ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಎಂಜಿ ಮೋಟಾರ್ಸ್, ತನ್ನ ವಾಹನವನ್ನು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಳಿಸಿತ್ತು. ಬಿಡುಗಡೆಯಾದ ಕೆಲ ದಿನಗಳಲ್ಲಿಯೇ ಈ ಕಾರು ಜನಪ್ರಿಯವಾಗಿದೆ. ಇದುವರೆಗೂ ಎಂಜಿ ಕಂಪನಿಯು ಹೆಕ್ಟರ್ ಕಾರಿಗಾಗಿ 43,000 ಕ್ಕೂ ಅಧಿಕ ಬುಕ್ಕಿಂಗ್‍‍ಗಳನ್ನು ಪಡೆದಿದೆ.

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಕೇವಲ ಒಂದು ಕಾರ್ ಅನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುವುದರಿಂದ ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯವಿಲ್ಲವೆಂಬ ಸತ್ಯವನ್ನು ಎಂಜಿ ಕಂಪನಿಯು ಅರಿತಿದೆ. ಆದ ಕಾರಣ ಬೇರೊಂದು ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ.

ಈ ಮೊದಲು ಜೀಪ್ ಕಂಪನಿಯು ಸಹ ಕಂಪಾಸ್ ಕಾರ್ ಅನ್ನು ಮಾತ್ರ ಬಿಡುಗಡೆಗೊಳಿಸಿ ಮಾರುಕಟ್ಟೆಯಲ್ಲಿ ಪರದಾಡುತ್ತಿದೆ. ಕಾಕತಾಳಿಯವೆಂದರೆ, ದೇಶಿಯ ಮಾರುಕಟ್ಟೆಯಲ್ಲಿ ಕಂಪಾಸ್ ಹಾಗೂ ಹೆಕ್ಟರ್ ಎರಡೂ ಕಾರುಗಳು ಪ್ರತಿಸ್ಪರ್ಧಿಗಳಾಗಿವೆ.

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಈ ಮೊದಲು ವರದಿಯಾದಂತೆ ಎಂಜಿ ಕಂಪನಿಯು ಭಾರತದಲ್ಲಿ, ಇನ್ನು ಕೆಲವು ದಿನಗಳಲ್ಲಿ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಎಲೆಕ್ಟ್ರಿಕ್ ಕಾರಿನ ಟೀಸರ್ ಅನ್ನು ಎಂಜಿ ಕಂಪನಿಯು ತನ್ನ ಫೇಸ್‍‍ಬುಕ್ ಪೇಜಿನಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಈ ಎಲೆಕ್ಟ್ರಿಕ್ ಕಾರ್ ಅನ್ನು ಮೊದಲ ಬಾರಿಗೆ 2018ರ ಆರಂಭದಲ್ಲಿ ನಡೆದ ಗುವಾನ್‍‍ಜೋ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಹೊರ ಭಾಗದಿಂದ ಈ ಕಾರು ಝಡ್‍ಎಸ್ ಎಸ್‍‍ಯುವಿಯನ್ನು ಹೋಲುತ್ತದೆ. ಆದರೆ ಈ ಎಲೆಕ್ಟ್ರಿಕ್ ಕಾರಿನಲ್ಲಿ ರೇಡಿಯೇಟರ್ ಗ್ರಿಲ್ ಅಳವಡಿಸಲಾಗಿಲ್ಲ.

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಈ ಕಾರಿನಲ್ಲಿ ವಿವಿಧ ಅಲಾಯ್‍ಗಳನ್ನು ಅಳವಡಿಸಲಾಗಿದೆ. ಇವುಗಳು ಲೋವರ್ ಏರೊಡೈನಾಮಿಕ್ ಡ್ರಾಗ್ ನೀಡುತ್ತವೆ. ಹ್ಯುಂಡೈನ ಕೋನಾದಂತೆ ಈ ಕಾರು ಸಹ ಕ್ರಾಸ್ ಓವರ್‍ ಕಾರಿನಂತೆ ಕಾಣುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ, ವಾಟರ್ ಕೂಲ್‍‍‍ನ 44.5 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಈ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ, 300 ಕಿ.ಮೀ ದೂರವನ್ನು ಕ್ರಮಿಸಬಹುದು. ಈ ಬ್ಯಾಟರಿಯು ವೇಗವಾಗಿ ಚಾರ್ಜ್ ಆಗಲಿದೆ. ಇದರಲ್ಲಿರುವ ಏಕೈಕ ಎಲೆಕ್ಟ್ರಿಕ್ ಮೋಟರ್ 148 ಬಿ‍‍ಹೆಚ್‍‍‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಈ ಕಾರು 8.5 ಸೆಕೆಂಡುಗಳಲ್ಲಿ 0 - 100 ಕಿ.ಮೀವರೆಗಿನ ದೂರವನ್ನು ಕ್ರಮಿಸಬಲ್ಲದು. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 140 ಕಿ.ಮೀಗಳಾಗಿದೆ. ಹೆಕ್ಟರ್ ಕಾರಿನಲ್ಲಿರುವಂತೆ ಇ‍‍ಝಡ್‍ಎಸ್ ಕಾರು ಸಹ ಹಲವಾರು ಆರಾಮದಾಯಕವಾದ ಫೀಚರ್‍‍ಗಳನ್ನು ಹೊಂದಿರಲಿದೆ.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಭಾರತದಲ್ಲಿ ಈ ಕಾರ್ ಅನ್ನು ಉತ್ಪಾದಿಸಲು ಎಂಜಿ ಕಂಪನಿಯು, ಹಲೋಲ್‍‍ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿದೆ. ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯಡಿಯಲ್ಲಿ ಇ‍‍ಝಡ್‍ಎಸ್ ಕಾರು ಹಲವಾರು ರಿಯಾಯಿತಿಗಳನ್ನು ಪಡೆಯಲಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಇದರ ಜೊತೆಗೆ ರಾಜ್ಯ ಸರ್ಕಾರಗಳೂ ಸಹ ಹಲವು ಸೌಲಭ್ಯಗಳನ್ನು ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ನೀಡಲಿವೆ. ಇ‍‍‍ಝಡ್‍ಎಸ್ ಕಾರು ಈ ಸಬ್ಸಿಡಿಗಳನ್ನು ಸಹ ಪಡೆಯಲಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಇ‍‍ಝಡ್‍ಎಸ್ ಎಲೆಕ್ಟ್ರಿಕ್ ಕಾರು ಹ್ಯುಂಡೈ ಕಂಪನಿಯ ಕೋನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ.

ಹೊಸ ಕಾರಿನ ಟೀಸರ್ ಬಿಡುಗಡೆಗೊಳಿಸಿದ ಎಂ‍‍ಜಿ ಮೋಟಾರ್

ಸದ್ಯಕ್ಕೆ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.23.7 ಲಕ್ಷಗಳಾಗಿದೆ. ಎಂಜಿ ಕಂಪನಿಯು ಇಂಗ್ಲೆಂಡಿನಲ್ಲಿ ಈ ಎಲೆಕ್ಟ್ರಿಕ್ ಕಾರಿಗೆ ರೂ.25 ಲಕ್ಷ ಬೆಲೆಯನ್ನು ನಿಗದಿಪಡಿಸಿದೆ. ಭಾರತದಲ್ಲಿ ಸುಮಾರು ರೂ. 2 - 3 ಲಕ್ಷ ಕಡಿಮೆಗೊಳಿಸುವ ಸಾಧ್ಯತೆಗಳಿವೆ. ಹೀಗಾಗಿ ಈ ಕಾರಿನ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ರೂ.18ರಿಂದ 19 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
MG ZS electric SUV teased ahead of India launch - Read in kannada
Story first published: Monday, September 16, 2019, 18:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X