ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಎಂಜಿ ಮೋಟಾರ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೆಕ್ಟರ್ ಮೂಲಕ ಮೊದಲ ಕಾರು ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದ್ದು, ಪ್ರೀಮಿಯಂ ವೈಶಿಷ್ಟ್ಯತೆಯುಳ್ಳ ಹೆಕ್ಟರ್ ಎಸ್‌ಯುವಿ ಕಾರು ಮಾದರಿಯು ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ರತಿಸ್ಪರ್ಧಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಕಳೆದ ತಿಂಗಳ ಹಿಂದಷ್ಟೇ ತನ್ನ ಬಹುನೀರಿಕ್ಷಿತ ಹೆಕ್ಟರ್ ಎಸ್‌ಯುವಿ ಮಾದರಿಯನ್ನು ಅನಾವರಣಗೊಳಿಸಿದ್ದ ಎಂಜಿ ಮೋಟಾರ್ ಸಂಸ್ಥೆಯು ಇದೀಗ ಹೊಸ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿರುವ ಹೆಕ್ಟರ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೆಕ್ಟರ್ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎಂಜಿನ್ ಸೌಲಭ್ಯವನ್ನು ಹೊತ್ತು ಬಂದಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.18 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 16.88 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಸ್ಟೈಲ್, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಹೆಕ್ಟರ್ ಕಾರು ಖರೀದಿಗೆ ಲಭ್ಯವಿದ್ದು, ಪ್ರತಿ ವೆರಿಯೆಂಟ್‌ಗಳಲ್ಲೂ ಬೆಲೆಗೆ ಅನುಗುಣವಾಗಿ ವಿವಿಧ ಮಾದರಿಯ ತಾಂತ್ರಿಕ ಅಂಶಗಳನ್ನು ಜೋಡಿಸಲಾಗಿದೆ. ಇದರಲ್ಲಿ ಸ್ಮಾರ್ಟ್ ಹೈಬ್ರಿಡ್ ಮಾದರಿಗಳು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಐಷಾರಾಮಿ ಸೌಲಭ್ಯಗಳು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಕಾರಿನ ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ಹೆಕ್ಟರ್ ಸ್ಟೈಲ್ (ಪೆಟ್ರೋಲ್)- ರೂ. 12.18 ಲಕ್ಷ

ಹೆಕ್ಟರ್ ಸೂಪರ್ (ಪೆಟ್ರೋಲ್)- ರೂ. 12.98 ಲಕ್ಷ

ಹೆಕ್ಟರ್ ಸೂಪರ್ (ಪೆಟ್ರೋಲ್ ಹೈಬ್ರಿಡ್)- ರೂ. 13.58 ಲಕ್ಷ

ಹೆಕ್ಟರ್ ಸ್ಮಾರ್ಟ್ (ಪೆಟ್ರೋಲ್ ಹೈಬ್ರಿಡ್)- ರೂ. 14.68 ಲಕ್ಷ

ಹೆಕ್ಟರ್ ಶಾರ್ಪ್ (ಪೆಟ್ರೋಲ್ ಹೈಬ್ರಿಡ್)- ರೂ. 15.88 ಲಕ್ಷ

ಹೆಕ್ಟರ್ ಸ್ಟೈಲ್ (ಡೀಸೆಲ್)- ರೂ. 13.18 ಲಕ್ಷ

ಹೆಕ್ಟರ್ ಸೂಪರ್ (ಡೀಸೆಲ್)- ರೂ. 14.18 ಲಕ್ಷ

ಹೆಕ್ಟರ್ ಸ್ಮಾರ್ಟ್ (ಡೀಸೆಲ್)- ರೂ. 15.48 ಲಕ್ಷ

ಹೆಕ್ಟರ್ ಶಾರ್ಪ್ (ಡೀಸೆಲ್)- ರೂ. 16.88 ಲಕ್ಷ

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಇನ್ನು ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಸದ್ಯಕ್ಕೆ ಬಿಎಸ್-4 ವೈಶಿಷ್ಟ್ಯತೆಗಳಿಗೆ ಅನುಗುಣವಾಗಿಯೇ ಹೊಸ ಎಂಜಿನ್ ಸೌಲಭ್ಯ ಹೊಂದಿರುವ ಹೆಕ್ಟರ್ ಕಾರು ಮುಂಬರುವ ಕೆಲವೇ ದಿನಗಳಲ್ಲಿ ಬಿಎಸ್-6 ಎಂಜಿನ್‌ಗೆ ಉನ್ನತಿಕರಣ ಹೊಂದಲಿದ್ದು, ಸ್ಮಾಟ್ ಹೈಬ್ರಿಡ್ ತಂತ್ರಜ್ಞಾನವು ಮೈಲೇಜ್ ಪ್ರಮಾಣದಲ್ಲಿ ಶೇ.14ರಷ್ಟು ಹೆಚ್ಚಳಕ್ಕೆ ಕಾರಣವಾದರೆ ಶೇ.11 ರಷ್ಟು ಕಾರ್ಬನ್ ಹೊರಸೂಸುವ ಪ್ರಮಾಣವನ್ನು ತಗ್ಗಿಸಲಿದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಕಾರಿನ ಮೈಲೇಜ್

*ಪೆಟ್ರೋಲ್ ವರ್ಷನ್(ಆಟೋಮ್ಯಾಟಿಕ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 13.96 ಕಿ.ಮಿ

*ಪೆಟ್ರೋಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 14.16 ಕಿ.ಮಿ

*ಪೆಟ್ರೋಲ್ ಎಂಜಿನ್ ಜೊತೆ 48 ವೊಲ್ಟ್ ಮೈಲ್ಡ್ ಹೈಬ್ರಿಡ್(ಮ್ಯಾನುವಲ್ ಗೇರ್‌ಬಾಕ್ಸ್) - ಪ್ರತಿ ಲೀಟರ್‌ಗೆ 15.81 ಕಿ.ಮಿ

*ಡಿಸೇಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 17.41 ಕಿ.ಮಿ

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಜೊತೆಗೆ ಹೆಕ್ಟರ್ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿದ್ದು, ಬ್ಲ್ಯಾಕ್ ಕಲರ್ ಥೀಮ್ ಇಂಟಿರಿಯರ್‌ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‌ಮೆಂಟ್ ಕಂಟ್ರೋಲ್, ನೆವಿಗೇಷನ್ ನಿಯಂತ್ರಿಸಬಲ್ಲ 10.4-ಇಂಚಿನ ವರ್ಟಿಕಲ್ ಸ್ಟ್ರಾಕ್ಡ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈ ನೀಡಲಾಗಿದೆ.

MOST READ: ಇನ್ಮುಂದೆ ಹೊಸ ವಾಹನಗಳ ನೋಂದಣಿ ಅಷ್ಟು ಸುಲಭವಲ್ಲ..!

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಇದರಲ್ಲಿ ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಆ್ಯಂಬಿಯೆಂಟ್ ಲೈಟ್ಸ್ (8 ಬಣ್ಣಗಳಲ್ಲಿ), ಲೆದರ್ ಅಪ್‌ಹೊಲಿಸ್ಟ್ರೈ( ಟಾಪ್ ಎಂಡ್ ಮಾಡೆಲ್‌ಗಳಲ್ಲಿ), 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟು, ಪನೊರೊಮಿಕ್ ಸನ್‌ರೂಫ್, ಟಿಲ್ಟ್ ಆ್ಯಂಡ್ ಟೆಲಿಸ್ಕೊಪಿಕ್ ಸ್ಟಿರಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಆಟೋ ಎಸಿ ಜೊತೆ ರಿಯರ್ ವೆಂಟ್ಸ್ , ಪ್ರೀಮಿಯಂ ಇನ್ಫಿನಿಟಿ ಸೌಂಡ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಅಂಡ್ರಾಯಿಡ್ ಆಡಿಯೋ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಿವೆ.

MOST READ: ರೂ.10 ಲಕ್ಷದೊಳಗೆ ದೊರೆಯಲಿರುವ ಈ ಕಾರು 300ಕಿ.ಮಿ ಮೈಲೇಜ್ ನೀಡುತ್ತೆ..!

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ರಿಮೋಟ್ ಕೀ ಲೆಸ್ ಎಂಟ್ರಿ, ವೆಲ್‌ಕಮ್ ಲೈಟ್, ಹೈಟ್ ಅಡ್ಜೆಸ್ಟ್ ಹೆಡ್ ರೆಸ್ಟ್, ಫ್ರಂಟ್ ಮತ್ತು ರಿಯರ್ ಫಾಸ್ಟ್-ಚಾರ್ಜಿಂಗ್ ಪೋರ್ಟ್ಸ್, ಗ್ಲೋ ಬಾಕ್ಸ್, ಡ್ರೈವರ್ ಆರ್ಮ್ ರೆಸ್ಟ್, 60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಆಸನ, ಆಟೋ ಎಸಿ, ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯವು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

ಆಕರ್ಷಕ ಬೆಲೆಗಳಲ್ಲಿ ಎಂಜಿ ಹೆಕ್ಟರ್ ಎಸ್‌ಯುವಿ ಬಿಡುಗಡೆ

ಒಟ್ಟಿನಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಹೆಕ್ಟರ್ ಕಾರು ಎಂಜಿ ಮೋಟಾರ್ ಸಂಸ್ಥೆಗೆ ಭಾರತದಲ್ಲಿ ಜನಪ್ರಿಯತೆ ತಂದುಕೊಡುವ ನೀರಿಕ್ಷೆಯಿದ್ದು, ಮಾರುಕಟ್ಟೆಯಲ್ಲಿ ಸದ್ಯ ಎಸ್‌ಯುವಿ ವಿಭಾಗದಲ್ಲಿ ಗರಿಷ್ಠ ಮಾರಾಟ ಹೊಂದಿರುವ ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡುವ ಎಲ್ಲಾ ಅರ್ಹತೆಯೂ ಈ ಕಾರಿಗಿದೆ.

Most Read Articles

Kannada
English summary
MG Hector Launched In India — Prices Start At Rs 12.18 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X