ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಇತ್ತೀಚೆಗೆ ಎಂಜಿ ಹೆಕ್ಟರ್ ಎಸ್‍‍ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಕಾರಿಗೆ ಗ್ರಾಹಕರು ಪುಲ್ ಫಿಧಾ ಆಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇದೇ ಕಾರಣದಿಂದ ಎಂಜಿ ಹೆಕ್ಟರ್ ಉತ್ಪಾದನೆಯು 10,000 ಗಡಿ ದಾಟಿದೆ ಮತ್ತು ಗುಜರಾತ್‌ನ ಬರೋಡಾದಲ್ಲಿರುವ ಕಂಪನಿಯ ಸ್ಥಾವರದಿಂದ ಉತ್ಪಾದನಾ ಹಂತದಲ್ಲಿರುವ ಫೋಟೋವೊಂದು ಸೋರಿಕೆಯಾಗಿದೆ.

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್ ಉತ್ಪಾದನೆಯು 5,000 ದಾಟಿದೆ ಎಂದು ಎಂಜಿ ಇಂಡಿಯಾ ಕಂಪನಿಯು ಕಳೆದ ಸೆಪ್ಟೆಂಬರ್ 5 ರಂದು ಘೋಷಿಸಿತ್ತು. ಕಂಪನಿಯು ಹೆಕ್ಟರ್ ಮೊದಲ 5,0000 ಯು‍‍ನಿ‍ಟ್‍‍ಗಳನ್ನು ಉತ್ಪಾದಿಸಲು ಸುಮಾರು 3 ತಿಂಗಳುಗಳ ಕಾಲ ಅವಧಿಯನ್ನು ತೆಗೆದುಕೊಂಡಿತ್ತು. ಆದರೆ ಮುಂದಿನ 5,000 ಯು‍‍ನಿ‍ಟ್‍ಗಳನ್ನು 1.5 ತಿಂಗಳಲ್ಲಿ ಉತ್ಪಾದಿಸಲಾಗಿದೆ. ಪ್ರಾರಂಭದ ಸಮಯದಲ್ಲಿ ಮಾಸಿಕ ಉತ್ಪಾದನೆಯು 1,500 ಯು‍‍ನಿ‍ಟ್‍ಗಳಾಗಿತ್ತು. ಆದರೆ ಭಾರೀ ಬೇಡಿಕೆಯಿಂದಾಗಿ, ಉತ್ಪಾದನೆಯನ್ನು ತಿಂಗಳಿಗೆ 3,000 ಯುನಿ‍‍ಟ್‍ಗಳಿಗೆ ಹೆಚ್ಚಿಸಲಾಗಿದೆ.

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಕಾಯುವ ಅವಧಿಯನ್ನು ಕಡಿಮೆ ಮಾಡಲು ಎಂಜಿ ಇಂಡಿಯಾ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಂಪನಿಯು 40,000 ಬುಕ್ಕಿಂಗ್ ಅನ್ನು ದಾಖಲಿಸಿದ್ದು, ಅದರಲ್ಲಿ 6,000 ಕ್ಕೂ ಹೆಚ್ಚು ಯು‍ನಿ‍ಟ್‍‍ಗಳನ್ನು ವಿತರಿಸಲಾಗಿದೆ.

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಭಾರತದಲ್ಲಿ ಕಿಯಾ ಮೋಟಾರ್ಸ್ ಅವರ ಸೆಲ್ಟೋಸ್ ಮೊದಲ ಕಾರು ಇದ್ದಂತೆ, ಹೆಕ್ಟರ್ ಕೂಡ ದೇಶದ ಎಂಜಿ ಮೋಟಾರ್‍‍ನ ಮೊದಲ ಕಾರು ಇದಾಗಿದೆ. ಎಂಜಿ ಹೆಕ್ಟರ್ 5 ಸೀಟ್ ಮಧ್ಯಮ ಗಾತ್ರದ ಎಸ್‍‍ಯು‍ವಿಯಾಗಿದ್ದು, ಈ ಎಸ್‍‍ಯುವಿಯನ್ನು ಸ್ಟೈಲ್, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಎಂಬ ನಾಲ್ಕು ಟ್ರಿಮ್‍‍ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಬಿಡುಗಡೆಯಾದ ಕೇವಲ ಒಂದು ತಿಂಗಳಲ್ಲಿ 1,508 ಯು‍‍ನಿ‍ಟ್‍ಗಳು ಮಾರಾಟವಾಗಿದ್ದರೆ, ಆಗಸ್ಟ್ ತಿಂಗಳಲ್ಲಿ 2,600 ಯುನಿ‍‍ಟ್‍ಗಳಿಗಿಂತ ಹೆಚ್ಚು ಮಾರಾಟವಾಗಿವೆ. ಆಕ್ಟೋಬರ್ ತಿಂಗಳಲ್ಲಿ 3,000 ಯು‍ನಿ‍ಟ್‍ಗಳ ಗಡಿ ದಾಡುವ ನಿರೀಕ್ಷೆಯಿದೆ. ಬಿಡುಗಡೆಯಾದಾಗಿನಿಂದಲೂ ಹೆಕ್ಟರ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಎಸ್‍‍ಯು‍ವಿಯಾಗಿದೆ.

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಎಂಜಿ ಹೆಕ್ಟರ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 143ಬಿಹೆಚ್‍‍ಪಿ ಪವರ್ ಮತ್ತು 250ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯಲ್ಲಿ 2.0 ಲೀಟರ್ ಟಬೋಜಾರ್ಜ್ಡ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮೂಲಕ 170ಬಿಹೆಚ್‍‍ಪಿ ಪವರ್ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ.

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಇದರಲ್ಲಿ ಬ್ಲ್ಯಾಕ್ ಕಲರ್ ಥೀಮ್ ಹೊಂದಿರುವ ಇಂಟರಿಯರ್‍‍ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‍‍‍ಮೆಂಟ್ ಕಂಟ್ರೋಲ್, ಆಟೋ ಎಸಿ, ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಆಟೋಮ್ಯಾಟಿಕ್ ಹೆಡ್‍‍‍ಲ್ಯಾಂಪ್, 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಡಿಸ್‍‍ಪ್ಲೈ ಸೌಲಭ್ಯವಿದೆ. ಎಂಜಿ ಹೆಕ್ಟರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 12.18 ಲಕ್ಷಗಳಾಗಿದ್ದು, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ. 16.68 ಲಕ್ಷಗಳಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದ್ದು, ಏರ್‍‍ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಸೌಲಭ್ಯವನ್ನು ಒದಗಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಆಟೋಮೊಬೈಲ್ ಮಂದಗತಿಯಲ್ಲಿ ಸಾಗುತ್ತಿರುವ ವೇಳೆಯಲ್ಲಿ ಭಾರತದಲ್ಲಿ ಎಂಜಿ ಹೆಕ್ಟರ್ ಉತ್ತಮ ಮಾರಾಟವಾಗಿ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದೆ. ಹೆಕ್ಟರ್ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿರುವುದರಿಂದ ಎಂಜಿ ಮೋಟಾರ್ ಇಂಡಿಯಾ ಕಂಪನಿಗೆ ಮುಂದಿನ ಹೆಜ್ಜೆ ಇಡಲು ಸಹಾಯವಾಗಿದೆ. ಮುಂದಿನ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯು ಹೆಚ್ಚಿನ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಉತ್ಪಾದನೆಯಲ್ಲಿ 10,000 ಗಡಿ ದಾಟಿದ ಎಂಜಿ ಹೆಕ್ಟರ್

ಭಾರತದಲ್ಲಿ ಎಂಜಿ ಇಂಡಿಯಾ ಕಂಪನಿಯು ಎಲೆಕ್ಟ್ರಿಕ್ ಝಡ್‍ಎಸ್ ಎಸ್‍‍ಯು‍ವಿಯನ್ನು ಬಿಡುಗಡೆ ಮಾಡಲಿದೆ. ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯನ್ನು ಹೊಂದಿದೆ. ಇದರ ಬೆಲೆ ರೂ.20 ಲಕ್ಷವೆಂದು ಅಂದಾಜಿಸಲಾಗಿದೆ. ನಂತರದಲ್ಲಿ ಎಂಜಿ ಹೆಕ್ಟರ್‌ನ ಹೆಚ್ಚು ಪ್ರೀಮಿಯಂ ರೂಪಾಂತರವನ್ನು ಬಿಡುಗಡೆ ಮಾಡಲಿವೆ.

Most Read Articles

Kannada
English summary
MG Hector production crosses 10,000 units - Read in Kannada
Story first published: Saturday, October 19, 2019, 12:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X