ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಎಂಜಿ ಮೋಟಾರ್ ಸೇರಿದಂತೆ ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ತಮ್ಮ ಜನಪ್ರಿಯ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಎಂಜಿ ಮೋಟಾರ್ ಬಿಡುಗಡೆ ಮಾಡಲಿರುವ ಹೆಕ್ಟರ್ ಕಾರಿನ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಲಭ್ಯವಾಗಿದ್ದು, ಎದೆಂನೆಂದರೆ ಬೆಲೆಯಲ್ಲಿ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು ಮಹೀಂದ್ರಾ ಎಕ್ಸ್ಯುವಿ 500 ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆಯಂತೆ. ಅಂದರೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹೆಕ್ಟರ್ ಕಾರು ಎಕ್ಸ್ ಶೂರುಂ ಪ್ರಕಾರ ರೂ. 14 ರಿಂದ 18 ಲಕ್ಷದ ವರೆಗು ಬೆಲೆಯನ್ನು ಪಡೆದುಕೊಂಡಿರಲಿದೆ ಎಂದು ಹೇಳಲಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಬೃಹತ್ ಬಂಡವಾಳದೊಂದಿಗೆ ಕಳೆದ ವರ್ಷವಷ್ಟೇ ತನ್ನ ಮೊದಲ ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದಲ್ಲೇ ಇದೀಗ ಬಿಡುಗಡೆಯಾಗಲಿರುವ ಮೊದಲ ಕಾರಿನ ಟೀಸರ್ ಅನ್ನು ಸಹ ಬಿಡುಗಡೆ ಮಾಡಿ ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಹೆಕ್ಟರ್ ಹೆಸರಿನಲ್ಲಿ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲಿರುವ ಹೊಸ ಎಂಜಿ ಮೋಟಾರ್ ಕಾರು ಜೀಪ್ ಕಂಪಾಸ್ ಎಸ್‌ಯುವಿ ಮಾದರಿಯಲ್ಲಿ ಬಾಡಿ ಕಿಟ್ ಹೊಂದಿದ್ದು, 2019ರ ಮಧ್ಯಂತರದಲ್ಲಿ ಹೊಸ ಕಾರು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಬಿಎಸ್-6 ಎಂಜಿನ್ ಸೌಲಭ್ಯ ಹೊಂದಿರುವ ಹೊಸ ಹೆಕ್ಟರ್ ಕಾರು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್(ಎಫ್‌ಸಿಎ ಯಿಂದ ಎರವಲು) ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯು 160ಬಿಎಚ್‌ಪಿ/200ಎನ್ಎಂ ಮತ್ತು ಡೀಸೆಲ್ ಆವೃತ್ತಿಯು 170ಬಿಎಚ್‌ಪಿ/340ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಹೆಕ್ಟರ್ ಕಾರು ಸದ್ಯ ಇಂಡೋನೇಷ್ಯಾದಲ್ಲಿ ವುಲಿಂಗ್ ಅಲ್ಮಾಜ್ ಮತ್ತು ಚೀನಾದಲ್ಲಿ ಬಾಔನ್ 530 ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ಇದೇ ಕಾರು ಕೆಲವು ತಾಂತ್ರಿಕ ಬದಲಾವಣೆಗಳೊಂದಿಗೆ ಭಾರತದಲ್ಲಿ ಹೆಕ್ಟರ್ ಹೆಸರಿನಲ್ಲಿ ರಸ್ತೆಗಿಳಿಯುತ್ತಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಇನ್ನು 1924ರಿಂದಲೇ ಎಂಜಿ ಮೋಟಾರ್ ಸಂಸ್ಥೆಯು ಆಟೋ ಉದ್ಯಮದಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಹಣಕಾಸು ಮುಗ್ಗಟ್ಟು ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ನಷ್ಟದ ಸುಳಿಯಲ್ಲಿದ್ದ ಸಂಸ್ಥೆಯನ್ನು ಚೀನಾ ಮೂಲದ ಎಸ್‌ಎಐಸಿ( SAIC) ಸಂಸ್ಧೆಯು ಸ್ಪಾಧೀನಪಡಿಸಿಕೊಂಡು ಭಾರತದಲ್ಲಿ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಗ್ರಾಹಕರ ಬೇಡಿಕೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ಹ್ಯಾಚ್‌ಬ್ಯಾಕ್. ಸೆಡಾನ್, ಎಸ್‌ಯುವಿ ಕಾರುಗಳನ್ನು ಅಷ್ಟೇ ಅಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅಭಿವೃದ್ದಿ ಮಾಡಲಿರುವ ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಬೃಹತ್ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ತನ್ನ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ SAIC ಸಂಸ್ಥೆಯು ಸುಳಿವು ನೀಡಿದೆ

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಇದಕ್ಕಾಗಿಯೇ ಗುಜರಾತ್‌ನಲ್ಲಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕಕ್ಕೆ ಈಗಾಗಲೇ ಚಾಲನೆ ನೀಡಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿ ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು ಭಾರತದಲ್ಲಿ ಹಲವು ಕಾರು ಉತ್ಪಾದನಾ ಸಂಸ್ಥೆಗಳಿಗೆ ಪ್ರಬಲ ಪೈಪೋಟಿಯಾಗಲಿದೆ.

ಟಾಟಾ ಹ್ಯಾರಿಯರ್ ಕಾರಿಗೆ ಟಾಂಗ್ ನೀಡುತ್ತಾ ಎಂಜಿ ಮೋಟಾರ್‍‍ನ ಹೊಸ ಕಾರು.?

ಹೊಸ ಕಾರುಗಳನ್ನು ನಿಗದಿತ ಅವಧಿಯೊಳಗೆ ಪರಿಚಯಿಸಲು ದೇಶಾದ್ಯಂತ ಈಗಾಗಲೇ 45ಕ್ಕೂ ಹೆಚ್ಚು ಅಧಿಕೃತ ಕಾರು ಮಾರಾಟ ಮಳಿಗೆಗಳನ್ನು ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು, ಕಾರು ಮಾರಾಟಕ್ಕೆ ಚಾಲನೆ ನೀಡುವ ವೇಳೆಗೆ 100ಕ್ಕೂ ಹೆಚ್ಚು ಡೀಲರ್ಸ್ ತೆರೆಯುವ ಯೋಜನೆ ಹೊಂದಿದೆ.

Image Courtesy: cumberphotos,Eurocarspotter

Most Read Articles

Kannada
English summary
MG Hector to be priced similar to the Tata Harrier & Mahindra XUV500?. Read In Kannada
Story first published: Monday, March 25, 2019, 9:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X