ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಜರ್ಮನಿಯ ಲಗ್ಷುರಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಜ್ ತನ್ನ ಹೊಸ ಜಿಎಲ್ಎಸ್ ಎಸ್‍ಯುವಿಯನ್ನು 2019ರ ನ್ಯೂಯಾರ್ಕ್ ಆಟೊ ಶೋ ನಲ್ಲಿ ಅನಾವರಣಗೊಳಿಸಿದೆ. ಹೊಸ ಮರ್ಸಿಡಿಸ್ ಜಿಎಲ್ಎಸ್ ಉಳಿದ 7 ಸೀಟರ್ ವ್ಹೀಲ್ ಬೇಸ್ ಹೈಬ್ರಿಡ್ ಪವರ್ ಪ್ಲಾಂಟ್ ಎಸ್‍ಯುವಿಗಳಿಗಿಂತ ಅಗಲ ಮತ್ತು ಉದ್ದವಾಗಿದೆ.

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಹೊಸ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಕಾರಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವಿದ್ದು, ಒಟ್ಟು 5,207ಎಂಎಂ ಉದ್ದ ಮತ್ತು 1,956 ಎಂಎಂ ಅಗಲವನ್ನು ಹೊಂದಿದೆ. ಜಿಎಲ್ಎಸ್ ಎಸ್‍ಯುವಿ ಯ ವ್ಹೀಲ್ ಬೇಸ್ 3,134 ಎಂಎಂ ಉದ್ದದೊಂದಿಗೆ ೬೦ ಎಂಎಂನಷ್ಟು ಅಧಿಕವಿದೆ. 2019ರ ಹೊಸ ಮರ್ಸಿಡಿಸ್ ಜಿಎಲ್ಎಸ್ ಮಾಡ್ಯುಲರ್ ಹೈ ಅರ್ಕಿಟೆಕ್ಚರ್ ಪ್ಲಾಟ್ ಫಾರ್ಮ್ ಹೊಂದಿದ್ದು, ಜಿಎಲ್ಇ ಎಸ್‍ಯುವಿ ಯನ್ನು ಬಲಪಡಿಸಲಿದೆ.

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಬಾನೆಟ್ ನ ಕೆಳಗೆ ಎರಡು ಎಲೆಕ್ಟ್ರಿಫೈಡ್ ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ನೀಡಲಾಗಿದ್ದು ಒಟ್ಟುಮೂರು ವಿಧದ ಎಂಜಿನ್ ಗಳಿವೆ. ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಟರ್ಬೋ ಚಾರ್ಜ್ ನ 3.0 ಲೀಟರಿನ 6 ಸಿಲಿಂಡರ್ ಎಂಜಿನ್ 362 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಜಿಎಲ್ಎಸ್ 450 ಯ ಹೈಬ್ರಿಡ್ ಮೋಟಾರ್ 22 ಬಿಹೆಚ್‍ಪಿ ಮತ್ತು 250 ಎನ್ಎಂ ಅಕ್ಸೆಲೆರೇಷನ್ ಉತ್ಪಾದಿಸುತ್ತದೆ. ಏಕೈಕ ಡೀಸೆಲ್ ಎಂಜಿನ್, ಟರ್ಬೋಚಾರ್ಜ್ 3.0 ಲೀಟರಿನ ಇನ್‍ಲೈನ್ ಎಂಜಿನ್ ಇದಾಗಿದ್ದು ಮೂರು ಹಂತಗಳಲ್ಲಿ ಟ್ಯೂನ್ ಮಾಡಲಾಗುತ್ತದೆ.

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಜಿಎಲ್ಎಸ್ 350 ಡಿ ಎಂಜಿನ್ 282 ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೈ ಸ್ಪೆಸಿಫಿಕೇಷನ್ ಹೊಂದಿರುವ ಜಿಎಲ್ಎಸ್ 400 ಡಿ ಎಂಜಿನ್ 325 ಬಿಹೆಚ್‍ಪಿ ಮತ್ತು ಅತಿ ಹೆಚ್ಚು ಅಂದರೆ 700 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಎರಡೂ ಎಂಜಿನ್ ಗಳು 31.6 ಲೀಟರಿನ ಆಡ್‍ಬ್ಲೂ ಟ್ಯಾಂಕ್ ಮತ್ತು ಸೆಕೆಂಡರಿ ಅಮೋನಿಯಾ ಫಿಲ್ಟರ್ ಗಳನ್ನು ಬಳಸುತ್ತಿದ್ದು, ಇದರಿಂದ ಮುಂದಿನ ವರ್ಷದಿಂದ ಯೂರೋಪ್ ನಲ್ಲಿ ಜಾರಿಗೆ ಬರಲಿರುವ ವಿಶ್ವ ಮಾಲಿನ್ಯ ನಿಯಮಗಳಿಗೆ ಅನುಕೂಲವಾಗಲಿದೆ.

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

7 ಸೀಟರ್ ಎಸ್‍ಯುವಿ ಗಳ ಪೈಕಿ ಹೊಸ ಜಿಎಲ್ಎಸ್ 580 ಅತಿ ಹೆಚ್ಚು ಬಲಶಾಲಿಯಾಗಿದೆ. ಮರ್ಸಿಡಿಸ್ ಜಿಎಲ್ಎಸ್ 580 ಟ್ವಿನ್ ಟರ್ಬೋ 4.0 ಲೀಟರಿನ ವಿ8 ಎಂಜಿನ್ ನ ಜೊತೆಯಲ್ಲಿ 48 ವಿ ಹೈಬ್ರಿಡ್ ಸಿಸ್ಟಂ ಒಳಗೊಂಡಿದೆ. ಈ ಎಂಜಿನ್ 482 ಬಿಹೆಚ್‍ಪಿ ಮತ್ತು 700 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಮೋಟಾರ್ ನ ಜೊತೆಯಲ್ಲಿ ಇನ್ನೂ ಹೆಚ್ಚು 22 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಅಕ್ಸೆಲೆರೇಷನ್ ಉತ್ಪಾದಿಸುತ್ತದೆ. ಎಲ್ಲಾ ಮಾದರಿಯ ಹೊಸ ಜಿಎಲ್ಎಸ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ವ್ಹೀಲ್ ಡ್ರೈವ್ ನ ಜೊತೆ ನೀಡಲಾಗುತ್ತಿದೆ.

MOST READ: ಮಹೀಂದ್ರಾ ಎಕ್ಸ್‌ಯುವಿ300 ಫಸ್ಟ್ ಡ್ರೈವ್ ರಿವ್ಯೂ- ಬ್ರೆಝಾ ಮತ್ತು ಕ್ರೆಟಾಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಡಿಸೈನ್ ನಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ಹೊಸ ಜಿಎಲ್ಎಸ್ ನ ಒಳ ಭಾಗದಲ್ಲಿ ಕಾಣಬಹುದು. ಮಾರ್ಕ್ಸ್ ಟ್ರೇಡ್ ಮಾರ್ಕಿನ ಟ್ವಿನ್ ಡಿಸ್ ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟೆಷನ್ ಮತ್ತು12.3 ಇಂಚಿನ ಸ್ಟಾಂಡರ್ಡ್ ಇನ್ಫೊಟೈನ್ ಮೆಂಟ್ ಡಿಸ್ ಪ್ಲೇ ಫೀಚರ್‍‍ಗಳನ್ನು ಹಾಗೂ ವಾಯ್ಸ್ ಅಸಿಸ್ಟೆಂಟ್ ಫೀಚರ್ ಇರುವ 5 ಝೋನ್ ಕ್ಲೈಮೇಟ್ ಗಳಲ್ಲಿ ಬರುವ ಎಂಬಕ್ಸ್ ಇಂಟರ್ಫೇಸ್ ಅನ್ನು ಹೊಸ ಜಿಎಲ್ಎಸ್ ಕಾರು ಒಳಗೊಂಡಿದೆ.

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಮರ್ಸಿಡಿಸ್ ಜಿಎಲ್ಎಸ್ ಸ್ಟಾಂಡರ್ಡ್ ಆಗಿ 7 ಸೀಟುಗಳನ್ನು ಹೊಂದಿರಲಿದೆ, ಆದರೆ ಜರ್ಮನ್ ಕಾರು ತಯಾರಕ ಕಂಪನಿಯು 6 ಸೀಟಿನ ಕಾರುಗಳನ್ನು ಖರೀದಿಸುವ ಅವಕಾಶವನ್ನು ಮಾಲೀಕರಿಗೆ ನೀಡಲಿದೆ. ಇದು ಮಧ್ಯದಲ್ಲಿರುವ ಸೀಟನ್ನು ತೆಗೆದು ಹಾಕಿ ಇಬ್ಬರಿಗೆ ಆರ್ಮ್ ರೆಸ್ಟ್ ಮಾಡಲು ಅವಕಾಶ ನೀಡಲಿದೆ.

ಹೊಸ ಲುಕ್‍ನಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಎಸ್‍ಯುವಿ ಅನಾವರಣ

ಬೂಟ್ ಸ್ಪೇಸ್ ತುಂಬಾ ದೊಡ್ಡದಾಗಿದ್ದು, ಎಲ್ಲಾ ಮುಂಭಾಗದ ಐದು ಸೀಟುಗಳನ್ನು ಒಂದೇ ಬಟನ್ ಪ್ರೆಸ್ ಮಾಡುವ ಮೂಲಕ ಮಡಚಬಹುದಾಗಿದೆ. ಮೊದಲಿದ್ದ ಜಿಎಲ್ಎಸ್ ಕಾರಿಗಿಂತ 100 ಲೀಟರ್ ಅಧಿಕ ಸ್ಪೇಸ್ ಇದ್ದು ಈಗ 2,400 ಲೀಟರ್ ನಷ್ಟು ಕಾರ್ಗೋ ಸ್ಪೇಸ್ ಹೊಂದಿರಲಿದೆ.

Most Read Articles

Kannada
English summary
2019 Mercedes-Benz GLS Revealed At New York Auto Show — The S-Class Of SUVs Just Got Bigger - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X