ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಹೊಸ ಕಾರು ಖರೀದಿ ವೇಳೆ ಬಹುತೇಕ ಗ್ರಾಹಕರಿಗೆ ಯಾವ ಮಾದರಿಯನ್ನು ಖರೀದಿ ಮಾಡಿದ್ದಲ್ಲಿ ಹೆಚ್ಚು ಅನುಕೂಲ ಎನ್ನುವ ಗೊಂದಲಗಳು ಇರುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಎಂಜಿ ಮೋಟಾರ್ ಸಂಸ್ಥೆಯು ತನ್ನ ಹೆಕ್ಟರ್ ಕಾರು ಬಿಡುಗಡೆಗೂ ಮುನ್ನ ಗ್ರಾಹಕರಿಗೆ ಹೊಸದೊಂದು ಸೌಲಭ್ಯ ತೆರೆದಿದ್ದು, ಆನ್‌ಲೈನ್ ಮೂಲಕ ಕಾರು ಖರೀದಿಯ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭವಾಗಿಸಲು ಮುಂದಾಗಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಹೌದು, ಎಂಜಿ ಮೋಟಾರ್ ಸಂಸ್ಥೆಯು ಐಷಾರಾಮಿ ಕಾರು ಸಂಸ್ಥೆಗಳ ಮಾದರಿಯಲ್ಲೇ ಆನ್‌ಲೈನ್ ಮೂಲಕ ಹೊಸ ಕಾರಿನ ಬಿಡಿಭಾಗಳನ್ನು ಆಯ್ಕೆ ಮಾಡಬಹುದಾದ ಸೌಲಭ್ಯವನ್ನು ತೆರೆದಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಹೊಸ ಕಾರಿನ ತಾಂತ್ರಿಕ ಸೌಲಭ್ಯಗಳ ಪಟ್ಟಿಯನ್ನು ಸಿದ್ದಮಾಡಿಕೊಳ್ಳಬಹುದಾಗಿದೆ. ಇದರಿಂದ ಗ್ರಾಹಕರು ಕಾರು ಖರೀದಿಗೂ ಮುನ್ನ ಯಾವ ಸೌಲಭ್ಯ ಬೇಕು ಅಥವಾ ಬೇಡ ಎಂಬುವುದನ್ನು ನಿರ್ಧರಿಸಬಹುದಾಗಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಈಗಾಗಲೇ ಬಹುತೇಕ ಐಷಾರಾಮಿ ಕಾರು ಸಂಸ್ಥೆಗಳು ಇದೇ ವ್ಯವಸ್ಥೆಯನ್ನು ಅನುಸರಿಸುತ್ತಿದ್ದು, ಗ್ರಾಹಕರು ಹೊಸ ಕಾರು ಖರೀದಿಗೂ ಮುನ್ನ ತಮ್ಮ ಕನಸಿನ ಕಾರು ಹೇಗಿರಬೇಕು ಎಂಬುವುದರ ಸ್ಪಷ್ಟ ಚಿತ್ರಣವನ್ನು ಪಡೆಯಬಹುದಾಗಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಎಂಜಿ ಮೋಟಾರ್ ಸಹ ಇದೇ ನಿಟ್ಟಿನಲ್ಲಿ ಹೆಕ್ಟರ್ ಖರೀದಿ ಮಾಡಬಯಸುವ ಗ್ರಾಹಕರಿಗೆ ಆನ್‌ಲೈನ್ ಮೂಲಕವೇ ಬಿಡಿಭಾಗಗಳ ಆಯ್ಕೆಯ ಸೌಲಭ್ಯವನ್ನು ತೆರೆದಿದ್ದು, ಕೆಲವು ಕಡ್ಡಾಯ ಸೌಲಭ್ಯಗಳನ್ನು ಹೊರತುಪಡಿಸಿ ಹೆಚ್ಚಿನ ಮಟ್ಟದ ಬಿಡಿಭಾಗಗಳ ಆಯ್ಕೆ ಮಾಡುವುದರ ಆಧಾರ ಮೇಲೆ ಕಾರಿನ ಬೆಲೆಗಳ ಬಗ್ಗೆ ನಿಮಗೆ ಪಟ್ಟಿ ಮಾಡಿಕೊಡುವ ಮೂಲಕ ನಿಮ್ಮ ಬಜೆಟ್‌ಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಡಲು ಸಹಕಾರಿಯಾಗಲಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಇದರಿಂದ ಹೊಸ ಕಾರು ಖರೀದಿ ವೇಳೆ ಯಾವ ವೆರಿಯೆಂಟ್ ಖರೀದಿಸಿದರೆ ಒಳ್ಳೆಯದು? ಕಾರಿನಲ್ಲಿ ಯಾವೆಲ್ಲಾ ಸೌಲಭ್ಯಗಳು ಬೇಕಾಗಬಹುದು? ಬಜೆಟ್ ತಕ್ಕಂತೆ ಕಾರು ಖರೀದಿಸಲು ಸಾಧ್ಯವೇ? ಎನ್ನುವಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಶೋರೂಂಗೆ ತೆರಳುವ ಬದಲು ಆನ್‌ಲೈನ್ ಮೂಲಕವೇ ವೆರಿಯೆಂಟ್ ಆಯ್ಕೆ ಮಾಡಿ ಅದಕ್ಕೆ ಯಾವೆಲ್ಲಾ ಬಿಡಿಭಾಗಗಳು ಬೇಕಾಗಬಹುದು ಎನ್ನುವುದು ತಿಳಿದುಕೊಳ್ಳುವ ಮೂಲಕ ಕಾರು ಖರೀದಿಯನ್ನು ಸುಲಭವಾಗಿಸಬಹುದಾಗಿದೆ.

ಒಂದು ವೇಳೆ ನೀವು ಕೂಡಾ ಎಂಜಿ ಹೆಕ್ಟರ್ ಖರೀದಿಸುವ ಯೋಜನೆಯಲ್ಲಿದ್ದಲ್ಲಿ ಎಂಜಿ ಮೋಟಾರ್ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಆಕ್ಸೆರಿಸ್ ಆಯ್ಕೆ ಮೂಲಕ ನಿಮ್ಮ ಕನಸಿನ ಕಾರನ್ನು ಕೆಲವೇ ನಿಮಿಷಗಳಲ್ಲಿ ಸಿದ್ದಪಡಿಸಿಕೊಳ್ಳಬಹುದಾಗಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಇನ್ನು ಹೆಕ್ಟರ್ ಎಸ್‌ಯುವಿ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎಂಜಿನ್ ಸೌಲಭ್ಯವನ್ನು ಹೊತ್ತು ಬರಲಿದ್ದು, ಮೈಲೇಜ್ ವಿಚಾರವಾಗಿ ಎಸ್‌ಯುವಿ ಖರೀದಿದಾರರ ಗಮನಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ಹೆಕ್ಟರ್ ಕಾರು ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ ಮಾದರಿಯನ್ನು ಪಡೆದುಕೊಳ್ಳಲಿದ್ದು, ಮಾಲಿನ್ಯ ಉತ್ಪಾದನೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಹೊಸ ಕಾರಿನಲ್ಲಿ ಪೆಟ್ರೋಲ್ ಆವೃತ್ತಿಯು 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 141-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಹಾಗೆಯೇ ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಪಡೆದುಕೊಂಡಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ.

ಕಾರಿನ ಮೈಲೇಜ್

*ಪೆಟ್ರೋಲ್ ವರ್ಷನ್(ಆಟೋಮ್ಯಾಟಿಕ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 13.96 ಕಿ.ಮಿ

*ಪೆಟ್ರೋಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 14.16 ಕಿ.ಮಿ

*ಪೆಟ್ರೋಲ್ ಎಂಜಿನ್ ಜೊತೆ 48 ವೊಲ್ಟ್ ಮೈಲ್ಡ್ ಹೈಬ್ರಿಡ್(ಮ್ಯಾನುವಲ್ ಗೇರ್‌ಬಾಕ್ಸ್) - ಪ್ರತಿ ಲೀಟರ್‌ಗೆ 15.81 ಕಿ.ಮಿ

*ಡಿಸೇಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 17.41 ಕಿ.ಮಿ

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಇದರೊಂದಿಗೆ ಹೊಸ ಕಾರಿನಲ್ಲಿ ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ರಿಮೋಟ್ ಕಾರ್ ಆಪರೇಷನ್, ಸ್ಮಾರ್ಟ್ ಸಿಮ್ ಪ್ರೇರಿತ ಇಂಟರ್‌ನೆಟ್ ಸೌಲಭ್ಯ, 10.4-ಇಂಚಿನ ಟಚ್ ಇನ್ಪೋಟೈನ್ ಸಿಸ್ಟಂ, 8-ಸ್ಪೀಕರ್ಸ್‌ಗಳು, ಆನ್ ಲೈನ್ ನೆವಿಗೇಷನ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, 7-ಇಂಚಿನ ಮಲ್ಟಿ ಇನ್ಪಾರ್ಮೆಷನ್ ಡಿಸ್‌ಪ್ಲೇ, ಪವರ್ ಅಡ್ಜೆಸ್ಟೆಬಲ್ ರಿಯರ್ ವ್ಯೂ ಮಿರರ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಪಡೆದುಕೊಂಡಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಜೊತೆಗೆ ಹೊಸ ಕಾರಿನಲ್ಲಿ ರೂಫ್ ರೈಲ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್, 360 ಡಿಗ್ರಿ ವ್ಯೂವ್ ಕ್ಯಾಮೆರಾ, ಎರಡು ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್, ರಿಯರ್ ಎಸಿ ವೆಂಟ್ಸ್, ಸನ್ ಗ್ಲಾಸ್ ಹೊಲ್ಡರ್, ಡ್ರೈವರ್ ಆರ್ಮ್ ರೆಸ್ಟ್, ಪನಾರೊಮಿಕ್ ಸನ್‌ರೂಫ್, 17-ಇಂಚಿನ ಅಲಾಯ್ ವೀಲ್ಹ್, ರಿಯರ್ ಸೀಟ್ ಆರ್ಮ್ ರೆಸ್ಟ್, ಆರು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಸೌಲಭ್ಯದೊಂದಿಗೆ ಲೆದರ್ ಸೀಟ್‌ಗಳನ್ನು ಜೋಡಿಸಲಾಗಿದೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಪ್ರಯಾಣಿಕರ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆಗೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಕ್ರೂಸ್ ಕಂಟ್ರೊಲರ್ ISOFIX ಚೈಲ್ಡ್ ಸೀಟ್, ಎಲೆಕ್ಟ್ರಿಕ್ ಹ್ಯಾಂಡಲ್ ಬ್ರೇಕ್ ಸೇರಿದಂತೆ ಹಲವು ಹೊಸ ಫೀಚರ್ಸ್ ಈ ಕಾರಿನಲ್ಲಿವೆಯೆಂತೆ.

ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಸ ಕಾರು ಖರೀದಿಸಲು ವಿನೂತನ ಸೌಲಭ್ಯ ತೆರೆದ ಎಂಜಿ ಮೋಟಾರ್

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಇದೇ ತಿಂಗಳು ಕೊನೆಯ ವಾರದಲ್ಲಿ ಬಿಡುಗಡೆಯಾಗಲಿರುವ ಎಂಜಿ ಮೋಟಾರ್ ಹೆಕ್ಟರ್ ಕಾರು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14. 50 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
MG Hector Accessories Full List. Read in Kannada.
Story first published: Tuesday, June 11, 2019, 15:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X