂಎಂ ಉದ್ದವಿದ್ದು, 1,834 ಎಂಎಂ ಅಗಲ ಹಾಗೂ 1,658 ಎಂಎಂ ಎತ್ತರವನ್ನು ಹೊಂದಿದೆ. ಜಿ‍ಎಲ್‍‍ಸಿ ಕಾರಿಗಿಂತ 21 ಎಂಎಂ ಹೆಚ್ಚು ಉದ್ದ, 56 ಎಂಎಂ ಹೆಚ್ಚು ಅಗಲ ಹಾಗೂ 20 ಎಂಎಂ ಹೆಚ್ಚು ಎತ್ತರವನ್ನು ಹೊಂದಿದ್ದು, ಈ ಸೆಗ್‍‍ಮೆಂಟಿನಲ್ಲಿರುವ ಕಾರುಗಳಲ್ಲಿ ಹೆಚ್ಚಿನ ಗಾತ್ರವನ್ನು ಹೊಂದಿದೆ.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಇದರಲ್ಲಿರುವ ವ್ಹೀಲ್ ಬೇಸ್‍‍ಗಳು 2,829 ಎಂಎಂ ಗಾತ್ರವನ್ನು ಹೊಂದಿವೆ. ಮರ್ಸಿಡಿಸ್ ಕಂಪನಿಯ ಪ್ರಕಾರ 5 ಸೀಟುಗಳಿದ್ದಾಗ 1,035 ಎಂಎಂ ಫ್ರಂಟ್ ಸೀಟ್ ಹೆಡ್‍‍ರೂಂ ಹಾಗೂ 967 ಎಂಎಂ ರೇರ್ ಲೆಗ್‍‍‍ರೂಂ ಗಾತ್ರವನ್ನು ಹೊಂದಲಿದೆ. ಇಂಟಿರಿಯರ್‍‍ನಲ್ಲಿ ವಿಭಿನ್ನವಾಗಿ ವಿನ್ಯಾಸಗೊಳಿಸಿರುವ ಡ್ಯಾಶ್‍‍‍ಬೋರ್ಡ್ ಹೊಂದಿದ್ದು, ಈ ಡ್ಯಾಶ್‍‍ಬೋರ್ಡ್‍‍ನಲ್ಲಿ ಅಲ್ಯುಮಿನಿಯಂ ಲುಕ್ ಹೊಂದಿರುವ ಟ್ಯೂಬುಲರ್ ಲೋವರ್ ಎಲಿಮೆಂಟ್‍‍ಗಳನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಇಂಟಿರಿಯರ್‍‍ನಲ್ಲಿರುವ ಮರ್ಸಿಡಿಸ್ ಕಂಪನಿಯ ವೈಡ್ ಸ್ಕ್ರೀನ್ ಕಾಕ್‍‍ಪಿಟ್‍‍ನಲ್ಲಿ ಸಿಂಗಲ್ ಡಿಜಿಟಲ್ ಪ್ಯಾನೆಲ್ ಹೌಸಿಂಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಇನ್ಪೋಟೇನ್‍‍ಮೆಂಟ್ ಫಂಕ್ಷನ್‍‍ಗಳನ್ನು ಅಳವಡಿಸಲಾಗಿದೆ. ಇದನ್ನು ಹೊಸ ಆವೃತ್ತಿಯ ಎಂ‍‍ಬಕ್ಸ್ ಇಂಟರ್‍‍ಫೇಸ್ ನಿಯಂತ್ರಿಸುತ್ತದೆ.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಕಾರಿನಲ್ಲಿ 7 ಸೀಟುಗಳಿದ್ದಾಗ ಹಿಂಬದಿಯಲ್ಲಿರುವ 2 ಹೆಚ್ಚುವರಿ ಸೀಟುಗಳನ್ನು ಬೂಟ್ ಫ್ಲೋರ್‍‍‍ಗೆ ಮಡುಚಬಹುದಾಗಿದೆ. ಮರ್ಸಿಡಿಸ್ ಜಿ‍ಎಲ್‍‍ಬಿ ಸರಣಿಯಲ್ಲಿ ನಾಲ್ಕು ಮಾದರಿಗಳಿದ್ದು, ಈ ಸರಣಿಯಲ್ಲಿರುವ ಟಾಪ್ ಎಂಡ್ ಡೀಸೆಲ್ ಕಾರ್ ಅನ್ನು ಫ್ರಂಟ್ ವ್ಹೀಲ್ ಡ್ರೈವ್‍‍ನೊಂದಿಗೆ ಸ್ಟಾಂಡರ್ಡ್ ಆಗಿ ನೀಡಲಾಗುವುದು.

MOST READ: ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಎರಡು ವೇರಿಯಂಟ್‍‍ಗಳನ್ನು ಹಾಗೂ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುವ ಒಂದು ವೇರಿಯಂಟ್ ಕಾರುಗಳನ್ನು ಮಾರಾಟ ಮಾಡಲಾಗುವುದು. ಭಾರತದಲ್ಲಿ ಯಾವ ಎಂಜಿನ್ ಹಾಗೂ ಡ್ರೈವ್‍‍ಟ್ರೇನ್ ಹೊಂದಿರುವ ಕಾರಗಳನ್ನು ಮಾರಾಟ ಮಾಡಲಾಗುವುದು ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಪೆಟ್ರೋಲ್ ಮಾದರಿಯ ಜಿ‍ಎಲ್‍‍ಬಿ200 ಕಾರಿನಲ್ಲಿ ಟರ್ಬೊ‍‍‍ಚಾರ್ಜ್ಡ್ 1.3 ಲೀಟರಿನ ಎಂಜಿನ್‍‍ಯಿದ್ದು 163 ಬಿ‍‍ಹೆಚ್‍‍ಪಿಯನ್ನು ಉತ್ಪಾದಿಸಿದರೆ, 2.0 ಲೀಟರಿನ ಟರ್ಬೊ‍‍ಚಾರ್ಜ್ಡ್ ಎಂಜಿನ್‍‍ಯಿರುವ ಜಿ‍ಎಲ್‍‍ಬಿ 250 ಕಾರು, 221 ಬಿ‍‍ಹೆಚ್‍‍ಪಿಯನ್ನು ಉತ್ಪಾದಿಸುತ್ತದೆ. 2.0 ಲೀಟರಿನ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುವ ಜಿ‍ಎಲ್‍‍ಬಿ200ಡಿ, 150 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯಿತು 12 ರೂ ಲಕ್ಷ ಮೌಲ್ಯದ ಡುಕಾಟಿ 950 ಬೈಕ್

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಜಿ‍ಎಲ್‍‍ಬಿ 220ಡಿ 4ಮ್ಯಾಟಿಕ್ ಕಾರು 190 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ. 7 ಸ್ಪೀಡಿನ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಜಿ‍ಎಲ್‍‍ಬಿ 200 ಕಾರಿನಲ್ಲಿ ಸ್ಟಾಂಡರ್ಡ್ ಆಗಿ ನೀಡಲಾಗುವುದು. ಜಿ‍ಎಲ್‍‍ಬಿ 250, ಜಿ‍ಎಲ್‍‍ಬಿ 200ಡಿ, ಜಿ‍ಎಲ್‍‍ಬಿ 220ಡಿ 4ಮ್ಯಾಟಿಕ್‍‍ಗಳಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೀಡಲಾಗುವುದು.

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಇನ್ನುಳಿದ ಮಾದರಿಗಳಾದ 4 ಮ್ಯಾಟಿಕ್ ಹೊಂದಿರುವ ಎ‍ಎಂ‍‍ಜಿ ಜಿ‍ಎಲ್‍‍ಬಿ 35 ಹಾಗೂ ಜಿ‍ಎಲ್‍‍ಬಿ 45 ಮಾದರಿಗಳನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಾಗುವುದು. ಫೋರ್ ವ್ಹೀಲ್ ಡ್ರೈವ್‍‍ನ ಜಿ‍ಎಲ್‍‍ಬಿ 220ಡಿ 4 ಮ್ಯಾಟಿಕ್ ಕಾರ್ ಅನ್ನು ಆಫ್ ರೋಡ್ ಎಂಜಿನಿಯರಿಂಗ್ ಪ್ಯಾಕೇಜ್‍‍ನೊಂದಿಗೆ ಮಾರಾಟ ಮಾಡಲಾಗುವುದು.

MOST READ: 22 ಮೋಟಾರ್ಸ್ ಜೊತೆಗೂಡಿ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ ಕೇಮ್ಕೊ

ಅನಾವರಣಗೊಂಡ ಮರ್ಸಿಡಿಸ್ ಜಿ‍ಎಲ್‍‍ಬಿ ಎಸ್‍‍ಯು‍‍ವಿ

ಇದರಲ್ಲಿ ಮಲ್ಟಿ ಬೀಮ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಹಿಲ್ ಅಸಿಸ್ಟೆನ್ಸ್ ಗಳ ಜೊತೆಗೆ ಹೆಚ್ಚುವರಿಯಾಗಿ ಆಫ್ ರೋಡ್ ಡ್ರೈವಿಂಗ್ ಮೋಡ್‍‍ಗಳನ್ನು ನೀಡಲಾಗಿದ್ದು, ಇವುಗಳಲ್ಲಿ ಅಳವಡಿಸಲಾಗಿರುವ ಇನ್ಫೋಟೇನ್‍‍ಮೆಂಟ್ ಡಿಸ್‍‍ಪ್ಲೇ ಗ್ರೇಡಿಯಂಟ್, ಇನ್‍‍‍ಕ್ಲೈನ್ ಆಂಗಲ್ ಹಾಗೂ ವಿವಿಧ ಟೆಕ್ನಿಕಲ್ ಅಂಶಗಳನ್ನು ತೋರಿಸಲಿದೆ.

Most Read Articles

Kannada
English summary
Mercedes-Benz GLB SUV Revealed - Read in kannada
Story first published: Thursday, June 13, 2019, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X