ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಜರ್ಮನಿಯ ವಾಹನ ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ವಿ-ಕ್ಲಾಸ್ ಸರಣಿಯ ಹೊಸ ಟಾಪ್ ಎಂಡ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಎಲೈಟ್ ಐಷಾರಾಮಿ ಎಂಪಿವಿಯು ದೇಶಿಯ ಮಾರುಕಟ್ಟೆಯಲ್ಲಿ ನವೆಂಬರ್ 7ರಂದು ಬಿಡುಗಡೆಯಾಗಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ರೇಂಜ್-ಟಾಪಿಂಗ್ ರೂಪಾಂತರವು ಈ ವರ್ಷದ ಆರಂಭದಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲಾದ ಹೊಸ ಫೇಸ್‍‍ಲಿಫ್ಟ್ ವಿ-ಕ್ಲಾಸ್ ಮಾದರಿಯಂತೆ ಇರಲಿದೆ ಎಂದು ನಿರೀಕ್ಷಿಸಬಹುದು. ಪ್ರೀ-ಫೇಸ್‍‍ಲಿಫ್ಟ್ ವಿ-ಕ್ಲಾಸ್ ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ ರೂ.68.4 ಲಕ್ಷ ಆರಂಭಿಕ ಬೆಲೆಯೊಂದಿಗೆ ಮಾರಾಟ ಮಾಡಲಾಯಿತು. ಕಂಪನಿಯು ಮುಂಬರುವ ಟಾಪ್-ಸ್ಪೆಕ್ ಮಾದರಿಯ ಬೆಲೆ ಭಾರತೀಯ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.90 ಲಕ್ಷಗಳಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ವಿ-ಕ್ಲಾಸ್ ಎಲೈಟ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವಾಗ ಲಾಂಗ್ ವ್ಹೀಲ್ ಬೇಸ್ ಮತ್ತು ಹೆಚ್ಚುವರಿ ಉದ್ದದ ವ್ಹೀಲ್ ಬೇಸ್ ಅನ್ನು ನೀಡಬಹುದು. ಸ್ಟ್ಯಾಂಡರ್ಡ್ ಮಾದರಿಯ ವಿನ್ಯಾಸವನ್ನು ಹೊಂದಿದೆ. ನವೀಕರಿಸಿದ ಹೆಡ್‍‍ಲ್ಯಾಂಪ್‍‍ಗಳು, ಬಂಪರ್ ಮತ್ತು ಗ್ರಿಲ್ ವಿನ್ಯಾಸವನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಕಾರಿನ ಇಂಟಿರಿಯರ್‍‍ನಲ್ಲಿ ಟರ್ಬೈನ್ ಶೈಲಿಯ ಏರ್‍‍ವೆಂಟ್ಸ್ ಮತ್ತು ದೊಡ್ಡ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿರುವ ಹೊಸ ಡ್ಯಾಶ್‍‍ಬೋರ್ಡ್ ಅನ್ನು ಹೊಂದಿರಲಿದೆ. ಕಾರಿನಲ್ಲಿ ನಾಲ್ಕು ಸೀಟ್ ಮತ್ತು ಏಳು ಸೀಟ್‍‍ಗಳ ಆಯ್ಕೆಯನ್ನು ಹೊಂದಿರುತ್ತದೆ. ಆದರೆ ಪ್ರೀಮಿಯಂ ಗುಣಮಟ್ಟದ ಸಾಫ್ಟ್ ಟಚ್ ವಸ್ತುಗಳಿಂದ ಸೀಟ್ ಅನ್ನು ತಯಾರಿಸಿದೆ ಮತ್ತು ಲೆದರ್ ಸೀಟ್‍ಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಮುಂಬರುವ ಮಾದರಿಯಲ್ಲಿ ಕಂಪನಿಯು ಹೆಚ್ಚಿನ ಗ್ರಾಹಕರ ಆಯ್ಕೆಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಬಹುದು. ಹಿಂದಿನ ಪ್ರಯಾಣಿಕರ ಎಂಟರ್‍‍ಟೈನ್‍‍ಮೆಂಟ್ ಸ್ಕ್ರೀನ್ ಮತ್ತು ಪ್ರೀಮಿಯಂ ಅಥವಾ ಐಷಾರಾಮಿ ಅನುಭವವನ್ನು ನೀಡುವ ಆಯ್ಕೆಗಳನ್ನು ಹೊಂದಿದೆ. ವಿ-ಕ್ಲಾಸ್ ಫೇಸ್‍‍ಲಿಫ್ಟ್ ಜಾಗತಿಕ ಮಾದರಿಯು ಕಂಪನಿಯು ನೀಡುವ ಕ್ಯಾಂಪರ್ ಪ್ಯಾಕೇಜ್‍ ಅನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಹೊಸ ಎಂಪಿವಿನಲ್ಲಿ ಅಲಾಯ್ ವ್ಹೀಲ್‌ಗಳು, ಕಂಫರ್ಟ್ ಸಸ್ಷೆಂಷನ್, ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಡೈನಾಮಿಕ್ ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ ಜೊತೆಗೆ ಸ್ಮಾರ್ಟ್ ಎಂಟ್ರಿ ಸೌಲಭ್ಯಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ಪ್ರಸ್ತುತ ಮಾದರಿಯಲ್ಲಿರುವ ಅದೇ ಎಂಜಿನ್ ಅನ್ನು ಮುಂದುವರೆಸುತ್ತದೆ. 2.2 ಲೀಟರ್ ನಾಲ್ಕು ಸಿಲಿಂಡರ್ ವಿ 220ಡಿ ಡೀಸೆಲ್ ಎಂಜಿನ್ 160 ಬಿ‍‍ಹೆಚ್‍‍ಪಿ ಪವರ್ ಮತ್ತು 380 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಂಪಿ‍ವಿಗೆ ಪ್ರಸ್ತುತ ದೇಶದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿ ಎಂಪಿವಿಯು ಇಲ್ಲ. ಶೀಘ್ರದಲ್ಲೇ ಟೊಯೊಟಾ ವೆಲ್ ಫೈರ್ ಎಂಪಿ‍ವಿ ಈ ವಿಭಾಗಕ್ಕೆ ಸೇರಲಿದೆ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಈಗಾಗಲೇ ಟೊಯೊಟಾ ಡೀಲರ್‍‍ಗಳಿಗೆ ಹೊಸ ಎಂಪಿವಿಯ ವಿತರಣೆಯನ್ನು ಪ್ರಾರಂಭಿಸಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಮರ್ಸಿಡಿಸ್ ಬೆಂಝ್ ಇಂಡಿಯಾ ಮೂರನೇ ತಲೆಮಾರಿನ ಜಿಎಲ್ಇ ಎಸ್‍‍ಯು‍ವಿಯನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ವೇಳೆಯಲ್ಲಿ ದೆಹಲಿಯ ಎನ್‍‍ಸಿಆರ್ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಬೆಂಝ್ ಕಾರುಗಳನ್ನು ವಿತರಸಿದೆ. ಮುಂಬೈ, ಪುಣೆ, ಗುಜರಾತ್, ಕೋಲ್ಕತಾ, ದೆಹಲಿ ಎನ್‍‍ಸಿಆರ್ ಮತ್ತು ಪಂಜಾಬ್‍‍ನಲ್ಲಿ ಒಂದೇ ದಿನದಲ್ಲಿ ಧಂತೇರಸ್ ಪ್ರಯುಕ್ತ 600ಕ್ಕೂ ಹೆಚ್ಚು ವಾಹನಗಳನ್ನು ವಿತರಿಸಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಬೆಂಝ್ ವಿ-ಕ್ಲಾಸ್ ಎಲೈಟ್

ಐಷಾರಾಮಿ ಎಂಪಿ‍ವಿ ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಗಮನಸೆಳೆಯುತ್ತಿದೆ. ಭಾರತೀಯ ಖರೀದಿದಾರರು ಹೆಚ್ಚಾಗಿ ಪ್ರೀಮಿಯಂ ಮತ್ತು ಐಷಾರಾಮಿ ಎಂಪಿವಿಗಳನ್ನು ಬಯಸುತ್ತಾರೆ. ಹೊಸ ಎಂಪಿವಿಯ ಟಾಪ್ ಎಂಡ್ ಮಾದರಿಯು ಐಷಾರಾಮಿ ಮತ್ತು ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

Most Read Articles

Kannada
English summary
Mercedes-Benz V-Class Elite Launching In India: New Top-Spec Trim To Rival Toyota Vellfire - Read in Kannada
Story first published: Monday, November 4, 2019, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X