ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಜರ್ಮನ್ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ಮಾತೃ ಸಂಸ್ಥೆಯಾದ ಡೈಮ್ಲರ್ 2040ರ ವೇಳೆಗೆ ಕಾರ್ಬನ್ ಬಳಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಮ್ಯಾನೇಜರ್ ಮ್ಯಾಗಜಿನ್ ವರದಿ ಮಾಡಿದೆ. ಹೊಸ ಸಿಇಒ ಓಲಾ ಕೆಲ್ಲೆನಿಯಸ್‍ರವರು ನಿರ್ಧರಿಸಿರುವಂತೆ 2021ರ ವೇಳೆಗೆ ಜರ್ಮನ್ ಕಾರು ತಯಾರಕ ಕಂಪನಿಯು 10,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ.

ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ವರದಿಗಳ ಪ್ರಕಾರ, ಕೆಲ್ಲೆನಿಯಸ್ ರವರು ಡೈಮ್ಲರ್ ಕಂಪನಿಯನ್ನು ಪರಿಸರ ಸ್ನೇಹಿಯಾಗಿ ಮಾಡಲು ಯೋಚಿಸಿದ್ದಾರೆ. ಇದು ಈಗಿರುವ ಸಿಇಒ ಡೈಟರ್ ಜೆಟ್ಸ್ ರವರ ಚಿಂತನೆಗೆ ವಿರುದ್ಧವಾಗಿದೆ. ಶೂನ್ಯ ವಾಯು ಮಾಲಿನ್ಯ ಸಿದ್ಧಾಂತವು ಕಾರು ತಯಾರಕ ಕಂಪನಿಯ ನೂತನ ಧ್ಯೇಯವಾಗಲಿದೆ. ಮ್ಯಾನೇಜರ್ ಮ್ಯಾಗಜಿನ್ ಪ್ರಕಾರ ಶೂನ್ಯ ವಾಯು ಮಾಲಿನ್ಯವು ವಿವಿಧ ಹಂತಗಳಲ್ಲಿ ಜರುಗಲಿದ್ದು, ಡೈಮ್ಲರ್ ಪ್ಲಾಂಟ್ ನಲ್ಲಿರುವ ಸಿಬ್ಬಂದಿ ಮತ್ತು ಪೂರೈಕೆದಾರರನ್ನು 2040ರ ವೇಳೆಗೆ ಕಾರ್ಬನ್ ನಿಂದ ಮುಕ್ತ ಮಾಡಿ ಪರಿಸರ ಸ್ನೇಹಿಯನ್ನಾಗಿಸುವ ಗುರಿ ಹೊಂದಲಾಗಿದೆ.

ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಒಂದು ವೇಳೆ 2040ರ ವೇಳೆಗೆ ಮರ್ಸಿಡಿಸ್ ನ ಮಾತೃ ಸಂಸ್ಥೆಯು ಶೂನ್ಯ ವಾಯು ಮಾಲಿನ್ಯವನ್ನು ಸಾಧಿಸಿದರೆ, 4ನೇ ನವೆಂಬರ್ 2016ರಂದು ಮಾಡಿಕೊಳ್ಳಲಾಗಿರುವ ಪ್ಯಾರಿಸ್ ಕ್ಲೈಮೇಟ್ ಅಗ್ರಿಮೆಂಟ್ ಒಪ್ಪಂದದ ಗುರಿಯನ್ನು 10 ವರ್ಷ ಮುಂಚಿತವಾಗಿ ಸಾಧಿಸಿದಂತಾಗುತ್ತದೆ.

ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ದೀರ್ಘಾವಧಿಯ ಗುರಿಗಳು ಹೊಂದುವುದರಿಂದ ಡೈಮ್ಲರ್ ಶೂನ್ಯ ಮಾಲಿನ್ಯವಾಗುವುದಾದರೂ , ಡೈಮ್ಲರ್ ರವರು ಸಿಇಒ ಆಗಿ ಓಲಾ ಕೆಲ್ಲೆನಿಯಸ್ ರವರು ಕೈಗೊಳ್ಳುತ್ತಿರುವ ಕ್ರಮಗಳು ಆಶ್ಚರ್ಯಕರವಾಗಿವೆ. ಮ್ಯಾನೇಜರ್ ಮ್ಯಾಗಜೀನ್ ಪ್ರಕಾರ, ಕೆಲ್ಲೆನಿಯಸ್‍ರವರು ವೆಚ್ಚ ಕಡಿತಕ್ಕಾಗಿ ಮರ್ಸಿಡಿಸ್ ನಲ್ಲಿರುವ 10,000 ಉದ್ಯೋಗಗಳನ್ನು ಕಡಿತಗೊಳಿಸುತ್ತಿದ್ದಾರೆ.

ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಉದ್ಯೋಗ ಕಡಿತಗಳು ಸಾಮಾಜಿಕವಾಗಿ ಸ್ವೀಕಾರರ್ಹವಾಗಿರಬೇಕು, ಮ್ಯಾಗಜಿನ್ ಪ್ರಕಾರ ಡೈಮ್ಲರ್ ಯಾವುದೇ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ. ಮ್ಯಾನೇಜರ್ ಮ್ಯಾಗಜೀನ್ ವರದಿಯ ಮೇಲೆ ವಿಸ್ತೃತ ವರದಿ ಪ್ರಕಟಿಸಿರುವ ರಾಯಿಟರ್ಸ್ ಪ್ರಕಾರ, ಡೈಮ್ಲರ್ 2021ರ ವೇಳೆಗೆ ವೆಚ್ಚ ಕಡಿತದಿಂದ ಮತ್ತು ಪ್ಯಾಸೆಂಜರ್ ಕಾರುಗಳ ಮಾರಾಟದಿಂದ 6 ಬಿಲಿಯನ್ ಯೂರೋಗಳಷ್ಟು ಲಾಭವನ್ನು ನಿರೀಕ್ಷಿಸುತ್ತಿದೆ. ಡೈಮ್ಲರ್ 2 ಬಿಲಿಯನ್ ಯೂರೋಗಳಷ್ಟು ಲಾಭವನ್ನು ಟ್ರಕ್ ಡಿವಿಷನ್ ವಿಭಾಗದಲ್ಲಿನ ವೆಚ್ಚ ಕಡಿತದಿಂದ ನಿರೀಕ್ಷಿಸುತ್ತಿದೆ.

MOST READ: 55 ವರ್ಷವಾದ್ರು ಸ್ಪೋರ್ಟ್ ಕಾರುಗಳಲ್ಲಿ ಫೋರ್ಡ್ ಮಸ್ಟಾಂಗ್ ನಂ 1

ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಹಾಗೆಯೇ ರಾಯಿಟರ್ಸ್ ವರದಿಯಲ್ಲಿ ಹೇಳಿರುವಂತೆ, ಮ್ಯಾನೇಜರ್ ಮ್ಯಾಗಜಿನ್ ಪ್ರಕಾರ ಮೇ 22 ರಂದು ಹೊಸ ಸಿಇಒ ಆಗಿ ಓಲಾ ಕೆಲ್ಲೆನಿಯಸ್ ಅಧಿಕಾರ ಸ್ವೀಕರಿಸಲಿದ್ದು, ಮಾಲಿನ್ಯ ತಡೆ ಮತ್ತು ಉತ್ಪಾದನಾ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಇದಲ್ಲದೇ ಫ್ರೆಂಚ್ ಮತ್ತು ಜಪಾನ್ ಕಾರು ತಯಾರಕ ಕಂಪನಿಗಳಾದ ರೆನಾಲ್ಟ್ ಮತ್ತು ನಿಸ್ಸಾನ್ ಜೊತೆ ಚಾಲ್ತಿಯಲ್ಲಿರುವ ಯೋಜನೆಗಳನ್ನು ಮರ್ಸಿಡಿಸ್ ಕಂಪನಿಯು ಮುಂದುವರಿಸದಿರಲು ನಿರ್ಧರಿಸಲಾಗಿದ್ದು, ಪರಿಸರ ಸ್ನೇಹಿಯಾಗುವತ್ತ ಮಹತ್ತರ ಹೆಜ್ಜೆ ಇಡುತ್ತಿದೆ.

Most Read Articles

Kannada
English summary
Mercedes To Go Carbon Neutral By 2040 — Report - Read in Kannada
Story first published: Saturday, April 20, 2019, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X