ಮರ್ಸಿಡಿಸ್ ಇಕ್ಯೂಸಿ ಎಡಿಷನ್ 1886 ಅನಾವರಣ

ಜರ್ಮನಿಯ ಲಗ್ಷುರಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಜ್ ತನ್ನ ಇಕ್ಯೂಸಿ ಎಡಿಷನ್ ಎಲೆಕ್ಟ್ರಿಕ್ ಎಸ್‍ಯುವಿ 1886 ಕಾರನ್ನು ನ್ಯೂಯಾರ್ಕ್ ಅಂತರಾಷ್ಟ್ರೀಯ ಆಟೋ ಶೋನಲ್ಲಿ ಅನಾವರಣಗೊಳಿಸಿತು.

ಮರ್ಸಿಡಿಸ್ ಇಕ್ಯೂಸಿ ಎಡಿಷನ್ 1886 ಅನಾವರಣ

ಮರ್ಸಿಡಿಸ್ ಇಕ್ಯೂಸಿ 1886 ಎಡಿಷನ್ ಕಾರು ಮರ್ಸಿಡಿಸ್ ಕಾರಿನ ಇಕ್ಯೂ ಬ್ರಾಂಡಿನಲ್ಲಿಬಿಡುಗಡೆಯಾದ ಮೊದಲ ಎಲೆಕ್ಟ್ರಿಕ್ ಕಾರಾಗಿದೆ. ವಿಶೇಷ ಅವೃತ್ತಿಯ ಇವಿ ಕಾರನ್ನು133 ವರ್ಷಗಳ ಹಿಂದೆ ಪ್ರಪಂಚದ ಮೊಟ್ಟ ಮೊದಲ ಕಾರಿನ ಪೇಟೆಂಟ್ ಪಡೆದ ಕಾರ್ಲ್ ಬೆಂಜ್ ಗೌರವಾರ್ಥ ಅನಾವರಣಗೊಳಿಸಲಾಗಿದೆ. ಇಕ್ಯೂಸಿ 1886 ಎಡಿಷನ್ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಕೆಲವು ಕಾಸ್ಮೆಟೀಕ್ ಬದಲಾವಣೆಗಳನ್ನು ಮಾಡಲಾಗಿದ್ದು, ಈ ವರ್ಷ ಬಿಡುಗಡೆಗೊಳ್ಳಲಿರುವ ರೆಗ್ಯುಲರ್ ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಹೋಲಿಸಿದರೆ ಅನೇಕ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳಲ್ಲಿ ರಿವೈಸ್ ಆಗಿರುವ ರೇಡಿಯೆಟರ್ ಗ್ರಿಲ್ ಎಜ್‍ನಲ್ಲಿರುವ ಹೈ ಗ್ಲಾಸ್ ಬ್ಲಾಕ್ ಸೇರಿದೆ.

ಮರ್ಸಿಡಿಸ್ ಇಕ್ಯೂಸಿ ಎಡಿಷನ್ 1886 ಅನಾವರಣ

ರೀವರ್ಕ್ ಮಾಡಿರುವ ಬ್ಯಾಜ್‍ಗಳನ್ನು ಕಾರಿನ ಹಿಂಬದಿಯಲ್ಲೂ ಅಳವಡಿಸಲಾಗಿದೆ. ಇಕ್ಯೂಸಿ ಸ್ಪೇಷಲ್ 1886 ಎಡಿಷನ್ ನಲ್ಲಿ ಮಡ್‍ಗಾರ್ಡ್ ಮೇಲೆ ಅಕ್ಷರಗಳನ್ನುಬರೆಯಲಾಗಿದೆ ಮತ್ತು 10 ಸ್ಪೋಕಿನ 20 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಹೈ ಗ್ಲಾಸ್ ಬ್ಲಾಕ್ ಮತ್ತು ವೈಟ್‍ನಲ್ಲಿ ಡೆಕೋರೇಟ್ ಮಾಡಲಾಗಿದೆ.

ಮರ್ಸಿಡಿಸ್ ಇಕ್ಯೂಸಿ ಎಡಿಷನ್ 1886 ಅನಾವರಣ

ಇಕ್ಯೂಸಿ ಸ್ಪೇಷಲ್ 1886 ಎಡಿಷನ್‍ನಲ್ಲಿ ಕಾಸ್ಮೆಟಿಕ್ ಬದಲಾವಣೆಗಳಿದ್ದು ಬ್ಯಾಕ್ ರೆಸ್ಟ್ ಸೀಟಿನ ಮೇಲೆ ಎಂಬ್ರಾಯಿಡರಿ ಅಕ್ಷರಗಳನ್ನು ಹಾಕಲಾಗಿದೆ. ಈ ಸೀಟ್‍ಗಳನ್ನು ಲೆದರ್ ಮತ್ತು ಮೈಕ್ರೊ ಫೈಬರ್ ನಲ್ಲಿ ಇಂಡಿಗೋ ಮತ್ತು ಬ್ಲಾಕ್ ಬಣ್ಣದ ಥೀಮ್ ನಲ್ಲಿ ತಯಾರಿಸಲಾಗಿದೆ. ಫ್ರಂಟ್ ಸೀಟುಗಳು ಎಲೆಕ್ಟ್ರಿಕ್ ಅಡ್ಜಷ್ಟಬಲ್ ಆಗಿವೆ.

ಮರ್ಸಿಡಿಸ್ ಇಕ್ಯೂಸಿ ಎಡಿಷನ್ 1886 ಅನಾವರಣ

ಇಕ್ಯೂಸಿ 1886 ಎಡಿಷನ್ ನಲ್ಲಿ ಬ್ಯಾಜ್ ಅನ್ನು ಸೆಂಟರ್ ಕಂಸೋಲ್ ನಲ್ಲಿ ನೀಡಲಾಗಿದೆ. ಫ್ಲೋರ್ ಮ್ಯಾಟ್‍ಗಳ ಮೇಲೆಯೂ ಸಹ ಇಕ್ಯೂಸಿ ಅಕ್ಷರಗಳನ್ನು ಎಂಬ್ರಾಯಿಡರಿ ಮಾಡಲಾಗಿದೆ. ಎಲೆಕ್ಟ್ರಿಕ್ ಎಸ್‍ಯುವಿಯ ವಿಶೇಷ ಅವೃತ್ತಿಯು ಸಹ ಪ್ರಿಮೀಯಂ ಬರ್ಮಿಸ್ಟರ್ ಆಡಿಯೋ ಸಿಸ್ಟಂ ಮತ್ತು ಜರ್ಮನ್ ಮರ್ಕ್ ನ ಎನರ್ಜೈಸಿಂಗ್ ಪ್ಯಾಕೆಜ್ ಒಳಗೊಂಡಿದೆ. ಸ್ಟಾಂಡರ್ಡ್ ಆಗಿ ಮೇಂಟೆನಸ್ ಅನ್ನು 6 ವರ್ಷ ಅಥವಾ 1,50,000 ಕಿ,ಮೀ ಗಳಿಗೆ ನೀಡಲಾಗಿದೆ. ಇಕ್ಯೂಸಿ 1886 ಎಡಿಷನ್ ನಲ್ಲಿ ಮೇಂಟೆನಸ್ ಅನ್ನು 6 ವರ್ಷಗಳು ಅಥವಾ 6 ಬಾರಿ ಮತ್ತು ಸರ್ವಿಸ್‍ಗಾಗಿ ಪಿಕ್ ಅಪ್ ಮತ್ತು ಡೆಲಿವರಿ ಸಹ ನೀಡಲಾಗುತ್ತದೆ. ಎಲೆಕ್ಟ್ರಿಕ್ ಪವರ್ ಟ್ರೇನ್ ಬದಲಾಗದೇ ಹಾಗೆ ಇದ್ದು, ಇಕ್ಯೂಸಿ ಸ್ಪೇಷಲ್ 1886 ಎಡಿಷನ್ ನಲ್ಲಿಎಲೆಕ್ಟ್ರಿಕ್ ಮೋಟಾರ್ 396 ಬಿಹೆಚ್‍ಪಿ ಮತ್ತು 700 ಎನ್ಎಂ ಟಾರ್ಕ್ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಕಳುಹಿಸುತ್ತದೆ. 0 - 100 ಕಿ.ಮಿ ವೇಗಕ್ಕೆ ಕೇವಲ 5.1 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಟಾಪ್ ಸ್ಪೀಡನ್ನು ಪ್ರತಿ ಗಂಟೆಗೆ 180 ಕಿ.ಮಿ ಎಂದು ನಿಗದಿಪಡಿಸಲಾಗಿದೆ.

MOST READ: ನ್ಯೂಯಾರ್ಕ್ ಆಟೋ ಶೋನಲ್ಲಿ ಗಮನ ಸೆಳೆದ ಕಿಯಾ ಹಬನಿರೋ

ಮರ್ಸಿಡಿಸ್ ಇಕ್ಯೂಸಿ ಎಡಿಷನ್ 1886 ಅನಾವರಣ

ಇಕ್ಯೂಸಿ 1886 ಎಡಿಷನ್ ಬಗ್ಗೆ ಮಾತನಾಡಿದ ಡೈಮ್ಲರ್ ಎಜಿ ಮರ್ಸಿಡಿಸ್ ಬೆಂಜಿನ ಕಾರು ಮಾರಾಟ ವಿಭಾಗದ ಮ್ಯಾನೇಜ್ ಮೆಂಟ್ ಬೋರ್ಡಿನ ಸದಸ್ಯರಾದ ಬ್ರಿಟ್ಟಾ ಸೀಗರ್ ರವರು ಹೇಳುವಂತೆ ಇಕ್ಯೂಸಿ ನಮ್ಮ ಮುಂದಿನ ಮರ್ಸಿಡಿಸ್ ಬೆಂಜಿನ ಇಕ್ಯೂ ವೆಹಿಕಲ್ ಪೊರ್ಟ್ ಫೊಲಿಯೊಗೆ ನಾಂದಿ ಹಾಡಲಿದೆ. ಮಾರುಕಟ್ಟೆ ಬಿಡುಗಡೆಗೆ ಇಕ್ಯೂಸಿ ಎಡಿಷನ್ 1886 ರಿಮ್ಯಾಂಡರ್ ಆಗಲಿದೆ. ನಾವು ಇದರ ಬಗ್ಗೆ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದು ಇದರ ಲಕ್ಷಣಗಳು ಎಂದಿಗಿಂತ ಇಂದು ಹೆಚ್ಚು ಬೇಕಾಗಿವೆ. ಹಿಂತಿರುಗಿ ನೋಡಿದರೆ ಇಂಡ್ಯುವಿಜುಯಲ್ ಆಗಿ ನಾವೇ ಮೊದಲಿಗರು. ಇಕ್ಯೂಸಿ ಮತ್ತೆ ಹೊಸ ಯುಗದಲ್ಲಿ ಹೆಜ್ಜೆ ಇಡುತ್ತಿದೆ. ಈ ಯುಗದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಸರಳವೂ, ವಿಶ್ವಾಸಾರ್ಹವೂ ಆಗಿದೆ ಎಂದು ಹೇಳಿದರು.

Most Read Articles

Kannada
English summary
Mercedes EQC Edition 1886 Revealed At New York Auto Show: Honors The World's First Car - Read in Kannada
Story first published: Friday, April 19, 2019, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X