ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಜುಲೈ ಮಧ್ಯಂತರದಲ್ಲಿ ಬಿಡುಗಡೆಗೊಂಡಿದ್ದ ಎಂಜಿ ಹೆಕ್ಟರ್ ಎಸ್‌ಯುವಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಅಚ್ಚರಿ ಬೆಳವಣಿಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಗಸ್ಟ್ ಅವಧಿಯ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆಯೊಂದಿಗೆ ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಅತಿ ಕಡಿಮೆ ಬೆಲೆಗಳಲ್ಲಿ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಎಂಜಿ ಹೆಕ್ಟರ್ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದು, ಈಗಾಗಲೇ ಹೆಕ್ಟರ್ ಖರೀದಿಗಾಗಿ ಸುಮಾರು 28 ಸಾವಿರಕ್ಕೂ ಹೆಚ್ಚು ಗ್ರಾಹಕರು ರೂ.50 ಸಾವಿರ ಮುಂಗಡ ಪಾವತಿಸಿ ಹೆಕ್ಟರ್ ಖರೀದಿಯ ನೀರಿಕ್ಷೆಯಲ್ಲಿದ್ದಾರೆ. ಆದರೆ ಕಡಿಮೆ ಕಾರು ಉತ್ಪಾದನಾ ಸಾಮಾರ್ಥ್ಯ ಹೊಂದಿರುವ ಎಂಜಿ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಕಾರು ಉತ್ಪಾದನೆ ಹೆಚ್ಚಿಸಲು ಹಲವು ಕ್ರಮಕೈಗೊಂಡಿದ್ದು, ಅಗಸ್ಟ್ ಅವಧಿಯಲ್ಲಿ 2,018 ಯನಿಟ್ ಮಾರಾಟ ಮಾಡಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಗುಜುರಾತ್‌ನಲ್ಲಿರುವ ಎಂಜಿ ಕಾರು ಉತ್ಪಾದನಾ ಘಟಕದಲ್ಲಿ ತಿಂಗಳಿಗೆ ಕೇವಲ 2 ಸಾವಿರ ಕಾರುಗಳ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಹಿನ್ನಲೆ ಕಾರು ಉತ್ಪಾದನೆಯನ್ನು ಹೆಚ್ಚಿಸಲು ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಕಾರು ಉತ್ಪಾದನಾ ಘಟಕ ವಿಸ್ತರಣಾ ಪ್ರಕ್ರಿಯೆಗಳಿಂದಾಗಿ ಪ್ರಸ್ತುತ ಕಾರು ಉತ್ಪಾದನೆಯಲ್ಲೂ ಕುಂಠಿತವಾಗುತ್ತಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಇದೇ ಕಾರಣಕ್ಕೆ ಗ್ರಾಹಕರ ಬೇಡಿಕೆಯೆಂತೆ ಕನಿಷ್ಠ ಪ್ರಮಾಣದ ಕಾರು ಮಾರಾಟ ಮಾಡಲು ಸಹ ಹರಸಾಹಸ ಪಡುತ್ತಿರುವ ಎಂಜಿ ಸಂಸ್ಥೆಯು ಮುಂದಿನ ತಿಂಗಳಿನಿಂದ ಹೊಸ ಕಾರು ವಿತರಣೆಯನ್ನು ಹೆಚ್ಚಿಸಲು ಮಹತ್ವದ ಬದಲಾವಣೆ ತರುತ್ತಿದ್ದು, ಪ್ರತಿ ತಿಂಗಳು 3 ಸಾವಿರದಿಂದ 4 ಸಾವಿರ ಕಾರುಗಳನ್ನು ಪೂರೈಕೆ ಮಾಡುವ ಗುರಿಹೊಂದಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಸದ್ಯ ಎಂಜಿ ಹೆಕ್ಟರ್ ಖರೀದಿದಾಗಿ 28 ಸಾವಿರ ಗ್ರಾಹಕರು ಬೇಡಿಕೆ ಸಲ್ಲಿಸಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಕಾರು ವಿತರಣೆಯ ಮೇಲೆ ಹೆಚ್ಚಿನ ಗಮನಹರಿಸಿರುವ ಎಂಜಿ ಸಂಸ್ಥೆಯು ಮುಂದಿನ ಕೆಲ ತಿಂಗಳ ಕಾಲ ಹೆಕ್ಟರ್ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಿದ್ದು, ಅತಿ ಕಡಿಮೆ ಅವಧಿಯಲ್ಲಿ ಕಾರು ವಿತರಣೆಗಾಗಿ ಭರ್ಜರಿ ಸಿದ್ದತೆ ನಡೆಸಿದೆ. ಒಂದು ವೇಳೆ ಎಂಜಿ ನಿರ್ಮಾಣ ಮಾಡುತ್ತಿರುವ ಹೊಸ ಕಾರು ಉತ್ಪಾದನಾ ಘಟಕವು ಕಾರ್ಯನಿರ್ವಹಣೆ ಆರಂಭಿಸಿದ್ದಲ್ಲಿ ಕಾಯುವಿಕೆಯ ಅವಧಿಯು ಗಣನೀಯವಾಗಿ ತಗ್ಗಲಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಇನ್ನು ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಎಂಜಿ ಹೆಕ್ಟರ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ.12.18 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು ಈ ಕಾರಿನ ಟಾಪ್ ಎಂಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.68 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರಿನ ಪೆಟ್ರೋಲ್ ಡಿಸಿಟಿ ಮಾಡೆಲ್‍ಗಳಿಗೆ ಹೆಚ್ಚು ಬೇಡಿಕೆಯಿದ್ದು, ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಆಕರ್ಷಕ ಬೆಲೆಗಳಲ್ಲಿ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್‍, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್‌ಗಳನ್ನು ನೀಡಲಾಗುತ್ತಿದ್ದು, ಎಂಜಿ ಹೆಕ್ಟರ್ ಬೇಡಿಕೆಗೆ ಇದೇ ಪ್ರಮಖ ಕಾರಣವಾಗಿದೆ.

MOST READ: ಮಾರುತಿ ಎರ್ಟಿಗಾ ಕಾರಿಗೆ ಪೈಪೋಟಿಯಾಗಿ ವಿನೂತನ ಎಂಪಿವಿ ಬಿಡುಗಡೆ ಮಾಡಲಿದೆ ಹ್ಯುಂಡೈ

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಎಂಜಿನ್ ಸಾಮರ್ಥ್ಯ

ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಹೆಚ್ಚಿದ ಟ್ರಾಫಿಕ್ ದಟ್ಟಣೆ- ಬೆಂಗಳೂರಿನಲ್ಲಿ ವಾಹನಗಳ ಸರಾಸರಿ ವೇಗ ಎಷ್ಟು ಗೊತ್ತಾ?

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಇದರಲ್ಲಿ ಐ ಸ್ಮಾರ್ಟ್ ಕನೆಕ್ವಿವಿಟಿ ಸೌಲಭ್ಯವು ಹೆಕ್ಟರ್ ಕಾರಿಗೆ ಮತ್ತಷ್ಟು ಮೆರಗು ತಂದಿರುವುದಲ್ಲದೇ ಕಾರಿಗೂ ಗರಿಷ್ಠ ಭದ್ರತೆ ಒದಗಿಸಲಿದ್ದು, ಪ್ಯಾಕೇಜ್ ಸೌಲಭ್ಯ ಹೊಂದಿರುವ ಐ ಸ್ಮಾರ್ಟ್ ಕನೆಕ್ಟಿವಿಟಿನಲ್ಲಿ ಧ್ವನಿ ಹಿಂಬಾಲಿಸುವಿಕೆ, ಲೈವ್ ವೆಹಿಕಲ್ ಟ್ರಾಕಿಂಗ್, ವೆಹಿಕಲ್ ಸ್ಟೆಟಸ್, ಜಿಯೋ ಫೆನ್ಸ್ ಸೇರಿದಂತೆ 50ಕ್ಕೂ ಹೆಚ್ಚು ಫೀಚರ್ಸ್ ಇದರಲ್ಲಿವೆ.

MOST READ: ಹಾರ್ದಿಕ್ ಪಾಂಡ್ಯ ಕಾರ್ ಕಲೆಕ್ಷನ್‌ನಲ್ಲಿ ಮತ್ತೊಂದು ದುಬಾರಿ ಸೂಪರ್ ಕಾರ್ ಸೇರ್ಪಡೆ

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಹಾಗೆಯೇ ಹೊಸ ಕಾರಿನಲ್ಲಿ ಆ್ಯಂಬಿಯೆಂಟ್ ಲೈಟ್ಸ್ (8 ಬಣ್ಣಗಳಲ್ಲಿ), ಲೆದರ್ ಅಪ್‌ಹೊಲಿಸ್ಟ್ರೈ( ಟಾಪ್ ಎಂಡ್ ಮಾಡೆಲ್‌ಗಳಲ್ಲಿ), 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕ ಸೀಟು, ಪನೊರೊಮಿಕ್ ಸನ್‌ರೂಫ್, ಟಿಲ್ಟ್ ಆ್ಯಂಡ್ ಟೆಲಿಸ್ಕೊಪಿಕ್ ಸ್ಟಿರಿಂಗ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಆಟೋ ಎಸಿ ಜೊತೆ ರಿಯರ್ ವೆಂಟ್ಸ್ , ಪ್ರೀಮಿಯಂ ಇನ್ಫಿನಿಟಿ ಸೌಂಡ್ ಸಿಸ್ಟಂ, ಫ್ರಂಟ್ ಆ್ಯಂಡ್ ರಿಯರ್ ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಅಂಡ್ರಾಯಿಡ್ ಆಡಿಯೋ, ಫುಶ್ ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯಗಳಿವೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ರಿಮೋಟ್ ಕೀ ಲೆಸ್ ಎಂಟ್ರಿ, ವೆಲ್‌ಕಮ್ ಲೈಟ್, ಹೈಟ್ ಅಡ್ಜೆಸ್ಟ್ ಹೆಡ್ ರೆಸ್ಟ್, ಫ್ರಂಟ್ ಮತ್ತು ರಿಯರ್ ಫಾಸ್ಟ್-ಚಾರ್ಜಿಂಗ್ ಪೋರ್ಟ್ಸ್, ಗ್ಲೋ ಬಾಕ್ಸ್, ಡ್ರೈವರ್ ಆರ್ಮ್ ರೆಸ್ಟ್, 60:40 ಅನುಪಾತದಲ್ಲಿ ಮಡಚಬಹುದಾದ ಹಿಂಬದಿ ಆಸನ, ಆಟೋ ಎಸಿ, ಪವರ್ ಅಡ್ಜೆಸ್ಟ್ ರಿಯರ್ ವ್ಯೂ ಮಿರರ್ ಸೌಲಭ್ಯವು ಪ್ರತಿ ವೇರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ ಎಂಜಿ ಹೆಕ್ಟರ್

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

Most Read Articles

Kannada
English summary
MG Hector Sales In India For August Registers 2,018 Units: Production To Increase From September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X