ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಎಂ‍‍ಜಿ ಮೋಟಾರ್ ಇಂಡಿಯಾ ಕಂಪನಿಯು, ತಾನು ಮೊದಲ ಬಾರಿಗೆ ಭಾರತದಲ್ಲಿ ತಯಾರಿಸುತ್ತಿರುವ ಇ‍‍ಝಡ್‍ಎಸ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಕ್ರಾಸ್‍ಒವರ್ ಕಾರಿನ ವೀಡಿಯೊವನ್ನು ಅನಾವರಣಗೊಳಿಸಿದೆ. ಈ ವೀಡಿಯೊವನ್ನು ಕಂಪನಿಯ ಉತ್ಪಾದನಾ ಘಟಕವಿರುವ ಗುಜರಾತಿನ ಹಲೊಲ್ ನಲ್ಲಿ ಚಿತ್ರಿಕರಿಸಲಾಗಿದೆ.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಈ ವೀಡಿಯೊದಲ್ಲಿ ಎಂ‍‍ಜಿ ಕಂಪನಿಯ ಎರಡನೇ ವಾಹನವಾದ ಇ‍‍ಝಡ್‍ಎಸ್ ಕಾರಿನ ಬಗೆಗಿನ ಮಾಹಿತಿಯನ್ನು ನೀಡಲಾಗಿದೆ. ಈ ಕಾರು ಇದೇ ವರ್ಷದ ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ. ಎಂ‍‍ಜಿ ಮೋಟಾರ್ ಇಂಡಿಯಾ ಕಂಪನಿಯು, ಇನ್ನು ಕೆಲವೇ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮೊದಲ ವಾಹನವನ್ನು ಬಿಡುಗಡೆಗೊಳಿಸಲಿದೆ. ಅದಕ್ಕಿಂತ ಕೆಲ ದಿನಗಳ ಮೊದಲು ತನ್ನ ಎರಡನೇ ವಾಹನದ ಬಗೆಗಿನ ವೀಡಿಯೊವನ್ನು ಬಿಡುಗಡೆಗೊಳಿಸಿದೆ.

ಈ ಎರಡೂ ವಾಹನಗಳೂ ಎಸ್‍‍ಯು‍‍ವಿಯಾಗಿದ್ದು, ಬೇರೆ ಮಾದರಿಯ ಎಂಜಿನ್‍‍ಗಳನ್ನು ಹೊಂದಿರಲಿವೆ. ಎಂ‍‍ಜಿ ಹೆಕ್ಟರ್ ಕಾರು, ಬ್ರಿಟಿಷ್ ಮೂಲದ ಎಂ‍‍ಜಿ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಮೊದಲ ವಾಹನವಾಗಲಿದೆ.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಎಂ‍‍ಜಿ ಹೆಕ್ಟರ್ ಕಾರಿಗಾಗಿ ಬುಕ್ಕಿಂಗ್ ಅನ್ನು ಜೂನ್ 04 ರಿಂದ ಆರಂಭಿಸಲಾಗಿದೆ. ಈ ಎಸ್‍‍ಯು‍‍ವಿಯನ್ನು ಇದೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗುವುದು. ಎಂಜಿ ಹೆಕ್ಟರ್ ಈ ಸೆಗ್‍‍ಮೆಂಟಿನಲ್ಲಿರುವ ದೊಡ್ಡ ಕಾರುಗಳಲ್ಲಿ ಒಂದಾಗಿದೆ, ಈ ಕಾರಿನಲ್ಲಿ ಸ್ಮಾರ್ಟ್ ಕನೆಕ್ಟಿವಿಟಿಗಳನ್ನು ಅಳವಡಿಸಲಾಗಿದ್ದು, ಹೈ ಬ್ರಿಡ್ ಮಾದರಿಯಲ್ಲೂ ಲಭ್ಯವಿರಲಿದೆ.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಪೂರ್ತಿಯಾಗಿ ಹೈಬ್ರಿಡ್ ಆಗಿರದೇ 48ವಿಯಷ್ಟು ಲಘು ಹೈಬ್ರಿಡ್ ಸಿಸ್ಟಂ ಹೊಂದಿರಲಿದೆ. ಎಂ‍‍ಜಿ ಹೆಕ್ಟರ್ ವಾಹನದಲ್ಲಿ ಎಲ್ಲಾ ಲಗ್ಷುರಿ ಫೀಚರ್‍‍‍ಗಳನ್ನು ಅಳವಡಿಸಲಾಗಿದೆ. ಎಂ‍‍ಜಿ ಈಗ ಬಿಡುಗಡೆಗೊಳಿಸಿರುವ ವೀಡಿಯೊದಿಂದ ಹಲವು ತಿಂಗಳುಗಳಿಂದ ವರದಿಯಾಗುತ್ತಿದ್ದ ಸುದ್ದಿಗಳು ನಿಜವಾಗಿವೆ. ಅನೇಕ ವರದಿಗಳಲ್ಲಿ ಎಂ‍‍ಜಿ ಮೋಟಾರ್ ಇಂಡಿಯಾ ಇ‍‍ಝಡ್‍ಎಸ್ ಕಾರ್ ಅನ್ನು ಗುಜರಾತ್‍‍ನಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸುತ್ತಿದ್ದು, ಆ ಕಾರ್ ಅನ್ನು ಡಿಸೆಂಬರ್‍‍ನಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಲಾಗಿತ್ತು.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಈ ವೀಡಿಯೊವನ್ನು ನೋಡಿದ ನಂತರ ಇ‍‍ಝಡ್‍ಎಸ್ ಕಾರು ಉತ್ಪಾದನೆಯಾಗುವುದು ಖಚಿತವಾಗಿದೆ. ಇ‍‍ಝಡ್‍ಎಸ್ ಕಾರಿನಲ್ಲಿ ಎಂ‍‍ಜಿ ಹೆಕ್ಟರ್‍‍ನಲ್ಲಿ ಇರುವಂತಹ ಐ ಸ್ಮಾರ್ಟ್ ಕನೆಕ್ಟೆಡ್ ಇನ್ಫೋಟೇನ್‍‍ಮೆಂಟ್ ಯೂನಿಟ್ ಇರಲಿದೆ.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಈ ವೀಡಿಯೊದಲ್ಲಿ ತೋರಿಸಿರುವ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಎಂಜಿ ಹೆಕ್ಟರ್‍‍ನಲ್ಲಿರುವ 10.4 ಇಂಚಿನ ಐ ಸ್ಮಾರ್ಟ್ ಸಿಸ್ಟಂಗಿಂತ ಚಿಕ್ಕದಾಗಿರಲಿದೆ. ಐ ಸ್ಮಾರ್ಟ್ ಒಂದು ಸಾಫ್ಟ್ ವೇರ್ ಆಗಿದ್ದು, ಚಿಕ್ಕ ಸ್ಕ್ರೀನ್‍‍ಗಳಲ್ಲಿ ಅಳವಡಿಸುವುದು ಕಷ್ಟವಾಗಲಿದೆ. ಆದರೆ ದೊಡ್ಡ ಗಾತ್ರದ ಸಿಸ್ಟಂ‍‍ನಲ್ಲಿ ಬರುವಂತಹ ಎಲ್ಲಾ ಫೀಚರ್‍‍ಗಳನ್ನು ಹೊಂದಿರಲಿದೆ.

MOST READ: ಪ್ರಪಂಚದ ದೊಡ್ಡ ಜೆಟ್ ವಿಮಾನವನ್ನು ಎಳೆದ ಮಿನಿ ಕೂಪರ್..!

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಈ ವೀಡಿಯೊದಲ್ಲಿ ಎಕ್ಸಿ‍‍ಕಾಂ ಚಾರ್ಜಿಂಗ್ ಸ್ಟೇ‍‍ಷನ್‍‍ಗಳನ್ನು ತೋರಿಸಲಾಗಿದೆ. ಎಕ್ಸಿಕಾಂ ಗುರುಗ್ರಾಮ ಮೂಲದ ಪವರ್ ಸಲ್ಯೂಷನ್ ಕಂಪನಿಯಾಗಿದ್ದು, ಎಲೆಕ್ಟ್ರಿಕ್ ವಾಹನಗಳಿಗಾಗಿ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ನಿರ್ಮಿಸುತ್ತದೆ. ಆದರೆ ಎಂ‍‍ಜಿ ಹೆಕ್ಟರ್ ಇಂಡಿಯಾ ಹಾಗೂ ಎಕ್ಸಿಕಾಂ ಕಂಪನಿಗಳ ಮಧ್ಯೆ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸಲು ಯಾವುದೇ ಒಪ್ಪಂದವಾಗಿರುವ ಬಗ್ಗೆ ಮಾಹಿತಿಯಿಲ್ಲ.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಈ ವೀಡಿಯೊದಲ್ಲಿ ಎಂ‍‍ಜಿ ಮೋಟಾರ್‍‍ನ ಗುಣಮಟ್ಟದ ಬಗ್ಗೆ ಹಾಗೂ ಗ್ರಾಹಕರಿಗೆ ನೀಡುವ ವಿನ್ಯಾಸದ ಬಗ್ಗೆ ತೋರಿಸಲಾಗಿದೆ. ಇ‍‍ಝಡ್‍ಎಸ್ 2018ರ ಗ್ವಾಂಗ್‍‍ಝೂ ಮೋಟಾರ್ ಶೋದಲ್ಲಿ ಅನಾವರಣಗೊಳಿಸಲಾಗಿದ್ದ ಎಂ‍‍ಜಿ ಕಂಪನಿಯ ಝಡ್‍ಎಸ್ ಕಾರಿನ ಪಕ್ಕಾ ಎಲೆಕ್ಟ್ರಿಕ್ ಮಾದರಿಯಾಗಿದೆ.

MOST READ: ಭಾರತಕ್ಕೆ ಲಗ್ಗೆಯಿಡಲಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೈಕ್

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಎಂ‍‍ಜಿ ಝಡ್‍ಎಸ್ ಸ್ಟೈಲಿಶ್ ಕ್ರಾಸ್‍ಒವರ್ ಕಾರ್ ಆಗಿದ್ದು, ಈಗ ಚೀನಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಎಂ‍‍ಜಿ ಇ‍‍ಝಡ್‍ಎಸ್ ಕಾರು, ಝಡ್‍ಎಸ್ ಕಾರಿನಲ್ಲಿರುವಂತಹ ವಿನ್ಯಾಸವನ್ನು ಹೊಂದಿದ್ದು, ಈ ಮಾದರಿಯಲ್ಲಿರುವ ಇನ್ನೊಂದು ಕಾರ್ ಆಗಿದೆ.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಆದರೆ ಈ ಕಾರಿಗೂ ಹಾಗೂ ಪೆಟ್ರೋಲ್ ಕಾರಿಗೂ ಕೆಲವೊಂದು ಭಿನ್ನತೆಗಳಿವೆ. ಇ‍‍ಝಡ್‍ಎಸ್ ಕಾರು ನೀಲಿ ಬಣ್ಣದಲ್ಲೂ ಲಭ್ಯವಿರಲಿದೆ. ಈ ವೀಡಿಯೊದಲ್ಲಿ ಬಿಳಿ ಬಣ್ಣದಲ್ಲಿ ತೋರಿಸಲಾಗಿದೆ. ಈ ಎಲೆಕ್ಟ್ರಿಕ್ ವಾಹನವು 5 ಸ್ಪೋಕಿನ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಮುಂಭಾಗದಲ್ಲಿ ಇ‍‍ಝಡ್‍ಎಸ್ ಬ್ಯಾಡ್ಜ್ ಹಾಗೂ ಗ್ರಿಲ್ ಹೊಂದಿದೆ. ಚಾರ್ಜಿಂಗ್ ಪಾಯಿಂಟ್‍‍ಗಳನ್ನು ಒಪನ್ ಮಾಡಬಹುದಾದ ಗ್ರಿಲ್‍‍ಗಳ ಹಿಂಭಾಗದಲ್ಲಿ ಅಳವಡಿಸಲಾಗಿದೆ.

MOST READ: ನೆಕ್ಸಾ ಟರ್ಮಿನಲ್ ಶುರು ಮಾಡಿದ ಮಾರುತಿ ಸುಜುಕಿ

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಚೀನಾ ಮಾರುಕಟ್ಟೆಯಲ್ಲಿರುವ ಎಂ‍‍ಜಿ ಇ‍‍ಝಡ್‍ಎಸ್ ಕಾರಿನಲ್ಲಿ 150 ಬಿ‍‍ಹೆಚ್‍‍ಪಿ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಕಾರಿನಲ್ಲೂ ಅಳವಡಿಸುವ ಸಂಭವವಿದೆ. ಎಂ‍‍ಜಿ ಕಂಪನಿಯ ಪ್ರಕಾರ 0-50 ಕಿ.ಮೀ ವೇಗವನ್ನು 3.1 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಒಂದು ಬಾರಿಗೆ ಚಾರ್ಜ್ ಮಾಡಿದರೆ 335 ಕಿ.ಮೀ ದೂರವನ್ನು ಕ್ರಮಿಸಲಿದೆ.

ಉತ್ಪಾದನಾ ಹಂತದಲ್ಲಿರುವ ಎಂ‍‍ಜಿ ಎಲೆಕ್ಟ್ರಿಕ್ ಕಾರಿನ ವೀಡಿಯೊ ಬಹಿರಂಗ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಂ‍‍ಜಿ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಒಳ್ಳೆಯ ಯೋಜನೆಯನ್ನು ಹಾಕಿಕೊಂಡಿದೆ. ಕಂಪನಿಯ ಮೊದಲ ವಾಹನವಾದ ಎಂ‍ಜಿ ಹೆಕ್ಟರ್ ಪ್ರಿಮೀಯಂ ಎಸ್‍‍ಯು‍‍ವಿಗಳ ಸೆಗ್‍ಮೆಂಟಿನಲ್ಲಿರಲಿದೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಇ‍‍ಝಡ್‍ಎಸ್ ಕಾರಿನಿಂದಾಗಿ ಕಂಪನಿಯು ಪರಿಸರ ಸ್ನೇಹಿಯಾಗುವತ್ತ ಹೆಜ್ಜೆ ಇಟ್ಟಿದೆ. ಆದರೆ ಈ ಎರಡೂ ಕಾರುಗಳು ಮಾಸ್ ಮಾರುಕಟ್ಟೆಯ ಸೆಗ್‍‍ಮೆಂಟ್‍‍ಗಳಿಗೆ ಕಾಲಿಡುತ್ತಿಲ್ಲ. ಎಂ‍‍ಜಿ ಕಂಪನಿಯು ಮುಂಬರುವ ದಿನಗಳಲ್ಲಿ ಯಾವೆಲ್ಲಾ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂದು ಕಾದು ನೋಡೋಣ.

Most Read Articles

Kannada
English summary
MG eZS Production Begins In India: MG Motor India Releases Video Of First Car - Read in kannada
Story first published: Thursday, June 6, 2019, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X