ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಭಾರತದಲ್ಲಿ ಸದ್ಯ ಹೊಸ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದು, ಉತ್ತಮ ಬೆಲೆಗಳೊಂದಿಗೆ ಗರಿಷ್ಠ ಮಾರಾಟ ಪ್ರಮಾಣವನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿವೆ. ಇವುಗಳಲ್ಲಿ ಎಂಜಿ ಮೋಟಾರ್ ಒಂದಾಗಿದ್ದು, ಹೆಕ್ಟರ್ ಕಾರಿನ ಮೂಲಕ ಹಲವು ಕಾರು ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದೆ.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಬ್ರಿಟಿಷ್ ಆಟೋ ಉತ್ಪಾದನಾ ಸಂಸ್ಥೆಯಾದ ಎಂಜಿ(ಮೊರಿಸ್ ಗ್ಯಾರೇಜ್) ಮೋಟಾರ್ 1924ರಿಂದಲೇ ಆಟೋ ಉದ್ಯಮದಲ್ಲಿ ಕಾರ್ಯಾಚರಣೆಯಲ್ಲಿದ್ದು, ಏಷ್ಯಾ ಮಾರುಕಟ್ಟೆಗಳನ್ನು ಹೊರತುಪಡಿಸಿ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಉತ್ತಮ ಬೇಡಿಕೆ ಹೊಂದಿದ್ದಲ್ಲದೇ ಕೆಲ ವರ್ಷಗಳ ಹಿಂದಷ್ಟೇ ಕಾರು ಉತ್ಪಾದನೆಯಿಂದ ಹಿಂದೆ ಸರಿದಿತ್ತು. ಈ ವೇಳೆ ಎಂಜಿ ಮೋಟಾರ್ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಚೀನಾ ಆಟೋ ಉತ್ಪಾದನಾ ದೈತ್ಯ SAIC ಸಂಸ್ಥೆಯು ಹಲವಾರು ಬದಲಾವಣೆಗಳೊಂದಿಗೆ ಏಷ್ಯಾ ಮಾರುಕಟ್ಟೆಗೆ ಪ್ರವೇಶ ಪಡೆದಿದೆ.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಗುಜರಾತ್‌ನಲ್ಲಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಿರುವ SAIC ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿಯೊಂದಿಗೆ ಭಾರತದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿ ನೀಡಲು ಯೋಜನೆ ರೂಪಿಸಿದೆ.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಇದರಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ಹೆಕ್ಟರ್ ಎಸ್‌ಯುವಿ ಕಾರನ್ನು ಕಳೆದ ಎರಡು ದಿನಗಳ ಹಿಂದಷ್ಟೇ ಅನಾವರಣಗೊಳಿಸಿದ್ದು, ಜೂನ್ ಆರಂಭದಲ್ಲಿ ಬುಕ್ಕಿಂಗ್ ಆರಂಭಿಸಿ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳ ಪ್ರೇರಿತ ಕಾರು ಮಾದರಿಯಾಗಿರುವ ಎಂಜಿ ಹೆಕ್ಟರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳು ಎಸ್‌ಯುವಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿರಲಿವೆ.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಹೀಗಾಗಿ ಹೆಕ್ಟರ್ ಕಾರು ಭಾರತದಲ್ಲಿ ಪ್ರತಿ ತಿಂಗಳು 3 ಸಾವಿರಕ್ಕೂ ಅಧಿಕ ಕಾರುಗಳು ಮಾರಾಟವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಎಂಜಿ ಮೋಟಾರ್ ಹಿರಿಯ ಅಧಿಕಾರಿಗಳು ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಇನ್ನು ಹೆಕ್ಟರ್ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಯೆಂತೆ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಇದರಲ್ಲಿ ಪೆಟ್ರೋಲ್ ಆವೃತ್ತಿಯು 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 141-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಹಾಗೆಯೇ ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಪಡೆದುಕೊಂಡಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಜೊತೆಗೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈಎಂಡ್ ಆವೃತ್ತಿಯು 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಹೊಂದಿರಲಿದ್ದು, ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಕಾರಿನ ಮೈಲೇಜ್

*ಪೆಟ್ರೋಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 14.16 ಕಿ.ಮಿ

*ಪೆಟ್ರೋಲ್ ವರ್ಷನ್(ಆಟೋಮ್ಯಾಟಿಕ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 13.96 ಕಿ.ಮಿ

*ಡಿಸೇಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 17.41 ಕಿ.ಮಿ

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಕಾರಿನ ಉದ್ದಳತೆ

ಮಾರುಕಟ್ಟೆಯಲ್ಲಿರುವ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲೇ ವಿಭಿನ್ನ ಗಾತ್ರ ಹೊಂದಿರುವ ಹೆಕ್ಟರ್ ಕಾರು 4,655ಎಂಎಂ ಉದ್ದ, 1,835ಎಂಎಂ ಅಗಲ, 1,760ಎಂಎಂ ಎತ್ತರ, 2,750ಎಂಎಂ ವೀಲ್ಹ್‌ಬೆಸ್ ಮತ್ತು 192ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದುಕೊಂಡಿದೆ.

ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಎಂಜಿ ಮೋಟಾರ್

ಕಾರಿನ ಬೆಲೆಗಳು(ಅಂದಾಜು) ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
MG Motor Aims To Sell 3,000 Hector SUV Every Month In India. Read in Kannada.
Story first published: Saturday, May 18, 2019, 15:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X