ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಂಸ್ಥೆಯು ತನ್ನ ಐಷಾರಾಮಿ ವ್ಯಾನ್ ಮಾದರಿಯಾದ ವಿ-ಕ್ಲಾಸ್ ಆವೃತ್ತಿಯಲ್ಲಿ ಮತ್ತೊಂದು ಹೈ ಎಂಡ್ ಎಲೈಟ್ ಬಿಡುಗಡೆಗೊಳಿಸಿದ್ದು, ಹೊಸ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.10 ಕೋಟಿ ಬೆಲೆ ಹೊಂದಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ಅಂತರ್‌ರಾಷ್ಟ್ರಿಯ ಮಾರುಕಟ್ಟೆಗಳಲ್ಲಿ ವಿ-ಕ್ಲಾಸ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ ಭಾಗವಾಗಿ ಎಲೈಟ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ವಿಸ್ತರಿತ ವೀಲ್ಹ್‌ಬೆಸ್ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಳಿಸಿದೆ. ಈ ಹಿಂದಿನ ಆವೃತ್ತಿಗಿಂತಲೂ ಸುಧಾರಿತ ತಂತ್ರಜ್ಞಾನ ಪ್ರೇರಿತ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಈ ವಾಹನದಲ್ಲಿ ಅಳವಡಿಸಲಾಗಿದ್ದು, ಮರುವಿನ್ಯಾಸಗೊಳಿಸಲಾದ 6 ಸೀಟರ್ ಸೌಲಭ್ಯವನ್ನು ಹೊಂದಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ಹಾಗೆಯೇ ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಸ್ಪೋರ್ಟಿ ಬಂಪರ್, 18-ಇಂಚಿನ ಅಲಾಯ್ ವೀಲ್ಹ್, ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್‌, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ಸೆಂಟ್ರಲ್ ಕನ್ಸೊಲ್‌ನಲ್ಲಿ ರೆಫ್ರಿಜೆಟರ್ ಕಂಫಾರ್ಟ್‌ಮೆಂಟ್, ಪನೊರಮಿಕ್ ಸನ್‌ರೂಫ್ ಮತ್ತು ಮನರಂಜನೆಗಾಗಿ 15 ಸ್ಪೀಕರ್ಸ್ ಒಳಗೊಂಡ ಬೂರ್‍‌ಮಾಸ್ಟರ್ ಸರೌಂಡ್ ಸಿಸ್ಟಂ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲಾಗಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಆಕ್ಟಿವ್ ಪಾರ್ಕ್ ಅಸಿಸ್ಟ್, 6 ಏರ್‌ಬ್ಯಾಗ್, ಅಂಟೆನ್ಷನ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಹೊಸ ವಾಹನವು 5,140-ಎಂಎಂ ಲಾಂಗ್ ವೀಲ್ಹ್ ಬೆಸ್ ಹೊಂದಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ಮರ್ಸಿಡಿಸ್ ಬೆಂಝ್ ಸಂಸ್ಥೆಯು ವಿ-ಕ್ಲಾಸ್ ಆವೃತ್ತಿಗಳಲ್ಲಿ ಇದೇ ಮೊದಲ ಬಾರಿ 7 ಬಣ್ಣಗಳ ಆಯ್ಕೆಗಳನ್ನು ನೀಡಿದ್ದು, ಗ್ರಾಹಕರ ತಮ್ಮ ಅಭಿರುಚಿಗೆ ತಕ್ಕಂತೆ ಸ್ಟೀಲ್ ಬ್ಲೂ, ಸೆಲೆನೈಟ್ ಗ್ರೇ, ಗ್ರಾಫೈಟ್ ಗ್ರೇ ಡಾರ್ಕ್, ಬ್ಲ್ಯಾಕ್ ಮೆಟಾಲಿಕ್, ಕೆವೆನ್‌ಸೈಟ್ ಬ್ಲ್ಯೂ ಮೆಟಾಲಿಕ್, ರಾಕ್ ಕ್ರಿಸ್ಟಲ್ ವೈಟ್ ಮೆಟಾಲಿಕ್ ಮತ್ತು ಬ್ರಿಲಿಯೆಂಟ್ ಸಿಲ್ವರ್ ಮೆಟಾಲಿಕ್ ಬಣ್ಣಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ವಿ-ಕ್ಲಾಸ್ ಮಾದರಿಯಲ್ಲೇ ಎಕ್ಸ್‌ಪ್ರೆಷನ್ ಮತ್ತು ಎಕ್ಸ್‌ಕ್ಲೂಸಿವ್ ಎಡಿಷನ್ ಸಹ ಆಯ್ಕೆ ಮಾಡಬಹುದು.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ವಿ-ಕ್ಲಾಸ್ ಎಕ್ಸ್‌ಪ್ರೆಷನ್ ಕಾರು 7 ಸೀಟರ್ ಮಾದರಿಯಾಗಿದ್ದು ಇದರ ಬೆಲೆಯು ಎಕ್ಸ್‌‌ಶೋರೂಂ ಪ್ರಕಾರ ರೂ. 68.04 ಲಕ್ಷ ಬೆಲೆ ಹೊಂದಿದ್ದು, ವಿ-ಕ್ಲಾಸ್ ಎಕ್ಸ್‌ಕ್ಲೂಸಿವ್ ಕಾರು 6 ಸೀಟರ್ ಮಾದರಿಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ. 81.90 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

7 ಸೀಟರ್ ವಿ-ಕ್ಲಾಸ್ ಮಾದರಿಯು 5,370-ಎಂಎಂ ಉದ್ದಳತೆ, 3,430-ಎಂಎಂ ವೀಲ್ಹ್‌ಬೆಸ್ ಹೊಂದಿದ್ದಲ್ಲಿ 6-ಸೀಟರ್ ಮಾದರಿಯು 5,140-ಎಂಎಂ ಉದ್ದಳತೆ, 3,200-ಎಂಎಂ ವೀಲ್ಹ್‌ಬೆಸ್‌ನೊಂದಿಗೆ 7 ಸೀಟರ್‌ಗಿಂತಲೂ ತುಸು ಹೆಚ್ಚಿನ ಮಟ್ಟದ ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ವಿ-ಕ್ಲಾಸ್ 7 ಸೀಟರ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ 6-ಸೀಟರ್ ಮಾದರಿಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿದ್ದು, ಕಾರಿನ ಒಳಭಾಗದಲ್ಲೇ ಕುಳಿತು ಸಭೆ ನಡೆಸಬಹುದಾದ ಟೆಬಲ್ ಪ್ಯಾಕೇಜ್, ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್, 17-ಇಂಚಿನ ಅಲಾಯ್ ವೀಲ್ಹ್‌ಗಳು ಮತ್ತು ಒಳಭಾಗದಲ್ಲೇ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ಕ್ಯಾಮೆರಾ ಸೌಲಭ್ಯವಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ಪ್ರಮುಖವಾಗಿ ಕಾರಿನ ನೋಟವನ್ನು ಹೆಚ್ಚಿಸುವ ಹೈ ಪರ್ಫಾಮೆನ್ಸ್ ಎಲ್‌ಇಡಿ ಹೆಡ್‌ಲ್ಯಾಂಪ್ ಜೊತೆ ಇಂಟಲಿಜೆಂಟ್ ಲೈಟ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ ಸಿಸ್ಟಂ, ನಪ್ಪಾ ಲೆದರ್ ಪ್ರೇರಿತ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮತ್ತು ಸುರಕ್ಷತೆಗಾಗಿ 6 ಏರ್‌ಬ್ಯಾಗ್ ಪಡೆದುಕೊಂಡಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಲೈಟ್ ವ್ಯಾನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಭಾರತದಲ್ಲಿ 2020ರ ಏಪ್ರಿಲ್ 1ರಿಂದ ಕಡ್ಡಾಯಗೊಳ್ಳಲಿರುವ ಬಿಎಸ್-6 ಎಂಜಿನ್ ಮಾದರಿಯನ್ನು ಈಗಾಗಲೇ ಅಧಿಕೃತವಾಗಿ ಮಾರಾಟ ಮಾಡುತ್ತಿರುವ ಮರ್ಸಿಡಿಸ್ ಬೆಂಝ್ ಸಂಸ್ಥೆಯು ವಿ-ಕ್ಲಾಸ್ ವಾಹನದಲ್ಲಿ 2.0-ಲೀಟರ್ ಡೀಸೆಲ್ ಎಂಜಿನ್‌ ಆಯ್ಕೆ ನೀಡಿದೆ. ಹೈ ಎಂಡ್ ಎಲೈಟ್‌ನಲ್ಲಿ 9-ಜಿ ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಮತ್ತು ಸಾಮಾನ್ಯ ಮಾದರಿಗಳಲ್ಲಿ 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 161-ಬಿಎಚ್‌ಪಿ ಮತ್ತು 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Most Read Articles

Kannada
English summary
Mercedes-Benz V-Class Elite Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X