ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಭಾರತೀಯ ಮಾರುಕಟ್ಟೆಯಲ್ಲಿ ಹೆಕ್ಟರ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ಸದ್ಯ ಮಾರಾಟ ಮಳಿಗೆಗಳನ್ನು ಹೆಚ್ಚಿಸುವಂತ ಗಮನಹರಿಸಿದ್ದು, ಇಂದು ಮುಂಬೈನಲ್ಲಿ ತನ್ನ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ಕಾರ್ಯನಿರ್ವಹಣೆಗೆ ಅಧಿಕೃತವಾಗಿ ಚಾಲನೆ ನೀಡಲಾಯ್ತು.

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಸಾಮಾನ್ಯ ಕಾರು ಮಾರಾಟ ಮಳಿಗೆಗಳಿಂತಲೂ ಸಾಕಷ್ಟು ವಿಭಿನ್ನ ಪರಿಕಲ್ಪನೆಯೊಂದಿಗೆ ನಿರ್ಮಾಣ ಮಾಡಲಾಗುವ ಎಕ್ಸ್‌ಪಿರೆನ್ಸ್ ಸ್ಟೋರ್‌ಗಳು ಬ್ರಾಂಡ್ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲಿದ್ದು, ಎಂಜಿ ಮೋಟಾರ್ ಕೂಡಾ ಇದೇ ನಿಟ್ಟಿನಲ್ಲಿ ಗ್ರಾಹಕರೊಂದಿಗೆ ಮತ್ತಷ್ಟು ಹತ್ತಿರವಾಗಲು ಎಕ್ಸ್‌ಪಿರೆನ್ಸ್ ಸ್ಟೋರ್‌ಗಳಿಗೆ ಚಾಲನೆ ನೀಡುತ್ತಿದೆ. ಒಂದೇ ಸೂರಿನಡಿ ವಿವಿಧ ಮಾಹಿತಿಗಳ ಜೊತೆಗೆ ಕಾರು ಖರೀದಿದಾರರಿಗೆ ಅತ್ಯುತ್ತಮ ಸೇವೆ ಒದಗಿಸಲು ಎಕ್ಸ್‌ಪಿರೆನ್ಸ್ ಸ್ಟೋರ್‌ಗಳು ನೇರವಾಗಲಿದ್ದು, ಕಾರು ಮಾರಾಟ ಮಳಿಗೆಯೂ ಹೊಸ ಲೋಕವನ್ನೇ ತೆರೆದಿಡಲಿದೆ.

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಎಂಜಿ ಮೋಟಾರ್ ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಎಕ್ಸ್‌ಪಿರೆನ್ಸ್ ಸ್ಟೋರ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ವರ್ಷಾಂತ್ಯಕ್ಕೆ ಇನ್ನು ಹತ್ತಾರು ಎಕ್ಸ್‌ಪಿರೆನ್ಸ್ ಸ್ಟೋರ್‌ಗಳು ಕಾರ್ಯನಿರ್ವಹಣೆ ಮಾಡಲಿವೆ ಎನ್ನಲಾಗಿದೆ.

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಇದರೊಂದಿಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬರುತ್ತಿರುವರಿಂದ ಮಾರಾಟ ಮಳಿಗೆಗಳ ಹೆಚ್ಚಳಕ್ಕೂ ಯೋಜನೆ ರೂಪಿಸಿರುವ ಎಂಜಿ ಸಂಸ್ಥೆಯು ಉತ್ಪಾದನಾ ಪ್ರಮಾಣದಲ್ಲಿ ಭಾರೀ ಬದಲಾವಣೆ ತಂದಿದೆ.

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಬ್ರಿಟಿಷ್ ಮೂಲದ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮೋರಿಸ್ ಗ್ಯಾರೇಜ್(ಎಂಜಿ) ಸಂಸ್ಥೆಯು ಸುಮಾರು 95 ವರ್ಷಗಳಷ್ಟು ಆಟೋ ಉತ್ಪಾದನಾ ವಲಯದಲ್ಲಿ ಅನುಭವ ಹೊಂದಿದ್ದು, ಕಳೆದ ವರ್ಷಗಳ ಹಿಂದಷ್ಟೇ ಆರ್ಥಿಕ ಮಗ್ಗಟ್ಟು ಎದುರಿಸಿತ್ತು. ಈ ಹಿನ್ನಲೆಯಲ್ಲಿ ಎಂಜಿ ಸಂಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಚೀನಾದ ಜನಪ್ರಿಯ ಎಸ್ಎಐಸಿ(SAIC)ಕಾರು ಉತ್ಪಾದನಾ ಸಂಸ್ಥೆಯು ಭಾರತದಲ್ಲಿ ಎಂಜಿ ಮೋಟಾರ್ ಕಾರುಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಮರುಅಭಿವೃದ್ದಿಗೊಳಿಸಿ ಮಾರಾಟಕ್ಕೆ ಚಾಲನೆ ನೀಡಿದೆ.

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಹೀಗಾಗಿ ಇದು ಬ್ರಿಟಿಷ್ ಸಾಂಪ್ರಾದಾಯಿಕ ವಿನ್ಯಾಸ ಮತ್ತು ಚೀನಾ ತಂತ್ರಜ್ಞಾನದ ಸಮ್ಮಿಶ್ರಣವಾಗಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರು ಉತ್ಪನ್ನವನ್ನು ಸಿದ್ದಪಡಿಸುವಲ್ಲಿ ಎಸ್ಎಐಸಿ(SAIC) ಸಂಸ್ಥೆಯು ಯಶಸ್ವಿಯಾಗಿದೆ ಎನ್ನಬಹುದು.

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಇನ್ನು ಎಂಜಿ ಮೋಟಾರ್ ಸಂಸ್ಥೆಯು ಹೆಕ್ಟರ್ ಮಾರಾಟದಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಕ್ರೆಟಾ, ಮಹೀಂದ್ರಾ ಎಕ್ಸ್‌ಯುವಿ500, ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

MOST READ: ದಸರಾ ಸಂಭ್ರಮಕ್ಕೆ ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಮಾರುತಿ ಸುಜುಕಿ

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಆಕರ್ಷಕ ಬೆಲೆಗಳಲ್ಲಿ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್‍, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್‌ಗಳನ್ನು ನೀಡಲಾಗುತ್ತಿದ್ದು, ಎಂಜಿ ಹೆಕ್ಟರ್ ಬೇಡಿಕೆಗೆ ಇದೇ ಪ್ರಮಖ ಕಾರಣವಾಗಿದೆ.

MOST READ: ಮೈಲೇಜ್ ರೇಂಜ್ ವಿಸ್ತರಿತ ಟಾಟಾ ಹೊಸ ಟಿಗೋರ್ ಎಲೆಕ್ಟ್ರಿಕ್ ಬಿಡುಗಡೆ

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಹೆಕ್ಟರ್ ಕಾರಿನ ಆರಂಭಿಕವಾಗಿ ಇದೀಗ ರೂ. 12.18 ಲಕ್ಷದಿಂದ ರೂ.12.48 ಲಕ್ಷಕ್ಕೆ ಏರಿಕೆಯಾಗಿದ್ದು, ಪ್ರತಿ ವೆರಿಯೆಂಟ್ ಬೆಲೆಗಳಲ್ಲೂ ಈ ಹಿಂದೆ ಇದ್ದ ದರಕ್ಕಿಂತ ಶೇ.2.5 ರಷ್ಟು ಹೆಚ್ಚುವರಿ ದರ ನಿಗದಿಪಡಿಸಲಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಹೆಕ್ಟರ್ ಹೊಸ ಕಾರು ಪೆಟ್ರೋಲ್ ಆವೃತ್ತಿಯಲ್ಲಿ 1.5 ಲೀಟರ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 143-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯು ಎಫ್‌ಸಿಎ ಸಂಸ್ಥೆಯಿಂದ ಎರವಲು ಪಡೆಯಲಾದ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಭಾರತದಲ್ಲಿ ಎರಡನೇ ಫ್ಲ್ಯಾಗ್‌ಶಿಫ್ ಎಕ್ಸ್‌ಪಿರೆನ್ಸ್ ಸ್ಟೋರ್ ತೆರೆದ ಎಂಜಿ ಮೋಟಾರ್

ಇದರಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯಲ್ಲಿ 48ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಜೋಡಿಸಲಾಗಿದ್ದು, ಇದು ಉತ್ತಮ ಪರ್ಫಾಮೆನ್ಸ್‌ನೊಂದಿಗೆ ಹೆಚ್ಚಿನ ಮಟ್ಟದ ಇಂಧನ ಕಾರ್ಯಕ್ಷಮತೆಯನ್ನು ಕಾಯ್ದಕೊಳ್ಳಲು ನೆರವಾಗಲಿದೆ.

Most Read Articles

Kannada
English summary
MG Motor India Opens Second Flagship Experience Store In Mumbai. Read in Kannada.
Story first published: Thursday, October 10, 2019, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X