ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಚೀನಾದ ಸೈಕ್ ಮೋಟಾರ್ ಒಡೆತನದ ಬ್ರಿಟಿಷ್ ಮೂಲದ ಎಂಜಿ ಮೋಟಾರ್ ಕಳೆದ ಜೂನ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಹೆಕ್ಟರ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಇದುವರೆಗೂ ಹೆಕ್ಟರ್‍‍ನ 13,000 ಯುನಿ‍‍ಟ್‍‍ಗಳನ್ನು ಮಾರಾಟ ಮಾಡಲಾಗಿದೆ.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಇದರ ಜೊತೆಗೆ ಎಂಜಿ ಮೋಟಾರ್ ಕಂಪನಿಯು 30,000ಕ್ಕೂ ಹೆಚ್ಚಿನ ಬುಕ್ಕಿಂಗ್‍‍ಗಳನ್ನು ಪಡೆದಿದೆ. ಕೆಲವು ಸಂದರ್ಭಗಳಲ್ಲಿ ಹೆಕ್ಟರ್ ಕಾರ್ ಅನ್ನು ಪಡೆಯಲು 6 ತಿಂಗಳು ಕಾಯಬೇಕಾಗುತ್ತದೆ. ಹೆಕ್ಟರ್ ಕಾರು, ಎಂಜಿ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿರುವ ಮೊದಲ ಕಾರ್ ಆಗಿದೆ.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಆದರೂ ಕಂಪನಿಯ ಮೇಲಿನ ನಂಬಿಕೆಯಿಂದಾಗಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಕ್ಟರ್ ಕಾರ್ ಅನ್ನು ಖರೀದಿಸುತ್ತಿದ್ದಾರೆ. ಆದರೆ ಈ ಕಾರ್ ಅನ್ನು ಖರೀದಿಸಿದ ಗ್ರಾಹಕರೊಬ್ಬರು ಕಾರಿನಲ್ಲಿದ್ದ ಸಮಸ್ಯೆಯನ್ನು ಎಂಜಿ ಮೋಟಾರ್ ಕಂಪನಿಯು ಸರಿಪಡಿಸದ ಕಾರಣಕ್ಕೆ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದರು.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಎಂಜಿ ಹೆಕ್ಟರ್ ಕಾರಿಗೆ ಕತ್ತೆಯ ಫೋಟೊಗಳನ್ನು ಅಂಟಿಸಿ ಇದು ಕತ್ತೆಯ ವಾಹನ. ಇದನ್ನು ಯಾರೂ ಖರೀದಿಸಬೇಡಿ ಎಂದು ಹೇಳಿ, ಅದರ ಫೋಟೊ ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಈ ವೀಡಿಯೊವನ್ನು ಅರುಣ್ ಪವಾರ್‍‍ರವರ ಚಾನೆಲ್‍‍ನಲ್ಲಿ ಶೇರ್ ಮಾಡಲಾಗಿದೆ. ವೀಡಿಯೊದಲ್ಲಿ ಕತ್ತೆಯನ್ನು ಕಾರಿನ ಮುಂಭಾಗದಲ್ಲಿರುಗ ಗ್ರಿಲ್‍‍ಗೆ ಕಟ್ಟಿ, ಕಾರ್ ಅನ್ನು ಎಳೆಯುತ್ತಿರುವುದನ್ನು ಸಹ ಕಾಣಬಹುದು.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಅಂದ ಹಾಗೆ ಈ ಕಾರಿನ ಮಾಲೀಕರು ರಾಜಸ್ತಾನದವರು. ಅವರ ಕಾರಿನ ಕ್ಲಚ್‍‍ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಸಮಸ್ಯೆಯನ್ನು ಕಾರು ಖರೀದಿಸಿದ ಡೀಲರ್‍ ಬಳಿ ಹೇಳಿಕೊಂಡಿದ್ದಾರೆ. ಆ ಡೀಲರ್ ಸಮಸ್ಯೆಯನ್ನು ಪರಿಹರಿಸುವ ಬದಲು ಒರಟಾಗಿ ನಡೆದುಕೊಂಡಿದ್ದಾರೆ.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಈ ಕಾರಣಕ್ಕೆ ಡೀಲರ್ ಮುಂದೆ ಕಾರಿಗೆ ಕತ್ತೆಯನ್ನು ಕಟ್ಟಿ ಪ್ರದರ್ಶಿಸಲು ನಿರ್ಧರಿಸಿದ್ದಾರೆ. ಕಾರು ಮಾಲೀಕನ ಈ ವರ್ತನೆಯನ್ನು ಗಮನಿಸಿದ ಸಾಕಷ್ಟು ಜನರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಇದರ ಜೊತೆಗೆ ಟಿವಿ ಚಾನೆಲ್‍‍ವೊಂದು ಅವರನ್ನು ಸಂದರ್ಶಿಸಿದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಆ ಟಿವಿ ಚಾನೆಲ್‍‍ಗೆ ಕಾರಿನ ಮಾಲೀಕರು ತಮ್ಮ ಸಮಸ್ಯೆಯನ್ನು ಹೇಳುತ್ತಿದ್ದಾರೆ. ಈ ವೀಡಿಯೊವನ್ನು ಡಿಸೆಂಬರ್ 3ರಂದು ಅಪ್‍‍ಲೋಡ್ ಮಾಡಲಾಗಿದೆ. ಈ ವೀಡಿಯೊದ ಮೂಲಕ ಕಾರಿನ ಮಾಲೀಕರ ಸಮಸ್ಯೆಯು ಎಂಜಿ ಮೋಟಾರ್ ಇಂಡಿಯಾ ವಿಭಾಗದ ಗಮನಕ್ಕೆ ಬಂದಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಂಜಿ ಇಂಡಿಯಾ ಈ ಕಾರಿನ ಮಾಲೀಕರು ದುರುದ್ದೇಶದಿಂದ ಕಂಪನಿಯ ಹೆಸರನ್ನು ಹಾಳು ಮಾಡಿದ್ದಾರೆ. ಇದರಿಂದಾಗಿ ಎಂಜಿ ಮೋಟಾರ್ ಕಂಪನಿಯ ಗ್ರಾಹಕ ಮೊದಲು ಎಂಬ ಉದ್ದೇಶಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಈ ಕಾರಿನ ಮಾಲೀಕರು ಮಾಡಿರುವ ಎಲ್ಲಾ ಆರೋಪಗಳನ್ನು ಕಂಪನಿಯು ತಳ್ಳಿ ಹಾಕಿದೆ. ಕಂಪನಿಯ ಹೆಸರನ್ನು ಸಾರ್ವಜನಿಕವಾಗಿ ಹಾಳು ಮಾಡಿದ ಕಾರಣಕ್ಕಾಗಿ ಕಂಪನಿಯು ಈ ಕಾರಿನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಭಾರತದಲ್ಲಿ ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಎಂಜಿ ಹೆಕ್ಟರ್ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ಮಧ್ಯೆ ಹೊಸ ಕಾರಿನ ರೂಫ್ ಟಾಪ್‌ನಲ್ಲಿ ಮಳೆ ನೀರು ಸೋರುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಎಂಜಿ ಹೆಕ್ಟರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ಕಾರುಗಳಲ್ಲಿ ಒಂದಾಗಿದ್ದು, ಕೈಗೆಟುಕುವ ಬೆಲೆಗಳಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಿರುವುದು ಹೊಸ ಕಾರಿಗೆ ಭಾರೀ ಬೇಡಿಕೆ ಬಂದಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಿಂದಾಗಿ ಎಂಜಿ ಹೆಕ್ಟರ್ ಗುಣಮಟ್ಟದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದವು.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ವಿಡಿಯೋದಲ್ಲಿನ ಮಾಹಿತಿ ಪ್ರಕಾರ ಕಾರಿನ ಮುಂಭಾಗದ ಸೀಟಿನ ಬಳಿ ರೂಫ್ ಟಾಪ್‌ನಿಂದ ಮಳೆ ನೀರು ಸೋರಿಕೆಯಾಗುತ್ತಿದ್ದು, ಕಾರು ಖರೀದಿ ಮಾಡಿ ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ಇಂತಹ ಸಮಸ್ಯೆ ಎದುರಾಗಿದೆ.

ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ನೀರಿಕ್ಷೆಗಳೊಂದಿಗೆ ಕಾರು ಮಾರಾಟವನ್ನು ಆರಂಭಿಸಿರುವ ಚೀನಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ SAIC ಸಂಸ್ಥೆಯು ಯುಕೆ ಮೂಲದ ಎಂಜಿ ಮೋಟಾರ್ ಸಂಸ್ಥೆಯನ್ನು ತೆಕ್ಕೆಗೆ ತೆಗೆದುಕೊಂಡು ಭಾರತದಲ್ಲಿ ಕಾರು ಮಾರಾಟ ಮಾಡುತ್ತಿದೆ.

ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಎಂಜಿ ಮೋಟಾರ್ ಸಂಸ್ಥೆಯನ್ನು SAIC ಸಂಸ್ಥೆಯು ಕೆಲವು ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಕ್ಟರ್ ಕಾರನ್ನು ಬಿಡುಗಡೆಗೊಳಿಸಿದ್ದು, ಆಕರ್ಷಕ ಬೆಲೆಗಳಲ್ಲಿಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಎಸ್‌ಯುವಿ ಪ್ರಿಯರ ಆಕರ್ಷಣೆ ಕಾರಣವಾಗಿದೆ. ಹೀಗಿರುವಾಗ ಕಾರಿನ ರೂಫ್ ಟಾಪ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.

ಖರೀದಿ ಮಾಡಿದ ಕೇವಲ ಎರಡೂವರೆ ತಿಂಗಳಿನಲ್ಲಿ ಈ ರೀತಿಯ ಸಮಸ್ಯೆಯಾಗಿರುವುದು ತುಂಬಾ ವಿರಳ ಎನ್ನಬಹುದಾಗಿದ್ದು, ರೂಫ್ ಟಾಪ್‌ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವುದಕ್ಕೆ ನಿಖರವಾದ ಕಾರಣವು ತಿಳಿದುಬಂದಿಲ್ಲ.

ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ

ಆದರೂ ವಿಡಿಯೋದಲ್ಲಿನ ಮಾಹಿತಿ ಪ್ರಕಾರ ಅದು ರೂಫ್ ಟಾಪ್ ಕಳಪೆ ಅಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಸನ್ ರೂಫ್ ಜೋಡಣೆಯಲ್ಲಿ ಆಗಿರಬಹುದಾದ ಕಳಪೆ ತಾಂತ್ರಿಕ ಅಂಶವೇ ಮಳೆ ನೀರು ಸೋರಿಕೆಗೆ ಕಾರಣ ಎನ್ನಲಾಗುತ್ತಿದೆ.

ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ

ಆದರೂ ಕೂಡಾ ಗ್ರಾಹಕರ ನೀರಿಕ್ಷೆಗೂ ಮೀರಿ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿರುವ ಎಂಜಿ ಹೆಕ್ಟರ್ ಕಾರಿನಲ್ಲಿ ಮಳೆ ನೀರು ಸೋರಿಕೆ ಸಮಸ್ಯೆಯು ಬ್ರಾಂಡ್ ಮೌಲ್ಯಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆಗಳಿದ್ದು, ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಿರುವುದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ

ಇದಲ್ಲದೇ ಇತ್ತೀಚೆಗೆ ಸ್ಕೋಡಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಎಂಜಿ ಸಂಸ್ಥೆಯ ಕಾರು ಉತ್ಪನ್ನಗಳ ಗುಣಮಟ್ಟದ ಕುರಿತಂತೆ ಮಾತನಾಡುತ್ತಾ ಎಂಜಿಗಿಂತಲೂ ಕಿಯಾ ಮೋಟಾರ್ಸ್ ಸಂಸ್ಥೆಯ ಕಾರುಗಳೇ ಬೆಸ್ಟ್ ಎನ್ನುವಂತಹ ಅಭಿಪ್ರಾಯ ಹಂಚಿಕೊಂಡಿದ್ದರು.

ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ

ಇನ್ನು ಎಂಜಿ ಹೆಕ್ಟರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ.12.18 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು ಈ ಕಾರಿನ ಟಾಪ್ ಎಂಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.68 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಕಾರಿನ ಪೆಟ್ರೋಲ್ ಡಿಸಿಟಿ ಮಾಡೆಲ್‍ಗಳಿಗೆ ಹೆಚ್ಚು ಬೇಡಿಕೆಯಿದ್ದು, ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಎಂಜಿ ಮೋಟಾರ್ ಹೆಕ್ಟರ್ ಎಸ್‌ಯುವಿ

ಆಕರ್ಷಕ ಬೆಲೆಗಳಲ್ಲಿ ಫರ್ಸ್ಟ್ ಕ್ಲಾಸ್ ಫೀಚರ್ಸ್, ಪವರ್‍‍ಫುಲ್ ಎಂಜಿನ್, ಬೈಯ್‌ಬ್ಯಾಕ್ ಗ್ಯಾರೆಂಟಿ, 5 ವರ್ಷದ ವಾರೆಂಟಿ/ಅನಿಯಮಿತ 1 ಲಕ್ಷ ಕಿಲೋಮೀಟರ್‍, 5 ವರ್ಷದ ವರೆಗು ಲೇಬರ್ ಫ್ರೀ ಸರ್ವೀಸ್‌ಗಳನ್ನು ನೀಡಲಾಗುತ್ತಿದ್ದು, ಎಂಜಿ ಹೆಕ್ಟರ್ ಬೇಡಿಕೆಗೆ ಇದೇ ಪ್ರಮಖ ಕಾರಣವಾಗಿದೆ.

Most Read Articles

Kannada
English summary
MG takes action against hector owner - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X