ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ಸ್ ತನ್ನ ಎರಡನೇ ವಾಹನವಾದ ಝಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಎಂಜಿ ಇಝಡ್‍ಎಸ್ ಎಸ್‌ಯುವಿ 2019ರ ಡಿಸೆಂಬರ್‌ನಿಂದ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಬಿಡುಗಡೆಗೂ ಮುನ್ನ, ಎಂಜಿ ಮೋಟಾರ್ ಫಿನ್‍‍ಲ್ಯಾಂಡ್ ಮೂಲದ ಫೋರ್ಟಮ್‌ ಸಹಭಾಗಿತ್ವದಲ್ಲಿ ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಆರಂಭಿಸಿದೆ. ಈ ಎರಡೂ ಕಂಪನಿಗಳು ಇತ್ತೀಚೆಗೆ ಗುರುಗ್ರಾಮ್‌ನಲ್ಲಿ ತಮ್ಮ ಮೊದಲ 50 ಕಿ.ವ್ಯಾ ಡಿಸಿ ವೇಗದ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವುದಾಗಿ ಘೋಷಿಸಿವೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಇದು ಭಾರತದಲ್ಲಿ ಸ್ಥಾಪನೆಯಾದ ಮೊದಲನೆಯ ಸಾರ್ವಜನಿಕ ವೇಗದ ಚಾರ್ಜಿಂಗ್ ಸ್ಟೇಷನ್‍ ಆಗಿದೆ. ಗುರುಗ್ರಾಮದಲ್ಲಿ ಸ್ಥಾಪಿಸಲಾದ ಸ್ಟೇಷನ್‍ ಹೊರತಾಗಿ, ಎಂಜಿ ಹಾಗೂ ಫೋರ್ಟಮ್ ದಕ್ಷಿಣ ದೆಹಲಿ, ಪಶ್ಚಿಮ ದೆಹಲಿ ಹಾಗೂ ನೋಯ್ಡಾದಲ್ಲಿ ವೇಗದ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿವೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಭಾರತದ ವಿವಿಧ ನಗರಗಳಲ್ಲಿರುವ ಎಂಜಿ ಡೀಲರ್ ಸ್ಥಳಗಳಲ್ಲಿ ಆರು 50 ಕಿ.ವ್ಯಾ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದರಲ್ಲಿ ಬೆಂಗಳೂರು, ಅಹಮದಾಬಾದ್, ಹೈದರಾಬಾದ್ ಹಾಗೂ ಮುಂಬೈ ನಗರಗಳು ಸೇರಿವೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವ ಎಲ್ಲಾ ಮಾಲೀಕರು ಫೋರ್ಟಮ್ ಚಾರ್ಜ್ ಹಾಗೂ ಡ್ರೈವ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಈ ನಗರಗಳಲ್ಲಿರುವ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಆದರೆ, ಈ ಎಲೆಕ್ಟ್ರಿಕ್ ವಾಹನಗಳು ಸಿಸಿಎಸ್ / ಸಿ‍‍ಹೆ‍‍ಚ್‍ಅಡೆಮೊ ಮಾನದಂಡಗಳಿಗೆ ಅನುಗುಣವಾಗಿರಬೇಕು.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಹಾಗೂ ಎಂಡಿ ರಾಜೀವ್ ಚಾಬಾರವರು ಮಾತನಾಡಿ, ಭಾರತದ ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿನಲ್ಲಿ ಮುಂಚೂಣಿಯಲ್ಲಿರುವ ಗುರಿಯೊಂದಿಗೆ, ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಗಳ ಗ್ರಾಹಕರಿಗೆ ಸಾಕಷ್ಟು ಚಾರ್ಜಿಂಗ್ ಮೂಲಸೌಕರ್ಯವನ್ನು ನೀಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಚಾರ್ಜ್ ಮಾಡುವುದರಿಂದ ಹಿಡಿದು ಎಲೆಕ್ಟ್ರಿಕ್ ವಾಹನಗಳಿಗೆ ದೃಢವಾದ ಇಕೊ ಸಿಸ್ಟಂ ರಚಿಸುವುದು ನಮ್ಮ ಪ್ರಯತ್ನ. ಭಾರತದ ಎಲೆಕ್ಟ್ರಿಕ್ ವಾಹನಗಳಿಗೆ ಜೀವಿತಾವಧಿ ಹಾಗೂ ಮೊದಲ ಸಾರ್ವಜನಿಕ ವೇಗದ ಚಾರ್ಜರ್ ಅಳವಡಿಕೆ ಈ ದಿಕ್ಕಿನ ಮೊದಲ ಪ್ರಮುಖ ಹೆಜ್ಜೆಯಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಇನ್ನೇನು ಬಿಡುಗಡೆಯಾಗಲಿರುವ ಎಂಜಿ ಝಡ್ಎಸ್ ಎಲೆಕ್ಟ್ರಿಕ್ ವಾಹನದ ಬಿಡುಗಡೆಯು ಮುಂದಿನ ಕೆಲವು ವರ್ಷಗಳಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಸರ್ಕಾರದ ಯೋಜನೆಯೊಂದಿಗೆ ಹೊಂದಿಕೆಯಾಗಿದೆ ಎಂದು ಹೇಳಿದರು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಫೋರ್ಟಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಅಗರ್‌ವಾಲ್‍‍ರವರು ಮಾತನಾಡಿ, ಎಂಜಿ ಸಹಭಾಗಿತ್ವದಲ್ಲಿ ಭಾರತದ ಮೊದಲ 50 ಚಾರ್ಜ್ ಡಿಸಿ ಚಾರ್ಜರ್‌ಗಳ ನೆಟ್‌ವರ್ಕ್ ಅನ್ನು ಸ್ಥಾಪಿಸಲು ನಾವು ಹೆಮ್ಮೆ ಪಡುತ್ತೇವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಕಳೆದ ವರ್ಷ 15/20 ಕಿ.ವ್ಯಾ ಡಿಸಿ 001 ಚಾರ್ಜರ್‌ಗಳ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಅಳವಡಿಸಿಕೊಂಡಿದ್ದೇವೆ. ಈ ಸಹಯೋಗವು ಈ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ, ನಾವು ಮೂಲಸೌಕರ್ಯಗಳನ್ನು ಚಾರ್ಜ್ ಮಾಡಲು ದೇಶಿಯ ಮಾರುಕಟ್ಟೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದ್ದೇವೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಕಂಪನಿಯ ಜೊತೆಗಿನ ನಮ್ಮ ಸಹಭಾಗಿತ್ವದ ಮೂಲಕ ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಹೊಸ ಬಗೆಯ ಚಾರ್ಜಿಂಗ್ ಅನುಭವವನ್ನು ನೀಡುತ್ತೇವೆ ಎಂದು ಹೇಳಿದರು. ಮುಂಬರುವ ಎಂಜಿ ಇಝಡ್ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಈ ಎಸ್‍‍ಯುವಿ ಹೆಕ್ಟರ್ ನಂತರ ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಎರಡನೇ ವಾಹನವಾಗಿದೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಈ ಎಸ್‍‍ಯುವಿಯಲ್ಲಿರುವ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಮುಂಭಾಗದ ವ್ಹೀಲ್‍‍ಗಳಿಗೆ ಪವರ್ ನೀಡುವ ಈ ಮೋಟರ್ 148 ಬಿ‍‍ಹೆಚ್‍‍ಪಿ ಪವರ್ ಹಾಗೂ 300 ಎನ್‍ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಎಂಜಿ ಇಝಡ್‍ಎಸ್ 4.58 ಕಿ.ವ್ಯಾ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಈ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ 428 ಕಿ.ಮೀವರೆಗೂ ಚಲಿಸಬಹುದು. ಈ ಎಲೆಕ್ಟ್ರಿಕ್ ಎಸ್‌ಯುವಿ ಸ್ಟ್ಯಾಂಡರ್ಡ್ ಹಾಗೂ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಫಾಸ್ಟ್ ಚಾರ್ಜರ್‍‍ನಿಂದ ಕೇವಲ 30 ನಿಮಿಷಗಳಲ್ಲಿ ಇ ಝಡ್‍ಎಸ್ ಅನ್ನು 0 - 80%ವರೆಗೆ ಚಾರ್ಜ್ ಮಾಡಬಹುದು.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಎಲೆಕ್ಟ್ರಿಕ್ ಝಡ್ಎಸ್ ಎಸ್‌ಯುವಿಯ ಜೊತೆಗೆ, ಎಂಜಿ ಮೋಟಾರ್ ಸಾಂಪ್ರದಾಯಿಕ ಇಂಧನ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಸೋರಿಕೆಯಾದ ದಾಖಲೆಯ ಪ್ರಕಾರ, ಎಂಜಿ ಝಡ್ಎಸ್ ಎಸ್‌ಯುವಿಯನ್ನು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಸಹ ಮಾರಾಟ ಮಾಡಲಾಗುವುದು.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಇದರಲ್ಲಿ 1.5-ಲೀಟರ್ ಎಂಜಿನ್ 104 ಬಿಹೆಚ್‌ಪಿ ಪವರ್ ಹಾಗೂ 141 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್-ಹೈಬ್ರಿಡ್ ಯುನಿಟ್ 110 ಬಿಹೆಚ್‌ಪಿ ಪವರ್ ಮತ್ತು 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸ್ಟ್ಯಾಂಡರ್ಡ್ ಮಾದರಿಯಲ್ಲಿನ ಎರಡೂ ಎಂಜಿನ್‍‍ಗಳು ಬಿಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಇರಲಿವೆ.

ವೇಗದ ಚಾರ್ಜಿಂಗ್ ಸ್ಟೇಷನ್ ಆರಂಭಿಸಿದ ಎಂಜಿ ಮೋಟಾರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಂಜಿ ಮೋಟರ್ ತನ್ನ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೂ ಮುನ್ನ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಸ್ಥಾಪಿಸುತ್ತಿದೆ. ಕಂಪನಿಯು ಇಝಡ್ಎಸ್ ಗ್ರಾಹಕರಿಗೆ ಉಚಿತ ಹೋಮ್ ಚಾರ್ಜಿಂಗ್ ಸ್ಟೇಷನ್ ಅನ್ನು ಸಹ ನೀಡುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಎಂಜಿ ಇ ಝಡ್ಎಸ್ ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
MG installs first 50kw fast charging station in gurugram - Read in Kannada
Story first published: Wednesday, November 20, 2019, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X