ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಎಂಜಿ ಮೋಟಾರ್ ಇಂಡಿಯ ಸಂಸ್ಥೆಯು ಇತ್ತಿಚೇಗೆ ಎಂಜಿ ಹೆಕ್ಟರ್ ಎಸ್‍‍ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಕಾರಿಗೆ ಗ್ರಾಹಕರು ಪುಲ್ ಫಿಧಾ ಆಗಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಬುಕ್ಕಿಂಗ್ ನಡೆದಿದೆ. ಇದೇ ಸಂದರ್ಭದಲ್ಲಿ ಎಂಜಿ ಮೋಟರ್ ಹೆಕ್ಟರ್‍‍ಗಾಗಿ ಬುಕಿಂಗ್ ಮಾಡಿದ ಗ್ರಾಹಕರಿಗೆ 'ವರ್ತ್ ವೈಟಿಂಗ್ ಫಾರ್' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಕಾರ್ಯಕ್ರಮದ ಉದ್ದೇಶ ಕಾರ್ ಬುಕಿಂಗ್ ಮಾಡಿ ಡೆಲಿವರಿಗಾಗಿ ಕಾಯಬೇಕಾದ ಅವಧಿಯಲ್ಲಿ ಗ್ರಾಹಕರಿಗೆ ಬಹುಮಾನವನ್ನು ವಿತರಿಸುವ ಕಾರ್ಯಕ್ರಮವಾಗಿದ್ದು, ಎಂಜಿ ಹೆಕ್ಟರ್‍ ಕಾರನ್ನು ಬುಕಿಂಗ್ ಮಾಡಿ ಡೆಲಿವರಿಗೆ ಕಾಯುವ ಗ್ರಾಹಕರಿಗೆ ಪ್ರತಿವಾರವು 1,000 ಅಂಕಗಳನ್ನು ನೀಡಿ ಅದೇ ಅಂಕಗಳನ್ನು ಬಳಸಿ ಭಾರತದ ಯಾವುದೇ ಎಂಜಿ ಡೀಲರ್‍‍ಗಳ ಬಳಿ ಮ್ಯಾನ್‍‍ಟೈನ್ ಪ್ಯಾಕೇಜ್ ಅನ್ನು ಪಡೆದುಕೊಳ್ಳಬಹುದು. ಈ ಮ್ಯಾನ್‍‍ಟೇನ್ ಪ್ಯಾಕೇಜ್‍ನಲ್ಲಿ ಒಂದು ವರ್ಷದಲ್ಲಿ 20,000 ಕಿ.ಮೀಟರ್ ವಾರಂಟಿ ಸೌಲಭ್ಯವಿದೆ.

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಎಂಜಿ ಹೆಕ್ಟರ್ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಇದೀಗ ಸಂಸ್ಥೆ ನೀಡಿದ ಮಾಹಿತಿಯ ಪ್ರಕಾರ ಬರೋಬ್ಬರಿ 28,000 ಬುಕ್ಕಿಂಗ್ ಅನ್ನು ಪಡೆದುಕೊಂಡು ಹೊಸ ಮಾದರಿಯ ಕಾರುಗಳನ್ನು ಡೆಲಿವರಿ ಮಾಡಲು 6 ತಿಂಗಳ ಕಾಲವಕಾಶಬೇಕಾಗಿರುವುದರಿಂದ ತತ್ಕಾಲಿಕವಾಗಿ ಬುಕಿಂಗ್‍ ಅನ್ನು ಸ್ಧಗಿತಗೊಳಿಸಿದೆ.

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಎಂಜಿ ಹೆಕ್ಟರ್ ಪೈಪೋಟಿಯನ್ನು ನೀಡಲು ಕಿಯಾ ಸೆಲ್ಟೋಸ್ ಬಿಡುಗಡೆಯಾಗಿರುವ ಸಂದರ್ಭದಲ್ಲಿ ಬಹುಮಾನ ನೀಡುವ ಕಾರ್ಯಕ್ರಮ ಜನರ ಆಸಕ್ತಿಯನ್ನು ಕಾಪಡಿಕೊಳ್ಳಬಹುದೆಂಬುದು ಸಂಸ್ಥೆಯ ಉದ್ದೇಶವಾಗಿದೆ.

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಎಂಜಿ ಹೆಕ್ಟರ್‍‍ಗಾಗಿ ಎರಡು ವಾರಗಳವರೆಗೂ ಕಾಯುವ ಸಮಯದಲ್ಲಿ ಒಂದು ಹೆಣ್ಣು ಮಗುವಿಗೆ ಶಿಕ್ಷಣವನ್ನು ನೀಡಲು ಹರಿಯಾಣ ಮೂಲದ ಎನ್‍‍ಜಿಒ ಐಐಎಮ್‍ಎಸಿಟಿ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ.

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಕಾರಿನ ಬೆಲೆ

ಎಂಜಿ ಹೆಕ್ಟರ್ ಕಾರಿಗೆ ಎಕ್ಸ್ ಶೋರೂಂ ಪ್ರಕಾರ ರೂ. 12.18 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಟಾಪ್ ಎಂಡ್ ಮಾದರಿಯ ಎಕ್ಸ್ ಶೋರೂಂ ಪ್ರಕಾರ ರೂ. 16.68 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಎಂಜಿನ್ ಸಾಮರ್ಥ್ಯ

ಎಂಜಿ ಹೆಕ್ಟರ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುವಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬ್ಯಾಕ್ಸ್ ಯೊಂದಿಗೆ 143ಬಿಹೆಚ್‍‍ಪಿ ಮತ್ತು 250ಎನ್‍ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯಲ್ಲಿ 2.0 ಲೀಟರ್ ಟಬೋಜಾರ್ಜ್ಡ್ ಎಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮೂಲಕ 170ಬಿಹೆಚ್‍‍ಪಿ ಮತ್ತು 350 ಎನ್‍ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ.

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಇದರಲ್ಲಿ ಬ್ಲ್ಯಾಕ್ ಕಲರ್ ಥೀಮ್ ಇಂಟರಿಯರ್‍‍ನೊಂದಿಗೆ ಆಡಿಯೋ ಸಿಸ್ಟಂ, ಕ್ಲೈಮೆಟ್ ಕಂಟ್ರೋಲ್, ಇನ್ಪೋಟೈನ್‍‍‍ಮೆಂಟ್ ಕಂಟ್ರೋಲ್, ಆಟೋ ಎಸಿ, ಪವರ್ ವಿಂಡೋ, ಫಾಸ್ಟ್ ಚಾರ್ಜಿಂಗ್, ಆಟೋಮ್ಯಾಟಿಕ್ ಹೆಡ್‍‍‍ಲ್ಯಾಂಪ್, 10.4 ಇಂಚಿನ ಟಚ್‍‍ಸ್ಕ್ರೀನ್ ಇನ್ಪೋಟೈನ್‍‍ಮೆಂಟ್ ಡಿಸ್‍‍ಪ್ಲೈ ಸೌಲಭ್ಯವಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಎಂಜಿ ಹೆಕ್ಟರ್ ಬುಕ್ ಮಾಡುವವರಿಗೆ ದೊರೆಯಲಿದೆ ಬಹುಮಾನ

ಸುರಕ್ಷಾ ಸೌಲಭ್ಯಗಳು

ಹೆಕ್ಟರ್ ಕಾರಿನಲ್ಲಿ ಸುರಕ್ಷತೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಿದ್ದು, ಏರ್‍‍ಬ್ಯಾಗುಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಸೌಲಭ್ಯವನ್ನು ಒದಗಿಸಲಾಗಿದೆ.

Most Read Articles

Kannada
English summary
MG India's new rewards initiative awards customers waiting for the Hector- Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X