ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಉಷ್ಣಾಂಶದ ಬಿಡಿ ಭಾಗಗಳನ್ನು ತಯಾರಿಸುವುದರಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಜ್ ಕಂಪನಿಯು ತನ್ನ ಟಾಪ್ ಮಾದರಿಯ ವಾಹನಗಳಲ್ಲಿ, ಹೀಟೆಡ್ ಆರ್ಮ್‍‍ರೆಸ್ಟ್, ಡೋರ್ ಪ್ಯಾನೆಲ್, ಹೀಟೆಡ್ ಸೀಟ್ ಹಾಗೂ ಹೀಟೆಡ್ ಸ್ಟೀಯರಿಂಗ್ ವ್ಹೀಲ್‍‍ಗಳನ್ನು ಅಳವಡಿಸುತ್ತಿದೆ. ಈಗ ಜರ್ಮನ್ ಮೂಲದ ಕಂಪನಿಯು ಹೊಸತನದ ಹೀಟೆಡ್ ಸೀಟ್ ಬೆಲ್ಟ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಮರ್ಸಿಡಿಸ್ ಕಂಪನಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಮರ್ಸಿಡಿಸ್ ಕಂಪನಿಯು ಸೀಟ್ ಬೆಲ್ಟ್ ನ ಬಳಕೆಯನ್ನು ಹೆಚ್ಚಿಸಲು ಬಯಸಿದೆ. ಸೀಟ್ ಬೆಲ್ಟ್ ಗಳ ಬಳಕೆಯು ಯೂರೋಪಿನಲ್ಲಿ ಹೆಚ್ಚಿದ್ದರೆ, ಭಾರತದಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಸೀಟ್ ಬೆಲ್ಟ್ ಗಳಲ್ಲಿ ಹೆಚ್ಚಿನ ಫೀಚರ್ ಗಳನ್ನು ಅಳವಡಿಸುವುದರಿಂದ ಜನರು ತಾವಾಗಿಯೇ ಸೀಟ್ ಬೆಲ್ಟ್ ಅನ್ನು ಧರಿಸುವಂತೆ ಪ್ರೋತ್ಸಾಹಿಸುವುದು ಕಂಪನಿಯ ಉದ್ದೇಶವಾಗಿದೆ.

ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಮೂಲ ಮಾದರಿಯ ವಾಹನದಲ್ಲಿನ ಹೀಟೆಡ್ ಸೀಟ್ ಬೆಲ್ಟ್ ಗಳನ್ನು ಧರಿಸುವ ಅವಕಾಶವನ್ನು ಕೆಲವು ಆಟೋಮೊಬೈಲ್ ಪತ್ರಕರ್ತರಿಗೆ ನೀಡಲಾಗಿತ್ತು. ಅವರ ಪ್ರಕಾರ ಈ ಬೆಲ್ಟ್ ಮಾಮೂಲಿ ಸೀಟ್ ಬೆಲ್ಟ್ ಗಳಿಗಿಂತ ಹೆಚ್ಚು ದಪ್ಪವಾಗಿದ್ದು, ಇದರಲ್ಲಿರುವ ಹೀಟೆಡ್ ಎಲಿಮೆಂಟ್‍‍ಗಳಿಂದಾಗಿ ಉಷ್ಣತೆಯನ್ನು ಹೊಂದಿದೆ.

ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಮಾಮೂಲಿ ಸೀಟ್ ಬೆಲ್ಟ್ ಗಳು ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ಈ ಬೆಲ್ಟ್ ಗಳು ಕಾರ್ಯ ನಿರ್ವಹಿಸಲಿವೆ. ಮರ್ಸಿಡಿಸ್ ಕಂಪನಿಯು ಈ ಟೆಕ್ನಾಲಜಿಯನ್ನು ಭಾರತದಲ್ಲಿರುವ ತನ್ನ ವಾಹನಗಳಲ್ಲಿ ಅಳವಡಿಸುವುದೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಹಾಗೆಯೇ ಉಳಿದೆಡೆ ಟಾಪ್ ಮಾದರಿಗಳನ್ನು ಬಿಟ್ಟು ಬೇರೆ ಮಾದರಿಯ ವಾಹನಗಳಲ್ಲೂ ಈ ಹೀಟೆಡ್ ಸೀಟ್ ಬೆಲ್ಟ್ ಗಳನ್ನು ಅಳವಡಿಸಲಾಗುವುದೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ರೀತಿಯ ಸೀಟ್ ಬೆಲ್ಟ್ ಗಳೂ ಇನ್ನೂ ಪರೀಕ್ಷಾರ್ಥ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಉತ್ಪಾದನೆಯಾಗಲಿವೆ.

MOST READ: ಟಾಟಾ ಉತ್ಪಾದನೆಯ ಈ ಜನಪ್ರಿಯ ವಾಹನಗಳು ಇನ್ಮುಂದೆ ಸಿಗುವುದಿಲ್ಲ..!

ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸೀಟ್ ಬೆಲ್ಟ್ ಗಳು ಪ್ರಯಾಣಿಕರ ಸುರಕ್ಷತೆಗಾಗಿಯೇ ಇದ್ದು, ಚಾಲಕನೇ ಆಗಿರಲಿ ಅಥವಾ ಹಿಂಬದಿಯ ಪ್ರಯಾಣಿಕರೇ ಆಗಿರಲಿ, ಪ್ರತಿಯೊಬ್ಬ ಪ್ರಯಾಣಿಕರು ಅವುಗಳನ್ನು ಧರಿಸುವುದು ಸುರಕ್ಷಿತ. ಆದರೆ ಭಾರತದಲ್ಲಿ ಸೀಟ್ ಬೆಲ್ಟ್ ಧರಿಸುವುದು ಆರಾಮದಾಯಕವೆನಿಸದ ಕಾರಣ ಬಹುತೇಕರು ಸೀಟ್ ಬೆಲ್ಟ್ ಗಳನ್ನು ಧರಿಸುವುದೇ ಇಲ್ಲ. ಮರ್ಸಿಡಿಸ್ ಒದಗಿಸುತ್ತಿರುವ ಈ ಸೌಲಭ್ಯವು ಸುರಕ್ಷತೆಗೆ ಅಷ್ಟೇನೂ ಮಹತ್ವ ನೀಡದ ಭಾರತದಂತಹ ದೇಶದಲ್ಲಿ ಹೊಸ ಬದಲಾವಣೆಯನ್ನು ತರುವುದೇ ಎಂಬುದನ್ನು ಕಾದು ನೋಡಬೇಕಿದೆ.

ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಅಲ್ಪ ಮೊತ್ತದ ದಂಡ ಹಾಗೂ ಲಂಚದಿಂದಾಗಿ , ಭಾರತದಲ್ಲಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಈ ರೀತಿಯ ಸೀಟ್ ಬೆಲ್ಟ್ ಗಳು ಭಾರತದಲ್ಲಿ ಬಿಡುಗಡೆಗೊಂಡರೂ ವರ್ಷ ಪೂರ್ತಿ ಚಳಿಯಿರುವ ಉತ್ತರ ಭಾರತದಲ್ಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಾಗಿ ಬಳಸುವ ಸಾಧ್ಯತೆಗಳಿವೆ.

Most Read Articles

Kannada
English summary
Mercedes Developing Heated Seat Belts — Hopes To Motivate People To Use Them - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X