ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಎಂಜಿ ಮೋಟಾರ್ ನಿರ್ಮಾಣದ 5 ಸೀಟರ್ ಹೆಕ್ಟರ್ ಕಾರು ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ನೀರಿಕ್ಷೆಗೂ ಮೀರಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿರುವ ಎಂಜಿ ಸಂಸ್ಥೆಯು ಮುಂಬರುವ ಕೆಲವೇ ದಿನಗಳಲ್ಲಿ 7 ಸೀಟರ್ ಸೌಲಭ್ಯದ ಹೆಕ್ಟರ್ ಮಾದರಿಯನ್ನು ಬಿಡುಗಡೆಯ ಸುಳಿವು ನೀಡಿದ್ದು, ಅದಕ್ಕೂ ಮುನ್ನ 7 ಸೀಟರ್ ಮಾದರಿಯನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಇದೇ ವರ್ಷಾಂತ್ಯಕ್ಕೆ ಬಿಡುಗಡೆಗೊಳಿಸುವ ತವಕದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಎಂಜಿ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಅಷ್ಟೇ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ತನ್ನ ಕಾರು ಮಾರಾಟ ಜಾಲವನ್ನು ಹೊಂದಿದ್ದು, ಒಂದೇ ರೀತಿಯ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಹಲವು ಕಾರು ಮಾದರಿಗಳು ಬೇರೆ ಬೇರೆ ಹೆಸರಿನೊಂದಿಗೆ ವಿಶ್ವಾದ್ಯಂತ ಮಾರಾಟವಾಗುತ್ತಿವೆ. ಇದೀಗ ಇಂಡೋನೇಷ್ಯಾದಲ್ಲೂ ಕೂಡಾ ಎಂಜಿ ಮೋಟಾರ್ ಸಂಸ್ಥೆಯು ವುಲಿಂಗ್ ಮೋಟಾರ್ಸ್ ಜೊತೆಗೂಡಿ 7 ಸೀಟರ್ ಅಜ್ಮಾ ಕಾರನ್ನು ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಮಾಡುತ್ತಿದ್ದು, ಇದೇ ಕಾರು ಹೆಕ್ಟರ್ ಹೆಸರಿನಲ್ಲಿ ಭಾರತದಲ್ಲೂ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

5 ಸೀಟರ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಅಲ್ಮಾ ಕಾರು ವಿಸ್ತರಿತ ಒಳಾಂಗಣ ಸೌಲಭ್ಯದೊಂದಿಗೆ 7 ಸೀಟರ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಇದು ಭಾರತದಲ್ಲಿ ಹೆಕ್ಟರ್ ಹೆಸರಿನಲ್ಲಿ ರಸ್ತೆಗಿಳಿಯಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಕಳೆದ 2 ವರ್ಷ ಹಿಂದೆ ವುಲಿಂಗ್ ಮೋಟಾರ್ಸ್ ಜೊತೆಗೂಡಿ ಇಂಡೋನೆಷ್ಯಾ ಮಾರುಕಟ್ಟೆಯಲ್ಲಿ ಕಾರು ಮಾರಾಟಕ್ಕೆ ಚಾಲನೆ ನೀಡಿದ್ದ ಎಂಜಿ ಮೋಟಾರ್ ಸಂಸ್ಥೆಯು ಆರಂಭಿಕ ಹಂತದಲ್ಲಿ ಅಜ್ಮಾ 5 ಸೀಟರ್ ಕಾರನ್ನು ಬಿಡುಗಡೆ ಮಾಡಿತ್ತು. ತದನಂತರ ಇದೇ ಮೊದಲ ಬಾರಿಗೆ 7 ಸೀಟರ್ ಮಾದರಿಯ ಅಜ್ಮಾ ಕಾರನ್ನು ಬಿಡುಗಡೆಗಾಗಿ ಸಜ್ಜಾಗುತ್ತಿದ್ದು, ಹೊಸ ಕಾರನ್ನು ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಇದೇ ಕಾರು ಇದೀಗ ಭಾರತದಲ್ಲೂ ಹೆಕ್ಟರ್ ಹೆಸರಿನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, 2020ರ ಫೆಬ್ರುವರಿಯಲ್ಲಿ ನಡೆಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರವಷ್ಟೇ 7 ಸೀಟರ್ ಹೆಕ್ಟರ್ ಕಾರು ಬಿಡುಗಡೆಯಾಗಲಿದೆ. ಇದು ನೋಡಲು 5 ಸೀಟರ್ ಮಾದರಿಯಂತೆ ಕಂಡರೂ ಸಹ ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಅನುಕೂಲಕರವಾದ ಸ್ಥಳಾವಕಾಶ ಹೊಂದಿರಲಿದ್ದು, 5 ಸೀಟರ್‌ಗಿಂತ ಬೆಲೆಯಲ್ಲಿ ಹೆಚ್ಚುವರಿ ರೂ.1.50 ಲಕ್ಷದಿಂದ ರೂ. 3 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಇನ್ನು 5 ಸೀಟರ್ ಹೆಕ್ಟರ್ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಗಳಲ್ಲೇ ವಿಶೇಷ ಎಂಜಿನ್ ಸೌಲಭ್ಯವನ್ನು ಹೊತ್ತು ಬಂದಿದ್ದು, ಪೆಟ್ರೋಲ್, ಡೀಸೆಲ್ ಮತ್ತು ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.18 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 16.88 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಸ್ಟೈಲ್, ಸೂಪರ್, ಸ್ಮಾರ್ಟ್ ಮತ್ತು ಶಾರ್ಪ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಹೆಕ್ಟರ್ ಕಾರು ಖರೀದಿಗೆ ಲಭ್ಯವಿದ್ದು, ಪ್ರತಿ ವೆರಿಯೆಂಟ್‌ಗಳಲ್ಲೂ ಬೆಲೆಗೆ ಅನುಗುಣವಾಗಿ ವಿವಿಧ ಮಾದರಿಯ ತಾಂತ್ರಿಕ ಅಂಶಗಳನ್ನು ಜೋಡಿಸಲಾಗಿದೆ. ಇದರಲ್ಲಿ ಸ್ಮಾರ್ಟ್ ಹೈಬ್ರಿಡ್ ಮಾದರಿಗಳು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಐಷಾರಾಮಿ ಸೌಲಭ್ಯಗಳು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಹೆಕ್ಟರ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಜೊತೆಗೆ ಹೆಕ್ಟರ್ ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತು ಬಂದಿದ್ದು, ಬ್ಲ್ಯಾಕ್ ಕಲರ್ ಥೀಮ್ ಇಂಟಿರಿಯರ್‌ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‌ಮೆಂಟ್ ಕಂಟ್ರೋಲ್, ನೆವಿಗೇಷನ್ ನಿಯಂತ್ರಿಸಬಲ್ಲ 10.4-ಇಂಚಿನ ವರ್ಟಿಕಲ್ ಸ್ಟ್ರಾಕ್ಡ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಡಿಸ್‌ಪ್ಲೈ ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ 7 ಸೀಟರ್ ಆವೃತ್ತಿ ಹೀಗಿರಲಿದೆ..!

ಹೆಕ್ಟರ್ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಆರ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಡಿಫಾಗರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಮತ್ತು ISOFIX ಚೈಲ್ಡ್-ಸೀಟ್ ಮೌಂಟ್ಸ್ ಸೌಲಭ್ಯ ನೀಡಲಾಗಿದೆ.

Most Read Articles

Kannada
English summary
Seven Seater MG Hector To Launch In Indonesia This Year.
Story first published: Monday, July 15, 2019, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X