2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಮರ್ಸಿಡಿಸ್ ಬೆಂಝ್ ಇಂಡಿಯಾ ತನ್ನ ಹೊಸ ತಲೆಮಾರಿನ ಜಿಎ‍ಲ್ಇ ಎಸ್‍‍ಯು‍ವಿಗಾಗಿ ಬುಕ್ಕಿಂಗ್‍‍ಗಳನ್ನು ಸ್ವೀಕರಿಸಲು ಪ್ರಾರಂಭಿಸಿರುವುದಾಗಿ ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಮುಂದಿನ ವರ್ಷದ ಫೆಬ್ರವರಿ 5ರಿಂದ ಆಟೋ ಎಕ್ಸ್ ಪೋ ಪ್ರಾರಂಭವಾಗಲಿದ್ದು, ಇದಕ್ಕೂ ಮೊದಲೇ ಹೊಸ 2020ರ ಬೆಂಝ್ ಜಿಎಲ್ಇ ಎಸ್‍‍ಯು‍ವಿಯ ಬೆಲೆಯನ್ನು ಪ್ರಕಟಿಸುವುದಾಗಿ ಕಂಪನಿಯು ತಿಳಿಸಿದೆ.

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಜಿ‍ಎಲ್‍ಇ ಎಸ್‍‍ಯುವಿ ಈ ಮೊದಲು ಮರ್ಸಿಡಿಸ್ ಕಂಪನಿಯ ಎಂ‍ಎಲ್ ಕ್ಲಾಸ್ ಸರಣಿಯಲ್ಲಿತ್ತು. ಹೊಸ ಬೆಂಝ್ ಜಿಎಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಹೊಂದಿದ್ದು, ಮೊದಲ ತಲೆಮಾರಿನ ಜಿಎಲ್ಇ ಎಸ್‍‍ಯು‍ವಿಯ ಶೈಲಿಯಲ್ಲಿ ಮುಂದುವರೆದಿದೆ. ಈ ಎಸ್‍‍ಯುವಿಯು ಹೆಚ್ಚಿನ ಕ್ಯಾಬಿನ್ ಸ್ಪೇಸ್ ಹೊಂದಿದ್ದು, ಎಸ್‍‍ಯು‍ವಿಯ ಉದ್ದ ಮತ್ತು ವ್ಹೀಲ್‍‍ಬೇಸ್‍‍ಗಳನ್ನು 80 ಮಿ.ಮೀನಷ್ಟು ಹೆಚ್ಚಿಸಿದೆ.

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಹೊಸ ಮರ್ಸಿಡಿಸ್ ಜಿ‍ಎಲ್‍ಇ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ ಪ್ರತ್ಯೇಕವಾಗಿ 12.3 ಇಂಚಿನ ಎರಡೂ ಸ್ಕ್ರೀನ್‍‍ಗಳನ್ನು ಹೊಂದಿರಲಿದೆ. ಸೆಂಟರ್ ಕಂಸೋಲ್‍‍ನಲ್ಲಿ ಟಚ್‍‍ಪ್ಯಾಡ್ ಹಾಗೂ ಇಂಟಿಗ್ರೇಟೆಡ್ ಗ್ರಾಬ್ ಹ್ಯಾಂಡಲ್‍‍ಗಳಿರಲಿವೆ.

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಹೊಸ ಎಸ್‍ಯುವಿಯ ಕ್ಯಾಬಿನ್‍‍‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍‍ನಲ್ಲಿ ಕ್ಲೈಮೆಟ್ ಕಂಟ್ರೋಲ್, ಎಸಿ ವೆಂಟ್‍‍ಗಳಿವೆ. ಮರ್ಸಿಡಿಸ್ ಕಂಪನಿಯು ಹೊಸ ತಲೆಮಾರಿನ ಜಿ‍ಎಲ್‍ಇಯನ್ನು ಭಾರತದಲ್ಲಿ ಬಿಎಸ್ 6 ಎಂಜಿನ್‍‍‍ನೊಂದಿಗೆ ಬಿಡುಗಡೆಗೊಳಿಸಲಿದೆ.

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಜಿಎಲ್ಇ ಎಸ್‍‍ಯು‍ವಿಯು 3.0 ಲೀಟರ್ 400ಡಿ ಆರು ಸಿಲಿಂಡರ್ ಡೀಸೆಲ್ ಎಂಜಿನ್ 3,600 - 4,000 ಆರ್‍‍ಪಿ‍ಎಂನಲ್ಲಿ 330 ಬಿ‍ಹೆಚ್‍ಪಿ ಪವರ್ ಮತ್ತು 1,200 - 3,000 ಆರ್‍‍ಪಿಎಂನಲ್ಲಿ 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

2020ರ ಬೆಂಝ್ ಜಿಎಲ್ಇ ಎಸ್‍‍ಯು‍ವಿಯ ಮತ್ತೊಂದು ಡೀಸೆಲ್ ರೂಪಾಂರವು 2.0 ಲೀಟರ್ 300ಡಿ, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ 4,200 ಆರ್‍‍ಪಿಎಂನಲ್ಲಿ 245 ಬಿ‍ಹೆಚ್‍‍ಪಿ ಪವರ್ ಮತ್ತು 1,600 - 2,400 ಆರ್‍‍ಪಿಎಂನಲ್ಲಿ 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಜಿಎಲ್ಇ ಎಸ್‍‍ಯು‍ವಿಯ ಪೆಟ್ರೋಲ್ ರೂಪಾಂತರವು 3.0 ಲೀಟರ್ ಇನ್‍-ಲೈನ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ 5,500 - 6,100 ನಲ್ಲಿ 367 ಬಿ‍ಹೆಚ್‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಮಾದರಿಯ ಎಂಜಿನ್‍ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಮರ್ಸಿಡಿಸ್ ಬೆಂಝ್ ಇಂಡಿಯಾ ಮೂರನೇ ತಲೆಮಾರಿನ ಜಿಎಲ್ಇ ಎಸ್‍‍ಯು‍ವಿಯನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ದೆಹಲಿಯ ಎನ್‍‍ಸಿಆರ್ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಬೆಂಝ್ ಕಾರುಗಳನ್ನು ವಿತರಸಿದೆ. ಮುಂಬೈ, ಪುಣೆ, ಗುಜರಾತ್, ಕೋಲ್ಕತಾ, ದೆಹಲಿ ಎನ್‍‍ಸಿಆರ್ ಮತ್ತು ಪಂಜಾಬ್‍‍ನಲ್ಲಿ ಒಂದೇ ದಿನದಲ್ಲಿ ಧಂತೇರಸ್ ಪ್ರಯುಕ್ತ 600ಕ್ಕೂ ಹೆಚ್ಚು ವಾಹನಗಳನ್ನು ವಿತರಿಸಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

2020ರ ಬೆಂಝ್ ಜಿಎಲ್ಇ ಬುಕ್ಕಿಂಗ್ ಪ್ರಾರಂಭ

ಹೊಸ ಬೆಂಝ್ ಜಿಎ‍ಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಹೊ‍ಸ ಜಿಎಲ್ಇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 5, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ 7 ಮತ್ತು ವೋಲ್ವೋ ಎಕ್ಸ್‌ಸಿ 90 ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2020 Mercedes-Benz GLE India bookings open - Read in Kannada
Story first published: Monday, October 28, 2019, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X