ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಇದೇ ತಿಂಗಳು ಎರಡನೇ ವಾರದಲ್ಲಿ ತನ್ನ ಮೊದಲ ಹೆಕ್ಟರ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುತ್ತಿದ್ದು, ದೇಶದ ವಿವಿಧ ನಗರಗಳಲ್ಲಿ ತನ್ನ ಮಾರಾಟ ಮಳಿಗೆಗಳಿಗೆ ಚಾಲನೆ ನೀಡುತ್ತಿದೆ. ಕಳೆದ 2 ದಿನಗಳ ಹಿಂದಷ್ಟೇ 50 ಅಧಿಕೃತ ಡೀಲರ್ಸ್‌ಗಳ ಮಾಹಿತಿಯನ್ನು ಬಹಿರಂಗ ಪಡಿಸಿದ್ದ ಎಂಜಿ ಮೋಟಾರ್ ಸಂಸ್ಥೆಯು ಇದೀಗ ಮೊದಲ ಡೀಲರ್ಸ್ ಕಾರ್ಯಾಚರಣೆಗೆ ಭರ್ಜರಿ ಚಾಲನೆ ನೀಡಿದೆ.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಕರ್ನಾಟಕದ ಮೈಸೂರಿನಲ್ಲೂ ಒಂದು ಅಧಿಕೃತ ಡೀಲರ್‌ಶಿಪ್ ತೆರೆದಿರುವ ಎಂಜಿ ಮೋಟಾರ್ ಸಂಸ್ಥೆಯು ನಿನ್ನೆಯಷ್ಟೇ ದೆಹಲಿ ಬಳಿಯ ಗುರುಗ್ರಾಮ್‌ನಲ್ಲಿ ಮೊದಲ ಮಾರಾಟ ಮಳಿಗೆ ಅಧಿಕೃತ ಚಾಲನೆ ನೀಡಿದ್ದಲ್ದೇ ಮುಂದಿನ ಒಂದು ವಾರದೊಳಗೆ ದೇಶಾದ್ಯಂತ ತೆರೆಯಲು ನಿರ್ಧರಿಸಲಾಗಿರುವ ಎಲ್ಲಾ 50 ಮಳಿಗೆಗಳಿಗೂ ಚಾಲನೆ ನೀಡಲು ಸಿದ್ದತೆ ನಡೆಸಲಾಗಿದೆ. ಗ್ರಾಹಕರ ಒಂದೇ ಸೂರಿನಡಿ ಎಲ್ಲಾ ಮಾಹಿತಿ ತಿಳಿದುಕೊಳ್ಳಬಹುದಾದಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಮಳಿಗೆಗಳು ಗ್ರಾಹಕರಿಗೆ ಹೊಸ ಅನುಭವ ನೀಡಲಿವೆ.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಮೈಸೂರಿನ ಹಿನಕಲ್‌ನಲ್ಲಿ ಎಂಜಿ ಮೋಟಾರ್ ಕಾರು ಮಾರಾಟ ಮಳಿಗೆಯು ತಲೆಎತ್ತಿದ್ದು, ಪೋಕ್ಸ್‌ವ್ಯಾಗನ್ ಮತ್ತು ಜೀಪ್ ಡೀಲರ್ಸ್ ಬಳಿಯಲ್ಲೇ ಎಂಜಿ ಹೊಸ ಡೀಲರ್ಸ್‌ಗೆ ಚಾಲನೆ ನೀಡಲಾಗಿದೆ. ಹಾಗೆಯೇ ಬೆಂಗಳೂರಿನ ಎರಡು ಕಡೆಗಳಲ್ಲಿ ಎಂಜಿ ಮೋಟಾರ್‌ನ ಅಧಿಕೃತ ಡೀಲರ್ಸ್‌ಗಳಿಗೆ ಚಾಲನೆ ನೀಡಲಾಗುತ್ತಿದ್ದು, ಹೊಸ ಕಾರು ಬಿಡುಗಡೆ ನಂತರವಷ್ಟೇ ಎರಡನೇ ಪಟ್ಟಿಯಲ್ಲಿರುವ ಬೆಂಗಳೂರಿನ ಹೊಸ ಡೀಲರ್ಸ್‌ಗಳ ಮಾಹಿತಿಯು ಲಭ್ಯವಾಗಲಿದೆ.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಹೆಕ್ಟರ್ ಖರೀದಿಗೆ ಬುಕ್ಕಿಂಗ್ ಆರಂಭ

ಮೊದಲ ಕಾರು ಮಾರಾಟ ಮಳಿಗೆಗೆ ಚಾಲನೆ ನೀಡುವುದರ ಜೊತೆಗೆ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಿರುವ ಎಂಜಿ ಮೋಟಾರ್ ಸಂಸ್ಥೆಯು ರೂ.50 ಸಾವಿರ ಮುಂಗಡದೊಂದಿಗೆ ಆಸಕ್ತ ಗ್ರಾಹಕರಿಂದ ಬುಕ್ಕಿಂಗ್ ಸ್ವಿಕರಿಸುತ್ತಿದೆ.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಇನ್ನು ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳ ಪ್ರೇರಿತ ಕಾರು ಮಾದರಿಯಾಗಿರುವ ಎಂಜಿ ಹೆಕ್ಟರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೆಕ್ಟರ್ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಯೆಂತೆ ಪೆಟ್ರೋಲ್ ಮತ್ತು ಡೀಸೆಲ್ ವರ್ಷನ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಇದರಲ್ಲಿ ಪೆಟ್ರೋಲ್ ಆವೃತ್ತಿಯು 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 141-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಹಾಗೆಯೇ ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಪಡೆದುಕೊಂಡಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಜೊತೆಗೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈಎಂಡ್ ಆವೃತ್ತಿಯು 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಹೊಂದಿರಲಿದ್ದು, ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಕಾರಿನ ಮೈಲೇಜ್

*ಪೆಟ್ರೋಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 14.16 ಕಿ.ಮಿ

*ಪೆಟ್ರೋಲ್ ವರ್ಷನ್(ಆಟೋಮ್ಯಾಟಿಕ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 13.96 ಕಿ.ಮಿ

*ಪೆಟ್ರೋಲ್ ಎಂಜಿನ್ ಜೊತೆ 48 ವೊಲ್ಟ್ ಮೈಲ್ಡ್ ಹೈಬ್ರಿಡ್(ಮ್ಯಾನುವಲ್ ಗೇರ್‌ಬಾಕ್ಸ್) - ಪ್ರತಿ ಲೀಟರ್‌ಗೆ 16.03 ಕಿ.ಮಿ

*ಡಿಸೇಲ್ ವರ್ಷನ್(ಮ್ಯಾನುವಲ್ ಗೇರ್‌ಬಾಕ್ಸ್)- ಪ್ರತಿ ಲೀಟರ್‌ಗೆ 17.41 ಕಿ.ಮಿ

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಇದರೊಂದಿಗೆ ಹೊಸ ಕಾರಿನಲ್ಲಿ ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ರಿಮೋಟ್ ಕಾರ್ ಆಪರೇಷನ್, ಸ್ಮಾರ್ಟ್ ಸಿಮ್ ಪ್ರೇರಿತ ಇಂಟರ್‌ನೆಟ್ ಸೌಲಭ್ಯ, 10.4-ಇಂಚಿನ ಟಚ್ ಇನ್ಪೋಟೈನ್ ಸಿಸ್ಟಂ, 8-ಸ್ಪೀಕರ್ಸ್‌ಗಳು, ಆನ್ ಲೈನ್ ನೆವಿಗೇಷನ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, 7-ಇಂಚಿನ ಮಲ್ಟಿ ಇನ್ಪಾರ್ಮೆಷನ್ ಡಿಸ್‌ಪ್ಲೇ, ಪವರ್ ಅಡ್ಜೆಸ್ಟೆಬಲ್ ರಿಯರ್ ವ್ಯೂ ಮಿರರ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಪಡೆದುಕೊಂಡಿದೆ.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಜೊತೆಗೆ ಹೊಸ ಕಾರಿನಲ್ಲಿ ರೂಫ್ ರೈಲ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್, 360 ಡಿಗ್ರಿ ವ್ಯೂವ್ ಕ್ಯಾಮೆರಾ, ಎರಡು ಕಡೆಗಳಲ್ಲಿ ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್, ರಿಯರ್ ಎಸಿ ವೆಂಟ್ಸ್, ಸನ್ ಗ್ಲಾಸ್ ಹೊಲ್ಡರ್, ಡ್ರೈವರ್ ಆರ್ಮ್ ರೆಸ್ಟ್, ಪನಾರೊಮಿಕ್ ಸನ್‌ರೂಫ್, 17-ಇಂಚಿನ ಅಲಾಯ್ ವೀಲ್ಹ್, ರಿಯರ್ ಸೀಟ್ ಆರ್ಮ್ ರೆಸ್ಟ್, ಆರು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಸೌಲಭ್ಯದೊಂದಿಗೆ ಲೆದರ್ ಸೀಟ್‌ಗಳನ್ನು ಜೋಡಿಸಲಾಗಿದೆ.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಪ್ರಯಾಣಿಕರ ಸುರಕ್ಷತೆಗಾಗಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆಗೆ ಇಬಿಡಿ, 6 ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಕ್ರೂಸ್ ಕಂಟ್ರೊಲರ್ ISOFIX ಚೈಲ್ಡ್ ಸೀಟ್, ಎಲೆಕ್ಟ್ರಿಕ್ ಹ್ಯಾಂಡಲ್ ಬ್ರೇಕ್ ಸೇರಿದಂತೆ ಹಲವು ಹೊಸ ಫೀಚರ್ಸ್ ಈ ಕಾರಿನಲ್ಲಿವೆಯೆಂತೆ.

ಭಾರತದಲ್ಲಿ ಎಂಜಿ ಮೋಟಾರ್ ಮೊದಲ ಡೀಲರ್ಸ್‌ಗೆ ಭರ್ಜರಿ ಚಾಲನೆ

ಕಾರಿನ ಬೆಲೆಗಳು(ಅಂದಾಜು)

ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
MG Motor Inaugurates its first showroom in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X