Just In
- 1 hr ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 3 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 3 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 4 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುಕೆನಲ್ಲಿ ಎಂಜಿ ಇಜೆಡ್ಎಸ್ ಎಲೆಕ್ಟ್ರಿಕ್ ಬಿಡುಗಡೆ- ಭಾರತದಲ್ಲಿ ಈ ಕಾರಿನ ಬೆಲೆ ಎಷ್ಟಿರಲಿದೆ ಗೊತ್ತಾ?
ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ಕಾರು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದ್ದು, ಹೆಕ್ಟರ್ ಬಿಡುಗಡೆಯ ನಂತರ ಎಲೆಕ್ಟ್ರಿಕ್ ಎಸ್ಯುವಿ ಮಾದರಿಯಾದ ಇಜೆಡ್ಎಸ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದಕ್ಕೂ ಮುನ್ನ ಯುಕೆ ಮಾರಾಕಟ್ಟೆಯಲ್ಲಿ ಇಜೆಡ್ಎಸ್ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ಹೊಸ ಕಾರಿನ ಬೆಲೆಯನ್ನು ಸಹ ಬಹಿರಂಗಪಡಿಸಲಾಗಿದೆ.
ಯುಕೆ(ಯುನೈಟೆಡ್ ಕಿಂಗ್ಡಮ್)ನಲ್ಲಿ ಎಂಜಿ ಇಜೆಡ್ಎಸ್ ಕಾರನ್ನು ಭಾರತೀಯ ಬೆಲೆಗಳಲ್ಲಿ ರೂ.18.36 ಲಕ್ಷದಿಂದ ರೂ.20.07 ಲಕ್ಷಕ್ಕೆ ಬಿಡುಗಡೆ ಮಾಡಲಾಗಿದ್ದು, ಚೀನಿ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ ಜೆಡ್ಎಸ್ ಕಾರು ಮಾದರಿಯಲ್ಲೇ ಎಲೆಕ್ಟ್ರಿಕ್ ವರ್ಷನ್ ಇಜೆಡ್ಎಸ್ ಮಾದರಿಯು 5 ಆಸನ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ. ಸದ್ಯ ಬಿಡುಗಡೆ ಮಾಡಲಾಗಿರುವ ಇಜೆಡ್ಎಸ್ ಕಾರು ಸೆಪ್ಟೆಂಬರ್ ಅಂತ್ಯಕ್ಕೆ ಗ್ರಾಹಕರ ಕೈಸೆರಲಿದ್ದು, ಭಾರತದಲ್ಲಿ ಇದೇ ಕಾರು 2019ರ ಡಿಸೆಂಬರ್ ಆರಂಭದಲ್ಲಿ ಮಾರಾಟಕ್ಕೆ ಲಭ್ಯವಿರಲಿದೆಯೆಂತೆ.
ಯುಕೆನಲ್ಲಿ ಬಿಡುಗಡೆ ಮಾಡಲಾಗಿರುವ ಇಜೆಡ್ಎಸ್ ಕಾರು 44.5kWh ಲೀಥಿಯಂ ಅಯಾನ್ ಬ್ಯಾಟರಿ ಸೌಲಭ್ಯವನ್ನು ಹೊಂದಿದ್ದು, 50kW ಪ್ಲಗ್ ಮೂಲಕ ಕೇವಲ 43 ನಿಮಿಷಗಳಲ್ಲಿ ಶೇ.80 ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದು ಈ ಸೌಲಭ್ಯವು ಈ ಕಾರಿನಲ್ಲಿದೆ.
ಈ ಮೂಲಕ 141-ಬಿಎಚ್ಪಿ ಮತ್ತು 352-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಪರ್ಫಾಮೆನ್ಸ್ ತೊರಬಲ್ಲ ಎಲೆಕ್ಟ್ರಿಕ್ ಎಸ್ಯುವಿ ಮಾದರಿಯಾಗಿ ಹೊರಹೊಮ್ಮಿದ್ದು, ಪ್ರತಿ ಚಾರ್ಜ್ಗೆ ಗರಿಷ್ಠ 262 ಕಿ.ಮಿ ಮೈಲೇಜ್ ಹಿಂದಿರುಗಿಸುವುದಾಗಿ ಎಂಜಿ ಮೋಟಾರ್ ಸಂಸ್ಥೆಯು ಭರವಸೆ ನೀಡಿದೆ.
ಇಜೆಡ್ಎಸ್ ಮಾದರಿಯ ಮೇಲೆ ಎಂಜಿ ಮೋಟಾರ್ ಸಂಸ್ಥೆಯು ಗರಿಷ್ಠ 7 ವರ್ಷಗಳ ಕಾಲ ವಾರಂಟಿ ನೀಡಿದ್ದು, ಕಾರಿನಲ್ಲಿ ಐಷಾರಾಮಿ ಚಾಲನಾ ಅನುಭವಕ್ಕಾಗಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ನೀಡಲಾಗಿದೆ. ಹೊಸ ಕಾರಿನಲ್ಲಿ ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಆಕ್ಟಿವ್ ಎರ್ಮಜೆನ್ಸಿ ಬ್ರೆಕಿಂಗ್, ಲೆನ್ ಕಿಪಿಂಗ್ ಅಸಿಸ್ಟ್, ಟ್ರಾಫಿಕ್ ಜಾಮ್ ಅಸಿಸ್ಟ್, ಇಂಟಲಿಜೆಂಟ್ ಸ್ಪೀಡ್ ಲಿಮಿಟ್ ಅಸಿಸ್ಟ್ ಮತ್ತು ಟಾಪ್ ಎಂಡ್ ಮಾದರಿಯಲ್ಲಿ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸಿಸ್ಟಂ ಸೌಲಭ್ಯವನ್ನು ಪಡೆದುಕೊಂಡಿದೆ.
ಇದೇ ಮಾದರಿಯು ಭಾರತದಲ್ಲೂ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಈಗಾಗಲೇ ಇಜೆಡ್ಎಸ್ ಕಾರಿನ ಉತ್ಪಾದನೆಗೆ ಚಾಲನೆ ನೀಡುವ ಮೂಲಕ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಸಹ ಎಂಜಿ ಮೋಟಾರ್ ಈಗಾಗಲೇ ಆರಂಭಗೊಳಿಸಿದೆ.
ಕೆಲವು ಮಾಹಿತಿಗಳ ಪ್ರಕಾರ ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಬಿಡುಗಡೆಯಾಗಲಿರುವ ಇಜೆಡ್ ಕಾರಿನ ತಾಂತ್ರಿಕ ಅಂಶಗಳಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಗಳಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ 452 ಕಿ.ಮಿ ಮೈಲೇಜ್ ಸಾಮಾರ್ಥ್ಯದ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಪ್ರತಿ ಸ್ಪರ್ಧಿಯಾಗಿ ತುಸು ಹೆಚ್ಚಿನ ಮಟ್ಟದ ಬ್ಯಾಟರಿ ಸೌಲಭ್ಯವನ್ನ ಒದಗಿಸಬಹುದಾಗಿದೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಇಜೆಡ್ಎಸ್ ಮಾದರಿಯು ಪ್ರತಿಚಾರ್ಜ್ಗೆ 320ರಿಂದ 350ಕಿ.ಮಿ ಮೈಲೇಜ್ ಸಾಮಾರ್ಥ್ಯವನ್ನು ಒದಗಿಸುವ ಬ್ಯಾಟರಿ ಬಳಕೆಯ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ರೂ.19 ಲಕ್ಷದಿಂದ ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.
ಇದಲ್ಲದೇ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.
ಹಾಗೆಯೇ ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ಇದ್ದ ಜಿಎಸ್ಟಿ ಪ್ರಮಾಣವನ್ನು ಶೇ. 12ರಿಂದ ಇದೀಗ ಶೇ.5 ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ ಮಾಡಲು ಸಾಕಷ್ಟು ಸಹಕಾರಿಯಾಗಿದೆ. ಈ ಬಗ್ಗೆ ಎಲೆಕ್ಟ್ರಕ್ ವಾಹನ ಉತ್ಪಾದನಾ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದು, ಇವಿ ವಾಹನ ಖರೀದಿಸುವ ಗ್ರಾಹಕರನ್ನು ಸೆಳೆಯಲು ಜಿಎಸ್ಟಿ ಇಳಿಕೆ ಮಾಡಿರುವುದು ಮಹತ್ವದ ಬದಲಾವಣೆಗೆ ಮೊದಲ ದಿಟ್ಟಹೆಜ್ಜೆ ಎಂದು ಹೇಳಲಾಗಿದೆ.
ಇದರಿಂದ ಬಿಡುಗಡೆ ಹಂತದಲ್ಲಿರುವ ಎಲೆಕ್ಟ್ರಿಕ್ ಕಾರುಗಳಿಗೆ ಕೇಂದ್ರ ಸರ್ಕಾರ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗಲಿದ್ದು, ಎಂಜಿ ಮೋಟಾರ್ ಸೇರಿದಂತೆ ಹಲವು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಮುಂಬರುವ 2020ರ ಆರಂಭದಲ್ಲಿ ಹಲವು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲಿದ್ದಾರೆ.