ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಚೀನಾದ ಸೈಕ್ ಮೋಟಾರ್ ಒಡೆತನದ ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಕಳೆದ ಜೂನ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೆಕ್ಟರ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಇದುವರೆಗೂ ಹೆಕ್ಟರ್‍‍ನ 13,000 ಯುನಿ‍‍ಟ್‍‍ಗಳನ್ನು ಮಾರಾಟ ಮಾಡಲಾಗಿದೆ.

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಇದರ ಜೊತೆಗೆ ಎಂಜಿ ಮೋಟಾರ್ ಕಂಪನಿಯು 30,000ಕ್ಕೂ ಹೆಚ್ಚಿನ ಬುಕ್ಕಿಂಗ್‍‍ಗಳನ್ನು ಪಡೆದಿದೆ. ಕೆಲವು ಸಂದರ್ಭಗಳಲ್ಲಿ ಹೆಕ್ಟರ್ ಕಾರ್ ಅನ್ನು ಪಡೆಯಲು 6 ತಿಂಗಳು ಕಾಯಬೇಕಾಗುತ್ತದೆ. ಹೆಕ್ಟರ್ ಕಾರು, ಎಂಜಿ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿರುವ ಮೊದಲ ಕಾರ್ ಆಗಿದೆ.

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಕೆಲ ದಿನಗಳ ಹಿಂದೆ ಈ ಕಾರ್ ಅನ್ನು ಖರೀದಿಸಿದ ಗ್ರಾಹಕರೊಬ್ಬರು ಕಾರಿನ ಸಮಸ್ಯೆಯನ್ನು ಎಂಜಿ ಮೋಟಾರ್ ಕಂಪನಿಯು ಸರಿಪಡಿಸದ ಕಾರಣಕ್ಕೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದರು. ಎಂಜಿ ಹೆಕ್ಟರ್ ಕಾರಿಗೆ ಕತ್ತೆಯ ಫೋಟೊಗಳನ್ನು ಅಂಟಿಸಿ ಇದು ಕತ್ತೆಯ ವಾಹನ ಇದನ್ನು ಯಾರೂ ಖರೀದಿಸಬೇಡಿ ಎಂದು ಹೇಳಿದ್ದರು.

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಎಂಜಿ ಹೆಕ್ಟರ್ ಕಾರಿನ ಮುಂಭಾಗಕ್ಕೆ ಕತ್ತೆಯನ್ನು ಕಟ್ಟಿ, ಕಾರ್ ಅನ್ನು ಕತ್ತೆಯಿಂದ ಮುಂದಕ್ಕೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಈ ಫೋಟೊ ಹಾಗೂ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಈ ವೀಡಿಯೊವನ್ನು ಇದುವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಂಜಿ ಇಂಡಿಯಾ ಈ ಕಾರಿನ ಮಾಲೀಕರು ದುರುದ್ದೇಶದಿಂದ ಕಂಪನಿಯ ಹೆಸರನ್ನು ಹಾಳು ಮಾಡಿರುವ ಗ್ರಾಹಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು.

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಈಗ ಈ ವಿವಾದವನ್ನು ಕೊನೆಗಾಣಿಸಲು ಬಯಸಿರುವ ಎಂಜಿ ಮೋಟಾರ್ ಕಂಪನಿಯು ಸಮಸ್ಯೆಯಿರುವ ಕಾರ್ ಅನ್ನು ವಾಪಸ್ ಪಡೆದು ಬೇರೆ ಕಾರ್ ಅನ್ನು ನೀಡಲು ಮುಂದಾಗಿದೆ. ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾದ ಎಂಜಿ ಹೆಕ್ಟರ್ ಕಾರು ಉದಯಪುರದ ವಿಶಾಲ್ ಪಂಚೋಲಿ ಎಂಬುವವರಿಗೆ ಸೇರಿದ್ದಾಗಿದೆ.

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಕತ್ತೆಯನ್ನು ಎಂಜಿ ಹೆಕ್ಟರ್ ಕಾರಿಗೆ ಕಟ್ಟಿದ್ದರ ಬಗ್ಗೆ ವ್ಯಕ್ತಿಯೊಬ್ಬರು ಮಾಡಿರುವ ಟ್ವೀಟ್‍‍ಗೆ ಎಂಜಿ ಮೋಟಾರ್ ಇಂಡಿಯಾ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಚಾಬಾರವರು ಪ್ರತಿಕ್ರಿಯೆ ನೀಡಿ, ಸಾರ್ ನಾವು ಕಾರನ್ನು ಸರಿಪಡಿಸಿದ್ದೇವೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಅವರು ಇನ್ನೂ ತೃಪ್ತರಾಗಿಲ್ಲದ ಕಾರಣ, 100% ರಿಟರ್ನ್ ಅಥವಾ ಬದಲಿ ಆಯ್ಕೆಯನ್ನು ನೀಡಿದೆವು. ಆದರೆ ಅವರು ಇನ್ನೂ ಹೆಚ್ಚಿನದನ್ನು ಬಯಸಿದ್ದಾರೆ. ನಾವು ಇನ್ನೇನು ಮಾಡಬೇಕು ಎಂದು ಸಲಹೆ ನೀಡಿ ಎಂದು ಹೇಳಿದ್ದಾರೆ. ಗ್ರಾಹಕರು ಮತ್ತೆ ಏನೂ ಬಯಸಿದ್ದಾರೆ ಎಂದು ತಿಳಿದು ಬಂದಿಲ್ಲ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

2019ರಲ್ಲಿ ಬಿಡುಗಡೆಯಾದ ಹಲವು ಜನಪ್ರಿಯ ಕಾರುಗಳಲ್ಲಿ ಎಂಜಿ ಹೆಕ್ಟರ್ ಸಹ ಒಂದು. ಈ ಕಾರ್ ಅನ್ನು ಜೂನ್ 27ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು. ಜುಲೈ ಹಾಗೂ ನವೆಂಬರ್ ತಿಂಗಳ ನಡುವಿನ ಅವಧಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್‌ನ 12,909 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ .

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಎಂಜಿ ಹೆಕ್ಟರ್‌ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.12.48 ಲಕ್ಷದಿಂದ ರೂ.17.28 ಲಕ್ಷಗಳವರೆಗೆ ಇದೆ. ಎಂಜಿ ಹೆಕ್ಟರ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ 500 ಗಳಿಗೆ ಪೈಪೋಟಿ ನೀಡುತ್ತದೆ.

ಗ್ರಾಹಕನ ಪ್ರತಿಭಟನೆಗೆ ಮಣಿದು ಬದಲಿ ಕಾರು ನೀಡಲು ಮುಂದಾದ ಎಂಜಿ ಮೋಟಾರ್

ಸಮಸ್ಯೆ ಬಗೆಹರಿಸದ ಕಾರಣ, ಕಾರಿಗೆ ಕತ್ತೆಯ ಫೋಟೊಗಳನ್ನು ಅಂಟಿಸಿ ಇದು ಕತ್ತೆಯ ವಾಹನ ಇದನ್ನು ಯಾರೂ ಖರೀದಿಸಬೇಡಿ ಎಂದು ಹೇಳಿದ್ದ ಗ್ರಾಹಕರು ಈ ವಿವಾದವನ್ನು ಇಲ್ಲಿಗೆ ಕೊನೆಗೊಳಿಸಿಕೊಳ್ಳುತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
MG Motor India to offer 100 percent replacement in hector donkey controversy - Read in Kannada
Story first published: Tuesday, December 10, 2019, 13:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X