ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಎಂಜಿ ಮೋಟಾರ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಆವೃತ್ತಿಯನ್ನು ಅನಾವರಣಗೊಳಿಸಿಸುವ ಮೂಲಕ ಶೀಘ್ರದಲ್ಲೇ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ದೆಹಲಿಯಲ್ಲಿ ನಡೆದ ಎಂಜಿ ಮೋಟಾರ್ ಭವಿಷ್ಯದ ಕಾರು ಮಾದರಿಗಳ ಕುರಿತಾದ ವಿಚಾರ ಸಂಕೀರ್ಣದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಮಾದರಿಯು ಅನಾವರಣಗೊಂಡಿದ್ದು, ಹೊಸ ಕಾರು 2020ರ ಜನವರಿ ಮಧ್ಯಂತರದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿದೆ. ಹೆಕ್ಟರ್ ಕಾರು ಬಿಡುಗಡೆಯ ಯಶಸ್ವಿ ನಂತರ ಹೊಸ ಕಾರುಗಳ ಬಿಡುಗಡೆಯ ವಿಚಾರದಲ್ಲಿ ಮಹತ್ವದ ಹೆಜ್ಜೆಯಿಡುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಭಾರತೀಯ ಗ್ರಾಹಕರ ಬೇಡಿಕೆಗೆ ಹೆಚ್ಚಿನ ಆದ್ಯತೆ ನೀಡಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಆಕರ್ಷಕ ಬೆಲೆಯಲ್ಲಿ ಉತ್ತಮ ಮೈಲೇಜ್, ವಿಶ್ವದರ್ಜೆಯ ಫೀಚರ್ಸ್‌ಗಳು, ಬ್ಯಾಟರಿ ಮೇಲೆ ಗರಿಷ್ಠ ಮಟ್ಟದ ವಾರಂಟಿ, ಸುಲಭವಾಗಿ ಲಭ್ಯವಾಗುವ ಗ್ರಾಹಕರ ಸೇವೆಗಳು ಹೊಸ ಕಾರು ಖರೀದಿಯ ಮೌಲ್ಯವನ್ನು ಹೆಚ್ಚಿಸಲಿದ್ದು, ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿಗೆ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಭರ್ಜರಿ ಪೈಪೋಟಿ ನೀಡಲಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಬ್ಯಾಟರಿ ಸಾಮರ್ಥ್ಯ

ಎಂಜಿ ಮೋಟಾರ್ ಸಂಸ್ಥೆಯು ಹೊಸ ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ 44.5kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಒಂದು ಬಾರಿ ಪೂರ್ಣಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 340 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 1 ಗಂಟೆಯಲ್ಲಿ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಮಾತ್ರವಲ್ಲದೇ ಸಾಮಾನ್ಯ ಚಾರ್ಜಿಂಗ್ ಸಾಕೆಟ್ ಜೊತೆ ಐದು ವಿವಿಧ ಮಾರ್ಗಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾದ ಅವಕಾಶ ಈ ಕಾರಿನಲ್ಲಿದೆ. ಜೊತೆಗೆ ಹೊಸ ಕಾರು ಮೈಲೇಜ್‌ನಲ್ಲಿ ಮಾತ್ರವಲ್ಲದೇ ಪರ್ಫಾಮೆನ್ಸ್‌ನಲ್ಲೂ ಕೂಡಾ ಗಮನಸೆಳೆಯಲಿದ್ದು, ಮುಂಭಾಗದ ಚಕ್ರಗಳಿಗೆ ಶಕ್ತಿ ಒದಗಿಸುವ ಮೂಲಕ 141-ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಇನ್ನು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಐಷಾರಾಮಿ ಕಾರು ಮಾದರಿಯಲ್ಲಿ ಹಲವಾರು ಗುಣಮಟ್ಟದ ಫೀಚರ್ಸ್‌ಗಳಲ್ಲಿದ್ದು, ಮುಂಭಾಗದಲ್ಲಿ ಎಂಜಿ ಸಿಗ್ನಿಚೆರ್ ಗ್ರಿಲ್, ಗ್ರಿಲ್ ಒಳಭಾಗದಲ್ಲೇ ಚಾರ್ಜಿಂಗ್ ಪೋರ್ಟ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ ಗಳು ಮತ್ತು 17-ಇಂಚಿನ ಅಲಾಯ್ ವೀಲ್ಹ್ ಸೌಲಭ್ಯವನ್ನು ಪಡೆದಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹೊಸ ಕಾರಿನಲ್ಲಿ ಹೊರಭಾಗದ ಫೀಚರ್ಸ್‌ಗಳು ಮಾತ್ರವಲ್ಲದೇ ಒಳಭಾಗದ ಫೀಚರ್ಸ್‌ಗಳು ಕೂಡಾ ಗಮನಸೆಳೆಯಲಿದ್ದು, ಪ್ರೀಮಿಯಂ ಕ್ಯಾಬಿನ್ ವೈಶಿಷ್ಟ್ಯತೆಯು ಎಸ್‌ಯುವಿ ಪ್ರಿಯರ ಗಮನಸೆಳೆಯಲಿದೆ. ಸಿಲ್ವರ್ ಆಕ್ಸೆಂಟ್ ಹೊಂದಿರುವ ಡ್ಯಾಶ್‌ಬೋರ್ಡ್, ಐ-ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿರುವ 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಯುನಿಟ್, ಆಂಡ್ರಾಯಿಡ್ ಆಟೋ, ಆಟೋ ಕಾರ್ ಪ್ಲೇ ಮತ್ತು ನ್ಯಾವಿಗೇಷನ್ ಸೌಲಭ್ಯವಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಹಾಗೆಯೇ ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್, ತಾಪಮಾನವನ್ನು ಸರಿದೂಗಿಸಿಕೊಳ್ಳಬಹುದಾದ ಮುಂಭಾಗ ಸೀಟುಗಳು, ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದು ಚಾಲನಕ ಸೀಟು ಮತ್ತು ಹಿಂಬದಿ ಪ್ರಯಾಣಿಕರಿಗೂ ಎಸಿ ವೆಂಟ್ಸ್ ಜೊತೆಗೆ ಗುಣಮಟ್ಟದ ಲೆದರ್ ಸೀಟುಗಳನ್ನು ನೀಡಲಾಗಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಫೀಚರ್ಸ್‌ಗಳನ್ನು ನೀಡಿರುವ ಎಂಜಿ ಮೋಟಾರ್ ಸಂಸ್ತೆಯು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನಲ್ಲಿ ಎಬಿಎಸ್ ಜೊತೆ ಇಬಿಡಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, 4 ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 360 ಡಿಗ್ರಿ ವ್ಯೂವ್ ಕ್ಯಾಮೆರಾ, ಏರ್ ಫಿಲ್ಟರ್, ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವನ್ನು ಹೊಂದಿರಲಿವೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಜೆಡ್ಎಸ್ ಎಲೆಕ್ಟ್ರಿಕ್ ಬೆಲೆ(ಅಂದಾಜು)

ಸದ್ಯ ಅನಾವರಣಗೊಳಿಸಲಾಗಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮುಂದಿನ ವರ್ಷ ಜನವರಿ ಮಧ್ಯಂತರದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿರುವ ರೂ.19 ಲಕ್ಷದಿಂದ ರೂ.22 ಲಕ್ಷ ಬೆಲೆ ಹೊಂದಲಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಈ ಮೂಲಕ ಎಲೆಕ್ಟ್ರಿಕ್ ಕಾರುಗಳಲ್ಲೇ ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿರುವ ಇಜೆಡ್ಎಸ್ ಕಾರು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಮೊದಲ ಹಂತವಾಗಿ ದೆಹಲಿ, ಬೆಂಗಳೂರು, ಮುಂಬೈ, ಹೈದ್ರಾಬಾದ್ ಮತ್ತು ಪುಣೆಯಲ್ಲಿ ಮಾತ್ರವೇ ಹೊಸ ಕಾರುಗಳನ್ನು ಮಾರಾಟ ಮಾಡಲಿದೆ.

ಎಂಜಿ ಮೋಟಾರ್ ಬಹುನೀರಿಕ್ಷಿತ ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ

ಚಾರ್ಜಿಂಗ್ ಸ್ಟೆಷನ್ ಸೌಲಭ್ಯಗಳು ಹೆಚ್ಚಾದಂತೆ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾರಾಟ ಜಾಲವನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದ್ದು, ಫೇಮ್ 2 ಯೋಜನೆಯಡಿ ಹಲವಾರು ಸಂಸ್ಥೆಗಳು ಚಾರ್ಜಿಂಗ್ ಸ್ಟೆಷನ್ ನಿರ್ಮಾಣ ಮಾಡುತ್ತಿರುವುದು ಎಲೆಕ್ಟ್ರಿಕ್ ಕಾರುಗಳ ಮಾರಾಟ ಹೆಚ್ಚಳಕ್ಕೆ ಪೂರಕವಾಗಲಿದೆ.

Most Read Articles

Kannada
English summary
MG ZS EV Electric SUV Unveiled For Indian Market. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X