ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

1924ರಲ್ಲಿ ಯುಕೆನಲ್ಲಿ ಮೊದಲ ಬಾರಿಗೆ ತಮ್ಮ ಸೇವೆಯನ್ನು ಪ್ರಾರಂಭಿಸಿದ ಮೋರಿಸ್ ಗ್ಯಾರೇಜ್ (ಎಂಜಿ) ಮೋಟಾರ್, ವಿದೇಶಗಳಲ್ಲಿ ತಮ್ಮ ಸ್ಪೋರ್ಟ್ ಕಾರ್, ರೋಡ್‍ಸ್ಟರ್‍ ಕಾರು ಮತ್ತು ಕ್ಯಾಬ್ರಿಯೋಲೆಟ್ ಕಾರುಗಳ ಮಾರಾಟದಿಂದಾಗಿ ಜನಪ್ರಿಯವಾಗಿದೆ. ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಸಹ ತಮ್ಮ ವಾಹನದ ಮಾರಾಟವನ್ನು ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಜೂನ್‍ನಲ್ಲಿ ತಮ್ಮ ಹೆಕ್ಟರ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಿದೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಹೌದು, ಭಾರತೀಯ ರಸ್ತೆಗಳಿಗೆ ಮತ್ತು ವಾತಾವರಣಕ್ಕೆ ಅನುಗುಣವಾಗಿ ಸಮರು 1 ಲಕ್ಷ ಕಿಲೋಮೀಟರ್‍‍ಗಳ ಪರಿಕ್ಷೆಯ ನಂತರ ಇಂದು ಎಂಜಿ ಮೋಟಾರ್ ತಮ್ಮ ಮೊದಲ ಹೆಕ್ಟರ್ ಕಾರನ್ನು ಉತ್ಪಾದನೆ ಮಾಡಲಾಗಿದ್ದು, ಮೆ 15 ರಂದು ಅದ್ಧೂರಿಯಾಗಿ ಬಹಿರಂಗ ಪಡೆಸಲಿದೆ ಎಂದು ಹೇಳಾಲಾಗಿದೆ. ಅಷ್ಟೆ ಅಲ್ಲದೆಯೆ ಪರೀಕ್ಷೆಯಲ್ಲಿ ಕಂಡು ಬಂದ 300ಕ್ಕು ಹೆಚ್ಚಿನ ಲೋಪಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ಇದೀಗ ಉತ್ಪಾದನೆಯ ಕಾರ್ಯದಲ್ಲಿ ಸಂಸ್ಥೆಯು ಮುಂದುವರೆದಿದೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಎಂಜಿ ಮೋಟಾರ್ ಇಂಡಿಯಾ 2,200 ಕೋಟಿ ವೆಚ್ಚದಲ್ಲಿ ಗುಜರಾತ್‍‍ನ ಹಲೊಲ್‍ನಲ್ಲಿ 170 ಎಕರೆಯಲ್ಲಿ ಒಂದು ಪ್ಲಾಂಟ್ ಅನ್ನು ತಯಾರಿಸಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ವರ್ಷಕ್ಕೆ ಸುಮಾರು 80,000 ಕಾರುಗಳನ್ನು ಉತ್ಪಾದಿಸುವುದಾಗಿ ಕೂಡಾ ಹೆಳಿಕೊಂಡಿದೆ. ಇನ್ನು ಮಾರಾಟ ಬಗ್ಗೆ ಹೆಳುವುದಾದ್ರೆ ದೇಶದಲ್ಲಿರುವ 50 ಪ್ರಮುಖ ನಗರಗಳಲ್ಲಿ ಸುಮಾರು 65 ಶೋರುಂಗಳನ್ನು ಪ್ರಾರಂಭಿಸಲಾಗಿದೆಯಂತೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಇದೀಗ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಈ ಕಾರಿನ ಉತ್ಪಾದನೆಯನ್ನು ಸಂಸ್ಥೆಯು ಪ್ರಾರಂಭಿಸಲಾಗಿದ್ದು, ಹಾಗೆಯೆ ಹೊಸ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನು ಸಹ ದೇಶದಲ್ಲಿರುವ ಕೆಲ ಡೀಲರ್‍‍ಗಳು ಪ್ರಾರಂಭಿಸಿದ್ದಾರೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಗುಜರಾತ್‍ನಲ್ಲಿನ ವಡೋದರ ಸಮೀಪದಲ್ಲಿರುವ ಹಲೊಲ್ ಪ್ಲಾಂಟ್‍‍ನಲ್ಲಿ ಎಂಜಿ ಹೆಕ್ಟರ್ ಕಾರಿನ ಉತ್ಪಾದನೆಯನ್ನು ಶುರು ಮಾಡಲಾಗಿದ್ದು, ಈ ಕುರಿತಾದ ಸಮಾರಂಭದಲ್ಲಿ ಸಂಸ್ಥೆಯು ಡೀಲರ್‍‍‍ಗಳನ್ನು ಕರೆಸಿ ಪ್ಲಾಂಟ್ ಅನ್ನು ತೋರಿಸಲಾಗಿದೆ. ಮತ್ತು ವಡೋದರನಲ್ಲಿರುವ ಡೀಲರ್‍‍‍ಗಳಿಗೆ ಈಗಾಗಲೆ ಹೊಸ ಹೆಕ್ಟರ್ ಕಾರುಗಳನ್ನು ನೀಡಲಗಿದ್ದು, ಖರೀದಿಸಲಿ ಬಯಸುವ ಗ್ರಾಹರಿಗೆ ಟೆಸ್ಟ್ ಡ್ರೈವ್ ಕೂಡಾ ನೀಡಲು ಹೇಳಿದ್ದಾರೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಹೆಕ್ಟರ್ ಎಸ್‌ಯುವಿ ಮಾದರಿಯು ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದ್ದು, ಇ-ಸಿಮ್ ಪ್ರೇರಿತ ಗೂಗಲ್ ಆಂಡ್ರಾಯಿಡ್ ಆಪರೇಟಿಂಗ್ ಸಿಸ್ಟಂ ಪಡೆದುಕೊಂಡ ದೇಶದ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಹೆಕ್ಟರ್ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲೇ ಬಾಡಿ ಕಿಟ್ ಹೊಂದಿದ್ದು, ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದೆ. ಈ ಮೂಲಕ ಪೆಟ್ರೋಲ್ ಆವೃತ್ತಿಯು 160-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದ್ದಲ್ಲಿ ಡೀಸೆಲ್ ಆವೃತ್ತಿಯು 170-ಬಿಎಚ್‌ಪಿ, 340-ಎನ್ಎಂ ಟಾರ್ಕ್ ಉತ್ಪಾದನೆ ಸಾಮಾರ್ಥ್ಯ ಹೊಂದಿದ್ದು, ಕಾರಿನ ಬೆಲೆಗಳು ಕೂಡಾ ಆಕರ್ಷಕವಾಗಿರಲಿವೆ ಎನ್ನಲಾಗಿದೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಹೆಕ್ಟರ್ ಕಾರು ಸದ್ಯ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ವುಲಿಂಗ್ ಅಲ್ಮಾಜ್ ಹೆಸರಿನೊಂದಿಗೆ ಮತ್ತು ಚೀನಾದಲ್ಲಿ ಬಾಔನ್ 530 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಹೆಕ್ಟರ್ ಹೆಸರಿನೊಂದಿಗೆ ರಸ್ತೆಗಿಳಿಯುತ್ತಿದೆ. ಇದು ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಸೌಲಭ್ಯ ಹೊಂದಿದ್ದು, ಸಿ ಸೆಗ್ಮೆಂಟ್ ಎಸ್‌ಯುವಿ ಆವೃತ್ತಿಗಳಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಕಾರಿನ ಬೆಲೆಗಳು(ಅಂದಾಜು)

ಎಂಜಿ ಮೋಟಾರ್ ಹೆಕ್ಟರ್ ಕಾರುಗಳು ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಉತ್ಪಾದನೆಯಾದ ಮೊದಲನೆಯ ಎಂಜಿ ಹೆಕ್ಟರ್ ಕಾರು - ಮೇ 15ರಂದು ಅನಾವರಣ

ಇನ್ನು ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಚೀನಾದ ಆಟೋ ದೈತ್ಯ SAIC ಸಂಸ್ಥೆಯ ಭಾರತೀಯ ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ಹ್ಯಾಚ್‌ಬ್ಯಾಕ್. ಸೆಡಾನ್, ಎಸ್‌ಯುವಿ ಕಾರುಗಳನ್ನು ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅಭಿವೃದ್ದಿಪಡಿಸುತ್ತಿದ್ದು, ಎಂಜಿ ಮೋಟಾರ್ ಹೆಸರಿನಲ್ಲೇ SAIC ಸಂಸ್ಥೆಯು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.

Most Read Articles

Kannada
English summary
MG Motor India Commences Commercial Production Of Hector From Gujrat. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X